14 ದಿನ ಮೈಸೂರು ಬಹುತೇಕ ಸ್ತಬ್ಧ
Team Udayavani, Apr 28, 2021, 3:35 PM IST
ಮೈಸೂರು: ಕೊರೊನಾ 2ನೇ ಅಲೆ ತೀವ್ರವಾಗುತ್ತಿರುವುದರಿಂದ ಸೋಂಕು ಹರಡುವಿಕೆ ತಡೆಯಲು ಸರ್ಕಾರ 14ದಿನಗಳ ಕಾಲ ರಾಜ್ಯಾದ್ಯಂತ ಕರ್ಫ್ಯೂವಿಧಿಸಿದ್ದು, ಇಂದಿನಿಂದ ಮೇ10ರವರೆಗೆ ಮೈಸೂರು ಸ್ತಬ್ಧವಾಗಲಿದೆ.ಸೋಂಕು ಹರಡುವಿಕೆ ತಡೆಯಲುವಾರಾಂತ್ಯ ಕರ್ಫ್ಯೂ ವಿಧಿಸಿದ್ದ ಸರ್ಕಾರಅದನ್ನು 14 ದಿನ ವಿಸ್ತರಣೆ ಮಾಡಿರುವಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಮಂಗಳವಾರ ರಾತ್ರಿ 9 ಗಂಟೆಯಿಂದಲೇಜಾರಿಗೆ ಬಂದಿದ್ದು, ಮೇ 10ರ ರಾತ್ರಿ 9ರವರೆಗೆ ಮೈಸೂರು ಸ್ತಬ್ಧವಾಗಲಿದೆ.
ಅಗತ್ಯ ವಸ್ತುಗಳ ಮಳಿಗೆಗಳನ್ನು ಹೊರತುಪಡಿಸಿ ವಾಣಿಜ್ಯ ಮಳಿಗೆಗಳು ಬಂದ್ ಆಗಲಿವೆ. ವೈದ್ಯಕೀಯ ಸೇವೆ,ಆಹಾರ ಹೊರತುಪಡಿಸಿ ಎಲ್ಲಾ ತರಹದ ಅಂಗಡಿಗಳನ್ನು ಬಂದ್ ಮಾಡಬೇಕಿದೆ.ದಿನಸಿ, ಹಾಲು, ಹಣ್ಣು, ತರಕಾರಿಯನ್ನೂಸಮೀಪದ ಅಂಗಡಿಯಲ್ಲೇ ಖರೀದಿಮಾಡಬೇಕಿದ್ದು, ಬೆಳಗ್ಗೆ 6ರಿಂದ 10ರವರೆಗೆ ಮಾತ್ರ ಅವಕಾಶ ಇದೆ. ನಂತರದಿನಸಿ ಅಂಗಡಿಗಳೂ ಮುಚ್ಚಲಿವೆ.
ಚಿತ್ರಮಂದಿರ, ಮಾಲ್‌ಗಳು,ದೇವಸ್ಥಾನಗಳು, ಚರ್ಚ್‌ಗಳು,ಮಸೀದಿಗಳು, ಧಾರ್ಮಿಕ ಕೇಂದ್ರಗಳು,ಬಟ್ಟೆ ಅಂಗಡಿಗಳು, ಪಾರ್ಕ್‌ಗಳುಬಂದ್ ಆಗಲಿವೆ. ಕಾರ್ಖಾನೆಗಳಿಗೆಅವಕಾಶ ನೀಡಲಾಗಿದ್ದು, ಗಾರ್ಮೆಂಟ್ಸ್‌ಕಾರ್ಖಾನೆಗೆ ಅವಕಾಶ ನೀಡಲಾಗಿಲ್ಲ. ಪ್ರವಾಸಿಗರಿಗೆ ಅರಮನೆ, ಮೃಗಾಲಯಮತ್ತು ಕಾರಂಜಿ ಕೆರೆ ವೀಕ್ಷಣೆಯನ್ನುನಿಬಂìಧಿಸಲಾಗಿದೆ. ಬಸ್ ಸಂಚಾರವನ್ನೂ ಬಂದ್ ಮಾಡಲಾಗಿದ್ದು,ದೂರದ ಊರುಗಳಿಂದ ಬರುವವರುಟಿಕೆಟ್ ಹೊಂದಿರಬೇಕು.
