ಸ್ವಚ್ಛತೆಗೆ ವಿನೂತನ ಯೋಜನೆ ಜಾರಿ

ಮನೆ-ಮನೆಗೆ ತೆರಳಿ ಪೌರ ಕಾರ್ಮಿಕರಿಂದ ಕಸ ಸಂಗ್ರಹ ಸ್ವತ್ಛ ಪರಿಸರ ನಿರ್ಮಾಣಕ್ಕೆ ಪುರಸಭೆ ಕಟಿಬದ್ಧ

Team Udayavani, Dec 9, 2019, 4:20 PM IST

December-17

ಡಿ.ಬಿ. ವಡವಡಗಿ
ಮುದ್ದೇಬಿಹಾಳ:
ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲಿ ಬಿಸಾಡಿ ಪರಿಸರ ಮಲೀನಗೊಳಿಸುವ ಪದ್ಧತಿಗೆ ಕಡಿವಾಣ ಬೀಳಬೇಕು. ಊರು ಸ್ವಚ್ಛವಾಗಿ, ಆರೋಗ್ಯಕರವಾಗಿ ಇರಬೇಕಾದರೆ ಉತ್ಪತ್ತಿಯಾಗುವ ಕಸವನ್ನು ಸುರಕ್ಷಿತವಾಗಿ, ಸುರಕ್ಷಿತ ಸ್ಥಳಕ್ಕೆ ವಿಲೇವಾರಿ ಮಾಡುವ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಬೇಕು. ಮನೆ ಮನೆಗೆ ತೆರಳಿ ಜನಪ್ರೀಯ ಹಾಡುಗಳ ಮೂಲಕ ಜನರ ಸೆಳೆದು ಕಸ ಸಂಗ್ರಹಿಸುವ ಪರಿಣಾಮಕಾರಿ ಯೋಜನೆ ಮುದ್ದೇಬಿಹಾಳ ಪಟ್ಟಣದಲ್ಲಿ ಯಶಸ್ಸಿನತ್ತ ದಾಪುಗಾಲು ಹಾಕುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಹೇಗಿದೆ ವಿಲೇವಾರಿ ವ್ಯವಸ್ಥೆ?: ಪಟ್ಟಣದ 23 ವಾರ್ಡ್ ನಲ್ಲಿ ಅಂದಾಜು 10,000 ಕುಟುಂಬ, 40,000 ಆಸುಪಾಸು ಜನವಸತಿ ಇದ್ದು ನಿತ್ಯ ಅಂದಾಜು 25-30 ಸಾವಿರ ಜನ ಬಂದು ಹೋಗುತ್ತಾರೆ. ನಿತ್ಯ ಅಂದಾಜು 10 ಟನ್‌ ಕಸ ಉತ್ಪತ್ತಿ ಆಗುತ್ತದೆ. ಇದನ್ನು ಮನೆ ಕಸ, ಅಂಗಡಿ ಕಸ, ಬೀದಿ ಕಸ ಎಂದು ವಿಂಗಡಿಸಿ ವಿಲೇವಾರಿ, ಸ್ವತ್ಛತಾ ಕಾರ್ಯಕ್ಕೆ ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಕಸವನ್ನು ಸರೂರ ಬಳಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲು 2 ಟ್ರ್ಯಾಕ್ಟರ್‌, 4 ಟಾಟಾ ಏಸ್‌ ಮಿನಿ ವಾಹನ, ಒಂದು ಟ್ರಕ್‌, ಅಗತ್ಯವಿದ್ದಲ್ಲಿ ಜೆಸಿಬಿ ಬಳಕೆ, ಶೌಚಾಲಯ ತ್ಯಾಜ್ಯ ವಿಲೇವಾರಿಗೆ ಒಂದು ಸಕ್ಕಿಂಗ್‌ ಮತ್ತು ಜಟ್ಟಿಂಗ್‌ ಯಂತ್ರ, ಸೊಳ್ಳೆ ನಿವಾರಣೆಗೆ ಒಂದು ಫಾಗಿಂಗ್‌ ಯಂತ್ರ ಇರುವ ಆಟೋ ಸೌಲಭ್ಯ ಒದಗಿಸಲಾಗಿದೆ.

ಹೆಚ್ಚುತ್ತಿರುವ ಜನಸಂಖ್ಯೆ, ವಿಸ್ತಾರಕ್ಕೆ ಈ ಸೌಲಭ್ಯ ಕಡಿಮೆ ಎನ್ನಿಸಿದ್ದು ಹೆಚ್ಚುವರಿ ವಾಹನ, ಯಂತ್ರ ಖರೀದಿಯತ್ತ, ಪೌರ ಕಾರ್ಮಿಕರ ನೇಮಕಕ್ಕೆ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ರಚನೆಗೆ ಕಾಯಲಾಗುತ್ತಿದೆ. ಓರ್ವ ಚಾಲಕ ಸೇರಿ 30 ಕಾಯಂ, ಕ್ಷೇಮಾಭಿವೃದ್ಧಿಯ 4, ಹೊರಗುತ್ತಿಗೆಯ 25 ಸೇರಿ ಒಟ್ಟು 58 ಪೌರ ಕಾರ್ಮಿಕರು ಕಸ ಸಂಗ್ರಹ, ಸ್ವಚ್ಛತೆ ಕಾರ್ಯ ನಡೆಸುತ್ತಿದ್ದಾರೆ. ಇವರ ಸಂಖ್ಯೆ ಇನ್ನೂ ಹೆಚ್ಚಬೇಕು ಎನ್ನುವ ಬೇಡಿಕೆ ಇದೆ.

