ರಾಜ್ಯಭಾಷೆಗಳಲ್ಲೆ ಶಿಕ್ಷಣ ನೀತಿ ಜಾರಿಯಾಗಲಿ : ಡಾ| ಚಂದ್ರಶೇಖರ ಕಂಬಾರ
ಎರಡು ದಿನಗಳ ಮಂಗಳೂರು ಲಿಟ್ ಫೆಸ್ಟ್ 2019 ಗೆ ಚಾಲನೆ
Team Udayavani, Nov 29, 2019, 4:26 PM IST
ಮಂಗಳೂರು : ಮೆಕಾಲೇ ಗುಂಗಿನಿಂದ ಹೊರಬಂದು ನಮ್ಮತನವನ್ನು ಕಂಡುಕೊಳ್ಳಬೇಕಾದುದು ಭಾರತ ಪರಿಕಲ್ಪನೆಯ ಸಾಕಾರಕ್ಕೆ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯಭಾಷೆಗಳಲ್ಲೇ ಶಿಕ್ಷಣ ನೀತಿ ಜಾರಿಯಾಗುವುದು ಅಗತ್ಯ ಎಂದು ಖ್ಯಾತ ಸಾಹಿತಿ, ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಚಂದ್ರಶೇಖರ ಕಂಬಾರ ಅವರು ಪ್ರತಿಪಾದಿಸಿದ್ದಾರೆ.
`ಐಡಿಯಾ ಆಫ್ ಭಾರತ್ – ಟುಡೇ ಎಂಡ್ ಟುಮೊರೊ ‘ ( ಭಾರತದ ಪರಿಕಲ್ಪನೆ-ಇಂದು ಮತ್ತು ನಾಳೆ) ಎಂಬ ಶೀರ್ಷಿಕೆಯಡಿಯಲ್ಲಿ ನಗರದ ಡಾ| ಟಿ.ಎಂ.ಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿರುವ ಎರಡುದಿನಗಳ ಮಂಗಳೂರು ಲಿಟ್ ಫೆಸ್ಟ್ 2019 ರ ಎರಡನೇ ಅವೃತ್ತಿಯನ್ನು ಶುಕ್ರವಾರದಂದು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯಭಾಷೆಗಳಲ್ಲೇ ಶಿಕ್ಷಣ ನೀಡಬೇಕು ಎಂಬುದಾಗಿ ನಾನು ಹಾಗೂ ಡಾ| ಎಸ್.ಎಲ್. ಭೈರಪ್ಪ ಅವರು ಜತೆ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಈಗಾಗಲೇ ಮನವಿ ಮಾಡಿದ್ದೇವೆ. ಇದಕ್ಕೆ ಪೂರಕವಾಗಿ ಸ್ಪಂದನೆ ಇನ್ನೂ ಬಂದಿಲ್ಲ ಎಂದರು.
ಮಂಗಳೂರಿನಲ್ಲಿ ಆಯೋಜನೆಗೊಂಡಿರುವ ಲಿಟ್‌ಫೆಸ್ಟ್ ಸಾಹಿತ್ಯೋತ್ಸವ ಒಂದು ಮಹತ್ವದ ಸಮಾವೇಶವಾಗಿದೆ. ಭಾರತ ಪರಿಕಲ್ಪನೆ ಎಂಬುದಾಗಿರುವ ಇದರ ಧ್ಯೇಯವೂ ಚೆನ್ನಾಗಿದೆ. ನನಗೂ ಇಷ್ಟವಾದ ಉದ್ದೇಶ ಇದಾಗಿದೆ ಮತ್ತು ಈ ನಿಟ್ಟಿನಲ್ಲೇ ನನ್ನ ಹೋರಾಟವೂ ಇದೆ ಎಂದವರು ನುಡಿದರು.
