ನೀರಿಲ್ಲದೆ ಸೊರಗುತ್ತಿದೆ ಹೂವಿನಗಿಡ
ಕದ್ರಿ ಪಾರ್ಕ್, ಜಿಂಕೆ ಉದ್ಯಾನವನಕ್ಕೂ ತಟ್ಟಿದೆ ಜಲ ಸಮಸ್ಯೆ
Team Udayavani, May 22, 2019, 10:08 AM IST
ಕದ್ರಿ ಪಾರ್ಕ್.
ಮಹಾನಗರ: ನಗರದ ಅತೀ ದೊಡ್ಡ ಪಾರ್ಕ್‌ಗಳಲ್ಲಿ ಒಂದಾದ ಕದ್ರಿ ಪಾರ್ಕ್ ಈ ಹಿಂದೆ ಹೂವುಗಳಿಂದ ನಳನಳಿಸುತ್ತಿತ್ತು. ಆದರೆ ಕೆಲವು ದಿನಗಳಿಂದ ಪಾರ್ಕ್ ಸೊರಗಿದ್ದು, ಗಿಡಗಳಿಗೆ ನೀರಿನ ಅಭಾವ ಉಂಟಾಗಿದೆ.
ಈಗ ಈ ಉದ್ಯಾನವನಕ್ಕೆ ಹಾಯಿಸಲು ನೀರು ಸಾಲುತ್ತಿಲ್ಲ. ಇದೀಗ ಕದ್ರಿ ಉದ್ಯಾನವನ ಮತ್ತು ಅಲ್ಲೇ ಪಕ್ಕದಲ್ಲಿರುವ ಕದ್ರಿ ಜಿಂಕೆ ಉದ್ಯಾನವನಕ್ಕೆ ನೀರಿನ ಸಮಸ್ಯೆ ತಲೆದೋರಿದೆ. ಬಳಕೆ ಮಾಡಿದ ನೀರನ್ನು ಬೆಂದೂರ್‌ವೆಲ್ನಲ್ಲಿ ಸಂಸ್ಕರಿಸಿ, ಬಳಿಕ ಕದ್ರಿ ಪಾರ್ಕ್‌ನಲ್ಲಿರುವ ಗಿಡಗಳಿಗೆ ಹಾಯಿಸಲು ಉಪಯೋಗಿಸಲಾಗುತ್ತಿತ್ತು. ಇದರಿಂದಾಗಿ ಈವರೆಗೆ ನೀರಿನ ಸಮಸ್ಯೆ ಉಂಟಾಗಲಿಲ್ಲ. ಇದೀಗ ನಗರದೆಲ್ಲೆಡೆ ನೀರಿನ ಅಭಾವವಿದ್ದು, ಕದ್ರಿ ಪಾರ್ಕ್‌ಗೂ ಪ್ರತಿ ದಿನ ಹಾಯಿಸಲು ನೀರು ಸಿಗುತ್ತಿಲ್ಲ. ನಗರದಲ್ಲಿ ರೇಷನಿಂಗ್ ಆರಂಭವಾದಾಗ ಪಾರ್ಕ್‌ಗಳಿಗೆ ಹಾಯಿಸುವುವ ನೀರನ್ನು ಸ್ಥಗಿತಗೊಳಿಸಲಾಗಿದೆ.
