ಸ್ವಗ್ರಾಮ ಬೂಕನಕೆರೆಗೆ ಯಡಿಯೂರಪ್ಪ ಭೇಟಿ
ವಿಶ್ವಾಸಮತ ಗೆಲ್ಲಲು ಗ್ರಾಮದೇವತೆಯ ಆಶೀರ್ವಾದ ಕೋರಿದ ಮುಖ್ಯಮಂತ್ರಿ
Team Udayavani, Jul 28, 2019, 5:08 AM IST
ಮಂಡ್ಯ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಮಂಡ್ಯ ಜಿಲ್ಲೆಯ ಮೇಲುಕೋಟೆ, ತಮ್ಮ ಹುಟ್ಟೂರು ಬೂಕನಕೆರೆಗೆ ಭೇಟಿ ನೀಡಿ, ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆ 11.20ಕ್ಕೆ ಕಾಪನಹಳ್ಳಿ ಗ್ರಾಮಕ್ಕೆ ಆಗಮಿಸಿದ ಮುಖ್ಯಮಂತ್ರಿ, ತಮ್ಮ ಮನೆ ದೇವರು ಸ್ವತಂತ್ರ ಸಿದ್ದಲಿಂಗೇಶ್ವರ ಸ್ವಾಮಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಗವಿಮಠ ಶ್ರೀಗಳಾದ ಶ್ರೀ ಸ್ವತಂತ್ರ ಚನ್ನವೀರ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು. ಅಲ್ಲಿಂದ ಬೂಕನಕೆರೆ ಗ್ರಾಮಕ್ಕೆ ಆಗಮಿಸಿ, ತಮ್ಮ ಹುಟ್ಟೂರು ಬೂಕನಕೆರೆ ಗ್ರಾಮ ದೇವತೆ ಗೋಗಾಲಮ್ಮಗೆ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕ ಕೇಶವಮೂರ್ತಿ ಅವರು ಯಡಿಯೂರಪ್ಪ ಹೆಸರಿನಲ್ಲಿ ದೇವರಿಗೆ ಅರ್ಚನೆ ಸಲ್ಲಿಸಿದರು. ಸೋಮವಾರ ನಡೆಯುವ ವಿಶ್ವಾಸಮತದಲ್ಲಿ ಗೆಲುವಾಗಲಿ ಹಾಗೂ ಮುಖ್ಯಮಂತ್ರಿಗಳಾಗಿ ಮುಂದಿನ ನಾಲ್ಕು ವರ್ಷಗಳ ಕಾಲ ನಿರ್ವಿಘ್ನವಾಗಿ ಆಡಳಿತ ನಡೆಸಲು ಗೋಗಾಲಮ್ಮ ದೇವಿ ಶಕ್ತಿ ನೀಡಲಿ ಎಂದು ಬಿಎಸ್‌ವೈ ಪ್ರಾರ್ಥಿಸಿದರು.
ಇದೇ ವೇಳೆ, ಯಡಿಯೂರಪ್ಪ ಸಿಎ ಆದರೆ ಈಡುಗಾಯಿ ಒಡೆ ಯುವುದಾಗಿ ಹರಕೆ ಹೊತ್ತಿದ್ದ ಯಡಿಯೂರಪ್ಪ ಅಭಿಮಾನಿಗಳು, 101ತೆಂಗಿನ ಕಾಯಿಗಳನ್ನು ಗೋಗಾಲಮ್ಮ ದೇವಾಲಯದ ಮುಂದೆ ಒಡೆಯುವ ಮೂಲಕ ಹರಕೆ ತೀರಿಸಿದರು.
