ವೈರಮುಡಿ ಉತ್ಸವಕ್ಕೆ ಆಭರಣಗಳ ಹಸ್ತಾಂತರ

Team Udayavani, Mar 16, 2023, 3:50 PM IST

tdy-17

ಮೇಲುಕೋಟೆ: ಮೇಲುಕೋಟೆ ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವದ ವಿಶೇಷ ಉತ್ಸವಗಳಲ್ಲಿ ಚೆಲುವನಾರಾಯಣ ಸ್ವಾಮಿ ಅಲಂಕಾರಕ್ಕಾಗಿ 56 ಬಗೆಯ ವೈವಿಧ್ಯಮಯ ಪುರಾತನಆಭರಣಗಳನ್ನು ಸ್ಥಾನೀಕರು ಅರ್ಚಕರು,ಪರಿಚಾರಿಗೆ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್‌ ಹಸ್ತಾಂತರಿಸಿದರು.

ಪಾಂಡವಪುರ ತಾಲೂಕು ಖಜಾನೆಯಲ್ಲಿದ್ದ ತಿರುವಾಭರಣ ಪೆಟ್ಟಿಗೆಗಳನ್ನು ಪೊಲೀಸ್‌ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದು ಪಾರ್ಕಾವಣೆ ಮಾಡಲಾಯಿತು. ಬಂಗಾರ,ಮುತ್ತು ಹಾಗೂ ವಜ್ರಖಚಿತ ಆಭರಣಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ಚೆಲುವನಾರಾ ಯಣ ಸ್ವಾಮಿಯ ಅಲಂಕಾರಕ್ಕಾಗಿ ನೀಡಲಾಯಿತು.

ಶಂಖ, ಚಕ್ರ, ಗದಾಂಗಿ ಕಿರೀಟ ಬಂಗಾರದ ಬಟ್ಟಲು ಮುತ್ತುಮುಡಿ, ಮುತ್ತಿನ ಸರಗಳು ಕೋರಂಬ ಹೀಗೆ 56 ವೈವಿಧ್ಯಮಯ ಆಭರಣಗಳನ್ನು ಒಂದೊಂದಾಗಿ ಪರಿಶೀಲಿಸಿ, ದಾಖಲಿಸಿದ ನಂತರ ದೇವಾಲಯದ ಕೈಂಕರ್ಯಪರಿಗೆ ಹಸ್ತಾಂತರ ಮಾಡಲಾಯಿತು.

24ರಾತ್ರಿ ಪ್ರಥಮ ತೆಪ್ಪೋತ್ಸವ: ಈ ಅಮೂಲ್ಯ ಪುರಾತನ ಆಭರಣಗಳು ಯುಗಾದಿ ಹಬ್ಬದಿಂದಲೇ ಚೆಲುವನಾರಾಯಣನನ್ನು ಅಲಂಕರಿಸಲಿವೆ. ಮಾರ್ಚ್‌ 24ರಂದು ರಾತ್ರಿ ನಡೆಯುವ ಪ್ರಥಮ ತೆಪ್ಪೋತ್ಸವದಂದುಮುತ್ತು ಮುಡಿ ಅಲಂಕಾರದೊಂದಿಗೆ ಈ ಎಲ್ಲಾಆಭರಣಗಳನ್ನು ಧರಿಸಲಾಗುತ್ತದೆ. ಇದರ ಜೊತೆಗೆ ವೈರಮುಡಿಯಂದು ಜಿಲ್ಲಾ ಖಜಾನೆಯಿಂದ ಬರುವ ವೈರಮುಡಿ -ರಾಜಮುಡಿ ಹಾಗೂ 16 ಬಗೆಯ ವಜ್ರಖಚಿತ ಆಭರಣಗಳೂ ಸಹ ಚೆಲುನಾರಾಯಣನನ್ನು ಬ್ರಹ್ಮೋತ್ಸವ ದಲ್ಲಿ ಅಲಂಕರಿಸಲಿದೆ. ವೈರಮುಡಿ ಕಿರೀಟಮಾತ್ರ ಒಂದು ರಾತ್ರಿ ಚೆಲುವನಾರಾಯಣನ್ನು ಅಲಂಕರಿಸಿದರೆ, ಉಳಿದ ಆಭರಣಗಳು ಬ್ರಹ್ಮೋತ್ಸವ ಪೂರ್ತ ಸ್ವಾಮಿಯನ್ನು ಅಲಂಕರಿಸಿರುತ್ತವೆ.

ಉತ್ಸವದಲ್ಲಿ ಸೇವೆ ಮಾಡುವ ಭಾಗ್ಯ: ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್‌ ಮಾತನಾಡಿ, ಭಾರತದ ಅತ್ಯಂತ ಪುರಾತನ ಹಾಗೂ ಧಾರ್ಮಿಕ ವಿಶೇಷವಾದ ವೈರಮುಡಿ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಸಿದ್ಧತೆಮಾಡಿಕೊಳ್ಳಲಾಗಿದೆ. ಬ್ರಹ್ಮೋತ್ಸವದ ಎಲ್ಲಾ ಉತ್ಸವಗಳನ್ನೂ ವೈಭವಯುತವಾಗಿ ನಡೆಸಲುಶ್ರಮಿಸಲಾಗುತ್ತದೆ. ಉತ್ಸವದಲ್ಲಿ ಸೇವೆ ಮಾಡುವ ಭಾಗ್ಯ ನಮಗೆ ದೊರೆತಿರುವುದೇ ದೊಡ್ಡಭಾಗ್ಯಎಂದೇ ಭಾವಿಸಿ, ಭಕ್ತಸ್ನೇಹಿಯಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿ ಚೆಲುವನಾರಾಯಣ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.

ಸ್ಥಾನೀಕರಾದ ಕರಗಂ ನಾರಾಯಣ ಅಯ್ಯಂಗಾರ್‌, ಶ್ರೀನಿವಾಸನರಸಿಂಹನ್‌ಗುರೂಜಿ, ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್‌, ಸ್ಥಾನೀಕಂ ಸಂಪತ್ತು ಮಾರನ್‌, ಸ್ಥಾನೀಕಂ ಶ್ರೀರಾಮನ್‌, ಪರಿಚಾರಕ ಪಾರ್ಥಸಾರಥಿ, ಅರ್ಚಕ ವರದರಾಜ ಭಟ್‌, ಪರಕಾಲಮಠದ ಪ್ರತಿನಿಧಿ ನರಸಿಂಹರಂಗನ್‌,ಅಕೌಂಟೆಂಟ್‌ ಹೇಮಂತಕುಮಾರ್‌, ಪ್ರಥಮದರ್ಜೆ ಸಹಾಯಕ ಪ್ರಕಾಶ್‌ ಪಾರ್ಕಾವಣೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.