ಕೋಟಿಗಟ್ಟಲೆ ಹಣವಿದ್ದರೂ ದುರಸ್ತಿ ಭಾಗ್ಯವಿಲ್ಲ!
ಶೋಚನೀಯ ಸ್ಥಿತಿಯಲ್ಲಿ ಸರ್ಕಾರಿ ಶಾಲಾ ಕೊಠಡಿಗಳು • 3 ವರ್ಷದಿಂದ ಕೆಲಸ ಆರಂಭಿಸದ ಕೆಆರ್‌ಐಡಿಎಲ್
Team Udayavani, Jun 13, 2019, 5:02 PM IST
ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಸರ್ಕಾರಿ ಶಾಲೆ.
ಮಂಡ್ಯ: ಶಿಥಿಲಾವಸ್ಥೆ ಹಾಗೂ ದುರಸ್ತಿ ಹಂತದಲ್ಲಿರುವ ಸರ್ಕಾರಿ ಶಾಲಾ ಕೊಠಡಿಗಳನ್ನು ಸುಸ್ಥಿತಿಗೆ ತರಲು ರಾಜ್ಯಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂ. ಅನು ದಾನ ಬಿಡುಗಡೆ ಮಾಡುತ್ತಿದೆ. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕೊಠಡಿಗಳಿಗೆ ಕಾಯಕಲ್ಪ ನೀಡುವ ಕೆಲಸ ಮಾತ್ರ ಸಕಾಲದಲ್ಲಿ ನಡೆ ಯುತ್ತಿಲ್ಲ. ಕಾಮಗಾರಿ ನಿರ್ವಹಣೆ ಜವಾಬ್ದಾರಿ ಹೊತ್ತ ಭೂ ಸೇನಾ ನಿಗಮದವರು ಮೂರು ವರ್ಷದಿಂದ ಕೆಲಸವನ್ನೇ ಆರಂಭಿಸಿಲ್ಲ.
ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ದುರಸ್ತಿ ಕಾರ್ಯಕ್ಕೆ ಹಣಕಾಸಿನ ಕೊರತೆ ಇಲ್ಲ. ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡುತ್ತಲೇ ಇದೆ. ಆದರೆ, ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಪಂ ಸಿಇಒ ಎಚ್ಚರಿಕೆ ನೀಡಿದರೂ ಭೂ ಸೇನಾ ನಿಗಮ ಮಾತ್ರ ಎಚ್ಚೆತ್ತುಕೊಂಡಿಲ್ಲ. ಕುಂಬನಿದ್ರೆಯಲ್ಲಿರುವ ನಿಗಮದ ಅಧಿಕಾರಿಗಳು ಶಾಲಾ ಕೊಠಡಿ ದುರಸ್ತಿಪಡಿಸುವುದಕ್ಕೆ ಕನಿಷ್ಟ ಗುದ್ದಲಿಪೂಜೆಯನ್ನೂ ನೆರವೇರಿಸಿಲ್ಲ.
ಬಿಡುಗಡೆಯಾಗಿರುವ ಅನುದಾನವೆಷ್ಟು?: 2016-17ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳ ಕಟ್ಟಡ ದುರಸ್ತಿಗೆ 58 ಲಕ್ಷ ರೂ. ನೀಡಿದ್ದು, ಮಳವಳ್ಳಿ ತಾಲೂಕಿನ 30 ರಿಂದ 40 ಶಾಲೆಗಳ ದುರಸ್ತಿಗೆ 76.36 ಲಕ್ಷ ರೂ. ಹಣ ದೊರಕಿದೆ. 17-18ನೇ ಸಾಲಿನಲ್ಲಿ ಶಾಲಾ ಕಟ್ಟಡಗಳ ದುರಸ್ತಿಗೆ 95.45 ಲಕ್ಷ ರೂ. ಬಿಡುಗಡೆಯಾಗಿದೆ. 10 ಪ್ರಾಥಮಿಕ ಶಾಲೆಗಳ ನಿರ್ಮಾಣಕ್ಕೆ 87 ಲಕ್ಷ ರೂ. ಹಾಗೂ 5 ಪ್ರೌಢಶಾಲೆಗಳ ಕೊಠಡಿ ನಿರ್ಮಾಣಕ್ಕೆ 66.25 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ.
