ಸಮಾಜ ಸೇವೆಯಲ್ಲಿ ತೊಡಗಿ
75 ವರ್ಷದ ನಿವೃತ್ತ ನೌಕರರಿಗೆ ಸನ್ಮಾನ ಕಿರಿಯರಿಗೆ ಮಾರ್ಗದರ್ಶನ ಮಾಡಿ
Team Udayavani, Jan 5, 2020, 5:13 PM IST
ಮುದ್ದೇಬಿಹಾಳ: ಇಂದಿನ ಕಲುಷಿತ ಪರಿಸರದಲ್ಲಿ 75 ವರ್ಷ ಬದುಕುವುದು ಪುಣ್ಯದ ಫಲ. ನೌಕರಿ ಮಾಡುವವರಿಗೆ ಸೇವಾ ನಿವೃತ್ತಿ ಎನ್ನುವುದು ಕಡ್ಡಾಯವಾದರೂ ನಿವೃತ್ತಿ ನಂತರವೂ ನೆಮ್ಮದಿ ಬದುಕು ನಡೆಸುವುದು ಸವಾಲೇ ಸರಿ. ಇಂಥ ಸವಾಲು ಎದುರಿಸಿ 75 ವರ್ಷ ಪೂರೈಸಿದವರು ಸಮಾಜಕ್ಕೆ ಮಾದರಿ ಆಗುತ್ತಾರೆ ಎಂದು ಹಿರಿಯ ಸಾಹಿತಿ ಪ್ರೊ| ಬಿ.ಎಂ. ಹಿರೇಮಠ ಹೇಳಿದ್ದಾರೆ.
ಇಲ್ಲಿನ ಕೆಬಿಎಂಪಿ ಶಾಲೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮುದ್ದೇಬಿಹಾಳ ತಾಲೂಕು ಘಟಕ ವತಿಯಿಂದ ಶನಿವಾರ ಏರ್ಪಡಿಸಿದ್ದ 75 ವಸಂತ ಕಂಡ ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನಿವೃತ್ತರ ಜೀವನ ಮುದುಡುತ್ತದೆ. ವೇದನೆ ಹೇಳಿಕೊಳ್ಳಲಾಗೊಲ್ಲ. ಹೆಣ್ಣಿಂದ ಬಂದದ್ದು ಒಂದು ವೈರಿ ಆದರೆ ಮಕ್ಕಳಿಂದ ಬಂದದ್ದು ಇನ್ನೊಂದು ವೈರಿ ಎನ್ನುವಂತೆ ಅವರ ಬದುಕು ಇರುತ್ತದೆ. ಉರಿ ಬಿಸಿಲಲ್ಲಿ ತಲೆ ಮೇಲೆ ಕೆಂಡ ಹಾಕೋ ಮಕ್ಕಳು ಇರುವ ಈ ದಿನಗಳಲ್ಲಿ ವಯೋವೃದ್ಧರು ಅನೇಕರಿಗೆ ಬೇಡದವರಾಗಿದ್ದಾರೆ. ಇಂಥವರ ಸ್ವಾವಲಂಬಿ ಬದುಕಿಗೆಂದೇ ಸರ್ಕಾರ ನಿವೃತ್ತಿ ನಂತರ ಪೆನ್ಶನ್ ಕೊಟ್ಟು ಉತ್ತಮ ಕೆಲಸ ಮಾಡಿದೆ. ವಯೋವೃದ್ಧರು ಆರೋಗ್ಯ ರಕ್ಷಣೆಗೆ ಹೆಚ್ಚು ಮಹತ್ವ ಕೊಡಬೇಕು. ದುಷcಟಗಳಿಗೆ
ಬಲಿಯಾಗಬಾರದು. ಬಿಡುವಿನ ಸಮಯವನ್ನು ಸಮಾಜ ಸೇವೆಗೆ ಬಳಸಿಕೊಳ್ಳಬೇಕು. ಕಿರಿಯರಿಗೆ ಮಾರ್ಗದರ್ಶನ ನೀಡುತ್ತ ಕಾಲ ಕಳೆಯಬೇಕು ಎಂದು ಕಿವಿಮಾತು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ ಮಾತನಾಡಿ, ನಿವೃತ್ತಿ ಆದ ಮೇಲೆ ಜೀವನ ಮುಗಿತು ಎಂದು ಕೊರಗದೆ ನಿವೃತ್ತಿ ನಂತರದ ಜೀವನವನ್ನು ಸಾರ್ಥಕಗೊಳಿಸುವಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ನಿವೃತ್ತ ನೌಕರರು ಒಂದೆಡೆ ಸೇರಿ ಚಟುವಟಿಕೆ ನಡೆಸಲು ಅಗತ್ಯ ಇರುವ ಭವನವೊಂದನ್ನು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.