ಅಗತ್ಯವಸ್ತುಗಳನ್ನು ಕೊಳ್ಳುವವರು ತಮ್ಮ ಬಡಾವಣೆಗಳಲ್ಲೇ ಕೊಳ್ಳಬೇಕು. ಸುಮ್ಮನೆನಗರದಲ್ಲಿ ಸುತ್ತಾಡಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
ಪಾರ್ಸಲ್‌ಗೆ ಮಾತ್ರ ಅವಕಾಶ: ಕಟ್ಟಡನಿರ್ಮಾಣ, ಕೃಷಿ ಚಟುವಟಿಕೆಗಳಿಗೆಅವಕಾಶ ಇದೆ. ಹೋಟೆಲ್ ಹಾಘೂಬಾರ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರಅವಕಾಶವಿದೆ. ಮದುವೆಗೆ 50 ಜನರಿಗೆಮಾತ್ರ ಅವಕಾಶ ನೀಡಿದ್ದು,ಅಂತ್ಯಕ್ರಿಯೆಗೆ 5 ಜನರಿಗೆ ಮಾತ್ರಅವಕಾಶ ನೀಡಲಾಗಿದೆ. ನಗರದಎಪಿಎಂಸಿ ಮಾರುಕಟ್ಟೆಗಳು ಬಂದ್‌ಆಗಲಿವೆ. ಹೊರಗಡೆಯಿಂದ ಬರುವವರಿಗೂ ಅವಕಾಶ ಇಲ್ಲ. ನಗರದ ವಿವಿಧವೃತ್ತಗಳಲ್ಲಿ ಸಂಚಾರ ಪೊಲೀಸರುನಾಕಾಬಂದಿ ಹಾಕಲಿದ್ದು, ಸುಮ್ಮನೆರಸ್ತೆಗಿಳಿಯುವವರ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ.
ಕೊರೊನಾ ಸೋಂಕು ಹರಡುವಿಕೆತಡೆಗೆ ಮೇ 10ರವರೆಗೆ ಕರ್ಫ್ಯೂಜಾರಿಯಲ್ಲಿರಲಿದ್ದು, ಸಾರ್ವಜನಿಕರುಅನಗತ್ಯವಾಗಿ ಓಡಾಡಬಾರದು. ಅಗತ್ಯವಸ್ತುಗಳನ್ನು ನಿಗದಿತ ಸಮಯದಲ್ಲಿತಮ್ಮ ಬಡಾವಣೆಗಳಲ್ಲೇ ಕೊಳ್ಳುವಮೂಲಕ ಸೋಂಕಿಗೆ ಕಡಿವಾಣ ಹಾಕಲುಸಹಕರಿಸಬೇಕು ಎಂದು ನಗರಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಏನಿರಲಿದೆ?
ತುರ್ತು, ಅಗತ್ಯ ಸೇವೆಗಳು ಹಾಗೂ ಕೊರೊನಾ ನಿಯಂತ್ರಣದಲ್ಲಿಪಾಲ್ಗೊಂಡಿರುವ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ತುರ್ತು ಮತ್ತು ಅಗತ್ಯ ಸೇವೆಗಳ ಅಡಿಯಲ್ಲಿ ಬರುವ ಎಲ್ಲಾಕೈಗಾರಿಕೆ, ಕಂಪನಿ, ಸಂಸ್ಥೆಗಳಿಗೆ 24/7 ಕಾರ್ಯಾಚರಿಸಲು ಅವಕಾಶವಿದೆ.ಇಂಟರ್‌ನೆಟ್, ಟೆಲಿಕಾಂ ಸೇವೆ ನೀಡುವ ಸಂಸ್ಥೆಗಳ ವಾಹನಗಳು, ನೌಕರರಪ್ರಯಾಣಕ್ಕೆ ಯಾವುದೇ ನಿಬಂìಧ ಇಲ್ಲ. ಮದುವೆ 50 ಜನ, ಅಂತ್ಯ ಸಂಸ್ಕಾರಕ್ಕೆ5 ಜನ ಭಾಗವಹಿಸಲು ಮಾತ್ರ ಅವಕಾಶವಿದೆ. ರೋಗಿಗಳು, ಅವರಸಹಾಯಕರು, ಲಸಿಕೆ ತೆಗೆದುಕೊಳ್ಳಲು ಹೋಗುವವರ ಪ್ರಯಾಣಕ್ಕೆನಿಬಂಧವಿಲ್ಲ. ಅಗತ್ಯ ವಸ್ತುಗಳ ಹೋಂ ಡೆಲಿವರಿಗೆ ಅವಕಾಶವಿದೆ.
ಜಿಲ್ಲೆಯಲ್ಲಿ ಏನಿರಲ್ಲ?ಮನೆ ಸುತ್ತ ಮುತ್ತಲಿನ ದಿನಸಿ, ಹಣ್ಣು-ತರಕಾರಿ, ಹಾಲು-ಡೇರಿ ಉತ್ಪನ್ನಗಳಅಂಗಡಿಗಳು ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ತರೆದಿರಲಿವೆ. ನಂತರಇರುವುದಿಲ್ಲ. ರೆಸ್ಟೋರೆಂಟ್, ಉಪಾಹಾರ ಗೃಹಗಳಲ್ಲಿ ಪಾರ್ಸೆಲ್ ಸೇವೆಗೆಮಾತ್ರ ಅವಕಾಶ. ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಜಿಮ್, ಕ್ರೀಡಾಸಂಕೀರ್ಣ, ಸ್ಟೇಡಿಯಂ, ಈಜುಕೊಳ, ಮನೋರಂಜನಾ ಪಾರ್ಕ್, ಬಾರ್,ಆಡಿಟೋರಿಯಂ ಯಾವುದನ್ನೂ ತೆರೆಯುವಂತಿಲ್ಲ. ಧಾರ್ಮಿಕ, ಸಾಮಾಜಿಕ,ರಾಜಕೀಯ, ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.