ನೀರಿನ ಬಳಕೆ ಹೆಚ್ಚಳ
ಕದ್ರಿ ಪಾರ್ಕ್ ಸುಮಾರು 16 ಎಕ್ರೆ ಪ್ರದೆಶದಲ್ಲಿದ್ದು, 2 ವರ್ಷಗಳ ಹಿಂದೆ ಪಕ್ಕದಲ್ಲಿದ್ದ 4 ಎಕ್ರೆ ಪ್ರದೇಶದ ಜಿಂಕೆ ಉದ್ಯಾನವನಕ್ಕೆ ಪುನರುಜ್ಜೀವನ ಕಲ್ಪಿಸಲಾಗಿದೆ. ಇದರಿಂದಾಗಿ ನೀರಿನ ಬಳಕೆ ಹೆಚ್ಚಾಗಿದ್ದು, ಜಿಂಕೆ ಉದ್ಯಾನ ವನದಲ್ಲಿರುವ ಗಿಡಗಳಿಗೆ ಪ್ರತಿದಿನ ಸುಮಾರು 10,000 ಲೀಟರ್‌ನಷ್ಟು ನೀರು ಬೇಕಾಗುತ್ತದೆ. ಅದೇ ರೀತಿ ಪಕ್ಕದಲ್ಲಿ ರುವ ಕದ್ರಿ ಉದ್ಯಾನವನಕ್ಕೆ ಸುಮಾರು 50,000ಕ್ಕೂ ಹೆಚ್ಚಿನ ಲೀಟರ್ ನೀರು ಬೇಕಾಗುತ್ತದೆ. ಇದೀಗ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಪ್ರತೀ ದಿನ ಹಾಯಿಸುವಷ್ಟು ನೀರು ಬರುತ್ತಿಲ್ಲ. ಬಿಸಿಲಿನ ತಾಪವೂ ಹೆಚ್ಚಾಗುತ್ತಿದ್ದು, ಪಾರ್ಕ್ ನಲ್ಲಿ ಗಿಡಗಳು ಬಾಡಿ ಹೋಗಿವೆ.
ನಗರದಲ್ಲಿ ರವಿವಾರ ರಾತ್ರಿ ಹಗುರ ಮಳೆ ಬಂತಾದರೂ, ಬಳಿಕ ಸುರಿಯ ಲಿಲ್ಲ. ಹಾಗಾಗಿ ನೀರಿನ ಕೊರತೆ ಮುಂದುವರಿದಿದೆ. ನಗರದಲ್ಲಿ ಅನೇಕ ವೃತ್ತಗಳಿದ್ದು, ಅದನ್ನು ಅಭಿವೃದ್ಧಿಪಡಿಸಿ ಅವುಗಳಲ್ಲಿ ಗಿಡಗಳನ್ನು ನೆಡಲಾಗಿದೆ. ಆದರೆ ನೀರಿನ ಸಮಸ್ಯೆ, ಸಮರ್ಪಕ ನಿರ್ವಹಣೆ ಯಿಲ್ಲದೆ ಸೊರಗುತ್ತಿವೆ. ನಗರದ ಡಿವೈಡರ್‌ಗಳ ನಡುವೆ ನೆಟ್ಟಂತಹ ಗಿಡಗಳಿಗೂ ದಿನಂಪ್ರತಿ ನೀರು ಹಾಯಿಸಲಾಗುತ್ತಿಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಗಿಡಗಳನ್ನು ಈಗಾಗಲೇ ಬಾಡಿ ಹೋಗಿವೆ.
ಸಂಗೀತ ಕಾರಂಜಿಗೆ ನೀರಿನ ಸಮಸ್ಯೆಯಿಲ್ಲ
ಕದ್ರಿ ಜಿಂಕೆ ಪಾರ್ಕ್‌ನಲ್ಲಿರುವ ಸಂಗೀತ ಕಾರಂಜಿಗೆ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಬೆಂದೂರ್‌ವೆಲ್ನಿಂದ ಪೈಪ್ ಮುಖೇನ ಪಾರ್ಕ್‌ಗೆ ನೀರು ಬರುತ್ತಿದೆ. ಕಾರಂಜಿಗೆ ಬಳಸಿದ ನೀರು ಪೋಲಾಗುವುದಿಲ್ಲ. ಒಂದು ಬಾರಿ ಬಳಸಿದರೆ ಪುನಃ ಅದೇ ನೀರು ಉಪಯೋಗಿಸಲಾಗುತ್ತದೆ. ಇದೇ ಕಾರಣಕ್ಕೆ ನೀರಿನ ಸಮಸ್ಯೆ ಉಂಟಾಗಲಿಲ್ಲ.
ಹಿರಿಯ ಸಹಾಯಕಿ, ತೋಟಗಾರಿಕಾ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.