ಬಸ್ ಡಿಪೋದಲ್ಲಿ ಕಾರ್ಮಿಕರ ದಿನ
ಗಣನೀಯ ಸೇವೆ ಸಲ್ಲಿಸಿದ ಚಾಲಕ/ನಿರ್ವಾಹಕರಿಗೆ ಸೇವಾ ಪ್ರಶಸ್ತಿ ಪ್ರದಾನ
Team Udayavani, May 2, 2019, 11:28 AM IST
ಮಂಡ್ಯದ ಸಾರಿಗೆ ಬಸ್ ಡಿಪೋ ಆವರಣದಲ್ಲಿ ನಡೆದ ವಿಶ್ವ ಕಾರ್ಮಿಕರ ದಿನದಲ್ಲಿ 2017-18ನೇ ಸಾಲಿನಲ್ಲಿ ಗಣನೀಯ ಸೇವೆ ಸಲ್ಲಿಸಿದ ಚಾಲಕ ಕಂ ನಿರ್ವಾಹಕರಿಗೆ ನಗದು ಪುರಸ್ಕಾರ ಹಾಗೂ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಡ್ಯ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಡ್ಯ ಘಟಕದ ವತಿಯಿಂದ ನಗರದ ಬಸ್ ಡಿಪೋ ಆವರಣದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಸರ್ವಧರ್ಮ ಜಯಂತ್ಯುತ್ಸವ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಪ್ರಭಾರ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್ ತ್ಯಾಪಿ, ಕಾರ್ಮಿಕರ ಶ್ರಮದ ಫಲವಾಗಿ ಸಾರಿಗೆ ಸಂಸ್ಥೆ ರಾಜ್ಯದಲ್ಲಿ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಕಾರ್ಮಿಕರಿಗೆ ಆರ್ಥಿಕವಾಗಿ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂಸ್ಥೆ ಆರೋಗ್ಯ ಕಾರ್ಯಕ್ರಮ ರೂಪಿಸಿದ್ದು, 10 ಸಾವಿರ ನೌಕರರು ಹೃದಯ ಸಂಬಂಧಿ ಚಿಕಿತ್ಸೆ ಪಡೆದಿದ್ದಾರೆಂದರು. ಅಲ್ಲದೇ, ಯಾವುದೇ ಸಂಸ್ಥೆ ಸದೃಢವಾಗಿ ಬೆಳೆಯಲು ಕಾರ್ಮಿಕರ ಪಾತ್ರ ಪ್ರಮುಖವಾದುದು ಎಂದರು.
ಸಾರಿಗೆ ಇಲಾಖೆಯಲ್ಲಿ ಶ್ರಮಜೀವಿಗಳು: ಕಾರ್ಮಿಕರು ಕಟ್ಟಡದ ಇಟ್ಟಿಗೆ ಇದ್ದಂತೆ. ಸದೃಢವಾಗಿದ್ದು, ಉತ್ತಮವಾಗಿ ಕೆಲಸ ಮಾಡುತ್ತಾರೆ. ಕಾರ್ಮಿಕರ ಶ್ರಮ ದ ಫಲವಾಗಿ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತಿದೆ. ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಸೈನಿಕರಂತೆ ಕೆಲಸ ಮಾಡುತ್ತಾರೆ. ಈ ರೀತಿ ಶ್ರಮ ಪಡುವ ಕಾರ್ಮಿಕರು ಬೇರೆ ಇಲಾ ಖೆ ಯಲ್ಲಿ ಇಲ್ಲ. ಹೀಗಾಗಿ ಸಾರಿಗೆ ಸಂಸ್ಥೆ ಜನಮೆಚ್ಚುಗೆ ಗಳಿಸಿದೆ ಎಂದರು.
ಇದೇ ವೇಳೆ 2017-18ನೇ ಸಾಲಿನಲ್ಲಿ ಗಣನೀಯ ಸೇವೆ ಸಲ್ಲಿಸಿದ ಚಾಲಕ ಕಂ ನಿರ್ವಾಹಕರಿಗೆ ನಗದು ಪುರಸ್ಕಾರ ಹಾಗೂ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತಿಗೊಂಡ ನೌಕರ ಎನ್.ಲಿಂಗಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಪುಟ್ಟೇಗೌಡ, ಘಟಕದ ವ್ಯವಸ್ಥಾಪಕ ಮಹದೇವಪ್ರಸಾದ್, ಕಾರ್ಮಿಕರಾದ ಮಧು, ಸಲೀಂ, ನಾಗರಾಜು, ಸೋಮು, ನಂಜುಂಡ, ಚಂದ್ರಶೇಖರ್, ರಾಮು, ರವಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.