ಕಾರ್ಯಕ್ರಮವನ್ನು ಬಿಜೆಪಿ ಧುರೀಣ ಸೋಮನಗೌಡ ಪಾಟೀಲ ನಡಹಳ್ಳಿ ಉದ್ಘಾಟಿಸಿದರು. ಅತಿಥಿಯಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಿ. ನಾವದಗಿ, ಸಂಘದ ಜಿಲ್ಲಾ ಕಾರ್ಯದರ್ಶಿ ಪಿ.ಜಿ. ಬಿರಾದಾರ, ಪಿಎಚ್‌ಡಿ ಸಾಧನೆಗೆ ವಿಶೇಷವಾಗಿ ಸನ್ಮಾನಿತರಾದ ಇಳಕಲ್ಲ ಡೈಟ್ ಉಪನ್ಯಾಸಕ ಡಾ| ಎಂ.ಎಂ.ಬೆಳಗಲ್ಲ, ನಾಲತವಾಡ ಎಸ್‌ವಿವಿ ಕಾಲೇಜು ಉಪನ್ಯಾಸಕ ಡಾ| ಆರ್.ಸಿ. ಗೂಳಿ, 75 ವಸಂತ ಕಂಡ ಸನ್ಮಾನಿತರ ಪರವಾಗಿ ಸಾಬಣ್ಣ ಹೂಗಾರ, ಬಿ.ಎಸ್. ಕಣಕಾಲಮಠ, ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಎಸ್.ಪಿ. ಬಿರಾದಾರ ಕಡ್ಲೇವಾಡ ಮಾತನಾಡಿದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ಎಸ್.ಆರ್. ಕುಂಬಾರ, ಸಂಘದ ಗೌರವಾಧ್ಯಕ್ಷ ಎಂ.ಜಿ.ಮೋಟಗಿ ಮತ್ತಿತರರು ವೇದಿಕೆಯಲ್ಲಿದ್ದರು.
ಡಿ.ಬಿ.ಬೇಲಾಳ ಪ್ರಾರ್ಥಿಸಿದರು. ಸಂಗಮೇಶ ಶಿವಣಗಿ ಸಂಗಡಿಗರು ನಾಡಗೀತೆ ಹಾಡಿ ಸಂಗೀತ ಸೇವೆ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎ.ಬಿ.ಮಳಗೌಡರ ಸ್ವಾಗತಿಸಿದರು. ವೈ.ವನಹಳ್ಳಿ ಅತಿಥಿ ಪರಿಚಯ ಮಾಡಿಕೊಟ್ಟರು. ಎಸ್.ಬಿ.ಬಂಗಾರಿ ಪ್ರಾಸ್ತಾವಿಕ ಮಾತನಾಡಿದರು. ಬಿ.ಎಂ.ಪಲ್ಲೇದ ವರದಿ ವಾಚಿಸಿದರು. ಬಿ.ಪಿ.ಪಾಟೀಲ ನಿರೂಪಿಸಿದರು. ಬಿ.ವೈ.ಲಿಂಗದಳ್ಳಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.