ಗೆಲುವು ಸುಮಲತಾಗೋ, ನಿಖೀಲ್ಗೋ?
ಪ್ರತಿ ಹಂತದಲ್ಲೂ ಕುತೂಹಲ ಕೆರಳಿಸುವುದು ನಿಚ್ಚಳ • ನಗರಕ್ಕೆ ಜನಸಾಗರವೇ ಹರಿದುಬರುವ ನಿರೀಕ್ಷೆ
Team Udayavani, May 23, 2019, 11:19 AM IST
ಮಂಡ್ಯ: ಲೋಕಸಭಾ ಕ್ಷೇತ್ರಗಳಲ್ಲೇ ಹೈವೋಲೆrೕಜ್ ಕ್ಷೇತ್ರವೆಂದು ಬಿಂಬಿತವಾಗಿರುವ ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರದ ಫಲಿತಾಂಶ ಕುರಿತು ಈಗಾಗಲೇ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
ಫಲಿತಾಂಶದ ಹಿನ್ನೆಲೆಯಲ್ಲಿ ಮಂಡ್ಯ ನಗರಕ್ಕೆ ಭಾರೀ ಜನಸಾಗರವೇ ಹರಿದುಬರುವ ನಿರೀಕ್ಷೆ ಇದೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಜನರು ಮಂಡ್ಯಕ್ಕೆ ಆಗಮಿಸುವ ಸಂಭವವಿದೆ. ಜನರನ್ನು ನಿಯಂತ್ರಣ ಮಾಡುವುದು ಪೊಲೀಸರಿಗೆ ದೊಡ್ಡ ತಲೆನೋವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯ ಮಂಡ್ಯದ ಸರ್ಕಾರಿ ಮಹಾ ವಿದ್ಯಾಲಯದಲ್ಲಿ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮುಖ್ಯಮಂತ್ರಿ ಪುತ್ರ ಕೆ.ನಿಖೀಲ್ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದು ಇವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನ ಮಾಜಿ ಸಚಿವ ದಿ.ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದಾರೆ. ಇಬ್ಬರೂ ಗೆಲುವಿಗಾಗಿ ಮದಗಜಗಳಂತೆ ಕಾದಾಡಿದ್ದಾರೆ. ಉಭಯ ಸ್ಪರ್ಧಿಗಳ ನಡುವೆ ಪ್ರತಿಷ್ಠೆಯ ಹಣಾಹಣಿಯೇ ನಡೆದಿದೆ. ಅಂತಿಮವಾಗಿ ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಕುತೂಹಲ ಕೆರಳಿಸುವ ಸಾಧ್ಯತೆ: ಗುರುವಾರ(ಮೇ 23)ದ ಚುನಾವಣಾ ಫಲಿತಾಂಶ ಎಲ್ಲರ ಗಮನವನ್ನು ಮಂಡ್ಯದತ್ತ ಕೇಂದ್ರೀಕರಿಸುವಂತೆ ಮಾಡಿದೆ. ಫಲಿತಾಂಶದ ಪ್ರತಿ ಹಂತದಲ್ಲೂ ಕುತೂಹಲ ಕೆರಳಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಆರಂಭದಿಂದ ಅಂತ್ಯದವರೆಗೂ ರೋಚಕತೆ ಕಾಯ್ದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಎಲ್ಲೆಡೆ ಕೇಳಿಬರುತ್ತಿರುವ ಮಾತಾಗಿದೆ.
ಮಂಡ್ಯ ಫಲಿತಾಂಶದ ಮೇಲೆ ಎಲ್ಲರ ಕಣ್ಣು: ಚುನಾವಣಾ ಮತ ಎಣಿಕೆ ನಡೆಯಲಿರುವ ಸರ್ಕಾರಿ ಮಹಾವಿದ್ಯಾಲಯದ ಎದುರು ಭಾರೀ ಸಂಖ್ಯೆಯ ಜನರು ಜಮಾಯಿಸುವ ನಿರೀಕ್ಷೆ ಇದೆ. ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಜನರು ಮಂಡ್ಯದತ್ತ ಮುಖ ಮಾಡಿದ್ದಾರೆ. ಮಂಡ್ಯ ಕ್ಷೇತ್ರದ ಫಲಿತಾಂಶ ಏನಾಗಬಹುದು ಎಂದು ತಿಳಿಯಲು ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಜನರು ತೀವ್ರ ಆಸಕ್ತರಾಗಿದ್ದಾರೆ.