ಬಳಿಕ, ತಾವು ಹುಟ್ಟಿ ಬೆಳೆದ ತಮ್ಮ ಮನೆಗೆ ಭೇಟಿ ನೀಡಿದ ಯಡಿಯೂರಪ್ಪ, ತಮ್ಮ ಸಹೋದರ ದಿ.ಮಹಾದೇವಪ್ಪ ಮತ್ತು ತಮ್ಮ ತಂದೆ ದಿ.ಸಿದ್ದಲಿಂಗಪ್ಪ, ತಾಯಿ ದಿ.ಪುಟ್ಟತಾಯಮ್ಮ ಅವರ ಭಾವಚಿತ್ರಗಳಿಗೆ ನಮಸ್ಕರಿಸಿ ಗೌರವ ಸಲ್ಲಿಸಿದರು. ತಮ್ಮ ಅತ್ತಿಗೆ ಶಾರದಮ್ಮ ಅವರ ಆರೋಗ್ಯ ವಿಚಾರಿಸಿ, ಅವರ ಆಶೀರ್ವಾದ ಪಡೆದರು. ಅತ್ತಿಗೆ ಮತ್ತು ಬೂಕನಕೆರೆ ಗ್ರಾಮದ ತಮ್ಮ ಸಂಬಂಧಿಗಳೊಂದಿಗೆ ಉಪಾಹಾರ ಸೇವಿಸಿ, ಎಲ್ಲರ ಆರೋಗ್ಯ ವಿಚಾರಿಸಿದರು.
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿ, ಸೋಮವಾರ ವಿಶ್ವಾಸಮತವನ್ನು ಪಡೆದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಗಮನ ಹರಿಸುತ್ತೇನೆ. ಈಗಾಗಲೇ ರೈತರಿಗೆ ಕೃಷಿ ಸಮ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ 6 ಸಾವಿರದ ಜೊತೆಗೆ ರಾಜ್ಯ ಸರ್ಕಾರದಿಂದಲೂ ವಾರ್ಷಿಕ 4 ಸಾವಿರ ರೂ.ಗಳನ್ನು ನೀಡಲು ನಿರ್ಧಾರ ಮಾಡಿದ್ದೇನೆ. ಜೊತೆಗೆ, ನೇಕಾರ ಬಂಧುಗಳ 100 ಕೋಟಿ ರೂ.ಗಳ ಸಾಲ ಮನ್ನಾ ಮಾಡಲು ನಿರ್ಧಾರ ಕೈಗೊಂಡಿದ್ದೇನೆ. ಸೋಮವಾರದ ನಂತರ ರಾಜ್ಯದ ರೈತರು, ಬಡವರು, ಕೂಲಿ ಕಾರ್ಮಿಕರು, ದೀನ-ದಲಿತರ ಏಳಿಗೆಗೆ ಹೊಸ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.
ಮೇಲುಕೋಟೆಗೆ ಭೇಟಿ: ಶನಿವಾರ ಮಧ್ಯಾಹ್ನ ಮೇಲುಕೋಟೆಗೆ ಆಗಮಿಸಿ, ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದರು. ಮುಖ್ಯಮಂತ್ರಿಯವರನ್ನು ಸಾಂಪ್ರದಾಯಿಕ ಪೂರ್ಣಕುಂಭ ಹಾಗೂ ಪಾದುಕಾ ಮರ್ಯಾದೆಯೊಂದಿಗೆ ಸ್ವಾಗತಿಸಲಾಯಿತು. ಚೆಲುವನಾರಾಯಣಸ್ವಾಮಿ, ಮಹಾಲಕ್ಷ್ಮೀ ಯದುಗಿರಿ ನಾಯಕಿ, ಭಗವದ್ರಾಮಾನುಜರ ದರ್ಶನ ಪಡೆದ ನಂತರ, ಪಾತಾಳಾಂಕಣದಲ್ಲಿ ರಾಜಾಶೀರ್ವಾದ ಮಾಡುವುದರೊಂದಿಗೆ ಮುಖ್ಯಮಂತ್ರಿಗಳನ್ನು ಬೀಳ್ಕೊಡಲಾಯಿತು. ಪೂರ್ಣಕುಂಭ ಸ್ವಾಗತಕ್ಕೂ ಮುನ್ನ ಜಿಲ್ಲಾಧಿಕಾರಿ ಮಂಜುಶ್ರೀ ಸೇರಿ ಇತರ ಅಧಿಕಾರಿಗಳು ಮುಖ್ಯಮಂತ್ರಿಯನ್ನು ಬರಮಾಡಿಕೊಂಡರು.
