ಸುಮಲತಾ ಕೈ ಹಿಡಿದ ಮಹಿಳಾ ಮತದಾರರು
ಗುಪ್ತಗಾಮಿನಿಯಂತೆ ಹರಿದುಬಂದ ಮತಗಳು • ಸ್ವಯಂಪ್ರೇರಣೆಯಿಂದ ಮತ ಚಲಾಯಿಸಿದ್ದ ನಾರಿಯರು
Team Udayavani, May 25, 2019, 4:23 PM IST
ಮಂಡ್ಯ: ಅಂಬರೀಶ್ ಸಾವಿನ ಅನುಕಂಪದ ಅಲೆಯ ಜೊತೆಗೆ ಜಿಲ್ಲೆಯ ಮಹಿಳಾ ಮತದಾರರು ಕೈ ಹಿಡಿದ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪ್ರಚಂಡ ಜಯ ಸಾಧಿಸಲು ಸಾಧ್ಯವಾಯಿತು.
ಮಂಡ್ಯ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಹಿಳಾ ಮತದಾರರು ಸ್ವಯಂಪ್ರೇರಣೆಯಿಂದ ಬಂದ ಮತ ಚಲಾಯಿಸಿದ್ದರು. ಬಹಿರಂಗ ಪ್ರಚಾರದ ಅಂತಿಮ ದಿನ ಸುಮಲತಾ ಜಿಲ್ಲೆಯ ಜನರೆದುರು ಸೆರಗೊಡ್ಡಿ ಸ್ವಾಭಿಮಾನದ ಭಿಕ್ಷೆ ಬೇಡಿದರು. ಜನರು ಅದನ್ನು ದಯಪಾಲಿಸಿ ವಿಜಯಮಾಲೆ ತೊಡಿಸಿದರು.
ಲೋಕಸಭಾ ಚುನಾವಣೆಯಲ್ಲಿ 680859 ಮಹಿಳೆಯರು ಮತ ಚಲಾಯಿಸಿದ್ದರು. ಇದರಲ್ಲಿ ಬಹುತೇಕ ಮತಗಳು ಸುಮಲತಾ ಪರವಾಗಿ ಹರಿದುಬಂದಿವೆ. ಚುನಾವಣೋತ್ತರದಲ್ಲಿ ಬಹಳಷ್ಟು ಮಹಿಳಾ ಮತದಾರರು ಬಹಿರಂಗವಾಗಿಯೇ ಸುಮಲತಾ ಪರ ಮತ ಚಲಾಯಿಸಿರುವ ಬಗ್ಗೆ ಮಾತನಾಡುತ್ತಿದ್ದುದು ಸುಮಲತಾ ಗೆಲುವಿನ ಮುನ್ಸೂಚನೆ ನೀಡಿತ್ತು. ಫಲಿತಾಂಶದಲ್ಲಿ ಅದು ನಿಜವೂ ಆಯಿತು.
ಮಹಿಳಾ ಮತಗಳು ಒಗ್ಗೂಡಿದ್ದು ಹೇಗೆ: ಚುನಾವಣೆ ಪೂರ್ವ ಹಾಗೂ ಪ್ರಚಾರ ಸಮಯದಲ್ಲಿ ಜೆಡಿಎಸ್ ನಾಯಕರು ಸುಮಲತಾ ವಿರುದ್ಧವಾಗಿ ಆಡಿದ ಅಸಹನೀಯ ಮಾತುಗಳೂ ಮಹಿಳೆಯರನ್ನು ಕೆರಳುವಂತೆ ಮಾಡಿತ್ತು. ಅಂಬರೀಶ್ ಕಳೆದುಕೊಂಡು ದುಃಖದಲ್ಲಿದ್ದ ಸುಮಲತಾ ಪರ ಮಹಿಳೆಯರಿಗಿದ್ದ ಅನುಕಂಪ ಜೆಡಿಎಸ್ ನಾಯಕರ ಟೀಕಾ ಪ್ರಹಾರದಿಂದ ಇನ್ನಷ್ಟು ಹೆಚ್ಚಾಗುವಂತೆ ಮಾಡಿತು. ಈ ಬೆಳವಣಿಗೆ ಮಹಿಳಾ ಮತಗಳೆಲ್ಲವೂ ಕೇಂದ್ರೀಕೃತವಾಗುವುದಕ್ಕೆ ಎಡೆಮಾಡಿಕೊಟ್ಟವು.
ಕೊಟ್ಟ ಮಾತಿಗೆ ತಪ್ಪಿದ ಸಿಎಂ: ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಸ್ತ್ರೀಶಕ್ತಿ ಸಾಲ ಮನ್ನಾ ಮಾಡಲಿಲ್ಲ. ಇದೂ ಕೂಡ ಮಹಿಳೆಯರಲ್ಲಿ ಅಸಮಾಧಾನ ಮೂಡಿಸಿತ್ತು. ಮುಖ್ಯಮಂತ್ರಿ ಗದ್ದುಗೆ ಏರಿದ ಬಳಿಕ ಕೊಟ್ಟ ಮಾತಿಗೆ ತಪ್ಪಿದ ಸಿಎಂ ಕುಮಾರಸ್ವಾಮಿ ವಿರುದ್ಧದ ಕೋಪವನ್ನು ಸುಮಲತಾ ಪರ ಮತ ಚಲಾಯಿಸಿ ತೀರಿಸಿಕೊಂಡರು.
