ಬಹುಗ್ರಾಮ ಕುಡಿಯುವ ನೀರಿನಿಂದ ಸಮಸ್ಯೆ ಪರಿಹಾರ
ಮೆನ್ನಬೆಟ್ಟು ಗ್ರಾಮ ಪಂಚಾಯತ್
Team Udayavani, Apr 3, 2019, 10:30 AM IST
ಬೇಸಗೆ ಕಾಲದಲ್ಲಿ ಕಿನ್ನಿಗೋಳಿಗೆ ನೀರು ಪೂರೈಸುವ ಟ್ಯಾಂಕ್
ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯತ್‌ನ ಹಲವು ಭಾಗಗಳಿಗೆ ಕಿನ್ನಿಗೋಳಿ ಬಹುಗ್ರಾಮ ನೀರಿನ ಯೋಜನೆ ಸಮರ್ಪಕವಾಗಿ ಬಂದರೆ ಬೇಸಗೆಯಲ್ಲಿ ಯಾವುದೇ ನೀರಿನ ಸಮಸ್ಯೆ ಕಾಡುವುದಿಲ್ಲ.
ಮೆನ್ನಬೆಟ್ಟು ಗ್ರಾಮ ಪಂಚಾಯತ್‌ನ ಉಲ್ಲಂಜೆ ಹಾಗೂ ಕೆಮ್ಮಡೆ ಪರಿಸರದಲ್ಲಿ ಎರಡುವೆರೆ ಸೆಂಟ್ಸ್ ಸೈಟ್ ಮನೆಗಳು ಹೆಚ್ಚಾಗಿದ್ದು, ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ. ಉಲ್ಲಂಜೆ ಪ್ರದೇಶದಲ್ಲಿ ಕಳೆದ ವರ್ಷ ತೆರದ ಬಾವಿ ತೋಡಿದ್ದು, ಅದಕ್ಕೆ ಪಂಪ್ ವ್ಯವಸ್ಥೆ ಮಾಡಲಾಗಿದೆ. ಕೆಮ್ಮಡೆಯಲ್ಲಿ ಕೂಡ ಕೊಳವೆ ಬಾವಿಗೆ ಪಂಪ್ ಅಳವಡಿಸಲಾಗಿದೆ. ನೇಕಾರ ಕಾಲನಿಯಲ್ಲಿ ಕಳೆದ ವರ್ಷ ಕೊಳವೆಬಾವಿಯ ಪಂಪ್ ಮೂಲಕ ನೀರನ್ನು ಪೂರೈಸಿದ್ದರಿಂದ ಬಹುತೇಕ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ.
ಬಹುಗ್ರಾಮ ಯೋಜನೆಯ ನೀರು ನಮ್ಮ ಗ್ರಾ.ಪಂ. ವ್ಯಾಪ್ತಿಯ ಎಲ್ಲ ಒವರ್ ಹೆಡ್ ಟ್ಯಾಂಕ್‌ಗಳಿಗೆ ಸರಬರಾಜು ಆದರೇ ನಮಗೆ ನೀರಿನ ಸಮಸ್ಯೆ ಬರುವುದಿಲ್ಲ. ಆದರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಹಾಗೂ ಪೈಪ್‌ಲೈನ್ ಸಮಸ್ಯೆಯಿಂದ ತೊಡಕಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯತ್ ನೀರು ಸಮಿತಿಯ ಅಧ್ಯಕ್ಷ ಮೋರ್ಗನ್ ವಿಲಿಯಂ.
ಯೋಜನೆ ಆರಂಭವಾಗಿಲ್ಲ
ಮೆನ್ನಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಶ್ರೀರಾಮ ಮಂದಿರ, ಕನ್ಸೆಟ್ಟಾ ಆಸ್ಪತ್ರೆ, ಜಲ್ಲಿಗುಡ್ಡೆ ಸಹಿತ 3 ಓವರ್ ಹೆಡ್‌ಟ್ಯಾಂಕ್‌ಗಳಿಗೆ ಕಳೆದ ವರ್ಷ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರವಾಗಿತ್ತು. ಆದರೆ ಈ ಯೋಜನೆಯನ್ನೇ ಆರಂಭಿಸಿಲ್ಲ. ಗ್ರಾ.ಪಂ. ಉಳಿದ ಟ್ಯಾಂಕ್‌ಗಳಿಗೆ ಪಂಚಾಯತ್ ಕೊಳವೆ ಬಾವಿ ಹಾಗೂ 2 ತೆರೆದ ಬಾವಿ ಮೂಲಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಮನ್ನೆಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ನಂದಿನಿ ನದಿಯು ಸ್ವಲ್ಪ ಭಾಗ ಹರಿಯುತ್ತಿದ್ದರೂ ಕುಡಿಯುವ ನೀರಿನ ಯೋಜನೆಗೆ ಬಳಸುಕೊಳ್ಳಲು ಯೋಜನೆ ಸಿದ್ಧ ಪಡಿಸಿಕೊಳ್ಳಬೇಕಾಗಿದೆ.