ಈ ವೇಳೆ, ಸುದ್ದಿಗಾರರ ಜತೆ ಮಾತನಾಡಿ, ತಿರುಪತಿಗೆ ಸಮಾನ ಮಹತ್ವವಿರುವ ರಾಮಾನುಜರ ತಪೋಭೂಮಿಯ ಅಭಿವೃದ್ಧಿಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಈ ಹಿಂದೆ ಬಿಡುಗಡೆ ಮಾಡಿದ್ದ ಅನುದಾನ ಬಳಕೆಯ ಬಗ್ಗೆಯೂ ಪರಿಶೀಲಿಸುತ್ತೇನೆ. ವೈಷ್ಣವ ಕ್ಷೇತ್ರ ಎನಿಸಿರುವ ಮೇಲುಕೋಟೆ ಕ್ಷೇತ್ರದಲ್ಲಿ ಅನ್ನದಾನ ಭವನ ನಿರ್ಮಾಣಕ್ಕೆ ತಕ್ಷಣವೇ 2 ಕೋಟಿ ರೂ.ಬಿಡುಗಡೆ ಮಾಡುತ್ತೇನೆ. ನಾನೇ ಖುದ್ದು ಆಗಮಿಸಿ ಭೂಮಿ ಪೂಜೆ ನೆರವೇರಿಸುತ್ತೇನೆ ಎಂದು ಭರವಸೆ ನೀಡಿದರು.
ಜೇಬುಗಳ್ಳರ ಕೈಚಳಕ: ಬೂಕನಕೆರೆಯಲ್ಲಿ ಯಡಿಯೂರಪ್ಪ ಅವರನ್ನು ನೋಡಲು ಬಂದಿದ್ದ ಸಾವಿರಾರು ಸಂಖ್ಯೆಯ ಗುಂಪಿನಲ್ಲಿ ನಿಂತಿದ್ದ ಮೋದೂರು ಗ್ರಾಮದ ಕುಮಾರ್ ಅವರಲ್ಲಿದ್ದ 30 ಸಾವಿರ ಹಾಗೂ ಚೋಕನಹಳ್ಳಿ ಗ್ರಾಮದ ಸಿದ್ದಪ್ಪ ಅವರ ಜೇಬಿನಲ್ಲಿದ್ದ 20 ಸಾವಿರ ರೂ.ಗಳನ್ನು ಜೇಬುಗಳ್ಳರು ಪಿಕ್ ಪಾಕೇಟ್ ಮಾಡಿಕೊಂಡು ಪರಾರಿಯಾಗಿದ್ದಾರೆ.
ರೈತರಿಂದ ಮನವಿ: ಇದೇ ವೇಳೆ ಸಿಎಂಗೆ ಮನವಿ ಸಲ್ಲಿಸಿದ ರೈತರು, ಮಳೆ ಇಲ್ಲದೆ ಕೆರೆ-ಕಟ್ಟೆಗಳು ಖಾಲಿಯಾಗಿದ್ದು, ಹೇಮಾ ವತಿ ನದಿಯಿಂದ ನೀರು ಬಿಡಬೇಕು. ಜೊತೆಗೆ, ಸಕ್ಕರೆ ಕಾರ್ಖಾ ನೆಗಳನ್ನು ಮತ್ತೆ ಆರಂಭಿಸಿ, ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು. ರೈತರಿಂದ ಮನವಿ ಸ್ವೀಕರಿಸಿದ ಬಿಎಸ್‌ವೈ, ಸ್ಥಳದಲ್ಲಿ ಹಾಜರಿದ್ದ ಅವರ ಪುತ್ರ, ಸಂಸದ ರಾಘವೇಂದ್ರ ಅವರಿಗೆ ತಕ್ಷಣ ನೀರು ಬಿಡಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಅಭಿಮಾನಿಗೆ ವಾರದೊಳಗೆ
ಹೊಸ ಚಪ್ಪಲಿ ಕೊಡಿಸುವೆ’