2017-18ನೇ ಸಾಲಿನಲ್ಲಿ 10 ಶಾಲೆಗಳ 12 ಕೊಠಡಿಗಳ ಮರು ನಿರ್ಮಾಣಕ್ಕೆ 1.04 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದರ ಜೊತೆಗೆ 47 ಪ್ರೌಢಶಾಲೆಗಳ 94 ಕೊಠಡಿ ನಿರ್ಮಾಣಕ್ಕೆ 1.64 ಕೋಟಿ ರೂ. ಹಣವನ್ನು ಸರ್ಕಾರ ನೀಡಿದೆ. ಈ ಎರಡೂ ಕಾಮಗಾರಿ ಹೊಣೆಯನ್ನು ಭೂ ಸೇನಾ ನಿಗಮ ವಹಿಸಿಕೊಂಡಿದ್ದರೂ ಕೆಲಸ ಮಾತ್ರ ಆರಂಭವಾಗಿಲ್ಲ.
2018-19ನೇ ಸಾಲಿನಲ್ಲಿ 22 ಪ್ರೌಢಶಾಲೆಗಳ 27 ಕೊಠಡಿಗಳ ಮರು ನಿರ್ಮಾಣಕ್ಕೆ 2.86 ಕೋಟಿ ರೂ. ಅನುದಾನ ಸಿಕ್ಕಿದೆ. ಇದು ಮೂರು ವರ್ಷದ ಕಾಮಗಾರಿಯಾಗಿದ್ದು ಹಂತ ಹಂತವಾಗಿ ನಡೆಯುತ್ತಿದೆ. ಇದರ ಜೊತೆಗೆ 13 ಪ್ರೌಢಶಾಲೆಗಳ 16 ಕೊಠಡಿಗೆ 1.26 ಕೋಟಿ ರೂ., 5 ಪ್ರೌಢಶಾಲೆಗಳ 8 ಕೊಠಡಿ ನಿರ್ಮಾಣಕ್ಕೆ 1.26 ಕೋಟಿ ರೂ., 4 ಪ್ರೌಢಶಾಲೆಗಳ 4 ಕೊಠಡಿಗೆ 44.20 ಲಕ್ಷ ರೂ. ಹಣ ಸಿಕ್ಕಿದ್ದರೂ ಕಾಮಗಾರಿ ಮಾತ್ರ ಕುಂಟುತ್ತಾ ತೆವಳುತ್ತಾ ಸಾಗಿದೆ.
ಕೊಠಡಿಗಳ ದುರಸ್ತಿ: ಜಿಲ್ಲೆಯಲ್ಲಿ 91 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಇದರಲ್ಲಿ 19 ಶಾಲೆಗಳನ್ನು ಮಾತ್ರ ದುರಸ್ತಿಪಡಿಸಲಾಗಿದೆ. ಉಳಿದ ಕೊಠಡಿಗಳು ಪಾಠ ಮಾಡಲು ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಅವುಗಳ ಕಾಮ ಗಾರಿಯನ್ನು ಕೈಗೆತ್ತಿಕೊಳ್ಳಲು ಯಾರೂ ಮುಂದಾಗುತ್ತಿಲ್ಲ.
ಪುನಃಶ್ಚೇತನ ಇನ್ನೂ ಕನಸು: ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿರುವ ಸಂಕಷ್ಟ ಪರಿಸ್ಥಿತಿಯನ್ನು ಸರ್ಕಾರಿ ಶಾಲೆಗಳು ಎದುರಿಸುತ್ತಿವೆ. ಶಾಲಾ ಕೊಠಡಿಗಳ ದುರಸ್ತಿಗೆ ಕೋಟ್ಯಂತರ ರೂ. ಹಣ ನೀಡಿದರೂ ಸಕಾಲದಲ್ಲಿ ಕೆಲಸ ಸಾಗುತ್ತಿಲ್ಲ. ಹೀಗಾದರೆ ಸರ್ಕಾರಿ ಶಾಲೆಗಳ ಪುನಶ್ಚೇತನ ಕನಸಾಗಿಯೇ ಉಳಿಯುತ್ತದೆ.
