ಬಿದರಕುಂದಿ ಗ್ರಾಪಂಗೆ ಗ್ರಾಮಸ್ಥರಿಂದ ಬೀಗ
ನೀರಿನ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸದ ಗ್ರಾಪಂ ಸಿಬ್ಬಂದಿ ವಿರುದ್ಧ 3ನೇ ವಾರ್ಡ್ ನಿವಾಸಿಗಳ ಆಕ್ರೋಶ
Team Udayavani, Apr 21, 2019, 1:39 PM IST
ಮುದ್ದೇಬಿಹಾಳ: ಬಿದರಕುಂದಿ ಗ್ರಾಪಂ ಕಚೇರಿಗೆ ಬೀಗ ಜಡಿದು ಧರಣಿ ನಡೆಸಿದ 3ನೇ ವಾರ್ಡ್ ನಿವಾಸಿಗಳು
ಮುದ್ದೇಬಿಹಾಳ: ನೀರಿನ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಬಿದರಕುಂದಿ ಗ್ರಾಪಂ ಕಚೇರಿಗೆ 3ನೇ ವಾರ್ಡ್ ನಿವಾಸಿಗಳು ಬೀಗ ಜಡಿದು ಶನಿವಾರ ಪ್ರತಿಭಟಿಸಿದರು.
ಬೇಕೇ ಬೇಕು ನೀರು ಬೇಕು, ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಘೋಷಣೆ ಕೂಗುತ್ತ ಧರಣಿ ಪ್ರಾರಂಭಿಸಿದ ಜನರು ಗ್ರಾಪಂ ಆಡಳಿತ, ಪಂಚಾಯತ್ ಸಿಬ್ಬಂದಿಗೆ ಧಿ ಕ್ಕಾರ ಕೂಗಿದರು. 3ನೇ ವಾರ್ಡ್ ಗ್ರಾಮದಿಂದ ಅಂದಾಜು 800 ಮೀ. ದೂರದಲ್ಲಿರುವ ವಿಜಯಪುರ ರಸ್ತೆ ಪಕ್ಕದಲ್ಲಿ ಇದೆ.
ಇದಕ್ಕೆ ಬಿದರಕುಂದಿ ಕ್ರಾಸ್ ಎಂದೇ ಕರೆಯಲಾಗುತ್ತದೆ. ಇಲ್ಲಿ ಅಂದಾಜು 200 ಮನೆಗಳಿವೆ. ಇಲ್ಲಿನ ಜನರಿಗೆ ನಲ್ಲಿ ಸಂಪರ್ಕ ಇಲ್ಲ. ಹೀಗಾಗಿ ರಸ್ತೆ ಪಕ್ಕದಲ್ಲಿರುವ ಒಂದೇ ಕಿರು ನೀರು
ಸರಬರಾಜು ಯೋಜನೆ ಅಡಿ ಸೀಮಿತ ಅವಧಿಯಲ್ಲಿ ಬಿಟ್ಟ ನೀರನ್ನು ತುಂಬಿಟ್ಟುಕೊಳ್ಳುವ ಅನಿವಾರ್ಯತೆ ಇದೆ. ಹಲವು ಬಾರಿ ಸಮಸ್ಯೆ ಪರಿಹಾರಕ್ಕೆ ಕೋರಿದ್ದರೂ ಪ್ರಯೋಜನ ಕಾಣದೆ
ಇರುವುದರಿಂದ ಆಕ್ರೋಶಗೊಂಡು ಬೀಗ ಜಡಿಯುವ ತೀರ್ಮಾನ ಕಾರ್ಯರೂಪಕ್ಕೆ ತಂದಿದ್ದರು.
ಈ ವೇಳೆ ಮಾತನಾಡಿದ ನಿವಾಸಿಗಳು, ನಸುಕಿನಲ್ಲಿ 3ಕ್ಕೆ ಎದ್ದು ನೀರು ತರುವ ದುಸ್ಥಿತಿ ಕಳೆದ 3-4 ತಿಂಗಳಿಂದಲೂ ಇದೆ. ನೀರು ಬರುವುದನ್ನು ಕಾಯುತ್ತ ರಸ್ತೆಯಲ್ಲೇ ಮಲಗಿಕೊಂಡಿದ್ದೇವೆ.