ಯಡಿಯೂರಪ್ಪ ಸಿಎಂ ಆಗೋವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥಗೈದಿದ್ದ ಅಭಿಮಾನಿಯ ಹರಕೆ ಈಡೇರಿದ ಹಿನ್ನೆಲೆಯಲ್ಲಿ ವಾರದೊಳಗೆ ಹೊಸ ಚಪ್ಪಲಿ ಕೊಡಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಹದಿನಾಲ್ಕು ತಿಂಗಳ ಹಿಂದೆ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದಾಗ ಬಿಎಸ್‌ವೈ ಮತ್ತೆ ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಮಂಡ್ಯ ತಾಲೂಕು ಉಪ್ಪರಕನಹಳ್ಳಿಯ ಶಿವಕುಮಾರ ಆರಾಧ್ಯ ಶಪಥ ಮಾಡಿದ್ದರು. ಅದರಂತೆ ಇಲ್ಲಿಯವರೆಗೂ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲೇ ಓಡಾಡುತ್ತಿದ್ದರು. ಶನಿವಾರ ಬೂಕನಕೆರೆಯಲ್ಲಿ ಯಡಿಯೂರಪ್ಪನವರನ್ನು ಅಭಿನಂದಿಸಲು ಶಿವಕುಮಾರ ಮುಂದಾದಾಗ ಶಪಥದ ವಿಷಯ ತಿಳಿದು ಸಿಎಂ ಸಂತಸಪಟ್ಟರು. “ನಿನ್ನ ಶಪಥ ಈಡೇರಿದೆ. ಈ ವಾರದೊಳಗೆ ನಾನೇ ನಿನಗೆ ಹೊಸ ಚಪ್ಪಲಿ ಕೊಡಿಸುತ್ತೇನೆ’ ಎಂದರು.
ಮಹಿಳೆಯ ಸಮಸ್ಯೆ
ಆಲಿಸಿದ ಬಿಎಸ್‌ವೈ
ದಿವ್ಯಾಂಗ ಪುತ್ರನೊಂದಿಗೆ ಆಗಮಿಸಿದ್ದ ಮಹಿಳೆ, ಜಯಲಕ್ಷ್ಮೀ ಎಂಬಾಕೆಗೆ ಮೇಲುಕೋಟೆ ಯಲ್ಲಿ ಮುಖ್ಯಮಂತ್ರಿ ಭೇಟಿಗೆ ಪೊಲೀಸರು ಅವಕಾಶ ನಿರಾಕರಿಸಿದರು.ಇದನ್ನು ಗಮನಿಸಿದ ಸಂಸದ ರಾಘವೇಂದ್ರ, ಮಹಿಳೆ ಬಳಿಗೆ ಆಗಮಿಸಿ, ಸಮಸ್ಯೆ ಆಲಿಸಿದರು. ಅಲ್ಲದೆ, ಯಡಿಯೂರಪ್ಪ ಅವರನ್ನೂ ಆಕೆಯ ಬಳಿಗೆ ಕರೆ ತಂದರು. ಈ ವೇಳೆ ಜಯಲಕ್ಷ್ಮೀ ಅವರು, “ನನ್ನ ಮಗ ಪ್ರತಾಪ್, ಪೋಲಿಯೋ ಪೀಡಿತನಾಗಿ ಹಾಸಿಗೆ ಹಿಡಿದಿದ್ದಾನೆ.
ಸರ್ಕಾರ 2013ರಲ್ಲೇ ನನ್ನ ಮಗನಿಗೆ ಒಂದು ಸಾವಿರ ರೂ. ಅಂಗವಿಕಲ ವೇತನ ಮಂಜೂರು ಮಾಡಿದ್ದರೂ 2017ರವರೆಗೆ 500 ರೂ.ಮಾತ್ರ ನೀಡಿದ್ದಾರೆ.
2017ರಿಂದ 1000 ರೂ. ನೀಡುತ್ತಿದ್ದಾರೆ. ಈ ನಡುವೆ ಕಡಿತವಾಗಿದ್ದ 500 ರೂ.ಗಳನ್ನು ಮಂಜೂರು ಮಾಡಿಸಿ ಕೊಡಿ ಎಂದು ನಿವೇದಿಸಿಕೊಂಡರು. ಈ ಬಗ್ಗೆ ಕ್ರಮಕೈಗೊಳ್ಳು ವಂತೆ ಸಿಎಂ, ಜಿಲ್ಲಾಧಿಕಾರಿಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.