ಹೊಸ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ
ಸಂಚಾರಕ್ಕೆ ಮುಕ್ತವಾದ ರಸ್ತೆ-ಫುಟ್‌ಪಾತ್‌ನೋಟಿಸ್‌ಗೆ ಸ್ಪಂದಿಸದಿದಲ್ಲಿ ಅಂಗಡಿ ಸೀಜ್
Team Udayavani, Nov 20, 2019, 1:43 PM IST
ಮುದ್ದೇಬಿಹಾಳ: ಪುರಸಭೆ ಮತ್ತು ಪೊಲೀಸರು ಬಸವೇಶ್ವರ ವೃತ್ತ, ಹಳೇ ತಹಶೀಲ್ದಾರ್ ಕಚೇರಿ ಆವರಣದಲ್ಲಿನ ಸೈನಿಕ ಮೈದಾನದಲ್ಲಿ ನಡೆಸುತ್ತಿದ್ದ ಬೀದಿ ಬದಿ ತರಕಾರಿ ಮಾರಾಟವನ್ನು ಇಂದಿರಾ ವೃತ್ತದ ಬಳಿ ಇರುವ ಹೊಸ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ. ಇದರಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿನ ಪ್ರಮುಖ ರಸ್ತೆ, ಫುಟ್‌ಪಾತ್‌ಗಳು ಜನ ಸಂಚಾರಕ್ಕೆ ಮುಕ್ತವಾಗಿವೆ.
ಇದೀಗ ಹೊಸ ಮಾರುಕಟ್ಟೆಯಲ್ಲಿಯೇ ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಿದ್ದಾರೆ. ಈ ಮಧ್ಯೆ ಅಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮತ್ತು ವ್ಯಾಪಾರಸ್ಥರು ಸಾಲಾಗಿ ಕುಳಿತು ವ್ಯಾಪಾರ ನಡೆಸಲು ಅನುವಾಗುವಂತೆ ಸುಣ್ಣದ ಲೈನ್ ನಿಂದ ಗುರುತಿಸಿ ಸ್ಥಳ ನಿಗದಿಪಡಿಸಲಾಗಿದೆ.
ಪಟ್ಟಣದಲ್ಲಿ ಗುರುವಾರ ದೊಡ್ಡ ಸಂತೆ, ಸೋಮವಾರ ಸಣ್ಣ ಸಂತೆ ನಡೆಯುತ್ತವೆ. ಇವೆರಡೂ ದಿನಗಳ ಮಧ್ಯೆ ಬರುವ ಎಲ್ಲ ದಿನಗಳಂದು ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಯುತ್ತಿರಲಿಲ್ಲ. ಇದೀಗ ವಾರದ ಏಳು ದಿನವೂ ಹೊಸ ಮಾರುಕಟ್ಟೆಯಲ್ಲೇ ವ್ಯಾಪಾರ ನಡೆಸಲು ಪುರಸಭೆ ಮುಂದಾಗಿದೆ. ಆದರೂ ಮಾರುಕಟ್ಟೆ ಪ್ರದೇಶ ಸಂಗಮೇಶ್ವರ ನಗರ, ಗಣೇಶ ನಗರ, ಪಿಲೇಕೆಮ್ಮ ನಗರ, ಬಸವ ನಗರ, ಮಹಾಂತೇಶ ನಗರ, ವಿದ್ಯಾ ನಗರ, ಮಾರುತಿ ನಗರ ಸೇರಿ ಹಲವು ಬಡಾವಣೆಗಳ ಜನರಿಗೆ ದೂರವಾಗುತ್ತಿದ್ದು, ಹೊಸ ಸಮಸ್ಯೆಗೆ ಕಾರಣವಾಗಿದೆ.
ಈ ಮಧ್ಯೆ ಹೊಸ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ವ್ಯಾಪಾರಸ್ಥರು ಕೇಳಿಕೊಂಡಿದ್ದಕ್ಕೆ ಪ್ರತಿಕ್ರಿಯೆ ದೊರಕಿದ್ದು ಪುರಸಭೆ ಮುಖ್ಯಾಧಿಕಾರಿ ಭಾರತಿ ಮಾಡಗಿ ನೇತೃತ್ವದಲ್ಲಿ ಸಿದ್ಧತೆಗಳು ವೇಗ ಪಡೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.