ಇದೀಗ ಕೆಲವೊಂದು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗಿವೆ. ಆ ಶಾಲೆಗಳ ಮಕ್ಕಳ ದಾಖಲಾತಿಯೂ ಹೆಚ್ಚಾಗಿದೆ. ದಾಖಲಾತಿಗೆ ಪೋಷಕರಿಂದ ಹೆಚ್ಚು ಬೇಡಿಕೆಯೂ ಕೇಳಿಬರುತ್ತಿದೆ. ಮುಂದಿನ ಸಾಲಿನಿಂದ ಆಂಗ್ಲ ಶಾಲೆಗಳು ವಿಸ್ತರಣೆಯಾಗುವುದರಿಂದ ಕೊಠಡಿಗಳಿಗೆ ಇನ್ನಷ್ಟು ಬೇಡಿಕೆ ಸೃಷ್ಟಿಯಾಗಲಿದೆ. ಆದಕಾರಣ ಹಾಲಿ ಇರುವ ಶಾಲಾ ಕೊಠಡಿಗಳ ಗುಣÊುಟ್ಟ ಕಾಪಾಡಿಕೊಳ್ಳುವುದು ಪ್ರಸ್ತುತ ದಲ್ಲಿ ತುಂಬಾ ಮುಖ್ಯವಾಗಿದೆ. ಆದರೆ, ಮೂರು ವರ್ಷಗಳಿಂದ ಶಾಲಾ ಕೊಠಡಿಗಳ ದುರಸ್ತಿ ಕಾಮ ಗಾರಿಯೇ ನಡೆಯದಿದ್ದರೆ ಮಕ್ಕಳ ಪರಿಸ್ಥಿತಿ ಏನಾಗಲಿದೆ ಎಂಬ ಚಿಂತೆ ಯಾರಿಗೂ ಇಲ್ಲದಂತೆ ಕಾಣುತ್ತಿದೆ.
ಬದ್ಧತೆ ಇಚ್ಛಾಶಕ್ತಿ ಕೊರತೆ: ಬೇಸಿಗೆ ಸಂದರ್ಭದಲ್ಲೇ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ದುರಸ್ತಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿದ್ದರೆ ಮಳೆಗಾಲದ ವೇಳೆಗೆ ಮಕ್ಕಳ ಪಾಠ ಪ್ರವಚನಕ್ಕೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಬಹಳಷ್ಟು ಸರ್ಕಾರಿ ಶಾಲೆಗಳ ಮೇಲ್ಛಾವಣಿಗಳು ಸೋರುತ್ತಿವೆ, ಕಿಟಕಿ-ಬಾಗಿಲುಗಳು ಮುರಿದಿವೆ. ಕೆಲವು ಶಾಲೆಗಳ ಹೆಂಚುಗಳು ಹಾರಿಹೋಗಿವೆ. ಮಳೆ ನೀರು ನೇರವಾಗಿ ಕೊಠಡಿಯೊಳಗೆ ಬೀಳುವ ಶೋಚನೀಯ ಸ್ಥಿತಿಯಲ್ಲಿದ್ದರೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆ ಶಾಲಾ ಕೊಠಡಿಗಳನ್ನು ದುರಸ್ತಿಪಡಿಸುವ ಇಚ್ಛಾಶಕ್ತಿ, ಬದ್ಧತೆ ಇಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಶೌಚಾಲಯ ನಿರ್ವಹಣೆಗೆ 5 ಸಾವಿರ ರೂ.: ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಶೌಚಾಲಯದ ವ್ಯವಸ್ಥೆ ಇದೆ. ಕುಡಿಯುವ ನೀರು ಹಾಗೂ ಶೌಚಾಲಯ ನಿರ್ವಹಣೆಗೆ ಸರ್ಕಾರ ಪ್ರತಿ ಶೌಚಾಲಯಕ್ಕೂ ವರ್ಷಕ್ಕೆ 5 ಸಾವಿರ ರೂ. ಹಣ ನೀಡುತ್ತಿದೆ. ಎಲ್ಲವೂ ಸುಸ್ಥಿತಿಯಲ್ಲಿರುವಂತೆ ಜಾಗೃತಿ ವಹಿಸಲು ಸೂಚಿಸಲಾಗಿದೆ. ಸ್ಥಳೀಯ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಾಲಾ ಆಡಳಿತ ಮಂಡಳಿ ನಿರ್ವಹಣೆಯಲ್ಲಿದೆ
