ಶೂ -ಸಾಕ್ಸ್ ಖರೀದಿಯಲ್ಲಿ ಗೋಲ್‌ಮಾಲ್?
ಕಳಪೆ ಗುಣಮಟ್ಟದ ಶೂ-ಸಾಕ್ಸ್ ವಿತರಿಸಿದ ಶಿಕ್ಷಕರು ಕಮೀಷನ್ ಆಸೆಗೆ ಸರ್ಕಾರದ ಆದೇಶ ಉಲ್ಲಂಘನೆ
Team Udayavani, Nov 6, 2019, 12:27 PM IST
ದೇವಪ್ಪ ರಾಠೊಡ
ಮುದಗಲ್ಲ: ಶೂ ಭಾಗ್ಯ ಯೋಜನೆಯಡಿ ಶಿಕ್ಷಕರು ಮತ್ತು ಶಾಲಾ ಸುಧಾರಣೆ ಸಮಿತಿ ಸದಸ್ಯರು ಗೋಲ್‌ಮಾಲ್ ನಡೆಸಿ ವಿದ್ಯಾರ್ಥಿಗಳಿಗೆ ಕಳಪೆ ದರ್ಜೆಯ ಶೂ-ಸಾಕ್ಸ್ ವಿತರಿಸಿದ್ದಾರೆ.
ಸಮೀಪದ ಬನ್ನಿಗೋಳ ಸಿಆರ್‌ಪಿ ವಲಯ ಹಾಗೂ ಮುದಗಲ್ಲ ಮತ್ತು ಕನ್ನಾಳ ವಲಯ ಸೇರಿದಂತೆ ಹಲವೆಡೆ ಶೂ, ಸಾಕ್ಸ್ ಖರೀದಿಯಲ್ಲಿ ಗೋಲ್‌ಮಾಲ್ ನಡೆದಿದೆ. ಬನ್ನಿಗೋಳ ಮತ್ತು ಮುದಗಲ್ಲ ವಲಯದಲ್ಲಿ ಇಲಾಖೆ ಸೂಚಿಸಿದ್ದ ಉತ್ತಮ ದರ್ಜೆಯ ಕಂಪನಿಯ ಶೂಗಳನ್ನು ಖರೀದಿಸದೆ ಬೇರೆ ಕಂಪನಿಯ ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಲಾಗಿದೆ.
ಜಂಟಿ ಖಾತೆಗೆ ಅನುದಾನ: ಸರ್ಕಾರಿ ಶಾಲೆಯ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 1 ಜೊತೆ ಶೂ ಮತ್ತು 2 ಜೊತೆ ಸಾಕ್ಸ್ ನೀಡಲಾಗುತ್ತಿದೆ. ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ಗಳನ್ನು ಖರೀದಿಸಲು ಶಿಕ್ಷಣ ಇಲಾಖೆ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 265 ರೂ., 6ರಿಂದ 8ನೇ ತರಗತಿವರೆಗೆ 295 ರೂ. ಹಾಗೂ 9ರಿಂದ 10ನೇ ತರಗತಿವರೆಗೆ 325 ರೂ. ಗಳಲ್ಲಿ ಪ್ರತಿ ವಿದ್ಯಾರ್ಥಿಗೆ ಶೂ ಮತ್ತು 2 ಜೊತೆ ಸಾಕ್ಸ್ ಖರೀದಿಸುವಂತೆ ಸೂಚಿಸಿ ಆಯಾ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯಶಿಕ್ಷಕರ ಜಂಟಿ ಖಾತೆಗೆ ಅನುದಾನ ವರ್ಗಾವಣೆ ಮಾಡಿದೆ.
ಅಲ್ಲದೆ ಸರ್ಕಾರವೇ ಸೂಚಿಸಿದ ಪ್ರತಿಷ್ಠಿತ ಉತ್ತಮ ಗುಣಮಟ್ಟದ ಕಂಪನಿಗಳ ಶೂ ಮತ್ತು ಸಾಕ್ಸ್‌ಗಳನ್ನು ಶಾಲೆಯ ಮುಖ್ಯಶಿಕ್ಷಕ, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡ ಸಮಿತಿ ಖರೀದಿಸಿ ಮಕ್ಕಳಿಗೆ ವಿತರಿಸಬೇಕು ಎಂದು ಇಲಾಖೆ ಆಯುಕ್ತರ ಸೂಚನೆಯಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ವಿತರಿಸಿದ ಶೂ-ಸಾಕ್ಸ್ ಮರಳಿ ಸಂಗ್ರಹ?: ಆದರೆ ಕಮಿಷನ್ ಆಸೆಗೆ ನಕಲಿ ಕಂಪನಿಯ ಶೂ ಮತ್ತು ಸಾಕ್ಸ್ ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು, ಇದೀಗ ಶಿಕ್ಷಕರು ಪೇಚಿಗೆ ಸಿಲುಕುವಂತಾಗಿದೆ. ಶೂ, ಸಾಕ್ಸ್ ಖರೀದಿಯಲ್ಲಿ ಲೋಪ ಕಂಡು ಬಂದಿದ್ದು ಸೂಕ್ತ ತನಿಖೆ ನಡೆಸಬೇಕು ಎಂದು ಇಲಾಖೆಯಿಂದ ಸೂಚನೆ ಬರುತ್ತಿದ್ದಂತೆಯೇ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಿದ್ದ ಶೂ, ಸಾಕ್ಸ್‌ಗಳನ್ನು ಶಿಕ್ಷಕರು ಮರಳಿ ಸಂಗ್ರಹಿಸಲು ಮುಂದಾಗಿದ್ದಾರೆ.
