ವರ್ಗಾವಣೆ ದಂಧೆ ಬಿಟ್ಟರೆ, ಆಡಳಿತದಲ್ಲಿ ಏನೂ ಕೆಲಸ ನಡೆಯುತ್ತಿಲ್ಲ: ಸಿದ್ಧರಾಮಯ್ಯ
Team Udayavani, Oct 18, 2019, 1:50 PM IST
ಮಂಗಳೂರು: ಮಹಾರಾಷ್ಟ್ರಕ್ಕೆ ನೀರು ಬಿಡೋದಾಗಿ ಸಿಎಂ ಯಡಿಯೂರಪ್ಪ ಹೇಳಿಕೆ ವಿಚಾರ ಎಲೆಕ್ಷನ್ ಮತ್ತು ಓಟಿಗೋಸ್ಕರ ಯಡಿಯೂರಪ್ಪ ಆ ರೀತಿ ಹೇಳಿರಬಹುದು ಆದರೆ ಎರಡು ರಾಜ್ಯಗಳ ಮಧ್ಯೆ ಮಾತುಕತೆ ಆಗದೇ ಏನೂ ಮಾಡಲು ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಅವರು ಶುಕ್ರವಾರದಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿದ್ದರಾಮಯ್ಯ ವಿರುದ್ಧ ಮಾತನಾಡಿದರೆ ಐಟಿ ದಾಳಿ ಅನ್ನೋ ಬಿ.ಸಿ.ಪಾಟೀಲ್ ಹೇಳಿಕೆ ವಿಚಾರವಾಗಿ ನರೇಂದ್ರ ಮೋದಿ, ಅಮಿತ್ ಶಾ ಎಲ್ಲಾ ನನ್ನ ಜೇಬಲ್ಲಿದ್ದಾರಾ? ಅವ್ರೆಲ್ಲಾ ನಾವು ಹೇಳಿದ ಹಾಗೆ ಕೇಳುತ್ತಾರಾ? ಇದು ಬಾಲಿಷ ಹೇಳಿಕೆ, ಫೂಲಿಷ್ ನೆಸ್ ಎಂದರು.
ನಳಿನ್ ಗೆ ರಾಜ್ಯವೇ ಗೊತ್ತಿಲ್ಲ, ಮತ್ತೆ ಅವರು ಇನ್ನೇನು ಹೇಳುತ್ತಾರೆ? ಅವರಿಗೆ ಪಾಪ ಮಂಗಳೂರು ಬಿಟ್ಟರೆ ಮತ್ತೇನೂ ಗೊತ್ತಿಲ್ಲ, ಅದರಿಂದ ಹಾಗೆ ಹೇಳಿದ್ದಾರೆ ಅವರ ಜ್ಞಾನ ಅಷ್ಟೇ ಇರುವಾಗ ಇನ್ನೇನು ಮಾಡಕ್ಕಾಗುತ್ತದೆ ಎಂದರು.
ಕಾವೇರಿ ಗೆಸ್ಟ್ ಹೌಸ್ ನನಗೆ ಬೇಕು ಅಂತ ಪತ್ರ ಬರೆದಿದ್ದೇನೆ ಸಮ್ಮಿಶ್ರ ಸರ್ಕಾರದಲ್ಲಿ ಜಾರ್ಜ್ ಗೆ ಅದು ಸಿಕ್ಕಿದ್ರೂ ಅವರು ನನಗೆ ಬಿಟ್ಟು ಕೊಟ್ಡಿದ್ರು ಈಗ ನನಗೊಂದು ನಿವಾಸ ಕೊಡಬೇಕಲ್ವಾ? ಅದಕ್ಕೆ ಅದನ್ನೇ ಕೊಡಿ ಅಂತ ಬರೆದಿದ್ದೇನೆ ಅದರಲ್ಲಿ ತಪ್ಪೇನು? ಕೊಡೋದು ಬಿಡೋದು ಸರ್ಕಾರಕ್ಕೆ ಸೇರಿದ್ದು. ವರ್ಗಾವಣೆ ದಂಧೆ ಬಿಟ್ಟರೆ, ಆಡಳಿತದಲ್ಲಿ ಏನೂ ಕೆಲಸ ನಡೆಯುತ್ತಿಲ್ಲ ಪ್ರವಾಹ ಬಂದಿದ್ರೂ ಪರಿಹಾರದ ಕೆಲಸ ನಡೆಯುತ್ತಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್; ಪ್ರವಾಸಿಗರಿಗೆ ಹೊಸ ಆಕರ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.