ಕಚೇರಿಗೆ ಬೀಗ ಜಡಿದು ಪ್ರತಿಭಟನೆ
•ನೀರಾವರಿಯಿಂದ ವಂಚಿತರನ್ನಾಗಿ ಮಾಡಬೇಡಿ: ರೈತರ ಮನವಿ
Team Udayavani, Aug 8, 2019, 4:11 PM IST
ಮುದ್ದೇಬಿಹಾಳ: ಹುಡ್ಕೋ ಕಾಲೋನಿಯಲ್ಲಿರುವ ಎಎಲ್ಬಿಸಿ ಉಪ ವಿಭಾಗದ ನಂ-2 ಕಚೇರಿಗೆ ರೈತರು ಬುಧವಾರ ಬೀಜ ಜಡಿದು ಪ್ರತಿಭಟಿಸಿದರು.
ಮುದ್ದೇಬಿಹಾಳ: ಚಿಮ್ಮಲಗಿ ಏತ್ ನೀರಾವರಿ ಯೋಜನೆಯ ಪೂರ್ವ ಕಾಲುವೆಯ ವಿತರಣಾ ಕಾಲುವೆ 13ಎಯನ್ನು ಮುಖ್ಯ ಕಾಲುವೆಗೆ ಜೋಡಣೆ ಮಾಡದೇ ಈ ಭಾಗದ ರೈತರನ್ನು ನೀರಾವರಿಯಿಂದ ವಂಚಿತರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿ ಬುಧವಾರ ತಾಲೂಕಿನ ನೆರಬೆಂಚಿ ಗ್ರಾಮಸ್ಥರು ಹುಡ್ಕೊ ಕಾಲೋನಿಯಲ್ಲಿರುವ ಎಎಲ್ಬಿಸಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಮುದ್ದೇಬಿಹಾಳ ತಾಲೂಕಿನ ಅಕ್ಕಪಕ್ಕದಲ್ಲಿ ಎರಡು ಆಣೆಕಟ್ಟುಗಳಿವೆ. ಈಗಾಗಲೇ ಬಹು ವರ್ಷಗಳ ಹಿಂದೆಯೇ ಮುದ್ದೇಬಿಹಾಳ ಕ್ಷೇತ್ರ ಸಂಪೂರ್ಣವಾಗಿ ನೀರಾವರಿಯಾಗಬೇಕಿತ್ತು. ಆದರೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಸಮರ್ಪಕವಾಗಿ ಕಾಲುವೆಗಳನ್ನು ಮಾಡದ ಕಾರಣ ಕ್ಷೇತ್ರವು ನೀರಾವರಿಯಿಂದ ವಂಚಿತಗೊಂಡಿದೆ. ಇದನ್ನು ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ರೈತರಿಗೆ ಉಪಯೋಗಕ್ಕೆ ಬಾರದ ಕಚೇರಿಗೆ ಬೀಗ ಜಡಿಯಲಾಗಿದೆ ಎಂದು ಪ್ರತಿಭಟನಾ ರೈತರು ದೂರಿದರು.
ನಂತರ ಎಎಲ್ಬಿಸಿನಂ. 2ರ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಆಲಮಟ್ಟಿಯ ಕೆಬಿಜೆಎನ್‌ಎಲ್ ಎಂಡಿ ಅವರಿಗೆ ಗ್ರಾಮಸ್ಥರು ಪ್ರತ್ಯೇಕವಾಗಿ ಮನವಿ ಸಲ್ಲಿಸಿ ಕೂಡಲೇ ಕಾಲುವೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಅರ್ಧಕ್ಕೆ ನಿಂತ ಕಾಲುವೆ ಕಾಮಗಾರಿ: ಮುದ್ದೇಬಿಹಾಳ ತಾಲೂಕಿನ ನೆರಬೆಂಚಿ ಗ್ರಾಮದ ಹತ್ತಿರ ಉಪ ಕಾಲುವೆಯನ್ನು ಮಾಡಲಾಗಿದೆ. ಮುಖ್ಯ ಕಾಲುವೆ ಕೇವಲ 200 ಮೀ. ಇದ್ದು ಕಾಲುವೆ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಉಪ ಕಾಲುವೆ ಆದರೆ ಮುಖ್ಯ ಕಾಲುವೆಗೆ ಜೋಡನೆಯಾಗದ ಕಾರಣ ಗ್ರಾಮದ ರೈತರು ನೀರಾವರಿಯಿಂದ ವಂಚಿತರಾಗಿದ್ದಾರೆ. ಇದರ ಬಗ್ಗೆ ಸಾಕಷ್ಟು ಬಾರಿ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಮೌಖೀವಾಗಿ ಹಾಗೂ ಲಿಖೀತವಾಗಿ ದೂರು ನೀಡಿದ್ದರೂ ಅಧಿಕಾರಿಗಳು ಮಾತ್ರ ರೈತರ ಮನವಿಗೆ ಕಿವಿಗೊಡುತ್ತಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.
ಕಚೇರಿಗೆ ಕಾಯಂ ಬೀಗ ಜಡಿಯಲು ನಿರ್ಧಾರ: ಒಂದು ವೇಳೆ ಅಧಿಕಾರಿಗಳು ಕಾಲುವೆ ನಿರ್ಮಾಣಕ್ಕೆ ಮುಂದಾಗದಿದ್ದಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿರುವ ಕೆಬಿಜೆಎನ್‌ಎಲ್ ಹಾಗೂ ಎಎಲ್ಬಿಸಿ ಕಚೇರಿಗಳಿಗೆ ಕಾಯಂ ಬೀಗ ಜಡಿಯಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಅಪ್ಪುಗೌಡ ಮೈಲೇಶ್ವರ, ಶಿವರಾಜ್ ಬೂದಿಹಾಳ, ಚನ್ನವೀರಪ್ಪ ಬಿರಾದಾರ, ಸಿದ್ದು ಪಾಟೀಲ, ನೀಲಪ್ಪ ಬಿರಾದಾರ, ನಿಂಗರಾಜ ಬಿರಾದಾರ, ಹನುಮಂತ ನೆರಬೆಂಚಿ, ಅಮರೇಶ ಬಿರಾದಾರ, ಹನುಮಂತ ಪತ್ತೇಪುರ, ಮುತ್ತಣ್ಣ ಬಿರಾದಾರ, ಹುಸೇನಸಾಬ ಚಪ್ಪರಬಂದ, ನಾಗರಾಜ ಬಿರಾದಾರ, ಸಿದ್ದನಗೌಡ ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Udupi: ಗೀತಾರ್ಥ ಚಿಂತನೆ 142: “ಧೀರ’ ಯಾರು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.