ಶಾಶ್ವತ ಪರಿಹಾರಕ್ಕೆ ಸಂತ್ರಸ್ತರ ಮನವಿ
ಪ್ರವಾಹ ಪೀಡಿತ ಸ್ಥಳಗಳಿಗೆ ಸರ್ಕಾರದ ಅಧೀನ ಕಾರ್ಯದರ್ಶಿ ಭೇಟಿ
Team Udayavani, Aug 17, 2019, 3:04 PM IST
ನಿಡಗುಂದಿ: ಹೊಳೆಮಸೂತಿ ಗ್ರಾಮದ ಪ್ರವಾಹ ಪೀಡಿತ ಸಂತ್ರಸ್ತರೊಂದಿಗೆ ಡಾ| ರಮಣರೆಡ್ಡಿ ಚರ್ಚಿಸಿದರು.
ಮುದ್ದೇಬಿಹಾಳ: ನಮ್ಮ ಊರಾನ್ ಮನ್ಯಾಗ್ ಹಾವು ಚೇಳು ಬಂದಾವ್. ಊರಿನ್ ಆಚೆ ಇರಬೇಕು ಅಂದ್ರ ರಾತ್ರಿ ಮೊಸಳೆ ಕಾಟ. ನಮಗ್ ಶಾಶ್ವತ ಪರಿಹಾರ ನೀಡಿ ಪುಣ್ಯಾ ಕಟ್ಟಿಕೊಳ್ಳಿ.
ಇದು ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಗ್ರಾಮದ ಪ್ರವಾಹಕ್ಕ ಒಳಗಾದ ನಿರಾಶ್ರಿತರು ಶುಕ್ರವಾರ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ರಮಣರೆಡ್ಡಿ ಅವರಿಗೆ ಮನವಿ ಮಡಿಕೊಂಡ ಪರಿ.
ತಾಲೂಕಿನ ಸಿದ್ದಾಪುರ ಗ್ರಾಮದ ಕೆಬಿಜೆಎನ್‌ಎಲ್ ಸಂಬಂಧಿಸಿದ ಜಾಗದಲ್ಲಿ ಶೆಡ್ಡ್ ಹೊಡೆದುಕೊಂಡು ಸುಮಾರು ವರ್ಷಗಳಿಂದ ವಾಸಿಸುತ್ತಿದ್ದ 12 ಕುಟುಂಬಗಳು ಪ್ರವಾಹ ಬಂದ ದಿನದಿಂದ ಅಧಿಕಾರಿಗಳ ನಿರ್ಲಕ್ಷ್ಯ ಹಿನ್ನೆಲೆ ಕಂಗಾಲಾಗಿದ್ದು ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಅವರಿಂದ ಪ್ರವಾಹಿತರ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ನಂತರ ಸ್ಥಳಕ್ಕೆ ರಾಜ್ಯ ಸರಕಾರದ ಅಧಿಧೀನ ಕಾರ್ಯದರ್ಶಿಗಳು ಭೇಟಿ ನೀಡಿದ ವೇಳೆ ಮನವಿಯನ್ನು ಸಲ್ಲಿಸಿದರು.
ಸಿದ್ದಾಪುರ ಗ್ರಾಮದ ಪ್ರವಾಹದಿಂದ ತತ್ತರಿಸಿದ್ದ 12 ಕುಟುಂಬಸ್ಥರು ಮುದ್ದೇಬಿಹಾಳ ಪಟ್ಟಣದ ಪದವಿ ಕಾಲೇಜಿನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಆದರೆ ಶುಕ್ರವಾರ ಇದೇ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಪ್ರವಾಹ ಪೀಡಿತರು ತಮ್ಮ ಗ್ರಾಮಕ್ಕೆ ಮರಳಿ ತೆರಳುವ ನಿರ್ಧಾರ ಮಾಡಿದ್ದು ಸಿದ್ದಾಪುರ ಜನರನ್ನೂ ನಿಮಗೆ ಎಷ್ಟು ಬೇಕೊ ಅಷ್ಟು ಅಕ್ಕಿ ಧಾನ್ಯಗಳನ್ನು ನೀಡುತ್ತೇವೆ. ನೀವು ಇಲ್ಲಿಂದ ನಿಮ್ಮ ಮನೆಗಳಿಗೆ ಹೋಗಿ ಎಂದು ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದಾಪುರದ ಪ್ರವಾಹ ಪೀಡಿತರು ಸ್ಥಳೀಯ ತಹಶೀಲ್ದಾರ್‌ಗೂ ಮನವಿ ನೀಡಿ ಎಲ್ಲರಿಗೂ ಶಾಶ್ವತ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಸಂತ್ರಸ್ತರಾದ ರುಕ್ಮವ್ವ ಲೋಳಸರ, ಪಾರ್ವತೆವ್ವ ಚಿಂಚೊಡಿ, ಶರಣಮ್ಮ ಕರಿಭಾವಿ, ಯಲ್ಲಮ್ಮ ಈಳಗೇರ, ಹುಗಮ್ಮ ಗುಂತಲವರ, ಬಸಲಿಂಗಮ್ಮ ಪೂಜಾರಿ, ದವಲಬೀ ಜೂಲಗಡ್ಡಿ, ಶಂಕ್ರಮ್ಮ ವಲಿಕಾರ, ಗಿರಿಜಾ ಚಿನಿವಾಲರ, ಶಿವಕುಮಾರ ಚಿನಿವಾಲರ, ಸುಲ್ತಾನ ಜೂಲಗಡ್ಡಿ, ಯಲ್ಲಪ್ಪ ಮಾಲಿಗೌಡರ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.