ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ
ಪರಿಹಾರ ಕೇಂದ್ರದಲ್ಲಿ ತಲೆ ಮೇಲೆ ಕೈಹೊತ್ತು ಕುಳಿತವರಿಗೆ ನಾಡಿನ ಜನರ ಮಾನವೀಯ ಸ್ಪಂದನೆ
Team Udayavani, Aug 14, 2019, 12:14 PM IST
ಮೂಡಿಗೆರೆ: ಪಟ್ಟಣಕ್ಕೆ ನೆರೆ ಸಂತ್ರಸ್ತರಿಗಾಗಿ ರಾಜ್ಯದ ವಿವಿಧೆಡೆಗಳಿಂದ ಬಂದ ಸರಕು ಸಾಮಗ್ರಿಗಳನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ವೀಕರಿಸಿದರು.
ಮೂಡಿಗೆರೆ: ಕಳೆದ ಹತ್ತು ದಿನಗಳಿಂದ ತಾಲೂಕಿನಾದ್ಯಂತ ಸುರಿದ ಮಹಾಮಳೆಗೆ ಮನೆ, ತೋಟ, ಜಾನುವಾರು ಒಳಗೊಂಡಂತೆ ಸರ್ವಸ್ವವನ್ನೂ ಕಳೆದುಕೊಂಡು ಪುನರ್ವಸತಿ ಕೇಂದ್ರಗಳಲ್ಲಿ ತಲೆ ಮೇಲೆ ಕೈಹೊತ್ತು ಕುಳಿತ ಸಂತ್ರಸ್ತರಿಗೆ ನಾಡಿನ ನಾನಾ ಭಾಗಗಳಿಂದ ನೆರವಿನ ಮಹಾಪೂರವೇ ಹರಿಸುಬರುತ್ತಿದೆ.
ತಾಲೂಕಿನ ಜಾವಳಿ, ಆಲೆಖಾನ್ ಹೊರಟ್ಟಿ, ಮಧುಗುಂಡಿ, ದುರ್ಗದಹಳ್ಳಿ, ಮಲೆಮನೆ, ಚೆನ್ನಹಡ್ಲು ಸೇರಿದಂತೆ ಅನೇಕ ಗ್ರಾಮಗಳ ಜನರು ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಪುನರ್ವಸತಿ ಕೇಂದ್ರಗಳಲ್ಲಿ ಕಂಗಾಲಾಗಿ ಕುಳಿತಿದ್ದಾರೆ.
ಕಳೆದ ಎರಡು ದಿನಗಳಿಂದ ವರುಣನ ರೌದ್ರಾವತಾ ಸ್ವಲ್ಪಮಟ್ಟಿಗೆ ಶಮನಗೊಂಡಿದ್ದು, ಎಲ್ಲರೂ ಈಗ ಆಗಿರುವ ದುರಂತ ಮರುಕಳಿಸದಂತೆ ದೇವರಲ್ಲಿ ಮೊರೆಯಿಡುತ್ತಿದ್ದಾರೆ. ವರುಣನ ಆರ್ಭಟಕ್ಕೆ ರೈತರು ಮತ್ತು ಕಾರ್ಮಿಕರು ಸೇರಿದಂತೆ ಎಲ್ಲರೂ ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಅನಾಥರಾಗಿದ್ದಾರೆ.
ಮನೆ-ಮಠಗಳನ್ನು ಕಳೆದುಕೊಂಡ ಮತ್ತು ತಮ್ಮ ವಾಸಸ್ಥಳಕ್ಕೆ ಸದ್ಯಕ್ಕೆ ಹೋಗಲಾರದೇ ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರ ದೈನಂದಿನ ಅಗತ್ಯಗಳಿಗಾಗಿ ಈಗಾಗಲೇ ರಾಜ್ಯದ ನಾನಾ ಭಾಗಗಳಿಂದ ತಾತ್ಕಾಲಿಕವಾಗಿ ಆಹಾರ, ಬಟ್ಟೆಗಳು, ನೀರು, ಬಿಸ್ಕತ್ ಪ್ಯಾಕ್, ಚಪ್ಪಲಿಗಳು, ಚಾಪೆ, ಬೆಡ್‌ಶೀಟ್, ಟೂತ್‌ಬ್ರಷ್, ಪೇಸ್ಟ್, ಔಷಧ ಮೊದಲಾದ ಎಲ್ಲಾ ಅಗತ್ಯ ಸಾಮಗ್ರಿಗಳು ಭರಪೂರಾಗಿ ಮೂಡಿಗೆರೆ ಕೇಂದ್ರಕ್ಕೆ ಕ್ಯಾಂಟರ್ ಮತ್ತು ಟೆಂಪೋಗಳಲ್ಲಿ ಹರಿದುಬರುತ್ತಿವೆ.
ಈ ಸಾಮಗ್ರಿಗಳ ವಿಲೇವಾರಿಯ ಉಸ್ತುವಾರಿಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿವಿಧ ಕ್ಷೇತ್ರಗಳ ಕಾರ್ಯುಕರ್ತರು ತಾಲೂಕಿನಾದ್ಯಂತವಿರುವ 6 ಪುನರ್ವಸತಿ ಕೇಂದ್ರಗಳಿಗೆ ಬೇಡಿಕೆಗೆ ಅನುಸಾರವಾಗಿ ವ್ಯವಸ್ಥಿತ ರೀತಿಯಲ್ಲಿ ವಿತರಣೆ ಮಾಡುತ್ತಿದ್ದಾರೆ.
ಸಂತ್ರಸ್ತರಿಗೆ ಸಹಕರಿಸಿದ ಎಲ್ಲರಿಗೂ ಶಾಸಕ ಎಂ.ಪಿ.ಕುಮಾರಸ್ವಾಮಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.