ಹಲವು ಬಾರಿ ಪಿಡಿಒ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದರೂ ಸ್ಪಂ ದಿಸುತ್ತಿಲ್ಲ. ಗ್ರಾಪಂ ಆಡಳಿತದ ನಿರ್ಲಕ್ಷ್ಯ
ಧೋರಣೆಯೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಕ್ಕೆ ಬಸರಕೋಡ ಬಹುಹಳ್ಳಿ ಕುಡಿವ ನೀರಿನ ಸಂಪರ್ಕ ಇದೆ. ಆದರೆ ಕ್ರಾಸ್‌ನಲ್ಲಿರುವ ಜನರಿಗೆ ಇದರ ಪ್ರಯೋಜನ ದೊರಕಿಸಿ ಕೊಟ್ಟಿಲ್ಲ. ಕ್ರಾಸ್‌ನಲ್ಲಿರುವ ಜನತೆಗೆ ಪೈಪ್‌ಲೈನ್ ಮೂಲಕ ನಲ್ಲಿ ನೀರು ಕೊಡಲು ಯೋಜನೆ ರೂಪಿಸಿದ್ದರೂ ಇನ್ನೂ
ಕಾರ್ಯರೂಪಕ್ಕೆ ತಂದಿಲ್ಲ. ಹೀಗಾಗಿ ಇರುವ ಒಂದೇ ಟ್ಯಾಂಕ್‌ಗೆ ನಿತ್ಯ ನೂರಾರು ಜನ ಮುಗಿಬಿದ್ದು ನೀರು
ತರುವ ಪರಿಸ್ಥಿತಿ ಇದೆ ಎಂದು ಪರಿಸ್ಥಿತಿ ವಿವರಿಸಿದರು.
ಗ್ರಾಮೀಣ ನೀರು ಸರಬರಾಜು ಇಲಾಖೆಯು ಕುಡಿವ ನೀರಿನ ಸಮಸ್ಯೆ ಪರಿಹಾರದ ಹೊಣೆ ಹೊಂದಿದೆ.
ಇವರಿಗೆ ಪಂಚಾಯತ್‌ನವರು ಸಹಕಾರ ನೀಡಬೇಕು. ಆದರೆ ಇಲ್ಲಿ ಸಹಕಾರ ಇಲ್ಲದಿರುವುದು ಮತ್ತು ಇಲಾಖೆಯ ಎಂಜಿನಿಯರ್ ಜೆ.ಪಿ. ಶೆಟ್ಟಿ ಅವರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸದಿರುವುದು ಸಮಸ್ಯೆ
ಗಂಭೀರಗೊಳ್ಳಲು ಕಾರಣವಾಗಿದೆ ಎಂದು ಜನರು ದೂರಿದರು.
ತಾಪಂ ಇಒಗೆ ಘೇರಾವ್: ಪಂಚಾಯತ್‌ಗೆ ಬೀಗ ಹಾಕಿ ಪ್ರತಿಭಟಿಸುತ್ತಿರುವ ವಿಷಯ ತಿಳಿದ ತಾಪಂ ಪ್ರಭಾರ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ ಸ್ಥಳಕ್ಕೆ ಆಗಮಿಸಿದರು. ಆಕ್ರೋಶಗೊಂಡಿದ್ದ ಜನರು ಅವರಿಗೆ ಘೇರಾವ್
ಹಾಕಿದಾಗ ವಾಗ್ವಾದ ನಡೆಯಿತು.
ಕ್ರಾಸ್‌ನಲ್ಲಿರುವ ಜನರಿಗೆ ನೀರಿನ ವ್ಯವಸ್ಥೆ ಮಾಡುವವರೆಗೂ ಧರಣಿ ಕೈ ಬಿಡುವುದಿಲ್ಲ, ಕಚೇರಿಗೆ ಹಾಕಿದ ಬೀಗವನ್ನೂ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಹೇಗೋ ಹರಸಾಹಸಪಟ್ಟು ಜನರ ಮನವೊಲಿಸುವಲ್ಲಿ ಯಶಸ್ವಿಯಾದ ದೇಸಾಯಿ ಅವರು ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ
ಶಾಶ್ವತ ಪರಿಹಾರ ಕಲ್ಪಿಸುವ ಮತ್ತು ಅಲ್ಲಿವರೆಗೂ ನೀರು ಪೂರೈಸಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿ ಧರಣಿ ಅಂತ್ಯಗೊಳಿಸುವಂತೆ ಜನತೆಗೆ ಮನವಿ ಮಾಡಿದರು.
ಪಿಡಿಒ ಆನಂದ ಹಿರೇಮಠ, 3ನೇ ವಾರ್ಡ್ ಪ್ರತಿನಿ ಧಿಸುವ ಗ್ರಾಪಂ ಸದಸ್ಯ ಸಂಗಣ್ಣ ಚಲವಾದಿ, ನಿವಾಸಿಗಳಾದ ಮಹಾಂತೇಶ ಹನುಮಸಾಗರ, ರುದ್ರೇಶ ಚಿನಿವಾರ, ಮಾಳಪ್ಪ ಬಾಗೇವಾಡಿ, ರಫೀಕ್ ಢವಳಗಿ, ಮಲ್ಲನಗೌಡ ಪಾಟೀಲ, ಶಿವು ಚಿನಿವಾರ, ಅಕ್ಬರ್ ಗುರಿಕಾರ, ರಿಜ್ವಾನ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.