ಸುಮಲತಾ ಮಾತು: ನಟನಾಗಿ ಅಂಬರೀಶ್ ಅವರನ್ನು ಇಷ್ಟಪಡುತ್ತಿದ್ದ ಮಹಿಳೆಯರು ಅಂಬರೀಶ್ ಪತ್ನಿಯನ್ನು ಸುಲಭವಾಗಿಯೇ ರಾಜಕಾರಣಿಯಾಗಿ ಒಪ್ಪಿಕೊಂಡರು. ನಾನು ಈ ಮಣ್ಣಿನ ಮಗಳು, ಜಿಲ್ಲೆಯ ಸೊಸೆ ಎಂದು ಹೇಳಿದ ಮಾತುಗಳು ಮಹಿಳೆಯರ ಮನಸ್ಸಿನ ಮೇಲೆ ಪರಿಣಾಮ ಬೀರಿದವು. ಸುಮಲತಾ ಹೋದಲೆಲ್ಲಾ ಮಹಿಳೆಯರು ಗುಂಪು ಗುಂಪಾಗಿ ಸೇರುತ್ತಿದ್ದರು. ಸುಮಲತಾ ಡ್ರೆಸ್ ಕೋಡ್, ನಡವಳಿಕೆ, ಮಾತುಗಾರಿಕೆ ಇವೆಲ್ಲ ಕಂಡು ಮಾರುಹೋದರು. ಸುಮಲತಾ ನಟಿ ಎಂಬುದಕ್ಕಿಂತ ಹೆಚ್ಚಾಗಿ ಅಂಬರೀಶ್ ಪತ್ನಿ, ತವರಿಗೆ ಸೇರಿದವಳು ಎಂಬುದನ್ನು ಹೃದಯದಲ್ಲಿರಿಸಿಕೊಂಡರು.
ಜಿಲ್ಲೆಯ ಮಹಿಳೆಯರು ಈ ಬಾರಿ ಹಣಕ್ಕೆ ಮರುಳಾಗಲಿಲ್ಲ. ಹಣದ ಹರಿದಾಟ ತೀವ್ರತೆಯಿಂದ ಕೂಡಿದ್ದರೂ ಸುಮಲತಾ ಅವರನ್ನು ತಿರಸ್ಕರಿಸುವುದಕ್ಕೆ ಮಹಿಳೆಯರ ಮನಸ್ಸು ಒಪ್ಪಲಿಲ್ಲ. ಜೆಡಿಎಸ್‌ನವರು ನೀಡಿದ ಹಣ ಪಡೆದು ಕೊನೆಗೆ ಸುಮಲತಾ ಪರ ನಿಂತರು. ಸ್ವಾಭಿಮಾನದ ಉಳಿವಿಗೆ ಬದ್ಧರಾದರು.
ಅಳಿಯನಾಗುವೆನೆಂದರೂ ಒಪ್ಪಲಿಲ್ಲ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಕೆ.ನಿಖೀಲ್ ಕೂಡ ನಾನೂ ಈ ಜಿಲ್ಲೆಯ ಮಗ, ಒಳ್ಳೆಯ ಹುಡುಗಿ ಸಿಕ್ಕರೆ ಮದುವೆಯಾಗಿ ಅಳಿಯನಾಗುತ್ತೇನೆ ಎಂದರೂ ಯಾರೊಬ್ಬರೂ ಅದನ್ನು ಒಪ್ಪಿಕೊಳ್ಳಲಿಲ್ಲ. ಜಮೀನು ಖರೀದಿಸಿ, ತೋಟದ ಮನೆ ಮಾಡಿಕೊಂಡು ಇಲ್ಲೇ ಉಳಿಯುತ್ತೇನೆ ಎಂದರೂ ಮಂಡ್ಯ ಜನತೆ ನಂಬಲಿಲ್ಲ. ಮಂಡ್ಯದ ಸೊಸೆ ಸುಮಲತಾ ಅಂಬರೀಶ್ ಪರ ಮತ ಚಲಾಯಿಸಿ ಗೆಲುವಿಗೆ ಕಾರಣರಾದರು.
ಸುಮಲತಾ ಸೆರಗೊಡ್ಡಿ ಬೇಡಿದ ಸ್ವಾಭಿಮಾನದ ಭಿಕ್ಷೆ ಮಹಿಳೆಯರ ಮನಸ್ಸು ಪರಿವರ್ತನೆಯಾಗುವಂತೆ ಮಾಡಿತು. ಒಟ್ಟು ಚಲಾವಣೆಯಾದ ಮಹಿಳಾ ಮತಗಳಲ್ಲಿ ಶೇ.70ರಷ್ಟು ಮತಗಳು ಸುಮಲತಾ ಪರ ಇದ್ದುದರಿಂದಲೇ ಗೆಲುವು ಸುಲಭವಾಯಿತು.
● ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.