ಚುನಾವಣೆ ನಡೆಯುವ ಸಮಯದಲ್ಲಿ ಹಾಗೂ ಚುನಾವಣೆ ಮುಗಿದ ನಂತರದಲ್ಲಿ ದೇಶದ ವಿವಿಧ ಭಾಗಗಳಿಂದ ಜನರು ಬಂಧುಗಳು, ನೆಂಟರು, ಸ್ನೇಹಿತರೊಂದಿಗೆ ಸಮಾಲೋಚನೆ ನಡೆಸುತ್ತಾ ಮಂಡ್ಯದೊಳಗೆ ಯಾರ ಪರ ವಾತಾವರಣವಿದೆ, ಯಾರು ಗೆಲ್ಲಬಹುದು ಎಂದು ಕೇಳುತ್ತಾ ಕಾತರತೆಯನ್ನು ವ್ಯಕ್ತಪಡಿಸಿದ್ದರು. ಹಾಗಾಗಿ ಬಹುತೇಕ ಜನರು ಫಲಿತಾಂಶ ತಿಳಿಯುವ ಸಲುವಾಗಿಯೇ ಮಂಡ್ಯದತ್ತ ಮುಖ ಮಾಡಲಿದ್ದು, ನಗರಕ್ಕೆ ಧಾವಿಸಿಬರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾದ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ನುರಿತ ಏಜೆಂಟರ ನೇಮಕ: ಮತ ಎಣಿಕೆ ನಡೆಯುವ ಕೇಂದ್ರಗಳಿಗೆ ಉಭಯ ಅಭ್ಯರ್ಥಿಗಳು ನಿಷ್ಠಾವಂತ ಕಾರ್ಯಕರ್ತರನ್ನು ಏಜೆಂಟರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಎಣಿಕೆ ಸಂದರ್ಭದಲ್ಲಿ ಎಲ್ಲಿಯೂ ಲೋಪವಾಗಂದಂತೆ ತಡೆಯುವುದಕ್ಕೆ ನುರಿತ ಏಜೆಂಟರನ್ನು ಆಯ್ಕೆ ಮಾಡಿಕೊಂಡು ಎಣಿಕಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಇವರೊಂದಿಗೆ ನುರಿತ ಕಾನೂನು ತಜ್ಞರ ತಂಡವನ್ನು ಸಿದ್ಧಪಡಿಸಿಕೊಂಡಿರುವ ಅಭ್ಯರ್ಥಿಗಳು ಎಣಿಕಾ ಸಂದರ್ಭದಲ್ಲಿ ಗೊಂದಲ ಸೃಷ್ಠಿಯಾದಲ್ಲಿ ಅವರಿಂದ ಸೂಕ್ತ ಸಲಹೆ-ಮಾರ್ಗದರ್ಶನ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಫಲಿತಾಂಶದತ್ತ ಚಿತ್ತ: ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿರುವ ಬೆನ್ನಹಿಂದೆಯೇ ಅಭ್ಯರ್ಥಿಗಳ ಎದೆ ಬಡಿತ ಹೆಚ್ಚಾಗಿದೆ. ಫಲಿತಾಂಶ ಏನಾಗುವುದೋ, ಏನೋ ಎಂಬ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ. ಚುನಾವಣಾ ಲೆಕ್ಕಾಚಾರವನ್ನೆಲ್ಲಾ ಮುಗಿಸಿರುವ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಅಂತಿಮವಾಗಿ ಫಲಿತಾಂಶದ ಕಡೆಗೆ ಈಗ ತಮ್ಮ ಚಿತ್ತಹರಿಸಿದ್ದಾರೆ.
ಇಷ್ಟದೇವರಿಗೆ ಹರಕೆ, ಪೂಜೆ: ಇಷ್ಟದೇವರನ್ನೆಲ್ಲಾ ಪ್ರಾರ್ಥಿಸುತ್ತಾ ಹರಕೆ, ವಿಶೇಷ ಪೂಜೆ ಸಲ್ಲಿಸುತ್ತಾ ಗೆಲುವಿಗಾಗಿ ಅಭ್ಯರ್ಥಿಗಳು ದೇವರ ಮೊರೆ ಹೋಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಕುಟುಂಬ ಆದಿ ಚುಂಚನಗಿರಿಯ ಶ್ರೀ ಕಾಲಭೈರವೇಶ್ವರನನ್ನು ನಂಬಿದ್ದಾರೆ. ಅದೇ ರೀತಿ ನಿಖೀಲ್ ತಾಯಿ ಅನಿತಾ ಕುಮಾರಸ್ವಾಮಿ ಪುತ್ರನ ಗೆಲುವಿಗಾಗಿ ಮದ್ದೂರು ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಹರಕೆ ಹೊತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರನ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ಸಿಗಲೆಂದು ವಿವಿಧ ರೀತಿಯ ಹೋಮಗಳನ್ನು ಹಲವು ದೇವಾಲಯಗಳಲ್ಲಿ ನಡೆಸಿದ್ದಾಗಿದೆ.
