ಕೆಆರ್‌ಎಸ್ ಜಲಾಶಯ ಕೆಳಭಾಗದ ನಾಲೆಗಳಿಗೆ ನೀರು
Team Udayavani, Jan 15, 2018, 3:55 PM IST
ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದ ಕೆಳಭಾಗದ ನಾಲೆಗಳಿಗೆ ಮುಂದಿನ ಬೇಸಿಗೆ ಬೆಳೆ ಬೆಳೆಯಲು ಸಮಿತಿ ನೀಡಿದ ಭರವಸೆಯಂತೆ 4 ಕಂತಿನ ಕಟ್ಟು ನೀರು ಕೊಡಲು ಸರ್ಕಾರ ಮುಂದಾಗಿರುವುದರಿಂದ ತಾಲೂಕಿನ ರೈತರಲ್ಲಿ
ಹರ್ಷ ವ್ಯಕ್ತವಾಗಿದೆ.
ಭರವಸೆಯಂತೆ ಬೇಸಿಗೆ ಹಂಗಾಮ ಹಿಂಗಾರು ಬೆಳೆಗೆ ಭಾನುವಾರದಿಂದಲೇ ನಾಲೆಗಳಿಗೆ ಹರಿಯಲು ಬಿಡಲಾಗಿದ್ದು ರೈತರು ಬಿತ್ತನೆ ಬೀಜ ಬಿತ್ತುವ ಖುಷಿಯಲ್ಲಿದ್ದಾರೆ.
ಕಳೆದ ತಿಂಗಳು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಸದ್ಯಕ್ಕೆ ಇರುವ ಬೆಳೆಗಳನ್ನು ಉಳಿಸಿಕೊಂಡು ನೀರು ಪದ್ಧತಿಯನ್ನು ಬಳಸಿಕೊಂಡರೆ ಅಗತ್ಯ ಬೆಳೆ ಬೆಳೆಯಬಹುದಾಗಿದೆ ಎಂದು ರೈತರು ತಮ್ಮ ಜಮೀನುಗಳನ್ನ ಅಚ್ಚುಕಟ್ಟು ಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.
ಹಿಂಗಾರಿನ ಮಳೆ ಬಿದ್ದು ಆದಷ್ಟು ಜಲಾಶಯದಲ್ಲಿ ನೀರು ಸಂಗ್ರಹ ಮಾಡಿಕೊಂಡ ನೀರಾವರಿ ಅಧಿಕಾರಿಗಳು ನಿಯಮದಂತೆ 4 ಕಟ್ಟು ನೀರು ಹರಿಸಿದ್ದರಿಂದ ಭತ್ತ ಸೇರಿ ಕಬ್ಬು ಇತರೆ ಬೇಸಿಗೆ ಬೆಳೆಗಳಿಗೆ ನೀರು ಬಿಡಲಾಗುತ್ತಿದೆ.
ಆಡಿದ ಮಾತಿನಂತೆ ಭಾನುವಾರ ಉಪವಿಭಾಗಾಧಿಕಾರಿ, ಸಿಡಿಎಸ್, ವಿರಿಜಾ, ವರುಣಾ, ಆರ್‌ಬಿಎಲ್‌ಎಲ್, ಬಂಗಾರದೊಡ್ಡಿ ನಾಲೆ ಸೇರಿ ಇತರೆ ಕಾವೇರಿ ನದಿ ಅಣೆಕಟ್ಟೆ ಕೆಳಭಾಗದ ಎಲ್ಲಾ ನಾಲೆಗಳಿಗೆ ನೀರು ಹರಿಸಲಾಗಿದೆ.
ಜಲಾಶಯದ ಗರಿಷ್ಠ ಮಟ್ಟ 124,80 ಅಡಿಗಳಿದ್ದು ಪ್ರಸ್ತುತ 102.69 ಅಡಿ ನೀರು ಇದೆ. ಒಳ ಹರಿವಿನ ಪ್ರಮಾಣ 208 ಕ್ಯುಸೆಕ್ ಹಾಗೂ ಹೊರ ಹರಿವಿನ ಪ್ರಮಾಣ 4089 ಕ್ಯುಸೆಕ್ ನೀರು ಜಲಾಶಯದಿಂದ ಹೊರ ಹೋಗುತ್ತಿದ್ದು ಜಲಾಶ
ಯದಲ್ಲಿ 24.993 ಟಿಎಂಸಿ ನೀರು ಸಂಗ್ರಹವಾಗಿದೆ.
ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಈಗ ನಾಲೆಗಳಿಗೆ ನೀರು ಹರಿಸಿದ್ದರಿಂದ ಸ್ವಲ್ಪ ಮಟ್ಟಿಗೆ ಬೇಸಿಗೆ ಬೆಳೆ ಬೆಳೆಯಲು ಅನುಕೂಲವಾಗಿದೆ ಎಂದು ಎಂ.ಶೆಟ್ಟಿಹಳ್ಳಿ, ಕೆ.ಶೆಟ್ಟಹಳ್ಳಿ ರೈತರಾದ ತಿಬ್ಬೇಗೌಡ, ಮಂಜಪ್ಪ, ರೇವಣ್ಣ, ದೇವರಾಜು, ಪುರುಷೋತ್ತಮ್, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.