ಜೀವಮಾನದ ಸಾಧನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕ, ಸಂಶೋಧಕ ಡಾ| ಎಂ.ಚಿದಾನಂದ ಮೂರ್ತಿಯವರು ಮಾತನಾಡಿ ಧರ್ಮ ಭಾರತ ಅಂತಃಸತ್ವ. ಧರ್ಮ ಎಂದರೆ ಮತ, ಜಾತಿಯಲ್ಲ. ಧರ್ಮ ಉದಾತ್ತವಾದ, ನಮ್ಮ ನಿಲುಕದ ಮೀರಿದ ಪರಿಕಲ್ಪನೆ. ಧರ್ಮ ನಮ್ಮನ್ನು ಎತ್ತಿ ಹಿಡಿಯುತ್ತದೆ. ನಾವು ಧರ್ಮ ಪ್ರಸಾರಕ್ಕಾಗಿ ಭಾರತ ಇತರ ರಾಷ್ಟ್ರಗಳ ಮೇಲೆ ಧಾಳಿ ಮಾಡಿದ ಉದಾಹರಣೆಗಳಿಲ್ಲ. ಆದರೆ ಹೊರದೇಶಗಳ ಮತಗಳ ವಿಸ್ತರಣೆಗಾಗಿ ನಮ್ಮ ದೇಶದ ಮೇಲೆ ಧಾಳಿಯಾಗಿವೆ. ಇದು ಕೇವಲ ಭೌತಿಕ ಧಾಳಿ ಮಾತ್ರವಾಗಿರದೆ ಮಾನಸಿಕ ಆಕ್ರಮಣ ಕೂಡಾ ಆಗಿತ್ತು .ಆದರೆ ಭಾರತ ಸಂಸ್ಕೃತಿ,ಭವ್ಯ ಪರಂಪರೆಯ ಭದ್ರ ಬುನಾದಿಯಲ್ಲಿ ನಿಂತಿದೆ. ಸಾವಿರಾರು ಆಕ್ರಮಣಗಳು ನಡೆದರೂ ನಮ್ಮ ಧರ್ಮ, ಸಂಸ್ಕೃತಿಯನ್ನು ಉಳಿಸಿಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿವಿ ಕುಲಾಧಿಪತಿ ಹಾಗೂ ಲಿಟ್‌ಫೆಸ್ಟ್ ಸಂಘಟನಾ ಸಮಿತಿ ಅಧ್ಯಕ್ಷ ಡಾ| ಎನ್.ವಿನಯ ಹೆಗ್ಡೆ ಅವರು ಮಾತನಾಡಿ ಈ ಹಿಂದೆ ನಮ್ಮಲ್ಲಿ ಭಾರತ ಪರಿಕಲ್ಪನೆ ಇಲ್ಲದ ಪರಿಣಾಮವಾಗಿಯೇ ವಿದೇಶಿಯರು ದೇಶದ ಮೇಲೆ ಆಕ್ರಮಣ ಮಾಡಲು ಸಾಧ್ಯವಾಯಿತು. ನಮ್ಮ ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿಯ ಅವಲೋಕನ ಮತ್ತು ಮನನ ಮಾಡಿಕೊಂಡು ಪ್ರಸ್ತುತ ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಬಗ್ಗೆ ಯುವಜನತೆಯನ್ನು ಚಿಂತನೆ ಹಚ್ಚಬೇಕಾಗಿದೆ. ಇಂತಹ ಕಾರ್ಯ ಲಿಟ್‌ಫೆಸ್ಟ್ ನಂತಹ ಕಾರ್ಯಕ್ರಮಗಳ ಮೂಲಕ ಆಗಬೇಕಾಗಿದೆ ಎಂದರು. ನಮ್ಮ ಭಾಷೆಯನ್ನು ಪ್ರೀತಿಸಬೇಕು. ಜತೆ ಅನ್ಯ ಭಾಷೆಯನ್ನು ಗೌರವಿಸಬೇಕು. ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದರು.
ಲಿಟ್‌ಫೆಸ್ಟ್ ನ ಉದ್ದೇಶವನ್ನು ವಿವರಿಸಿದ ಎಂ.ಎಸ್. ಚೈತ್ರ ಅವರು ವಿದೇಶಿ ಅನುಕರಣೆಯ ಭರಾಟೆಯಲ್ಲಿ ನಮ್ಮ ದೇಶದ ಜ್ಞಾನ, ಸಂಸ್ಕೃತಿ, ಜಾನಪದ,ಪರಂಪರೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಬಗ್ಗೆ ಅತ್ಮಾವಲೋಕನ, ಚಿಂತನ ಮಂಥನ ನಡೆಯಬೇಕಾದ ಅವಶ್ಯಕತೆ ಇದೆ. ಅದಕ್ಕೆ ವೇದಿಕೆಯೊದಗಿಸುವ ನಿಟ್ಟಿನಲ್ಲಿ ಲಿಟ್‌ಫೆಸ್ಟ್ ಆಯೋಜಿಸಲಾಗಿದೆ ಎಂದರು. ಪುಸ್ತಕ ಪಾಧಿಕಾರದ ಅಧ್ಯಕ್ಷ ಡಾ| ಬಿ.ವಿ. ವಸಂತ ಕುಮಾರ್ ಉಪಸ್ಥಿತರಿದ್ದರು. ಪ್ರೊ| ರವಿಶಂಕರ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.