ಮದ್ದೂರು, ಮಳವಳ್ಳಿ ಕೆರೆಗಳಿಗೆ ನೀರು
Team Udayavani, Mar 18, 2021, 9:40 AM IST
ಭಾರತೀನಗರ: ತಿಟ್ಟಮಾರನಹಳ್ಳಿ ಏತನೀರಾವರಿ ಯೋಜನೆ ಪಂಪ್‌ಹೌಸ್ ಹಾಗೂ ರೈಸಿಂಗ್ ಮೆನ್ ಕಾಮಗಾರಿ ಯನ್ನು ಶಾಸಕ ಡಿ.ಸಿ.ತಮ್ಮಣ್ಣ ವೀಕ್ಷಣೆ ಮಾಡಿದರು.
ಈ ವೇಳೆ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಈಏತನೀರಾವರಿ ಕಾಮಗಾರಿ ಮದ್ದೂರು ಹಾಗೂಮಳವಳ್ಳಿ ಎರಡು ಕ್ಷೇತ್ರದ ಬಾಧಿತ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಒದಗಿಸುವ ಕಾಮಗಾರಿಯಾಗಿದೆ.ಮದ್ದೂರು ಕ್ಷೇತ್ರದ 4 ಕೆರೆ, ಮಳವಳ್ಳಿ ಕ್ಷೇತ್ರದ 12ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದರಿಂದ ಈಭಾಗದ ನೂರಾರು ಎಕರೆ ಪ್ರದೇಶದ ಬೆಳೆಗಳಿಗೆಅನುಕೂಲವಾಗಲಿದೆ ಎಂದರು.
44 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಸೂಳೆಕೆರೆ ಕೋಡಿಯಿಂದ ಹಾಗೂ ವಿಸಿ ನಾಲಾ ಜಾಲದ ಅಚ್ಚುಗಟ್ಟು ಪ್ರದೇಶಗಳಿಂದ ಬರುವಹೆಚ್ಚುವರಿ ನೀರನ್ನು ಸಂಗ್ರಹಿಸಿ ಮಾಡಿ ತಿಟ್ಟಮಾರನಹಳ್ಳಿ ಏತ ನೀರಾವರಿ ಯೋಜನೆಯಿಂದ ಹೆಬ್ಟಾಳ ಚೆನ್ನಯ್ಯನಾಲೆಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಯೋಜನೆಯಾಗಿದೆ ಎಂದರು.
ಬೊಪ್ಪಸಮುದ್ರದ ರೈತ ರಾಜಣ್ಣ ಮಾತನಾಡಿ, ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪದೆ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕಾಮಗಾರಿ ಪೂರ್ಣಗೊಂಡ ನಂತರ ಎರಡು ಬೆಳೆಗಳನ್ನು ಯಾವುದೇ ತೊಂದರೆ ಇಲ್ಲದೆ ಬೆಳೆಯಬಹುದು. ಈ ಏತ ನೀರಾವರಿ ಯೋಜನೆಯಿಂದ ನಮಗೆ ಸಂತಸ ತಂದಿದೆ ಎಂದರು.
ಗ್ರಾಪಂ ಸದಸ್ಯ ಉಮೇಶ್ ಮಾತನಾಡಿ, ವಿ.ಸಿ.ನಾಲೆಯಿಂದ ಹಾಗೂ ಹೆಬ್ಟಾಳ ಚೆನ್ನಯ್ಯನಾಲೆಯಿಂದ ನೀರು ಬಾರದೆ ಈ ಭಾಗದಲ್ಲಿ 2ನೇ ಬೆಳೆಬೆಳೆಯಲು ಸಾಧ್ಯವಾಗುತ್ತಿಲ್ಲ. ಬೊಪ್ಪಸಮುದ್ರದಿಂದಚಂದೂಪುರದವ ರೆಗೂ ರೈತರ ಬೆಳೆಗಳು ನೀರಿಲ್ಲದೆಒಣಗುತ್ತಿವೆ. ಶಾಸಕ ಡಿ.ಸಿ.ತಮ್ಮಣ್ಣ ಹೆಬ್ಟಾಳ ಚೆನ್ನಯ್ಯನಾಲೆಗೆ ತಡೆಗೋಡೆ ನಿರ್ಮಿಸಿ ಏತ ನೀರಾವರಿಮೂಲಕ ಈ ಭಾಗದ ಜಮೀನುಗಳಿಗೆ ನೀರೊದಗಿಸಲು ಮುಂದಾಗಿದ್ದಾರೆ ಎಂದರು.
