ಕರಡಿ ಆಡಿಸುವ ಕುಟುಂಬಕ್ಕೆ ನಿವೇಶನ ಹಂಚಿಕೆಗೆ ಕ್ರಮ
Team Udayavani, Oct 25, 2019, 6:15 PM IST
ಮರಿಯಮ್ಮನಹಳ್ಳಿ: ಕರಡಿ ಆಡಿಸುವ ಕುಟುಂಬಗಳಿಗೆ ಸರಕಾರ ನೀಡಿದ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಕೂಡಲೇ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಿ ಎಂದು ಬಳ್ಳಾರಿ ಜಿಲ್ಲಾ ಸಂಸದ ವೈ. ದೇವೇಂದ್ರಪ್ಪ ಅವರು ಡಣಾಪುರ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸಮೀಪದ 114 ಡಣಾಪುರ ಗ್ರಾಮಪಂಚಾಯಿತಿಯ 2019ನೇ ಸಾಲಿನ 2ನೇ ಗ್ರಾಮಸಭೆಯಲ್ಲಿ ದಿಢೀರನೆ ಬಂದು ಪಾಲ್ಗೊಂಡು ಸಭೆಯಲ್ಲಿ ಎಲ್ಲ ನಿಲುವಳಿ ಬಗ್ಗೆ ಕೂಲಂಕಷವಾಗಿ ಆಲಿಸಿ ನಂತರ ಮಾತನಾಡಿದರು. 112 ವೆಂಕಟಾಪುರ ಗ್ರಾಮದ ಕರಡಿ ಆಡಿಸುತ್ತಿದ್ದ ಖಲಂದರ್ ಕುಂಟುಂಬಗಳು ಹಲವು ದಶಕಗಳಿಂದಲೂ ತಮ್ಮ ಸಾಂಪ್ರದಾಯಿಕ ವೃತ್ತಿಯಾದ ಕರಡಿ ಆಡಿಸುವ ಮೂಲಕ ಜನರಿಗೆ ಮನರಂಜನೆ ನೀಡಿ ಜೀವನ ಸಾಗಿಸುತ್ತಿದ್ದರು.
ಅರಣ್ಯ ಕಾಯಿದೆ ವನ್ಯಜೀವಿಗಳ ಸಂರಕ್ಷಣಾ ಕಾಯಿದೆಯಿಂದಾಗಿ ಅರಣ್ಯ ಇಲಾಖೆಯವರು ಇವರ ಕರಡಿಗಳನ್ನು ವಶಪಡಿಸಿಕೊಂಡರು. ನಂತರ ಇವರ ಜೀವನ ಸಂಕಷ್ಟಕ್ಕೊಳಗಾಗಿದೆ ಈ ಕುಟುಂಬಗಳ ಹೋರಾಟದಿಂದಾಗಿ ಸರ್ಕಾರ ಇವರಿಗೆ ನಿವೇಶನ ನೀಡಲು ಮುಂದಾಗಿ ಜಮೀನು ಮಂಜೂರು ಮಾಡಿದ್ದಾರೆ ಇನ್ನುಮುಂದೆ ವಿಳಂಬಮಾಡದೇ ಸುಮಾರು 60 ಕುಟುಂಬಗಳಿಗೆ ನಿವೇಶನ ನೀಡಲು ಈ ಸಭೆಯಲಿ ಠರಾವು ಪಾಸುಮಾಡಿ ಅವರ ಬದುಕಿಗೆ ಭದ್ರತೆ ನೀಡಿ ಎಂದರು. ಅಲ್ಲದೇ ಈ ಸಮುದಾಯ ದರವೇಶಿ ಸಮುದಾಯವೆಂದು ಜಾತಿ ಪ್ರಮಾಣ ಪತ್ರನೀಡಲು ಮನವಿಮಾಡಿಕೊಂಡಿದ್ದಾರೆ.
ಈ ಸಮುದಾಯದಬಗ್ಗೆ ಕನ್ನಡ ವಿಶ್ವವಿದ್ಯಾಲಯದ
ವಿದ್ವಾಂಸರಾದ ಕೆ.ಎಂ. ಮೈತ್ರಿ ಅವರೂ ವಿವರ ನೀಡಿರುತ್ತಾರೆ. ಈ ಬಗ್ಗೆ ತಹಶೀಲ್ದಾರರೊಂದಿಗೆ ಮಾತನಾಡಿ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದರು.
ನಂತರ ಸಭೆಯಲ್ಲಿ ವ್ಯಾಸನಕೆರೆ ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆಗೆ ಸ್ವಂತ ಜಾಗವಿಲ್ಲ ಅದಕ್ಕೆ ಸ್ವಂತ ಜಾಗ ಖರೀದಿಸಲು ಠರಾವು ಪಾಸು ಮಾಡಲಾಯಿತು. ರಾಷ್ಟ್ರೀಯ ಹೆದ್ದಾರಿ 50 ಕಾಮಗಾರಿಗೆ ಗಾಳೆಮ್ಮನಗುಡಿ ಹನುಮನಹಳ್ಳಿ ಗ್ರಾಮಗಳ ಮನೆಗಳು ಕಳೆದುಕೊಂಡ ಕುಟುಂಬಗಳಿಗೆ ನಿವೇಶನ ಹಂಚಲು ಸರ್ವೇ ನಂ. 82ರಲ್ಲಿ ಕಾಯ್ದಿರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಗ್ರಾಮಸಭೆಯಲ್ಲಿ ಜನರ ಯೋಜನೆ ಜನರ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣ ಘಟಕದ ಕ್ರಿಯಾಯೋಜನೆ, ಗಾಳೆಮ್ಮನಗಡಿ ಅರಣ್ಯ ಭೂಮಿಯಲ್ಲಿ ವಾಸಮಾಡುತ್ತಿದ್ದ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಸರ್ವೆನಂ 82/2ರಲ್ಲಿ ನಿವೇಶನ ಹಂಚಲು ಅನುಮೋದನೆ ಮಾಡಲಾಯಿತು. ಗ್ರಾಪಂ ಅಧ್ಯಕ್ಷ ಸಿ.ಎ. ಗಾಳೆಪ್ಪ ಸಭೆ ಅಧ್ಯಕ್ಷತೆ ವಹಿಸಿದ್ದರು. ಪಿಡಿಓ ಮಂಜುಳಾರಾಣಿ ವಿ., ಎಸ್‌ಡಿಎ ಮಾರೇಶ್, ಹೊಸಪೇಟೆ ಶಿಶು ಅಭಿವೃದ್ಧಿ ಯೊಜನಾಧಿಕಾರಿ ಅಮರೇಶ್, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
MUST WATCH
ಹೊಸ ಸೇರ್ಪಡೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.