10 ದರೋಡೆಕೋರರ ಸೆರೆ, ಮಾರಕಾಸ್ತ್ರ ಜಪ್ತಿ


Team Udayavani, Oct 10, 2017, 11:59 AM IST

my6.jpg

ನಂಜನಗೂಡು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಂಚು ಹಾಕಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 10 ಮಂದಿ ಅಂತಾರಾಜ್ಯ ಡಕಾಯಿತರ ಗುಂಪನ್ನು ಬಂಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್‌ ತಿಳಿಸಿದರು. ನಂಜನಗೂಡು ಡಿವೈಎಸ್‌ಪಿ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 

ಹೆಗ್ಗಡದೇವನ ಕೋಟೆ ತಾಲೂಕಿನ ಹೊಸೂರು ಮಚ್ಚಾರು ಗ್ರಾಮದ ಅರುಣ ಅಲಿಯಾಸ್‌ ಟುಟು ಬಿನ್‌ ತಂಗಚ್ಚನ್‌, ಅಂತರಸಂತೆ ಹೋಬಳಿ ಡಿ.ಬಿ.ಕುಪ್ಪೆ ಗ್ರಾಮದ ಕಬೀರ್‌ ತಾಹ ಕಬೀರ್‌ ಬಿನ್‌ ಅಬುಬೂಕ್ಕರ್‌, ರಾಮು ಹೊಸೂರು, ಕೇರಳದವರಾದ ಮನೋಜ, ಪುರಕೊಂಡಕೊಲ್ಲಿ, ಕಲ್ಪೇಟ್‌, ಅಬ್ದುಲ್‌ಸಯಹೇಬ್‌ ಕಬೀರ್‌ ಕುನ್ನ ಮಂಗಲ, ಸಫಾನಿºನ್‌ ಮೊಯಿಯುದ್ದೀನ್‌ ಚುಂಡೆಲ್‌ ಕಲ್ಪೇಟ್‌, ಅಬ್ದುಲ್‌ ಸಮದ್‌ ಚುಂಡಲ್‌ ಕಲ್ಪೇಟ್‌, ರಮೀಶ ಸುದ್ದೀನ್‌ ಚುಂಡೆಲ್‌, ನೀಯಾಸ್‌  ಬಳ್ನಾರ್‌ ಕುನ್‌, ಮಹಮದ್‌ ಕೈಸ್‌  ಚುಂಡಾಲ್‌ ಬಂಧಿತರು. ಜೊತೆಯಲ್ಲಿದ್ದ ಲತೀಫ್, ನೌಫ‌ಲ್‌, ಸಾಬು ಪರಾರಿಯಾಗಿದ್ದಾರೆಂದರು.

ನಂಜನಗೂಡು, ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ 212 ನ  ಕಬಿನಿ ಬಲದಂಡೆ ಸೇತುವೆ ಬಳಿ ಭಾನುವಾರ ರಾತ್ರಿ ದರೋಡೆಗೆ ಹೊಂಚು ಹಾಕುತ್ತಿದ್ದಾಗ ನಂಜನಗೂಡು ಎಸ್‌ಪಿ ಸುಜೇತಾಮಹಮದ್‌ರ ನೇತೃತ್ವದಲ್ಲಿ  ಸಿಪಿಐ ಗೊಪಾಲಕೃಷ್ಣರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದರು. ಬಂಧಿತರಿಂದ 5 ವಾಹನ, 9 ಮೊಬೈಲ್‌, 1.16 ಲಕ್ಷ ರೂ.ನಗದು, ದರೋಡೆಗೆ ಬಳಸಲಾಗುತ್ತಿದ್ದ ಒಂದು ಏರ್‌ಗನ್‌, ತಲ್ವಾರ್‌ ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

ನಂಜನಗೂಡು, ಮಂಡ್ಯ, ಕೇರಳದ ಕ್ಯಾಲಿಕಟ್‌ ಮಲ್ಲಪುರಂ ಠಾಣಾ ವ್ಯಾಪ್ತಿಯ ಹೆದ್ದಾರಿ ದರೋಡೆಗಳನ್ನು ಬೇಧಿಸುವಲ್ಲಿ ನಂಜನಗೂಡು ಪೊಲೀಸರ ತಂಡ ಯಶಸ್ಸು ಕಂಡಿದ್ದು ದಾಳಿಯಲ್ಲಿ ಭಾಗಿಯಾಗಿದ್ದವರಿಗೆ ನಗದು ಪುರಸ್ಕಾರ ನೀಡುವುದಾಗಿ ಘೋಷಿಸಿದರು. 

ಅಪರ ಆರಕ್ಷಕ ಅಧಿಕ್ಷಕ ರುದ್ರಮುನಿ, ಸಹಾಯಕ ಆರಕ್ಷಕ ಆಧಿಕಾರಿ ಮಹಮದ್‌ ಸುಜೇತಾರ ನೇತೃತ್ವದಲ್ಲಿ ಸಿಪಿಐ ಗೋಪಾಲಕೃಷ್ಣ, ಪಿಎಸ್‌ಐ ಪುನೀತ್‌, ಸಿಬ್ಬಂದಿಗಳಾದ   ಎಚ್‌.ಸಿ.ಕೃಷ್ಣ, ಸತೀಶ, ಅಬ್ದುಲ್‌ ಲತೀಫ್, ದೇವರಾಜ್‌, ಪ್ರಸನ್ನ ಕುಮಾರ, ಶ್ರೀಕಾಂತ್‌, ಸುರೇಶ, ಮಹೇಶ, ಅನಂತನಾಗ್‌ ದಾಳಿಯಲ್ಲಿ ಭಾಗವಹಿಸಿದ್ದರು.
 
ಬಂಧಿತರು ರಾಜ್ಯದಿಂದ ಕೇರಳಕ್ಕೆ ತೆರಳುವ ವ್ಯಾಪಾರಿ ವಾಹನಗಳ ಕುರಿತು ಖಚಿತ ಮಾಹಿತಿ ಪಡೆದು ನಿರ್ದಿಷ್ಠ ಜಾಗದವರಿಗೂ ಬೆನ್ನೆತ್ತಿ ಆಯಕಟ್ಟಿನ ಜಾಗದಲ್ಲಿ ಅಡ್ಡಗಟ್ಟಿ  ಹಲ್ಲೆ ನಡೆಸಿ ಹಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು. 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಉಳಿದವರಿಗಾಗಿ ಬಲೆ ಬೀಸಲಾಗಿದೆ.
-ರವಿ ಚನ್ನಣ್ಣನವರ, ಎಸ್ಪಿ

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರMUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.