ಮನೆ ಮನೆಗೆ ತೆರಳಿ ಕರ ವಸೂಲಿ ಮಾಡಿ
ಮದ್ದೂರು ತಾಪಂ ಅಧಿಕಾರಿಗಳ ಸಭೆ • ಪಿಡಿಒಗಳಿಗೆ ಸಲಹೆ ನೀಡಿದ ತಾಪಂ ಉಪಾಧ್ಯಕ್ಷ
Team Udayavani, Aug 18, 2019, 4:17 PM IST
ಮದ್ದೂರು: ಗ್ರಾಪಂ ಪಿಡಿಒಗಳು ಪ್ರತಿ ಮನೆ ಮನೆಗೆ ತೆರಳಿ ಕಂದಾಯ ಅದಾಲತ್ ಮೂಲಕ ತೆರಿಗೆ ವಸೂಲಾತಿಗೆ ಮುಂದಾಗಬೇಕೆಂದು ತಾಪಂ ಉಪಾಧ್ಯಕ್ಷ ಬಿ.ಎಂ.ರಘು ತಿಳಿಸಿದರು.
ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ವೇಳೆ ಮಾತನಾಡಿದರು.
ಕೋಟ್ಯಂತರ ರೂ. ಬಾಕಿ: ತಾಲೂಕಿನ ವಳಗೆರೆಹಳ್ಳಿ, ಕಾಡುಕೊತ್ತನಹಳ್ಳಿ, ಡಿ.ಎ.ಕೆರೆ, ಗೆಜ್ಜಲಗೆರೆ, ಕೊಪ್ಪ, ನಗರಕೆರೆ, ಚಾಮನಹಳ್ಳಿ, ಬೆಸಗರಹಳ್ಳಿ, ಕದಲೂರು, ಆಲೂರು, ಹೊಸಕೆರೆ ಹಾಗೂ ಭಾರತಿನಗರ ಗ್ರಾಪಂ ಗಳಲ್ಲಿ ಕಂದಾಯ ವಸೂಲಾತಿಯಾಗದೆ ಕೋಟ್ಯಂತರ ರೂ. ಬಾಕಿ ಉಳಿದಿದ್ದು ಕೂಡಲೇ ಪಿಡಿಒಗಳು ಸಿಬ್ಬಂದಿಗಳ ಜತೆಗೂಡಿ ಮನೆ ಮನೆಗೆ ತೆರಳಿ ಕಂದಾಯ ವಸೂಲಾತಿಗೆ ಮುಂದಾಗಬೇಕೆಂದರು.
ಕ್ರಮವಹಿಸಿ: ಭಾರತಿನಗರ ಗ್ರಾಪಂ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಅಂಗಡಿ ಮಳಿಗೆ ಗಳಿದ್ದು ಕೇವಲ 150 ಮಂದಿ ಪರವಾನಗಿ ಪಡೆದಿದ್ದಾರೆ. ಉಳಿಕೆ ಪರವಾನಗಿ ಪಡೆದಿರುವ ಅಂಗಡಿ ಮಾಲಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ತಿಳಿಸಿದ ರಲ್ಲದೇ ಪ್ರತಿಯೊಬ್ಬರೂ ತೆರಿಗೆ ವಸೂಲಾತಿಗೆ ಅಗತ್ಯ ಕ್ರಮವಹಿಸಬೇಕೆಂದರು.
ಅಭಿವೃದ್ಧಿಗೆ ಮುಂದಾಗಿ: ತಾಲೂಕಿನ ಸೋಮನಹಳ್ಳಿ, ಗೆಜ್ಜಲಗೆರೆ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶವಾಗಿದ್ದರೂ ಕರ ನಿಗದಿ ಮಾಡದೆ ಆರ್ಥಿಕವಾಗಿ ಹಿಂದುಳಿದಿದ್ದು ಕೂಡಲೇ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿ ಗ್ರಾಮಗಳ ಅಭಿವೃದ್ಧಿಗೆ ಕ್ರಮವಹಿಸಬೇಕೆಂದು ಹೇಳಿದರು.
ನರೇಗಾ ಯೋಜನೆಯಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಗೆ 1.5 ಕೋಟಿ ರೂ. ಹಣ ಸರ್ಕಾರದಿಂದ ಬಿಡುಗಡೆಯಾಗಿದ್ದು ಪಿಡಿಒ ಗಳು ಗ್ರಾಮಾಭಿವೃದ್ಧಿಗೆ ಬಳಕೆ ಮಾಡಿಕೊಳ್ಳುವ ಸದುದ್ದೇಶದಿಂದ ಕ್ರಿಯಾ ಯೋಜನೆ ಸಲ್ಲಿಸುವಂತೆ ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ ಸಭೆ ವೇಳೆ ತಿಳಿಸಿದರು.
