ಪೈಪ್ ಲೈನ್ ಡ್ಯಾಮೇಜ್, ನೀರು ಸರಬರಾಜು ವ್ಯತ್ಯಯ
Team Udayavani, May 29, 2021, 7:28 PM IST
ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಿಂದ ಮಂಡ್ಯ ನಗರದ ನೀರು ಸರಬರಾಜಿಗೆ ವ್ಯತ್ಯಯ ಉಂಟಾಗಿದೆ. ಅವೈಜ್ಞಾನಿಕಕಾಮಗಾರಿಯಿಂದ ನಗರದ ಜನತೆ ನೀರಿಲ್ಲದೆಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಕಾಟವಾದರೆ,ಮತ್ತೂಂದೆಡೆ ನೀರಿಗಾಗಿ ಪರದಾಡು ವಂತಾಗಿದೆ.
ಮೇ15ರಿಂದ ನಗರದಲ್ಲಿ ಈ ಸಮಸ್ಯೆ ಉದ್ಭವಿಸಿದ್ದು, ಕಾವೇರಿನೀರು ಸಮರ್ಪಕವಾಗಿ ಸರಬ ರಾಜು ಆಗುತ್ತಿಲ್ಲ.ಇದರಿಂದ ಬಿಂದಿಗೆ ನೀರಿಗೂ ಹಾಹಾ ಕಾರ ಉಂಟಾಗಿದೆ.ರಾತ್ರಿ ವೇಳೆ ಕೊಳವೆಬಾವಿ ಇರುವ ಬಡಾವಣೆಗೆ ತೆರಳಿನೀರು ತರುವ ಅನಿವಾರ್ಯತೆ ಇದೆ.
ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿನಡೆಯುತ್ತಿದೆ. ಶ್ರೀರಂಗಪಟ್ಟಣದ ಕೋಡಿಶೆಟ್ಟಿಪುರ ಬಳಿರಸ್ತೆ ಚತುಷ್ಪಥವಾಗಿದ್ದು, ಸೇತುವೆ ನಿರ್ಮಾಣಮಾಡಲಾಗುತ್ತಿದೆ. ಕೆಳಗೆ ಮೊದಲು ಅಳವಡಿಸಿದ್ದ 400ಎಂಎಂ ಪೈಪ್‌ಲೈನ್‌ಗೆ ಡ್ಯಾಮೇಜ್ ಆಗಿದೆ. ಇದರಿಂದನೀರು ಸರಬರಾಜು ನಿಂತಿದೆ.
ಪ್ಲೇಓವರ್ ಬ್ಲಾಕಿಂಗ್‌ಮಾಡಲು ಸಾಧ್ಯವಿಲ್ಲದಂತಾಗಿದೆ. ಹೆದ್ದಾರಿ ಕಾಮಗಾರಿನಡೆಸುತ್ತಿರುವವರು ಮೊದಲು ಜಲಮಂಡಳಿಗೆ ಪೈಪ್‌ಲೈನ್ ಅಳವಡಿಸಲು ಅವಕಾಶ ನೀಡಿ, ಪೈಪ್‌ಲೈನ್‌ಅಳವಡಿಸಿದ ನಂತರ ಕಾಮಗಾರಿ ಆರಂಭಿಸಬೇಕಿತ್ತು.ಆದರೆ ಏಕಾಏಕಿ ಪೈಪ್‌ಲೈನ್ ಮೇಲೆಯೇ ಫ್ಲೆçಓವರ್‌ನಿರ್ಮಾಣ ಮಾಡಲು ಹೊರಟಿದ್ದಾರೆ. ಇದರಿಂದ ಕಾವೇರಿ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗೆತೊಂದರೆಯಾಗಿದೆ. ಇದು ನೀರು ಸರಬರಾಜಿಗೆತೊಂದರೆಯಾಗಿದೆ.
ಜಮೀನು ಪರಿಹಾರ ವಿಳಂಬ: ಮೊದಲು 2 ಲೈನ್‌ರಸ್ತೆ ಇದ್ದುದ್ದರಿಂದ ಅದರಂತೆ ರಸ್ತೆ ಪಕ್ಕದಲ್ಲಿಯೇ1985 ಹಾಗೂ 2000ರಲ್ಲಿ ಪೈಪ್‌ಲೈನ್‌ಅಳವಡಿಸಲಾಗಿತ್ತು. ಆದರೆ ಈಗ ಎರಡು ಇಕ್ಕೆಲಗಳಲ್ಲಿ3 ಲೈನ್ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಪೈಪ್‌ಲೈನ್ ಮಧ್ಯೆದಲ್ಲಿ ಸಿಲುಕಿಕೊಂಡಿದೆ. ಆಗ ನಮಗೆಎಲ್ಲೆಲ್ಲಿ ಪೈಪ್‌ಲೈನ್ ಅಳವಡಿಸಿಕೊಳ್ಳಲು ಜಾಗವನ್ನುತೆರವುಗೊಳಿಸಿಕೊಡಬೇಕಿತ್ತು.
ಆದರೆ ಅದನ್ನು ಮಾಡದೆಅವೈಜ್ಞಾನಿಕವಾಗಿ ಕಾಮಗಾರಿ ಮಾಡುತ್ತಿರುವುದರಿಂದ ನಮಗೆ ಯಾವುದೇ ಇನ್ನೂ ಕ್ಲಿಯರೆನ್ಸ್ ಕೊಟ್ಟಿಲ್ಲ.ಅಲ್ಲದೆ, ಈಗ ಪೈಪ್‌ಲೈನ್ ಅಳವಡಿಸಲು ಜಮೀನು ಸಿಗದಂತಾಗಿದೆ. ಹೆದ್ದಾರಿ ಪ್ರಾ ಧಿಕಾರ ಇನ್ನೂ ಜಮೀನುಮಾಲೀಕರಿಗೆ ಪರಿಹಾರ ನೀಡಿಲ್ಲದಿರುವುದುಸಮಸ್ಯೆಯಾಗಿದೆ ಎಂದು ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರಡಿ. ಮಂಜುನಾಥ್ ಹೇಳುತ್ತಾರೆ.
ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.