ಪಂಪು ಅಳವಡನೆ
ಉಲ್ಲಂಜೆ ಪರಿಸರದಲ್ಲಿ ಎನ್‌ಆರ್‌ಇಜಿ ಯೋಜನೆಯಲ್ಲಿ 2017- 18 ರ ಸಾಲಿನಲ್ಲಿ ತೆರೆದ ಬಾವಿ ತೋಡಿದ್ದು ಅಲ್ಲಿ ಪಂಪು ಅಳವಡಿಸಲಾಗಿದೆ. ಮೂರುಕಾವೇರಿ- ಕಿನ್ನಿಗೋಳಿ – ಕಾರ್ನಾಡ್ ರಾಜ್ಯ ಹೆದ್ದಾರಿ ರಸ್ತೆ ಅಗಲಗೊಳಿಸುವ ಕಾಮಗಾರಿಯಿಂದ ಕಿನ್ನಿಗೋಳಿ ಪೇಟೆ ಹಾಗೂ ಸೈಂಟ್ ಮೇರಿಸ್ ಶಾಲೆಯಿಂದ ಕುಡಿಯುವ ನೀರಿನ ಪೈಪ್ ಲೈನ್ ಹಾಳಾಗಿದ್ದು ಹೊಡೆದು ಹೋಗಿ ಸಮಸ್ಯೆಗಾಗಿತ್ತು. ಅದನ್ನು ತಕ್ಕ ಮಟ್ಟಿಗೆ ಸರಿಪಡಿಸಲಾಗಿದೆ.
ಯೋಜನೆಯ ಪಟ್ಟಿ
ಹೊಸ ಪೈಪ್‌ಲೈನ್ ಜಿಲ್ಲಾ ಪಂಚಾಯತ್‌ನಿಂದ ಯೋಜನೆಯ ಪಟ್ಟಿ ತಯಾರಿಸಲಾಗಿದೆ ಎಂದು ಗ್ರಾಮ ಪಂಚಾಯತ್ ಮೂಲ ತಿಳಿಸಿದೆ.
ಯೋಜನೆ ಜಾರಿಯಾದರೆ, ಸಮಸ್ಯೆಯಿಲ್ಲ
ನೀರಿನ ಸಮಸ್ಯೆಗೆ ಮೆನ್ನಬೆಟ್ಟು ವ್ಯಾಪ್ತಿಯಲ್ಲಿ ಎರಡು ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಸೈಂಟ್‌ಮೇರಿಸ್ ಶಾಲೆಯ ಹತ್ತಿರ ದೊಡ್ಡ ಟ್ಯಾಂಕ್ ಗೆ ಬಹುಗ್ರಾಮ ಕುಡಿಯುವ ನೀರು ಬಂದರೆ ಅಷ್ಟು ಸಮಸ್ಯೆಯಾಗುವು ದಿಲ್ಲ. ಈವರೆಗೆ ಕುಡಿಯುವ ನೀರಿನ ಸಮಸ್ಯೆ ಅಷ್ಟು ಕಂಡು ಬಂದಿಲ್ಲ . ಎಪ್ರಿಲ್ ಅಂತ್ಯ ಹಾಗೂ ಮೇ ತಿಂಗಳನಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು.
-ರಮ್ಯಾ ಕೆ. ಪಿಡಿಒ,
ಮೆನ್ನಬೆಟ್ಟು ಗ್ರಾ. ಪಂ.
ಟ್ಯಾಂಕರ್ ಮೂಲಕ ನೀರು ಸರಾಬರಾಜು
ಕಳೆದ ವರ್ಷವು ನಾವು ನೀರಿನ ಸಮಸ್ಯೆ ಮನಗಂಡು ಟ್ಯಾಂಕರ ಮೂಲಕ ಉಲ್ಲಂಜೆ , ನೇಕಾರ ಕಾಲನಿ ಪ್ರದೇಶದಲ್ಲಿ ನೀರನ್ನು ನೀಡಲಾಗಿದೆ. ಈ ವರ್ಷವು ಸರಿಯಾದ ನೀರಿನ ಮೂಲ ಇಲ್ಲದೆ ಸಮಸ್ಯೆ ಆಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರು ಈ ವರ್ಷ ಸ್ವಲ್ಪ ಮಟ್ಟಿಗೆ ಬರುತ್ತಿದೆ
– ಸರೋಜಿನಿ ಗುಜರನ್,
ಅಧ್ಯಕ್ಷೆ, ಮೆನ್ನಬೆಟ್ಟು ಗ್ರಾಮ
ಪಂಚಾಯತ್
ರಘುನಾಥ್ ಕಾಮತ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.