2 ವರ್ಷದಲ್ಲಿ 16 ಸಾವಿರ ಪೇದೆ, ಸಾವಿರ ಎಸ್ಸೈ ನೇಮಕ


Team Udayavani, Oct 19, 2019, 3:00 AM IST

2varshadalli

ಮೈಸೂರು: ಮುಂದಿನ ಎರಡು ವರ್ಷಗಳಲ್ಲಿ 16 ಸಾವಿರ ಪೊಲೀಸ್‌ ಕಾನ್ಸ್‌ಟೇಬಲ್‌ ಹಾಗೂ ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳನ್ನು ಭರ್ತಿ ಮಾಡಲಾಗುವುದು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು ವತಿಯಿಂದ ಅಕಾಡೆಮಿ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 42ನೇ ತಂಡದ ಪ್ರೊಬೆಷನರಿ ಆರ್‌ಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ನಮಗೆ ಸತ್ಯ ತಂದೆ ಇದ್ದಂತೆ, ನ್ಯಾಯ ತಾಯಿ ಇದ್ದಂತೆ. ಈ ಎರಡನ್ನೂ ಸದಾಕಾಲ ಎತ್ತಿಹಿಡಿಯುವ ಕೆಲಸವನ್ನು ನಾವೆಲ್ಲ ಮಾಡಬೇಕಿದೆ. ಈ ಸಂದರ್ಭದಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಈ ಎಲ್ಲಾ ಸವಾಲು ಜಯಿಸಿ, ನಾವು ನಮ್ಮ ಕರ್ತವ್ಯ ನಿಷ್ಠೆ ಮರೆಯದೇ, ನೀವು ಏನು ಪ್ರಮಾಣ ವಚನ ಸ್ವೀಕರಿಸಿದ್ದಿರೋ ಅದಕ್ಕೆ ಬದ್ಧರಾಗಿರಿ ಎಂದರು.

ದಕ್ಷತೆಗೆ ಕರ್ನಾಟಕ ಹೆಸರು: ಕರ್ನಾಟಕ ಪೊಲೀಸ್‌ ತನ್ನದೇ ಆದ ಇತಿಹಾಸ ಮತ್ತು ಪರಂಪರೆ ಹೊಂದಿದೆ. ಜೊತೆಗೆ ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದೆ. ಇಡೀ ದೇಶದಲ್ಲಿ ಕರ್ನಾಟಕ ಪೊಲೀಸರನ್ನು ಅತ್ಯಂತ ಎತ್ತರದ ಸ್ಥರದಲ್ಲಿ ಇತರ ರಾಜ್ಯಗಳು ನೋಡುವುದಿದೆ. ಈ ಪರಂಪರೆ ಮತ್ತು ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ನಿಮ್ಮ ಪಾತ್ರವೂ ಮುಖ್ಯವಾಗಿರುತ್ತದೆ. ಸುಮಾರು 16 ಸಾವಿರ ಪೊಲೀಸ್‌ ಕಾನ್ಸ್‌ಟೇಬಲ್‌ ಹಾಗೂ 1 ಸಾವಿರಕ್ಕೂ ಹೆಚ್ಚು ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ಗಳನ್ನು ಮುಂದಿನ 2 ವರ್ಷಗಳಲ್ಲಿ ಭರ್ತಿ ಮಾಡುವ ಚಿಂತನೆ ಇದ್ದು, ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತವಾಗಿ 6 ಸಾವಿರ ಮಂದಿ ಕಾನ್ಸ್‌ಟೇಬಲ್‌ ಮತ್ತು ಪಿಎಸ್‌ಐಗಳನ್ನು ಭರ್ತಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಸುಧಾರಣೆ: ಪೊಲೀಸ್‌ ಇಲಾಖೆಯಲ್ಲಿ ಕಾಲಕಾಲಕ್ಕೆ ತಕ್ಕಂತೆ ಹಲವು ಸುಧಾರಣೆ ತರಬೇಕಿದೆ. ಇಂದು ಸಾಮಾಜಿಕ ಸ್ಥಿತಿಗತಿ, ಕಾನೂನು ಸುವ್ಯವಸ್ಥೆಯ ಪರಿಕಲ್ಪನೆ ಬದಲಾಗುವುದರ ಜೊತೆಗೆ ಅಪರಾಧಗಳು ಬದಲಾಗುತ್ತಿವೆ. ಇದಕ್ಕೆ ತಕ್ಕಹಾಗೆ ತರಬೇತಿಯನ್ನು ಸಜ್ಜುಗೊಳಿಸಬೇಕಿದೆ. ಸೈಬರ್‌ ಕ್ರೈಂ ಇತ್ತೀಚೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ಸಮಾಜಕ್ಕೆ ಅಂಟಿಕೊಂಡಿದೆ. ನಾವು ಹೆಚ್ಚು ಹೆಚ್ಚು ಆಧುನಿಕ ತಂತ್ರಜ್ಞಾನ, ಅಂತರ್ಜಾಲ ಸೇವೆ, ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಬಳಸುತ್ತಿದ್ದು, ಅಲ್ಲಿಯೂ ಅಪರಾಧಗಳು ಹುಟ್ಟಿಕೊಂಡಿವೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿಯೂ ಸೈಬರ್‌ ಪೊಲೀಸ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ಇನ್ನೂ ಹೆಚ್ಚಿನ ಸೈಬರ್‌ ಪೊಲೀಸ್‌ ಠಾಣೆಗಳನ್ನು ನಿರ್ಮಿಸಲಾಗುವುದು ಎಂದರು.

