ಆಡಳಿತದಲ್ಲಿ ಮಹಿಳೆಯರ ಪಾಲು ಹೆಚ್ಚು
Team Udayavani, Mar 7, 2021, 3:18 PM IST
ಮಳವಳ್ಳಿ: ತಾಲೂಕಿನ ಬಂಡೂರು ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ರಾಜ್ಯದ ಅತಿ ಹಿಂದುಳಿದ ಕೊರಮ ಸಮುದಾಯದ ಮಹಿಳೆ ಮುತ್ತಮ್ಮ ಅವರ ಮನೆಗೆ ಸಂಸದೆ ಸುಮಲತಾ ಭೇಟಿ ನೀಡಿ, ಮುತ್ತಮ್ಮ ಅವರನ್ನು ಅಭಿನಂದಿಸಿದರು.
ದಡದಪುರ ಗ್ರಾಮದ ಮುತ್ತಮ್ಮ ಮನಗೆ ಭೇಟಿ ನೀಡಿ ಮಾತನಾಡಿ, ರಾಜ್ಯದಲ್ಲಿಯೇ ಅತಿ ಹಿಂದುಳಿದ ಕೊರಮ ಸಮುದಾಯದಲ್ಲಿ ಪ್ರಥಮ ಮಹಿಳೆ ಬಂಡೂರು ಗ್ರಾಪಂ ಅಧ್ಯಕ್ಷೆಯಾಗಿ ದಡದಪುರ ಮುತ್ತಮ್ಮ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಇಂತಹ ಹಿಂದುಳಿದ ಸಮುದಾಯದವರನ್ನು ಗುರುತಿಸಬೇಕು. ಅದರಲ್ಲೂ ಜಿಲ್ಲೆಯ ಆಡಳಿತ ವರ್ಗದಲ್ಲಿ ಮಹಿಳೆಯರ ಪಾಲು ಹೆಚ್ಚು. ತಾವು ಸಂಸದೆ, ಡೀಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಪಂ ಅಧ್ಯಕ್ಷರು ಸೇರಿದಂತೆ ಬಹುತೇಕ ಮಂದಿ ಮಹಿಳೆಯರೇ ಅಧಿಕಾರ ನಡೆಸುತ್ತಿರುವುದು ನಮ್ಮ ಶಕ್ತಿ ತೋರಿಸುತ್ತದೆ ಎಂದರು.
ಗಟ್ಟಿಕೊಪ್ಪಲು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಬಿ.ಎಸ್. ಶಿವಣ್ಣ ಅವರು ಸಾಕಷ್ಟು ಸಲಹೆ-ಸಹಕಾರ ನೀಡಿದ್ದು, ಅವರ ಮಾರ್ಗದರ್ಶನ ಮುಂದಿನ ದಿನಗಳಲ್ಲೂ ಹೀಗೆ ಮುಂದುವರಿಯಲಿ ಎಂದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಬಿ.ಎಸ್.ಶಿವಣ್ಣ ಮಾತನಾಡಿದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಪುಟ್ಟಬಸವಯ್ಯ, ಉಪಾಧ್ಯಕ್ಷ ರಮೇಶ್, ಸದಸ್ಯರಾದ ವಸಂತ್, ಶ್ವೇತಾ, ಗೀತಾ, ದೇವರಾಜು, ಗುರುಮಲ್ಲಯ್ಯ, ಮರಮಾದಪ್ಪ, ಪ್ರಕಾಶ್, ಚಿಕ್ಕಲಿಂಗಯ್ಯ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.