ಮಕ್ಕಳಿಗಿನ್ನೂ ಇಲ್ಲ ಶೂ-ಸಾಕ್ಸ್ ಭಾಗ್ಯ
ಶಾಲೆಗಳ ಎಸ್ಡಿಎಂಸಿ-ಮುಖ್ಯ ಶಿಕ್ಷಕರ ಜಂಟಿ ಖಾತೆಗೆ ಅನುದಾನ ಬಿಡುಗಡೆಯಾದರೂ ಶೂ-ಸಾಕ್ಸ್ ಖರೀದಿ ಆಗಿಲ್ಲ
Team Udayavani, Aug 26, 2019, 11:23 AM IST
ಸಾಂದರ್ಭಿಕ ಚಿತ್ರ
ಮುದಗಲ್ಲ: ಶಾಲೆಗಳು ಆರಂಭವಾಗಿ ಮೂರು ತಿಂಗಳಾದರೂ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಭಾಗ್ಯ ಇಲ್ಲದಾಗಿದೆ.
ತಾಲೂಕಿನ 26 ಕ್ಲಸ್ಟರ್‌ಗಳಲ್ಲಿ 318 ಸರಕಾರಿ ಪ್ರಾಥಮಿಕ ಶಾಲೆ, 44 ಸರಕಾರಿ ಪ್ರೌಢ ಶಾಲೆಗಳಿವೆ. 1ರಿಂದ 10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣೆಗೆ ಸರ್ಕಾರ ಆದೇಶಿಸಿದೆ. ಸುಮಾರು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಶೂ ಮತ್ತು ಸಾಕ್ಸ್‌ಗೆ ತರಗತಿವಾರು ದರ ನಿಗದಿಪಡಿಸಲಾಗಿದೆ. 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 265 ರೂ. 6ರಿಂದ8 ನೇ ತರಗತಿವರೆಗೆ 295 ರೂ. ಹಾಗೂ 9ರಿಂದ10ನೇ ತರಗತಿವರೆಗೆ 325 ರೂ. ನಿಗದಿಪಡಿಸಿದೆ. ಈ ಹಣದಲ್ಲಿ ಪ್ರತಿ ವಿದ್ಯಾರ್ಥಿಗೆ ಶೂ ಮತ್ತು 2 ಜೊತೆ ಸಾಕ್ಸ್‌ಗಳನ್ನು ಖರೀದಿಸುವಂತೆ ಸೂಚಿಸಿ ಶಿಕ್ಷಣ ಇಲಾಖೆ ಆಯಾ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯಶಿಕ್ಷಕರ ಜಂಟಿ ಖಾತೆಗೆ ಅನುದಾನ ವರ್ಗಾವಣೆ ಮಾಡಿದೆ. ಆದರೆ ಹಣ ಜಮೆಯಾಗಿ 20 ದಿನ ಗತಿಸಿದರೂ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ಭಾಗ್ಯ ದೊರೆಯದಿರುವುದು ಬಡ ಮಕ್ಕಳ ಆಶೆಗೆ ತಣ್ಣೀರು ಎರಚಿದಂತಾಗಿದೆ. ಹಣ ಜಮೆಯಾದ ತಕ್ಷಣವೇ ಶಾಲೆಗಳ ಎಸ್‌ಡಿಎಂಸಿ ಸಭೆ ಕರೆದು ಠರಾವು ಪಾಸ್ ಮಾಡಬೇಕು. ನಂತರದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು-ಮುಖ್ಯಗುರು ಹಾಗೂ 5 ಜನ ಸಮಿತಿ ಸದಸ್ಯರು ಸೇರಿ ಶೂ-ಸಾಕ್ಸ್ ಖರೀದಿಸಬೇಕು. ಆದರೆ ಶೈಕ್ಷಣಿಕ ವರ್ಷ ಆರಂಭದ ಜೂನ್ ಕೊನೆಯಲ್ಲಿ ಮಕ್ಕಳಿಗೆ ಶೂ-ಸಾಕ್ಸ್, ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ವಿತರಿಸಬೇಕು. ಆದರೆ ಶೈಕ್ಷಣಿಕ ವರ್ಷದ ಮೂರು ತಿಂಗಳು ಗತಿಸಿದರೂ ಮಕ್ಕಳಿಗೆ ಸೌಲಭ್ಯ ಕಲ್ಪಿಸದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿವೆ.
ಶಂಕೆ: ಶಾಲಾ ಮಕ್ಕಳ ಶೂ-ಸಾಕ್ಸ್ ಖರೀದಿಗೆ ಆಯಾ ವಲಯವಾರು ಸಿಆರ್‌ಪಿ, ಬಿಆರ್‌ಪಿ ಮತ್ತು ಶಿಕ್ಷಣ ಸಂಯೋಜಕರು ಅನುಮತಿ ಪಡೆಯುವ ಜತೆಗೆ ಅವರು ಸೂಚಿಸಿದ ಅಂಗಡಿಗಳಲ್ಲಿಯೇ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಶೂ-ಸಾಕ್ಸ್ ಖರೀದಿಸಬೇಕೆಂಬ ನಿಯಮ ಹೇರಲಾಗುತ್ತಿದೆ. ಇದೇ ಆ ಕಾರಣದಿಂದ ಶೂ, ಸಾಕ್ಸ್ ಖರೀದಿ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಇಲಾಖೆ ನಿಯಮನುಸಾರ ರಚಿಸಲಾದ ಸಮಿತಿಗಳು ಪಾರದರ್ಶಕವಾಗಿ ಶೂ-ಸಾಕ್ಸ್ ಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಣೆಗೆ ಮುಂದಾಗಬೇಕೆಂಬುದು ಶಿಕ್ಷಣ ಪ್ರೇಮಿಗಳು, ಪಾಲಕರ ಆಶಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.