116 ನವ ಜೋಡಿಗಳ ಮೆರವಣಿಗೆ!
ಸೋಮಲಾಪುರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ
Team Udayavani, Apr 27, 2019, 3:19 PM IST
ಕುರುಗೋಡು: ಸೋಮಲಾಪುರ ಗ್ರಾಮದಲ್ಲಿ ಸದ್ಗುರು ಚಿದಾನಂದ ಸ್ವಾಮಿಯವರ 27ನೇ ಪುಣ್ಯಾರಾಧನೆ ಅಂಗವಾಗಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 116 ನವ ಜೋಡಿಗಳ ಮೆರವಣಿಗೆ ನಡೆಯಿತು.
ಕುರುಗೋಡು: ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಪಾಲಕರು ಅವಿದ್ಯಾವಂತರು ಇದ್ದರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಒತ್ತು ನೀಡಬೇಕು ಎಂದು ಸದ್ಗುರು ಷಡಕ್ಷರಸ್ವಾಮಿ ಅವಧೂತರು ಹೇಳಿದರು.
ಸಮೀಪದ ಸೋಮಲಾಪುರದ ಸದ್ಗುರು ಚಿದಾನಂದ ಸ್ವಾಮಿಯವರ 27ನೇ ಪುಣ್ಯಾರಾಧನೆ ಅಂಗವಾಗಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚು ಸಾಮೂಹಿಕ ಮದುವೆಯಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಹೊಸದಾಗಿ ದಾಂಪತ್ಯ ಭವಿಷ್ಯದಲ್ಲಿ ಸುಖ ಸಂಸಾರ ಮಾಡುವ ಮೂಲಕ ಸಹಬಾಳ್ವೆ ನಡೆಸುವಂತೆ ಹಾಗೂ ಮುಂದಿನ ಭವಿಷ್ಯದ ಮಕ್ಕಳಿಗೆ ನಿಮ್ಮ ವಾರ್ಡ್‌ಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದರು. ಈ ಸಂದರ್ಭದಲ್ಲಿ 116 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು. ಬೆಳಿಗ್ಗೆ ಮಠದ ಆವರಣದಲ್ಲಿ ಧ್ವಜಾರೋಹಣ, ತಾತನವರ ಭಾವಚಿತ್ರ ಮೆರವಣಿಗೆ, 108 ಸುಮಂಗಲೆಯರಿಂದ ಕುಂಭೋತ್ಸೊವ ಆರತಿ, ಶಿವ ಭಜನೆ ನಡೆದವು. ಗ್ರಾಮದ ಸದ್ಗುರು ಚಿದನಂದಸ್ವಾಮಿ ಸದ್ಬಕ್ತ ಸೇವಾ ಮಂಡಳಿ ನೂರಾರು ಕಾರ್ಯಕ್ರರ್ತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.