ಶಿಥಿಲಾವಸ್ಥೆ ಹಾಗೂ ದುರಸ್ತಿ ಹಂತದಲ್ಲಿರುವ ಸರ್ಕಾರಿ ಶಾಲಾ ಕೊಠಡಿಗಳನ್ನು ಸುಸ್ಥಿತಿಗೆ ತರಲು ರಾಜ್ಯಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂ. ಅನು ದಾನ ಬಿಡುಗಡೆ ಮಾಡುತ್ತಿದೆ. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕೊಠಡಿಗಳಿಗೆ ಕಾಯಕಲ್ಪ ನೀಡುವ ಕೆಲಸ ಮಾತ್ರ ಸಕಾಲದಲ್ಲಿ ನಡೆ ಯುತ್ತಿಲ್ಲ. ಕಾಮಗಾರಿ ನಿರ್ವಹಣೆ ಜವಾಬ್ದಾರಿ ಹೊತ್ತ ಭೂ ಸೇನಾ ನಿಗಮದವರು ಮೂರು ವರ್ಷದಿಂದ ಕೆಲಸವನ್ನೇ ಆರಂಭಿಸಿಲ್ಲ.
ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ದುರಸ್ತಿ ಕಾರ್ಯಕ್ಕೆ ಹಣಕಾಸಿನ ಕೊರತೆ ಇಲ್ಲ. ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡುತ್ತಲೇ ಇದೆ. ಆದರೆ, ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಪಂ ಸಿಇಒ ಎಚ್ಚರಿಕೆ ನೀಡಿದರೂ ಭೂ ಸೇನಾ ನಿಗಮ ಮಾತ್ರ ಎಚ್ಚೆತ್ತುಕೊಂಡಿಲ್ಲ. ಕುಂಬನಿದ್ರೆಯಲ್ಲಿರುವ ನಿಗಮದ ಅಧಿಕಾರಿಗಳು ಶಾಲಾ ಕೊಠಡಿ ದುರಸ್ತಿಪಡಿಸುವುದಕ್ಕೆ ಕನಿಷ್ಟ ಗುದ್ದಲಿಪೂಜೆಯನ್ನೂ ನೆರವೇರಿಸಿಲ್ಲ.
ಬಿಡುಗಡೆಯಾಗಿರುವ ಅನುದಾನವೆಷ್ಟು?: 2016-17ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳ ಕಟ್ಟಡ ದುರಸ್ತಿಗೆ 58 ಲಕ್ಷ ರೂ. ನೀಡಿದ್ದು, ಮಳವಳ್ಳಿ ತಾಲೂಕಿನ 30 ರಿಂದ 40 ಶಾಲೆಗಳ ದುರಸ್ತಿಗೆ 76.36 ಲಕ್ಷ ರೂ. ಹಣ ದೊರಕಿದೆ. 17-18ನೇ ಸಾಲಿನಲ್ಲಿ ಶಾಲಾ ಕಟ್ಟಡಗಳ ದುರಸ್ತಿಗೆ 95.45 ಲಕ್ಷ ರೂ. ಬಿಡುಗಡೆಯಾಗಿದೆ. 10 ಪ್ರಾಥಮಿಕ ಶಾಲೆಗಳ ನಿರ್ಮಾಣಕ್ಕೆ 87 ಲಕ್ಷ ರೂ. ಹಾಗೂ 5 ಪ್ರೌಢಶಾಲೆಗಳ ಕೊಠಡಿ ನಿರ್ಮಾಣಕ್ಕೆ 66.25 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ.
