ಕಾಮಗಾರಿ ಅವ್ಯವಹಾರ ತನಿಖೆಗೆ ನಿರ್ಧಾರ
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಭೆಯಲ್ಲಿ ಅಧ್ಯಕ್ಷೆ ಭಾರತಿ ಸ್ಪಷ್ಟನೆ
Team Udayavani, Sep 19, 2019, 6:41 PM IST
ಮೂಡಿಗೆರೆ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷೆ ಕೆ.ಪಿ.ಭಾರತಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮೂಡಿಗೆರೆ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಊಟದ ಹಾಲ್ ಮೇಲ್ಭಾಗದ ಕಟ್ಟಡ ನಿರ್ಮಾಣ ಮತ್ತು ರೈತ ಭವನದ ಅನೇಕ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿವೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಸಮಗ್ರ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷೆ ಕೆ.ಪಿ.ಭಾರತಿ ಹೇಳಿದರು.
ಬುಧವಾರ ರೈತ ಭವನದಲ್ಲಿ ನಡೆದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷೆ ವಹಿಸಿ ಅವರು ಕೆ.ಪಿ.ಭಾರತಿ ಮಾತನಾಡಿದರು.
ಸಂಸ್ಥೆ ಮುಂಭಾಗದಲ್ಲಿ ಇಂಟರ್ಲಾಕ್ ಅಳವಡಿಕೆ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಿದ್ದರಿಂದ ಸಂಸ್ಥೆಗೆ ಶೇ.5ರಷ್ಟು ನಷ್ಟ ಉಂಟಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ನಿರ್ಮಿತಿ ಕೇಂದ್ರಕ್ಕೆ ಕೆಲಸ ನೀಡಬಾರದು. ಸಂಸ್ಥೆಯಿಂದಲೇ ನಿರ್ಮಾಣ ಮಾಡಬೇಕು. ಆಗಿರುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರು ಕೇಳಿಬಂದಿದ್ದರಿಂದ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಂಘಕ್ಕೆ ಈ ವರ್ಷ 19 ಲಕ್ಷ ರೂ. ನಿವ್ವಳ ಲಾಭ ಬಂದಿದ್ದು, ರೈತ ಭವನದ ಬಾಡಿಗೆ ಬೇರೆ ಎಲ್ಲಾ ಕಡೆಗಳಿಗಿಂತ ಕಡಿಮೆ ಇದೆ. ಈ ಕಾರಣದಿಂದ ಆದಾಯದಲ್ಲಿ 5ಲಕ್ಷ ರೂ. ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ರೈತ ಭವನವನ್ನು ಉಚಿತವಾಗಿ ನೀಡಬಾರದೆಂದು ನಿರ್ಣಯಿಸಲಾಗಿದೆ ಎಂದರು.
ಜನರೇಟರ್ ಸ್ವಯಂ ಚಾಲನೆಗೊಳ್ಳಲು 70 ಸಾವಿರ ರೂ. ಮತ್ತು ಸಸ್ಯಾಹಾರ ಊಟ ಮಾಡುವವರಿಗೆ ಸುಮಾರು 3ಲಕ್ಷ ರೂ. ವೆಚ್ಚದಲ್ಲಿ ಕುರ್ಚಿ ಮತ್ತು ಟೇಬಲ್ಗಳನ್ನು ಖರೀದಿಸಲಾಗಿದೆ. ಸಂಘದ ಮಳಿಗೆ ಸೋರುತ್ತಿದ್ದ ಕಾರಣ ಮೇಲ್ಚಾವಣಿ ನಿರ್ಮಿಸಿ 5 ಹೊಸ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಂಘದ ವಾರ್ಷಿಕ ವ್ಯವಹಾರ, ಸಾಲ ವಿತರಣೆ, ಕಾಮಗಾರಿಗಳ ಆಯವ್ಯಯ, ಅಂದಾಜು ಪಟ್ಟಿಗಳ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು.
ಈ ಹಿಂದೆ ಚುನಾವಣೆ ನೀತಿ ಸಂಹಿತೆ ಸಂದರ್ಭದಲ್ಲಿ 523 ಹೊಸಬರಿಗೆ ಸಂಘದ ಸದಸ್ಯತ್ವ ನೀಡಲಾಗಿದ್ದು, ಇದು ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರುವ ದೃಷ್ಟಿಯಿಂದ ವಿರೋಧ ಉಂಟಾಗಿತ್ತು. ಆದರೂ, ಸದಸ್ಯತ್ವ ನೋಂದಣಿಯಾಗಿದೆ. ಆದರೆ, ಮತದಾನದ ಹಕ್ಕನ್ನು ನಿರ್ಣಯಿಸುವ ಹಕ್ಕನ್ನು ಸಹಕಾರ ನಿಬಂಧಕರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಿ.ಇ.ಜಗನ್ನಾಥ್, ನಿರ್ದೇಶಕರಾದ ರಶ್ಮಿ ಸುಧೀರ್ ತಳವಾರ, ದಿನೇಶ್ ದೇವವೃಂದ, ವಿ.ಕೆ.ಶಿವೇಗೌಡ, ಗಜೇಂದ್ರ ತರುವೆ, ಎಂ.ವಿ.ಜಗದಿಧೀಶ್, ಎಂ.ಎನ್.ಅಶ್ವತ್ಥ್, ಕಸ್ತೂರಿ ಭೈರಪ್ಪಗೌಡ, ಎಸ್.ಎ.ವಿಜಯೇಂದ್ರ, ಒ.ಜಿ.ರವಿ, ಸಂಪತ್ ಮುಗ್ರಳ್ಳಿ, ಕೆ.ಎಂ.ರಾಜೇಂದ್ರ, ಎಚ್.ಕೆ.ದಯಾನಂದ್, ಕೇಶವ್ ಬಿಳುಗುಳ, ವ್ಯವಸ್ಥಾಪಕ ನಿರ್ದೇಶಕ ರಾಮಕೃಷ್ಣ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.