ಅಧಿಕಾರಿಗಳಿಗೆ ಸೂಚನೆ: ವಿಸಿ ನಾಲೆ ಅಚ್ಚುಗಟ್ಟು ಪ್ರದೇಶಕ್ಕೆ ಏತನೀರಾವರಿ ಮೂಲಕ ನೀರನ್ನು ಸರಬರಾಜು ಮಾಡುವುದರ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಕಾಮಗಾರಿಯನ್ನು 4 ತಿಂಗಳಲ್ಲಿಮುಗಿಸಬೇಕೆಂದು ತಾಕೀತು ಮಾಡಿ ರೈತರಿಗೆ ಯಾವುದೇರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ನೀರಾವರಿ ಇಲಾಖೆಯ ಅಧಿಕಾರಿ ಎಇಇ ನಾಗರಾಜು, ಚಂದ್ರೇಗೌಡ, ಅವಿನಾಶ್, ಶೀಲ, ಶಿವಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ತಿಟ್ಟಮಾರನಹಳ್ಳಿ ಸುರೇಶ್, ವೆಂಕಟೇಶ, ಶ್ರೀನಿವಾಸ, ಮೆಣಸಗೆರೆ ಪಟೇಲ್ ಉಮೇಶ್ ಇದ್ದರು.
30ಕ್ಕೆ ರೈತರೊಂದಿಗೆ ಮಾತುಕತೆ :
ಈ ಏತನೀರಾವರಿ ಕಾಮಗಾರಿ ಮಾಡಲು ಕೆಲವು ರೈತರ ಜಮೀನನ್ನು ಭೂಸ್ವಾಧೀನ ಇಲಾಖೆವಶಪಡಿಸಿಕೊಂಡಿದೆ. ಇದರಿಂದ ರೈತರುಆತಂಕಗೊಂಡು ಇನ್ನೂ ಪರಿಹಾರ ಸಿಕ್ಕಿಲ್ಲ,ಪರಿಹಾರ ಕೊಡಿಸಿಕೊಡಬೇಕೆಂದು ನನಗೆಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಮಾ.30ರಂದು ರೈತರೊಂದಿಗೆ ಮಾತುಕತೆ ನಡೆಸಿಬೆಲೆ ನಿಗದಿ ಪಡಿಸಲು ಮುಂದಾಗಿದ್ದಾರೆ. ಆಸಂದರ್ಭದಲ್ಲಿ ರೈತರಿಗೆ ಉತ್ತಮ ಪರಿಹಾರ ಕೊಡಿಸಲು ಒತ್ತಾಯಿಸುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.
ಸರ್ ಎಂ.ವಿಶ್ವೇಶ್ವರಯ್ಯ ರೈತರ ಜಮೀನುಗಳಿಗೆ ನೀರೊದಗಿಸಲುಒಂದನೆಯದು ಕನ್ನಂಬಾಡಿ ಕಟ್ಟೆ, ಎಡನೆಯದುಯತ್ತಂಬಾಡಿ ಕಟ್ಟೆಯನ್ನು ಕಟ್ಟಲು ಕನಸುಕಂಡಿದ್ದರು. ಆದರೆ, ಯತ್ತಂಬಾರಿ ಅಣೆಕಟ್ಟೆಯನ್ನು ಕಟ್ಟಲು ಸಾಧ್ಯ ವಾಗಿರಲಿಲ್ಲ. ವಿಶ್ವೇಶ್ವರಯ್ಯನವರ ಕನಸನ್ನು ಶಾಸಕ ಸಿ.ಡಿ.ತಮ್ಮಣ್ಣಅವರು ಈ ಭಾಗದ ಕೂಳಗೆರೆ ಮತ್ತುತಿಟ್ಟ ಮಾರನಹಳ್ಳಿ ಏತ ನೀರಾವರಿ ಕಾಮಗಾರಿ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ. –ಉಮೇಶ್ ಪಟೇಲ್, ರೈತ ಮೆಣಸಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
Christmas: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.