ಜನಾಕರ್ಷಕ ಹಾಡುಗಳು: ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ 4 ಮಿನಿ ವಾಹನಗಳಿಗೆ ಧ್ವನಿವರ್ಧಕ ಅಳವಡಿಸಿ 2-3 ನಿಮಿಷ ಅವಧಿಯ ಜಾನಪದ, ಚಲನಚಿತ್ರಗಳ ಜನಪ್ರಿಯ ಹಾಡುಗಳ ಸಾಹಿತ್ಯ ಪರಿವರ್ತಿಸಿ ಕಸ ಸಂಗ್ರಹಣೆಗೆ ಬಳಸಿಕೊಳ್ಳಲಾಗುತ್ತಿದೆ. ಬೆಳಗ್ಗೆ ಒಂದು ಸಾರಿ ಬಡಾವಣೆಯ ರಸ್ತೆಯಲ್ಲಿ ಬಂದು ಹೋಗುವ ಈ ವಾಹನದಿಂದ ಜನಪ್ರೀಯ ಹಾಡುಗಳು ಜೋರಾಗಿ ಬರುತ್ತಿರುವುದನ್ನು ಆಲಿಸಿ ಕೆಲಸದಲ್ಲಿ ತಲ್ಲಿನರಾಗಿರುವ ಮಹಿಳೆಯರು, ಪುರುಷರು ಕಸದ ವಾಹನ ಬಂತು ಎಂದು ಧಾವಿಸಿ ಮನೆಯಿಂದ ಹೊರಗೆ ಬಂದು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಒಣ ಕಸ, ಹಸಿ ಕಸ ಬೇರ್ಪಡಿಸಿ ವಾಹನದಲ್ಲಿನ ಪೌರ ಕಾರ್ಮಿಕರಿಗೆ ಹಸ್ತಾಂತರಿಸುತ್ತಾರೆ. ಇದರಿಂದ ಮನೆಗಳ ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಕುವ ಪದ್ಧತಿಗೆ ಕಡಿವಾಣ ಬಿದ್ದಂತಾಗಿದೆ.

ಹಿಂದಿನ ಪದ್ಧತಿ ಬಂದ್‌: ಕೆಲ ವರ್ಷಗಳ ಹಿಂದೆ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ಸ್ಥಳೀಯ ಸ್ವಸಹಾಯ ಗುಂಪುಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಅವರು ಮನೆ ಮನೆಯಿಂದ ಶುಲ್ಕ ಸಂಗ್ರಹಿಸಿ ಕಸ ವಿಲೇವಾರಿ ಮಾಡುತ್ತಿದ್ದರು. ಕಾಲಾಂತರದಲ್ಲಿ ಇದಕ್ಕೆ ಪ್ರೋತ್ಸಾಹ ದೊರಕಲಿಲ್ಲ. ಹೀಗಾಗಿ ಆ ವ್ಯವಸ್ಥೆ ಬಂದ್‌ ಆಯಿತು. ಈಗ ಪೌರ ಕಾರ್ಮಿಕರೇ ಕಸ ಸಂಗ್ರಹಿ ವಿಲೇವಾರಿ ಮಾಡುತ್ತಿದ್ದಾರೆ. ಇದಕ್ಕೆ ತಗಲುವ ಶುಲ್ಕವನ್ನು ವಾರ್ಷಿಕ ತೆರಿಗೆಯಲ್ಲೇ ಸಾರ್ವಜನಿಕರಿಂದ ವಸೂಲಿ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಒಟ್ಟಾರೆ ಹೇಳುವುದಾದರೆ ಜನ ಜಾಗೃತರಾಗಿ ಕಸವನ್ನು ತಮ್ಮ ಮನೆಯಲ್ಲಿ ವಿಂಗಡಿಸಿ ಕಸ ಸಂಗ್ರಹಿಸುವ ವಾಹನಗಳಿಗೆ ಪೂರೈಸಿದಲ್ಲಿ ತಮ್ಮ ಸುತ್ತಲಿನ ಪರಿಸರವನ್ನಾದರೂ ಸ್ವತ್ಛವಾಗಿರಿಸಿಕೊಳ್ಳುವುದು ಸಾಧ್ಯವಾಗುತ್ತದೆ.

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

15-

Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.