ರೋಗಿಗಳಿಗೆ ಎಕ್ಸ್ರೇ ಸೌಲಭ್ಯ ಸಿಗ್ತಿಲ್ಲ
ಮೊಳಕಾಲ್ಮೂರು ಸರ್ಕಾರಿ ಆಸ್ಪತ್ರೆಯ ಎಕ್ಸ್ರೇ ಮಿಷನ್ ಹಾಳಾಗಿದ್ಧರಿಂದ ತೊಂದರೆ
Team Udayavani, Nov 28, 2019, 2:46 PM IST
ಎಸ್. ರಾಜಶೇಖರ
ಮೊಳಕಾಲ್ಮೂರು: ಆರೋಗ್ಯ ಮತ್ತು ಕುಟುಂಬಕಲ್ಯಾಣಂ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರ ಸ್ವಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳುಗಳಿಂದ ಎಕ್ಸ್‌ರೇ ಸೌಲಭ್ಯ ದೊರೆಯುತ್ತಿಲ್ಲ. ಇದರಿಂದ ರೋಗಿಗಳು ಪರದಾಡುವಂತಾಗಿದೆ.
ಪಟ್ಟಣದಲ್ಲಿರುವ ನೂರು ಹಾಸಿಗೆಗಳ ಆಸ್ಪತ್ರೆ, ವೈದ್ಯರ ಕೊರತೆ ಬೆನ್ನಲ್ಲೇ ಎಕ್ಸ್ ರೇ ಸೌಲಭ್ಯದಿಂದಲೂ ವಂಚಿತವಾಗಿದೆ. ಇದುವರೆಗೆ ಹಳೆಯ ಎಕ್ಸ್‌ರೇ ಮಿಷನ್‌ನಿಂದ ಕೀಲು, ಮೂಳೆ ರೋಗಿಗಳಿಗೆ ಎಕ್ಸ್‌ರೇ ತೆಗೆಯಲಾಗುತ್ತಿತ್ತು. ಆಸ್ಪತ್ರೆಗೆ ಡಿಜಿಟಲ್ ಎಕ್ಸ್ರೇ ಮಿಷನ್ ಅಳವಡಿಸಲು ಹಳೆಯ ಮಿಷನ್ ಸ್ಥಳಾಂತರಿಸುವಾಗ ಹಳೆಯ ಎಕ್ಸ್‌ರೇ ಮಿಷನ್ ಕೆಟ್ಟು ಹೋಗಿದೆ. ಮೂರು ತಿಂಗಳಿನಿಂದ ಎಕ್ಸ್‌ರೇ ಸೌಲಭ್ಯವಿಲ್ಲದ ಕಾರಣ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ದರ ತೆತ್ತು ಎಕ್ಸ್‌ರೇ ಮಾಡಿಸಿಕೊಳ್ಳಬೇಕಾದ ಸ್ಥಿತಿ ನಿಮಾಣವಾಗಿದೆ.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು, ಸಹಾಯಕ ಮುಖ್ಯ ಅಧೀಕ್ಷಕರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು ಹಳೆಯ ಎಕ್ಸ್‌ರೇ ಮಿಷನ್ ದುರಸ್ತಿ ಮಾಡಿಸಲು ಗಮನ ನೀಡುತ್ತಿಲ್ಲ. ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸಬೂಬು ಹೇಳುತ್ತಾ ಕಾಲಹರಣ ಮಾಡಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಆಸ್ಪತ್ರೆಗೆ ನಿಯೋಜನೆಗೊಂಡ ಎಲುಬು, ಕೀಲು ಮತ್ತು ಮೂಳೆ ತಜ್ಞರು ನಿಗಧಿಪಡಿಸಿದ ದಿನಗಳಲ್ಲಿ ಸೇವೆಗೆ ಬಾರದೆ ತಮಗೆ ಇಷ್ಟ ಬಂದ ದಿನಗಳಂದು ಮಾತ್ರ ಬಂದು ಮಧ್ಯಾಹ್ನಕ್ಕೆ ಹೋಗಿರುವ ನಿದರ್ಶನಗಳಿವೆ. ಸಮಸ್ಯೆಗಳ ಸುಳಿಯಲ್ಲಿರುವ ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗೆ ಮೇಜರ್ ಸರ್ಜರಿ ಆಗಬೇಕು. ಆಗ ಮಾತ್ರ ಈ ಭಾಗದ ಬಡವರಿಗೆ ಉತ್ತಮ ಚಿಕಿತ್ಸೆ ದೊರೆಯುಬಹುದು.
ತಾಲೂಕು ಕೇಂದ್ರದಲ್ಲಿನ ಪಟ್ಟಣದ ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸ್‌ರೇ ಮಿಷನ್ ಕೆಟ್ಟು ಹೋಗಿ ಮೂರು ತಿಂಗಳಾಗಿವದೆ. ಸಂಬಂಧಪಟ್ಟ ಅ ಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಆದ್ದರಿಂದ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಸರ್ಕಾರಿ ಆಸ್ಪತ್ರೆಗೆ ಮೂಲ ಸೌಲಭ್ಯ ಕಲ್ಪಿಸಬೇಕು. .ರಾಮಾಂಜನೇಯ,
ಆರೋಗ್ಯ ಸೇವಾ ಸಮಿತಿ ಸದಸ್ಯ,
ಮೊಳಕಾಲ್ಮೂರು.
ನಿಯಮಾನುಸಾರ ಕೆಲವೇ ದಿನಗಳಲ್ಲಿ ಡಿಜಿಟಲ್ ಎಕ್ಸ್ರೇ ಮಿಷನ್ ಅಳವಡಿಸಲಾಗುವುದು. 22 ವರ್ಷಗಳಷ್ಟು ಹಳೆಯದಾದ ಎಕ್ಸ್‌ರೇ ಮಿಷನ್ ದುರಸ್ತಿಗೆ ಸಲಕರಣೆಗಳು ದೊರೆಯದ ಕಾರಣ ಪರ್ಯಾಯವಾಗಿ ಬೇರೆ ಆಸ್ಪತ್ರೆಯಲ್ಲಿರುವ ಹಳೆಯ ಎಕ್ಸ್‌ರೇ ಮಿಷನ್ ತರಲಾಗಿದೆ.
. ಡಾ| ಸಿ.ಎಲ್. ಫಾಲಾಕ್ಷ , ಜಿಲ್ಲಾ ಆರೋಗ್ಯ ಮತ್ತು
ಕುಟುಂಬ ಕಲ್ಯಾಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.