ಸಮೀಪದ ಬನ್ನಿಗೋಳ ಸಿಆರ್‌ಪಿ ವಲಯ ಹಾಗೂ ಮುದಗಲ್ಲ ಮತ್ತು ಕನ್ನಾಳ ವಲಯ ಸೇರಿದಂತೆ ಹಲವೆಡೆ ಶೂ, ಸಾಕ್ಸ್ ಖರೀದಿಯಲ್ಲಿ ಗೋಲ್‌ಮಾಲ್ ನಡೆದಿದೆ. ಬನ್ನಿಗೋಳ ಮತ್ತು ಮುದಗಲ್ಲ ವಲಯದಲ್ಲಿ ಇಲಾಖೆ ಸೂಚಿಸಿದ್ದ ಉತ್ತಮ ದರ್ಜೆಯ ಕಂಪನಿಯ ಶೂಗಳನ್ನು ಖರೀದಿಸದೆ ಬೇರೆ ಕಂಪನಿಯ ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಲಾಗಿದೆ.
ಮುದಗಲ್ಲನ ಮೇಗಳಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೆಲ್ಡನ್ ಕಂಪನಿಯ ಸುಮಾರು 480ಕ್ಕೂ ಅಧಿಕ ಶೂ, ಜನತಾಪುರ ಸರ್ಕಾರಿ ಶಾಲೆಯಲ್ಲಿ ದಾಜ್ಯ ಎನ್ನುವ ಕಂಪನಿಯ ಶೂಗಳನ್ನು ಖರೀದಿಸುವ ಮೂಲಕ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಲಾಗಿದೆ. ಅಲ್ಲದೆ ಮೊನ್ನೆ ವಿತರಿಸಿದ ಶೂಗಳು ವಿದ್ಯಾರ್ಥಿಗಳು ತೊಡುವ ಮುಂಚೆಯೇ ಕಿತ್ತು ಹೋಗಿವೆ.
ಬಾಕ್ಸ್ ಮೇಲೆ ಪ್ರತಿಷ್ಠಿತ ಕಂಪನಿ ಹೆಸರು: ಈಗಾಗಲೆ ಬನ್ನಿಗೋಳ, ಕನ್ನಾಳ, ಆಮದಿಹಾಳ, ಮುದಗಲ್ಲ, ನಾಗಲಾಪುರು, ನಾಗರಹಾಳ, ಬಯ್ನಾಪುರು ಸಿಆರ್‌ಸಿ ವ್ಯಾಪ್ತಿಯ ಶಾಲೆಗಳಲ್ಲಿ ಖರೀದಿಸಲಾಗಿರುವ ಸಾವಿರಾರು ಶೂಗಳು ನಕಲಿ ಕಂಪನಿಯದ್ದಾಗಿವೆ. ಲಿಬರ್ಟಿ ಕಂಪನಿ ಹೆಸರಿನ ಕವರ್‌ದಲ್ಲಿ ಮತ್ತೂಂದು ಕಳಪೆ ಗುಣಮಟ್ಟದ ಕಂಪನಿಯ ಶೂ ಇರಿಸಲಾಗಿದೆ. ಪ್ರತಿಷ್ಠಿತ ಕಂಪನಿಯ ಹೆಸರು ಮಾತ್ರ ಕವರ್ ಮೇಲೆ ಪ್ರಿಂಟ್ ಮಾಡಿದ್ದು ಕಂಪನಿಗೆ ಮತ್ತು ಶೂ ಗೆ ಸಂಬಂಧಿಸಿದ ಯಾವುದೇ ಮಾಹಿತಿ ಬಾಕ್ಸ್ ಮೇಲೆ ಕಾಣುವುದಿಲ್ಲ. ನಿಜವಾದ ಕಂಪನಿಯಾಗಿದ್ದರೆ ಶೂ ಬಾಕ್ಸ್ ಮೇಲೆ ಕ್ಯುಆರ್ ಕೋಡ್, ಕಂಪನಿಯ ವಿಳಾಸ, ಬಣ್ಣ ಸೈಜ್ ಇತ್ಯಾದಿ ಮಾಹಿತಿ ಮುದ್ರಿಸಲಾಗಿರುತ್ತದೆ.
ಆದರೆ ಮುದಗಲ್ಲ ಭಾಗದ ಸರ್ಕಾರಿ ಶಾಲೆಗಳಲ್ಲಿ ಖರೀದಿಸಿದ ಶೂ ಮತ್ತು ಸಾಕ್ಸ್ ಮೇಲೆ ಯಾವುದೇ ಮಾಹಿತಿ ಕಾಣುವುದಿಲ್ಲ. ಇದರಿಂದಾಗಿ ಶೂ, ಸಾಕ್ಸ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಶಾಲಾ ವಿದ್ಯಾರ್ಥಿಗಳ ಶೂ ಸಾಕ್ಸ್‌ಗಳನ್ನು ಸ್ವತಃ ಖರೀದಿಸದ ಶಿಕ್ಷಕರು ಮತ್ತೂಬ್ಬರಿಗೆ ನೀಡಿದ್ದಾರೆ. ಅವರಿಂದ ಪ್ರತಿ ಶೂಗೆ ಇಂತಿಷ್ಟು ಕಮೀಷನ್ ಪಡೆದಿದ್ದಾರೆ ಎಂದು ಷಣ್ಮುಖಪ್ಪ ಚಲುವಾದಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.