ಗ್ಯಾಂಗ್‌ರೇಪ್‌: ವೈಫ‌ಲ್ಯ ಖಂಡಿಸಿ ಅಧಿವೇಶನದಲ್ಲಿ ಹೋರಾಟ

Team Udayavani, Sep 11, 2021, 2:24 PM IST

ಗ್ಯಾಂಗ್‌ರೇಪ್‌: ವೈಫ‌ಲ್ಯ ಖಂಡಿಸಿ ಅಧಿವೇಶನದಲ್ಲಿ ಹೋರಾಟ

ಮೈಸೂರು: ನಗರದಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಗೃಹ ಸಚಿವರು ಹಾಗೂ ಪೊಲೀಸ್‌ ಇಲಾಖೆ ವೈಫ‌ಲ್ಯ ಎದ್ದು ಕಾಣುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಅತ್ಯಾಚಾರ ಪ್ರಕರಣ ಸಂಬಂಧ ಮಾಹಿತಿ ತಿಳಿಯಲು ಕಾಂಗ್ರೆಸ್‌ನಿಂದ ನೇಮಕವಾಗಿದ್ದ ಸತ್ಯಶೋಧನ ಸಮಿತಿಯ ವರದಿಯನ್ನು ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವಲ್ಲಿ ವಿಫ‌ಲರಾಗಿರುವುದು ಒಂದೆಡೆಯಾದರೆ, ಘಟನೆ ಬಳಿಕ
ಮೈಸೂರಿಗೆ ಆಗಮಿಸಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಕರಣ ಗಂಭೀರತೆ ಅರಿತುಕೊಳ್ಳದೇ ಪೊಲೀಸ್‌ ಅಕಾಡೆಮಿಯಲ್ಲಿ ಫೈರಿಂಗ್‌, ಸಂವಾದದಲ್ಲಿ ಪಾಲ್ಗೊಂಡು ಕಾಲಾಹರಣ ಮಾಡುವ ಮೂಲಕ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಜೊತೆಗೆ ಆಕೆ ಅಷ್ಟು ಹೊತ್ತಿನಲ್ಲಿ ಅಲ್ಲಿಗೇಕೆ ಹೋದಳು ಎಂದು ನೀಡಿರುವ ಹೇಳಿಕೆ ಅಂತದ್ದೇ ಕೃತ್ಯಗಳು ನಡೆಯಲು ಪುಷ್ಟಿ ನೀಡಿದಂತಾಗಿದೆ. ಈ ಪ್ರಕರಣ ಸಂಬಂಧ ಅವರು ನೀಡಿರುವ ಹೇಳಿಕೆ ತಲೆತಗ್ಗಿಸುವಂತಾದ್ದಾಗಿದೆ. ಈ ನಿಟ್ಟಿನಲ್ಲಿ ಗೃಹ ಸಚಿವರು ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಭ್ರಷ್ಟಾಚಾರ ಆರೋಪದ ತನಿಖೆಗೆ ಸಿದ್ಧ : ಸಚಿವ ಬಿ.ಸಿ.ಪಾಟೀಲ್