ಶುಚಿತ್ವಕ್ಕೆ ಒತ್ತು ನೀಡಿ: ಕೆಲ ಗ್ರಾಮಗಳಲ್ಲಿ ಜಾನುವಾರು ತೊಟ್ಟಿ ನಿರ್ಮಿಸಿರುವ ಸ್ಥಳಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು ಮಳೆಗಾಲ ಸಮೀಪಿಸಿರುವುದರಿಂದ ಸೊಳ್ಳೆ ಗಳ ಉತ್ಪಾದನಾ ಕೇಂದ್ರವಾಗಿ ಮಲೇರಿ ಯಾ, ಚಿಕೂನ್‌ಗುನ್ಯ, ಡೆಂಘೀ ಸೇರಿದಂತೆ ಇನ್ನಿತರೆ ರೋಗ ಹರಡುವ ಭೀತಿಯಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕ್ರಿಮಿನಾಶಕ ಸಿಂಪಡಣೆ ಮಾಡಿ ಗ್ರಾಮದ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿದರು.
ಅಭಿವೃದ್ಧಿಗೆ ಹಣ ಬಳಸಿ:ತಾಲೂಕಿನ ಆತ ಗೂರು, ಅಣ್ಣೂರು, ಎಸ್. ಐ. ಹೊನ್ನಲಗೆರೆ, ಹೆಮ್ಮನಹಳ್ಳಿ, ಮರಳಿಗ, ಕೆ.ಶೆಟ್ಟಹಳ್ಳಿ, ಹೊಸಕೆರೆ ಹಾಗೂ ಬಿದರಕೋಟೆ ಗ್ರಾಮಗಳು ನರೇಗಾ ಯೋಜನೆಯಡಿ ಶೇ.100 ಅಭಿವೃದ್ಧಿ ಕಾಮಗಾರಿಗೆ ಹಣವನ್ನು ವಿನಿಯೋಗಿ ಸಿರುವುದು ಶ್ಲಾಘನೀಯ. ಕೂಡಲೇ ನರೇಗಾ ಯೋಜನೆ ಹಣ ಸದುಪಯೋಗ ಪಡಿಸಿ ಕೊಂಡು ರಸ್ತೆ, ಚರಂಡಿ, ಇನ್ನಿತರೆ ಕಾಮಗಾರಿಗೆ ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ತರಾಟೆ: ಕೆಲ ಗ್ರಾಪಂಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ವೇತನ ನೀಡದ ಪಿಡಿಒಗಳ ವಿರುದ್ಧ ಉಪಾಧ್ಯಕ್ಷ ಬಿ.ಎಂ.ರಘು ತರಾಟೆಗೆ ತೆಗೆದುಕೊಂಡರಲ್ಲದೇ ಕಳೆದ 15 ತಿಂಗಳಿಂದಲೂ ವೇತನ ಪಾವತಿಸದೆ ನಿರ್ಲಕ್ಷ್ಯ ವಹಿಸಿ ಶೋಷಣೆ ಮಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿದ್ದ ತಾಪಂ ಇಒ ಮುನಿರಾಜು ಅವರಿಗೆ ಸೂಚಿಸಿದರು.
ಪ್ರತಿ ತಿಂಗಳು ನೌಕರರಿಗೆ ವೇತನ ಸಮ ರ್ಪಕವಾಗಿ ವಿತರಿಸುವಂತೆ ಜತೆಗೆ ಗ್ರಾಪಂ ಅಭಿವೃದ್ಧಿ ಕಾರ್ಯದಲ್ಲಿ ಅವರನ್ನು ಉಪ ಯೋಗಿಸಿಕೊಂಡು ಅಭಿವೃದ್ಧಿ ಕಾಮಗಾರಿ, ಕಂದಾಯ ವಸೂಲಾತಿಗೆ ಮುಂದಾಗ ಬೇಕೆಂದು ತಿಳಿಸಿದರು. ಸಭೆ ವೇಳೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಜಿಪಂ ಸದಸ್ಯ ಮರಿಹೆಗಡೆ, ತಾಪಂ ಇಒ ಮುನಿರಾಜು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.