ಇನ್ನು ಸುಮಲತಾ ಅಂಬರೀಶ್ ಕೂಡ ಅಂಬರೀಶ್ ಕುಟುಂಬದ ಮನೆ ದೇವರು ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರನನ್ನು ನಂಬಿರುವಂತೆ ಆದಿ ಚುಂಚನಗಿರಿ ಶ್ರೀ ಕಾಲಭೈರವನ ಮೇಲೂ ಅಪಾರ ಭಕ್ತಿ ಹೊಂದಿದ್ದಾರೆ. ಅವರೂ ಗೆಲುವಿಗಾಗಿ ಇಷ್ಟ ದೇವರುಗಳ ಮೊರೆ ಹೋಗಿದ್ದಾರೆ. ಇನ್ನು ಸುಮಲತಾ ಹಾಗೂ ನಿಖೀಲ್ ಬೆಂಬಲಿಗರೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಏರ್ಪ ಡಿಸಿ ಉರುಳುಸೇವೆ ಮಾಡುವುದ ರೊಂ ದಿಗೆ ನೆಚ್ಚಿನ ನಾಯಕರ ಗೆಲುವಿಗೆ ದೇವರಲ್ಲಿ ಮೊರೆ ಇಟ್ಟಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಇಬ್ಬರಿಗೂ ಗೆಲುವು ಅನಿ ವಾರ್ಯ. ಅದಕ್ಕಾಗಿ ಒಬ್ಬೊಬ್ಬರು ತಮಗೆ ತೋಚಿದ ರೀತಿಯಲ್ಲಿ ದೇವರಿಗೆ ಪೂಜೆ- ಪುನಸ್ಕಾರಗಳನ್ನು ಸಲ್ಲಿಸಿ ವಿಜಯಲಕ್ಷ್ಮೀಗಾಗಿ ಪ್ರಾರ್ಥಿಸಿದ್ದಾರೆ.
ಚುನಾವಣೆಯದ್ದೇ ಮಾತು: ಕಳೆದ ಒಂದು ತಿಂಗಳಿಂದ ಚುನಾವಣಾ ಮೂಡ್‌ನಿಂದ ದೂರವಾಗಿದ್ದ ಮತದಾರರೂ ಸಹ ಇದೀಗ ಫಲಿತಾಂಶ ತಿಳಿಯುವುದಕ್ಕೆ ಅಲರ್ಟ್ ಆಗಿದ್ದಾರೆ. ಎಲ್ಲೆಲ್ಲೂ ಚುನಾವಣೆಯದ್ದೇ ಮಾತು. ಯಾರು ಗೆಲ್ಲಬಹುದು, ಯಾರು ಸೋಲಬಹುದು, ಗೆಲುವಿನ ಸನಿಹದಲ್ಲಿ ಯಾರಿದ್ದಾರೆ ಎಂದು ಕುತೂಹಲಕಾರಿ ಅಂಶಗಳೊಂದಿಗೆ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ. ಮಹಿಳೆಯರೂ ಸಹ ತಮ್ಮ ತಮ್ಮಲ್ಲೇ ಚುನಾವಣಾ ಫಲಿತಾಂಶ ಕುರಿತಂತೆ ಮಾತನಾಡುತ್ತಿರುವುದು ಈ ಚುನಾವಣೆಯ ಒಂದು ವಿಶೇಷ. ಹಿಂದಿನ ಯಾವುದೇ ಚುನಾವಣೆಗಳಲ್ಲೂ ಮಹಿಳಾ ಮತದಾರರು ಚುನಾವಣೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ತೋರಿಸಿರಲಿಲ್ಲ. ಈ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲೆಯ ಮತದಾನ ನಡೆಸಿ ರುವುದಲ್ಲದೆ, ಫಲಿತಾಂಶ ಕುರಿತಂತೆ ಚರ್ಚೆ ನಡೆಸು ವಷ್ಟರ ಮಟ್ಟಿಗೆ ರಾಜಕೀಯ ಆಸಕ್ತಿಯನ್ನು ತೋರ್ಪಡಿಸುತ್ತಿರುವುದು ಆಸಕ್ತಿದಾಯಕವಾದ ಸಂಗತಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.