ಸಂಭ್ರಮದಿಂದ ನಡೆದ ವಿಷ್ಣು ದೀಪೋತ್ಸವ
Team Udayavani, Nov 21, 2021, 5:24 PM IST
ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ವಿಷ್ಣು ದೀಪೋತ್ಸವ ಸಂಭ್ರಮದಿಂದ ನೆರವೇರಿತು. ದೇವಾಲಯದ ಪ್ರತಿ ಸನ್ನಿಧಿ ಯ ಮುಂಭಾಗ ದಲ್ಲೂ ಹಣತೆಗಳನ್ನು ಸಾಲಾಗಿ ಹಚ್ಚಿ ಕೃತಿಕೋತ್ಸವ ನೆರವೇರಿಸಲಾಯಿತು.
ಕೃತ್ತಿಕೋತ್ಸವದ ವಿಶೇಷ ಪೂಜಾ ಕಾರ್ಯಕ್ರಮದ ಅಂಗವಾಗಿ ಮೂಲ ಮೂರ್ತಿ ಚೆಲ್ವ ತಿರುನಾರಾಯಣಸ್ವಾಮಿಗೆ ವೇದ ಮಂತ್ರಗಳೊಂದಿಗೆ ಕುಂಬಾರತಿ ನೆರವೇರಿಸಲಾ ಯಿತು. ನಂತರ ಚೆಲುವ ನಾರಾ ಯಣಸ್ವಾಮಿ ಉತ್ಸ ವ ವನ್ನು ದೇವಾಲಯದ ಒಳಪ್ರಾಕಾರದಲ್ಲಿ ನೆರ ವೇರಿಸಿ ದೇವಾಲಯದ ರಾಜಗೋಪುರದ ಮುಂಭಾಗ ಕರಗು ಸುಡಲಾಯಿತು.
ನಂತರ ಕುಂಬಾರತಿ ಮಾಡಿ ಗರುಡಗಂಬದ ಮೇಲೆ ಇಡಲಾಯಿತು. ಅಂತಿಮವಾಗಿ ಸ್ವಾಮಿಗೆ ಮಂಟಪ ವಾಹನೋತ್ಸವ ನೆರವೇರುವುದರೊಂದಿಗೆ ವಿಷ್ಣು ದೀಪೋತ್ಸವ ಮುಕ್ತಾಯವಾಯಿತು. ಪರಿಚಾರಕ ಪಾರ್ಥಸಾರಥಿ ಕುಂಭಾರತಿಯನ್ನು ಹೊತ್ತು ಕೈಂಕರ್ಯ ನೆರವೇರಿಸಿದರು. ಕರುಗು ಸುಡುವುದಕ್ಕೂ ಮುನ್ನ ಬಂಡೀಕಾರರಿಗೆ ಮಾಲೆ ಮರ್ಯಾದೆ ನೆರವೇರಿಸಲಾಯಿತು. ನವೆಂಬರ್ 20ರಿಂದ 2022ರ ಜನವರಿಯಲ್ಲಿ ಆರಂಭವಾಗುವ ಕೊಠಾರೋತ್ಸವದವರೆಗೆ ದೇವಾಲ ಯದಲ್ಲಿ ಯಾವುದೇ ಉತ್ಸವ ಇರುವುದಿಲ್ಲ.
ತಿರುಮಂಗೈ ಆಳ್ವಾರರ ತಿರುನಕ್ಷತ್ರ: ಕಳ್ಳರ ಗುರುವಾಗಿ ಮಹಾವಿಷ್ಣುವಿನ ಕೃಪೆಯಿಂದ ಆಳ್ವಾರ್ ಸ್ಥಾನಕ್ಕೇರಿದ ತಿರುಮಂಗೈ ಆಳ್ವಾರ್ ತಿರುನಕ್ಷತ್ರ ಮಹೋತ್ಸವ ಶುಕ್ರವಾರ ನೆರವೇರಿತು. ಬೆಳಗ್ಗೆ ಆಳ್ವಾರರಿಗೆ ಮಂಟಪ ವಾಹನೋತ್ಸವ ನಂತರ ಅಭಿಷೇಕ ನೆರವೇರಿತು. ಸಂಜೆ ಚೆಲುವನಾರಾಯಣ ಸ್ವಾಮಿಯೊಂದಿಗೆ ಉತ್ಸವ ನೆರವೇರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Bengaluru Crime: ಕತ್ತು ಬಿಗಿದು ಇಬ್ಬರು ಮಕ್ಕಳನ್ನು ಕೊಂದ ಅಮ್ಮ!
IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.