2017-18ನೇ ಸಾಲಿನಲ್ಲಿ 10 ಶಾಲೆಗಳ 12 ಕೊಠಡಿಗಳ ಮರು ನಿರ್ಮಾಣಕ್ಕೆ 1.04 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದರ ಜೊತೆಗೆ 47 ಪ್ರೌಢಶಾಲೆಗಳ 94 ಕೊಠಡಿ ನಿರ್ಮಾಣಕ್ಕೆ 1.64 ಕೋಟಿ ರೂ. ಹಣವನ್ನು ಸರ್ಕಾರ ನೀಡಿದೆ. ಈ ಎರಡೂ ಕಾಮಗಾರಿ ಹೊಣೆಯನ್ನು ಭೂ ಸೇನಾ ನಿಗಮ ವಹಿಸಿಕೊಂಡಿದ್ದರೂ ಕೆಲಸ ಮಾತ್ರ ಆರಂಭವಾಗಿಲ್ಲ.
2018-19ನೇ ಸಾಲಿನಲ್ಲಿ 22 ಪ್ರೌಢಶಾಲೆಗಳ 27 ಕೊಠಡಿಗಳ ಮರು ನಿರ್ಮಾಣಕ್ಕೆ 2.86 ಕೋಟಿ ರೂ. ಅನುದಾನ ಸಿಕ್ಕಿದೆ. ಇದು ಮೂರು ವರ್ಷದ ಕಾಮಗಾರಿಯಾಗಿದ್ದು ಹಂತ ಹಂತವಾಗಿ ನಡೆಯುತ್ತಿದೆ. ಇದರ ಜೊತೆಗೆ 13 ಪ್ರೌಢಶಾಲೆಗಳ 16 ಕೊಠಡಿಗೆ 1.26 ಕೋಟಿ ರೂ., 5 ಪ್ರೌಢಶಾಲೆಗಳ 8 ಕೊಠಡಿ ನಿರ್ಮಾಣಕ್ಕೆ 1.26 ಕೋಟಿ ರೂ., 4 ಪ್ರೌಢಶಾಲೆಗಳ 4 ಕೊಠಡಿಗೆ 44.20 ಲಕ್ಷ ರೂ. ಹಣ ಸಿಕ್ಕಿದ್ದರೂ ಕಾಮಗಾರಿ ಮಾತ್ರ ಕುಂಟುತ್ತಾ ತೆವಳುತ್ತಾ ಸಾಗಿದೆ.
ಕೊಠಡಿಗಳ ದುರಸ್ತಿ: ಜಿಲ್ಲೆಯಲ್ಲಿ 91 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಇದರಲ್ಲಿ 19 ಶಾಲೆಗಳನ್ನು ಮಾತ್ರ ದುರಸ್ತಿಪಡಿಸಲಾಗಿದೆ. ಉಳಿದ ಕೊಠಡಿಗಳು ಪಾಠ ಮಾಡಲು ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಅವುಗಳ ಕಾಮ ಗಾರಿಯನ್ನು ಕೈಗೆತ್ತಿಕೊಳ್ಳಲು ಯಾರೂ ಮುಂದಾಗುತ್ತಿಲ್ಲ.
ಪುನಃಶ್ಚೇತನ ಇನ್ನೂ ಕನಸು: ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿರುವ ಸಂಕಷ್ಟ ಪರಿಸ್ಥಿತಿಯನ್ನು ಸರ್ಕಾರಿ ಶಾಲೆಗಳು ಎದುರಿಸುತ್ತಿವೆ. ಶಾಲಾ ಕೊಠಡಿಗಳ ದುರಸ್ತಿಗೆ ಕೋಟ್ಯಂತರ ರೂ. ಹಣ ನೀಡಿದರೂ ಸಕಾಲದಲ್ಲಿ ಕೆಲಸ ಸಾಗುತ್ತಿಲ್ಲ. ಹೀಗಾದರೆ ಸರ್ಕಾರಿ ಶಾಲೆಗಳ ಪುನಶ್ಚೇತನ ಕನಸಾಗಿಯೇ ಉಳಿಯುತ್ತದೆ.
