ನ.2ರಂದು ಸುರತ್ಕಲ್ ಎನ್ಐಟಿಕೆ ಘಟಿಕೋತ್ಸವ- ಉಪರಾಷ್ಟ್ರಪತಿ ಆಗಮನ
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಘಟಿಕೋತ್ಸವ ಭಾಷಣ
Team Udayavani, Oct 31, 2019, 4:49 PM IST
ಮಂಗಳೂರು : ಸುರತ್ಕಲ್ ಎನ್‌ಐಟಿಕೆಯ(ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ) 17ನೇ ಘಟಿಕೋತ್ಸವ ನ.2ರಂದು ಕಾಲೇಜಿನ ನೂತನ ಕ್ರೀಡಾ ಸಂಕೀರ್ಣದಲ್ಲಿ ಜರಗಲಿದ್ದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಎನ್‌ಐಟಿಕೆ ನಿರ್ದೇಶಕ ಪ್ರೊ | ಕೆ.ಉಮಾಮಹೇಶ್ವರ ರಾವ್ ತಿಳಿಸಿದ್ದಾರೆ.
11 ಗಂಟೆಗೆ ಘಟಿಕೋತ್ಸವ ಕಾರ್ಯಕ್ರಮ ಆರಂಭಗೊಳ್ಳಲಿದೆ. ರಾಜ್ಯಪಾಲ ವಜುಬಾಯಿ ವಾಲಾ ಅವರು ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಘಟಿಕೋತ್ಸವದಲ್ಲಿ ಬಿ.ಟೆಕ್, ಎಂ.ಟೆಕ್, ಎಂ.ಟೆಕ್(ರಿಸರ್ಚ್), ಎಂಸಿಎ, ಎಂಬಿಎ, ಎಂಎಸ್‌ಸಿ ಮತ್ತು 2018-19ನೇ ಸಾಲಿನಲ್ಲಿ ಪಿಎಚ್‌ಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
1960ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ ಈಗ ವಜ್ರಮಹೋತ್ಸವ ವರ್ಷ ಆಚರಿಸುತ್ತಿದೆ. ಸಂಸ್ಥೆಯು ಬೋಧನೆಯ ಜತೆಗೆ ಸಂಶೋಧನೆ, ಮೂಲಸೌಕರ್ಯ, ಉದ್ಯಮಶೀಲತೆ ಕೌಶಲ್ಯ ವೃದ್ಧಿ, ಕ್ಯಾಂಪಸ್ ನೇಮಕಾತಿ ಮೂಲಕ ದೇಶದ ಪ್ರಮುಖ ತಾಂತ್ರಿಕ ವಿದ್ಯಾಸಂಸ್ಥೆಯಾಗಿ ಬೆಳೆದಿದೆ. ಉಪರಾಷ್ಟ್ರಪತಿಯವರು ಮೊದಲ ಬಾರಿಗೆ ಸಂಸ್ಥೆಗೆ ಆಗಮಿಸುತ್ತಿದ್ದಾರೆ ಎಂದು ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉಪನಿರ್ದೇಶಕ ಪ್ರೊ | ಅನಂತ ನಾರಾಯಣ ವಿ.ಎಸ್, ರಿಜಿಸ್ಟ್ರಾರ್ ಕೆ.ರವೀಂದ್ರನಾಥ್, ಸಂಚಾಲಕ ಪ್ರೊ | ಎ.ನಿತ್ಯಾನಂದ ಶೆಟ್ಟಿ, ಡಾ| ಅರುಣ್ ಎಂ.ಇಸ್ಲೂರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.