ಅತ್ಯಾಚಾರ ಪ್ರಕರಣ ಸಂಬಂಧ ಸತ್ಯಶೋಧನ ಸಮಿತಿ ಸಂಪೂರ್ಣ ಮಾಹಿತಿ ಕಲೆ ಹಾಕಿ ವರದಿ ಸಿದ್ಧಪಡಿಸಿ, ಹಲವು ಶಿಫಾರಸುಗಳನ್ನು ಮಾಡಿ ಪಕ್ಷದ ನಾಯಕರಿಗೆ ನೀಡಿದ್ದೇವೆ. ಈ ಸಂಬಂಧ ಅಧಿವೇಶನಲ್ಲಿ ಹೋರಾಟವನ್ನು ನಡೆಸುತ್ತೇವೆ ಎಂದು ಹೇಳಿದರು. ಜಸ್ಟಿಸ್‌ ವರ್ಮಾ ಆಯೋಗದ ವರದಿಯಂತೆ ಪೊಲೀಸರು ಸಂತ್ರಸ್ತೆಗೆ ನೆರವು, ಚಿಕಿತ್ಸೆ ಮತ್ತು ಭದ್ರತೆ ನೀಡಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಈ ಮೂರು ಅಂಶಗಳು ಪಾಲನೆ ಯಾಗಿಲ್ಲ. ಜೊತೆಗೆ ಅತ್ಯಾಚಾರ ಪ್ರಕರಣ ಸಂಬಂಧ ಎಫ್ಐಆರ್‌ ದಾಖಲಿಸಲು 15 ಗಂಟೆಏಕೆ ತಡ ಮಾಡಿದರು, ಯುವತಿ ಆ ಸಂದರ್ಭದಲ್ಲಿ ಯಾಕೆ ಅಲ್ಲಿ ಹೋಗಿದ್ದಳು, ಪ್ರಕರಣದಲ್ಲಿ ಪೊಲೀಸರ ಕಾರ್ಯ ವೈಖರಿ ಹೇಗಿತ್ತು, ಇದರಲ್ಲಿ ಹಸ್ತಕ್ಷೇಪ ಇತ್ತ ಅಥವಾ ಇಲ್ಲವಾ, ಸಂತ್ರಸ್ತೆಗೆ ಪೊಲೀಸರು ರಕ್ಷಣೆ ಕೊಡುವ ಜವಾಬ್ದಾರಿ ಸರಿಯಾಗಿ ನಿರ್ವಹಣೆ ಮಾಡಿದ್ದಾರ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ತಿಳಿಸಿದರು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಸರ್ಕಾರ ಪೊಲೀಸರ ತನಿಖೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ಗೋಚರಿಸುತ್ತಿದ್ದು ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ಘಟನೆ ನಡೆದ ಸ್ಥಳ 545 ಎಕರೆ ಪ್ರದೇಶವಿದ್ದು ಅದು ಯಾರ ಸುಪರ್ದಿಯಲ್ಲಿದೆ ಎಂಬ ಮಾಹಿತಿ ಫೊಲೀಸರಲ್ಲಿ ಇಲ್ಲ.ಸಂತ್ರಸ್ತೆಯನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರು ಪಡಿಸಿದೆ,ಆಕೆಯಿಂದ ಹೇಳಿಕೆ ಪಡೆಯದೆ ಸಂತ್ರಸ್ತೆಯನ್ನು ಏರ್‌ಲಿಫ್ಟ್ ಮಾಡಿರುವುದು ಏಕೆ ಎಂದು ಪ್ರಶ್ನಿಸಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ ¾ಣ್‌ ಮಾತನಾಡಿ, ಮೈಸೂರು ಗ್ಯಾಂಗ್‌ ರೇಪ್‌ ಪ್ರಕರಣ ಸಂಬಂಧ ಸಂತ್ರಸ್ತೆಯ ಜೊತೆಗಿದ್ದ ಯುವಕನ ತಂದೆ ಬಿಜೆಪಿಯ ಬೆಂಬಲಿಗರು. ಇದು ಕಾಂಗ್ರೆಸ್‌ ನೇರವಾಗಿ ಮಾಡುತ್ತಿರುವ ಆರೋಪ. ಬಿಜೆಪಿ ಮುಖಂಡರು ಇದರಲ್ಲಿ ಭಾಗಿಯಾಗಿರುವ ಬಗ್ಗೆ ನಮಗೆ ಮಾಹಿತಿ ಇದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಾಸು, ಎಂ.ಕೆ. ಸೋಮಶೇಖರ್‌,ಕಾಂಗ್ರೆಸ್‌ಜಿಲ್ಲಾಧ್ಯಕ್ಷಬಿ.ಜೆ.ವಿಜಯ್‌ ಕುಮಾರ್‌, ಮುಖಂಡ ಎಂ. ಶಿವಣ್ಣ ಇತರರಿದ್ದರು.

ತುಟಿಬಿಚ್ಚ
ದಬಿಜೆಪಿ ನಾಯಕರು
ಕೆಪಿಸಿಸಿಮಹಿಳಾಘಟಕದಮಾಜಿಅಧ್ಯಕ್ಷೆಮಂಜುಳಾಮಾನಸಮಾತನಾಡಿ,ಬಿಜೆಪಿಯಲ್ಲಿಕ್ರಿಯಾಶೀಲರಾಗಿರುವ ತಾರಾ ಅನುರಾಧ, ಶ್ರುತಿ, ಶಿಲ್ಪಾ ಗಣೇಶ್‌, ಮಾಳವಿಕಾ ಇವರ್ಯಾರೂ ಈ ಕೃತ್ಯದ ಬಗ್ಗೆ ಮಾತೇ ಆಡಿಲ್ಲ. ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಹೋರಾಟ ಎಂದು ಕೂಗಾಡುತ್ತಿದ್ದಕೇಂದ್ರ ಸಚಿವೆ ಶೋಭಾಕರಂದ್ಲಾಜೆ ತುಟ್ಟಿ ಬಿಚ್ಚಿಲ್ಲ. ಹಿಂದಿನ ಸರ್ಕಾರಗಳು ಇದ್ದ ವೇಳೆಯಲ್ಲಿ ಪದೇ-ಪದೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಬಿಜೆಪಿಯ ಮಹಿಳಾ ಪದಾಧಿಕಾರಿಗಳು ಈ ಪ್ರಕರಣದಲ್ಲಿ ಮೌನವಾಗಿದ್ದಾರೆ. ಸ್ಥಳೀಯ ಶಾಸಕರಾದ ರಾಮದಾಸ್‌
ಗೆಹೆಣ್ಣುಮಕ್ಕಳೆಂದರೆ ಏನೋಭಯ? ನಾಗೇಂದ್ರಅವರು ಮಾತನ್ನೇಆಡಲ್ಲ.ಮಹೇಶ್‌ಅವರಿಗೆ ಪುರುಷೊತ್ತಿಲ್ಲ

ಟಾಪ್ ನ್ಯೂಸ್

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur

Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

1-MGM

Udupi MGM; ಡಿ.1ರಂದು ಪ್ರಾಕ್ತನ ವಿದ್ಯಾರ್ಥಿಗಳ ಅಮೃತ ಸಮ್ಮಿಲನ ಕಾರ್ಯಕ್ರಮ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.