ಇದೀಗ ಕೆಲವೊಂದು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗಿವೆ. ಆ ಶಾಲೆಗಳ ಮಕ್ಕಳ ದಾಖಲಾತಿಯೂ ಹೆಚ್ಚಾಗಿದೆ. ದಾಖಲಾತಿಗೆ ಪೋಷಕರಿಂದ ಹೆಚ್ಚು ಬೇಡಿಕೆಯೂ ಕೇಳಿಬರುತ್ತಿದೆ. ಮುಂದಿನ ಸಾಲಿನಿಂದ ಆಂಗ್ಲ ಶಾಲೆಗಳು ವಿಸ್ತರಣೆಯಾಗುವುದರಿಂದ ಕೊಠಡಿಗಳಿಗೆ ಇನ್ನಷ್ಟು ಬೇಡಿಕೆ ಸೃಷ್ಟಿಯಾಗಲಿದೆ. ಆದಕಾರಣ ಹಾಲಿ ಇರುವ ಶಾಲಾ ಕೊಠಡಿಗಳ ಗುಣಮಟ್ಟ ಕಾಪಾಡಿಕೊಳ್ಳುವುದು ಪ್ರಸ್ತುತ ದಲ್ಲಿ ತುಂಬಾ ಮುಖ್ಯವಾಗಿದೆ. ಆದರೆ, ಮೂರು ವರ್ಷಗಳಿಂದ ಶಾಲಾ ಕೊಠಡಿಗಳ ದುರಸ್ತಿ ಕಾಮ ಗಾರಿಯೇ ನಡೆಯದಿದ್ದರೆ ಮಕ್ಕಳ ಪರಿಸ್ಥಿತಿ ಏನಾಗಲಿದೆ ಎಂಬ ಚಿಂತೆ ಯಾರಿಗೂ ಇಲ್ಲದಂತೆ ಕಾಣುತ್ತಿದೆ.
ಬದ್ಧತೆ ಇಚ್ಛಾಶಕ್ತಿ ಕೊರತೆ: ಬೇಸಿಗೆ ಸಂದರ್ಭದಲ್ಲೇ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ದುರಸ್ತಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿದ್ದರೆ ಮಳೆಗಾಲದ ವೇಳೆಗೆ ಮಕ್ಕಳ ಪಾಠ ಪ್ರವಚನಕ್ಕೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಬಹಳಷ್ಟು ಸರ್ಕಾರಿ ಶಾಲೆಗಳ ಮೇಲ್ಛಾವಣಿಗಳು ಸೋರುತ್ತಿವೆ, ಕಿಟಕಿ-ಬಾಗಿಲುಗಳು ಮುರಿದಿವೆ. ಕೆಲವು ಶಾಲೆಗಳ ಹೆಂಚುಗಳು ಹಾರಿಹೋಗಿವೆ. ಮಳೆ ನೀರು ನೇರವಾಗಿ ಕೊಠಡಿಯೊಳಗೆ ಬೀಳುವ ಶೋಚನೀಯ ಸ್ಥಿತಿಯಲ್ಲಿದ್ದರೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆ ಶಾಲಾ ಕೊಠಡಿಗಳನ್ನು ದುರಸ್ತಿಪಡಿಸುವ ಇಚ್ಛಾಶಕ್ತಿ, ಬದ್ಧತೆ ಇಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಶೌಚಾಲಯ ನಿರ್ವಹಣೆಗೆ 5 ಸಾವಿರ ರೂ.: ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಶೌಚಾಲಯದ ವ್ಯವಸ್ಥೆ ಇದೆ. ಕುಡಿಯುವ ನೀರು ಹಾಗೂ ಶೌಚಾಲಯ ನಿರ್ವಹಣೆಗೆ ಸರ್ಕಾರ ಪ್ರತಿ ಶೌಚಾಲಯಕ್ಕೂ ವರ್ಷಕ್ಕೆ 5 ಸಾವಿರ ರೂ. ಹಣ ನೀಡುತ್ತಿದೆ. ಎಲ್ಲವೂ ಸುಸ್ಥಿತಿಯಲ್ಲಿರುವಂತೆ ಜಾಗೃತಿ ವಹಿಸಲು ಸೂಚಿಸಲಾಗಿದೆ. ಸ್ಥಳೀಯ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಾಲಾ ಆಡಳಿತ ಮಂಡಳಿ ನಿರ್ವಹಣೆಯಲ್ಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.