ವೆಂಕಟರಮಣಸ್ವಾಮಿ ದೇವಾಲಯ ಲೋಕಾರ್ಪಣೆ
ಜೀರ್ಣೋದ್ಧಾರಗೊಂಡಿರುವ ವಿಜಯನಗರದ ಅರಸರ ಕಾಲದ ದೇವಾಲಯ ಚುಂಚಶ್ರೀಗಳಿಂದ ಪೂಜಾ ಕೈಂಕರ್ಯ
Team Udayavani, Nov 12, 2021, 12:22 PM IST
ನಾಗಮಂಗಲ: ದೇವಸ್ಥಾನಗಳು ಮನುಷ್ಯರಿಗೆ ಸದಾ ನೆಮ್ಮದಿ ಕೊಡುವ ಧಾರ್ಮಿಕ ತಾಣಗಳು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮಿ ಅಭಿಪ್ರಾಯಪಟ್ಟರು. ತಾಲೂಕಿನ ಹೆಚ್.ಎನ್.ಕಾವಲ್‌ನ ಬೆಟ್ಟದಗುಡಿ ಗಿಡದ ಜಾತ್ರೆಯಲ್ಲಿ ಜೀಣೊìದ್ಧಾರಗೊಂಡಿರುವ ವಿಜಯನಗರದ ಅರಸರ ಕಾಲದ ವೆಂಕಟರಮಣಸ್ವಾಮಿ ಪುರಾತನ ದೇವಸ್ಥಾನ ಲೋಕಾರ್ಪಣೆ ಅವರು ಮಾತನಾಡಿದರು.
ಭಕ್ತರಿಗೆ ಅನುಕೂಲ: ದೇವಸ್ಥಾನ ಕಟ್ಟುವುದು ಮುಖ್ಯವಲ್ಲ, ಅದನ್ನು ನಿರ್ವಹಣೆ ಮಾಡುವುದು ಮುಖ್ಯ. ಚಿಕ್ಕ ತಿರುಪತಿ ಎಂದೇ ಹೆಸರು ಗಳಿಸಿರುವ ಈ ಸ್ಥಳದಲ್ಲಿ ಹತ್ತಾರು ದಶಕಗಳಿಂದ ನಿರ್ವಹಣೆಯಿಲ್ಲದೇ ಕಾಡಿನಲ್ಲಿ ಅವಿತುಹೋಗಿದ್ದ ವಿಜಯನಗರದ ಅರಸರ ಕಾಲದ ವೆಂಕಟರ ಮಣಸ್ವಾಮಿ ಪುರಾತನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವುದು ಈ ಪ್ರದೇಶದ ಭಕ್ತರಿಗೆ ಅನುಕೂಲವಾಗಿದೆ.
ಇದನ್ನೂ ಓದಿ:- ಶ್ರೀ ಮಹದೇಶ್ವರ ಸ್ವಾಮಿ ರಥೋತ್ಸವ
ತಿರುಪತಿಗೆ ಹೋಗಲಾಗದವರು ಇದೇ ತಿರುಪತಿ ಎಂದು ಭಾವಿಸಿ ಗಿಡದ ಜಾತ್ರೆಯ ಸಮಯದಲ್ಲಿ ಇಲ್ಲಿಗೆ ಬಂದು ಹರಕೆ ತೀರಿಸುವುದು ವಾಡಿಕೆಯಾಗಿದೆ ಎಂದರು. ಪ್ರಕೃತಿ ಸೌಂದರ್ಯ ನಿರ್ಮಿಸಿ: ವೆಂಕಟರಮಣ ದೇವಸ್ಥಾನವು ಪ್ರಕೃತಿ ಸೌಂದರ್ಯದ ಮಡಿಲಲ್ಲಿ ರುವುದರಿಂದ ದೇವಸ್ಥಾನದ ಸುತ್ತಮುತ್ತ ಪ್ರಕೃತಿ ಸೌಂದರ್ಯ ನಿರ್ಮಿಸಬೇಕು. ದೇವಸ್ಥಾನವಿರುವ ಬೆಟ್ಟದ ತುಂಬೆಲ್ಲ ಸಾವಿರಾರು ಗಿಡ ಮರಗಳನ್ನು ಬೆಳೆಸಿ ವನಸ್ವರೂಪ ನೀಡಬೇಕು.
ಇಂತಹ ಮಹತ್ಕಾರ್ಯಕ್ಕೆ ದೇವಸ್ಥಾನದ ಸಮಿತಿಯೊಂದಿಗೆ ಶ್ರೀಮಠವೂ ಕೈಜೋಡಿಸಿ ದೇವಸ್ಥಾನದ ಅಭಿವೃದ್ಧಿ ಯಲ್ಲಿ ಪಾಲ್ಗೊಳ್ಳಲಿದೆ. ಸಮಿತಿ ಸದಸ್ಯರು ಶ್ರದ್ಧಾಭಕ್ತಿ ಯಿಂದ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದಾಗ ಮಾತ್ರ ಇವೆಲ್ಲವು ಸಾಧ್ಯ ಎಂದು ಹೇಳಿದರು. ವೇ.ಬ್ರ.ಡಾ.ಭಾನುಪ್ರಕಾಶ್‌ಶರ್ಮಾ ಅವರ ನೇತೃತ್ವದ ಪುರೋಹಿತರ ತಂಡ ಮೂರುದಿನಗಳ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಅರ್ಚಕ ರಾದ ಸುಧಾಕರ್ ಧೀಕ್ಷಿತ್, ದೀಪು ದೇವತಾ ಕಾರ್ಯದಲ್ಲಿ ಭಾಗಿಯಗಿದ್ದರು. ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ ನೆರವೇರಿತು. ದೇವಸ್ಥಾನ ಸಮಿತಿಯ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಉದಯಕಿರಣ್, ರಾಮಣ್ಣ, ಅನ್ನದಾನಿ, ತಮ್ಮಯ್ಯಪ್ಪ ಸೇರಿದಂತೆ ನೂರಾರು ಭಕ್ತರಿಂದ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.
ಮಹಾ ಕುಂಭಾಭಿಷೇಕ
ದೇವಸ್ಥಾನದ ಲೋಕಾರ್ಪಣೆ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಗುರುವಾರ ಬೆಳಗ್ಗೆ ಕುಂಭಾಭೀಷೇಕ, ಚತುರ್ವೇದ ಪಾರಾಯಣ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿದವು. ನಿರ್ಮಲಾನಂದನಾಥ ಸ್ವಾಮೀಜಿ ಅವರು ಪೂರ್ಣಾಹುತಿ ಅರ್ಪಿಸಿದರು. ಸುಂದರವಾಗಿ ನಿರ್ಮಿಸಿರುವ ವೆಂಕಟರಮಣಸ್ವಾಮಿ ಮೂರ್ತಿಗೆ ಹಾಲಭಿಷೇಕ ನೆರವೇರಿಸಿ ಪೂಜಾ ಕೈಂಕರ್ಯ ನೆರವೇರಿಸಿದರು. ಮಹಾ ಕುಂಬಾಭಿಷೇಕ ನೆರವೇರಿಸುವ ಮೂಲಕ ದೇವಸ್ಥಾನ ಲೋಕಾರ್ಪಣೆ ಮಾಡಿದರು. ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.