ಆನ್‌ಸೀನ್‌ ಪೊಲೀಸಿಂಗ್‌: ನಮ್ಮಲ್ಲಿನ ಆನ್‌ಸೀನ್‌ ಪೊಲೀಸಿಂಗ್‌ ಕಡಿಮೆ ಇದೆ. ಆನ್‌ಸೀನ್‌ ಕ್ರೈಂನ್ನು ಯಾವ ರೀತಿ ಡಿಟೆಕ್ಟ್ ಮಾಡಬೇಕು ಎಂಬುದನ್ನು ತರಬೇತಿ ಕೊಡಿಸಲು ಚಿಂತಿಸಲಾಗಿದೆ. ಈ ರೀತಿಯ ಹಲವಾರು ಸುಧಾರಣೆಗಳನ್ನು ತರಬೇತಿ ಕೇಂದ್ರಗಳಲ್ಲಿ ಮಾಡುವ ಮೂಲಕ ನಮ್ಮ ಪೊಲೀಸ್‌ ತರಬೇತಿ ಕೇಂದ್ರಗಳನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದರು.

ಇಂದು ದೇಶಕ್ಕೆ ಹಲವಾರು ಸವಾಲುಗಳು ಇದೆ. ವಿದೇಶಿ ನುಸುಳುಕೋರರು ಹೆಚ್ಚಿದ್ದಾರೆ. ಈ ರೀತಿ ನುಸುಳಿ ಬಂದವರು ಭಯೋತ್ಪಾದನೆಯಂತಹ ಕೃತ್ಯಗಳಲ್ಲಿ ತೊಡಗಲು ಸಿದ್ಧಾರಾಗಿದ್ದರೆ ಎಂದು ಎನ್‌ಐಎ ಮಾಹಿತಿ ನೀಡಿದೆ. ಈ ಸಂದರ್ಭದಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ನೀವು ಸಿದ್ಧರಾಗಬೇಕಿದೆ ಎಂದು ಕಿವಿಮಾತು ಹೇಳಿದರು. 58 ಮಂದಿ ಪುರುಷ ಹಾಗೂ 4 ಮಂದಿ ಮಹಿಳಾ ಪ್ರಶಿಕ್ಷಣಾರ್ಥಿಗಳು 11 ತಿಂಗಳು ತರಬೇತಿ ಪಡೆದಿದ್ದಾರೆ.

ಚರಣ್‌ ಎಸ್‌.ಗೆ ಸರ್ವೋತ್ತಮ ಪ್ರಶಸ್ತಿ: 42ನೇ ತಂಡದ ಪ್ರೊಬೆಷನರಿ ಆರ್‌ಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಚರಣ್‌ ಎಸ್‌. ಸರ್ವೋತ್ತಮ ಪ್ರಶಸ್ತಿ ಪಡೆದುಕೊಂಡರು. 2ನೇ ಸ್ಥಾನವನ್ನು ಎಸ್‌. ರಘುರಾಜ್‌ ಪಡೆದುಕೊಂಡರು. ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಅರ್ಪಿತಾರೆಡ್ಡಿ ಪಡೆದುಕೊಂಡರು. ಉತ್ತಮ ರೈಫ‌ಲ್‌ ಫೈರಿಂಗ್‌ ವಿಭಾಗದಲ್ಲಿ ಬಾನೆ ಸಿದ್ದಣ್ಣ, ರಿವಾಲ್ವರ್‌ ಫೈರಿಂಗ್‌ನಲ್ಲಿ ಸಂಜೀವ ಗಟ್ಟರಗಿ, ಬೆಸ್ಟ್‌ ಡೈರೆಕ್ಟರ್‌ ಅಸೆಸ್‌ಮೆಂಟ್‌ ವಿಭಾಗದಲ್ಲಿ ಉಮಾಶ್ರೀ ಕಲಕುಟಗಿ, ಒಳಾಂಗಣ ಅತ್ಯತ್ತಮ ಪ್ರಶಿಕ್ಷಣಾರ್ಥಿಯಾಗಿ ಎಸ್‌. ರಘುರಾಜ್‌, ಹೊರಾಂಗಣ ಅತ್ಯತ್ತಮ ಪ್ರಶಿಕ್ಷಣಾರ್ಥಿಯಾಗಿ ಮಂಜಣ್ಣ ಪ್ರಶಸ್ತಿ ಪಡೆದುಕೊಂಡರು.

ಈ ಸಂದರ್ಭ ತರಬೇತಿ ವಿಭಾಗದ ಪೊಲೀಸ್‌ ಮಾಹಾ ನಿರ್ದೇಶಕ ಪಿ.ಕೆ. ಗರ್ಗ್‌, ಪೊಲೀಸ್‌ ಮಹಾ ನಿರೀಕ್ಷಕ ಎಸ್‌. ರವಿ, ಪೊಲೀಸ್‌ ಮಹಾ ನಿರೀಕ್ಷಕರು ಮತ್ತು ನಿರ್ದೇಶಕ ವಿಪುಲ್‌ ಕುಮಾರ್‌, ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರಿನ ಸುಧೀರ್‌ ಕುಮಾರ್‌ ರೆಡ್ಡಿ ಇದ್ದರು.

ಪ್ರತಿ ಜಿಲ್ಲೆಯಲ್ಲೂ ವಿಧಿ ವಿಜ್ಞಾನ ಲ್ಯಾಬ್‌: ಎಫ್ಎಸ್‌ಎಲ್‌ಗ‌ಳನ್ನು ಜಿಲ್ಲಾ ಮಟ್ಟಕ್ಕೆ ತೆಗೆದುಕೊಂಡು ಹೋಗುವ ನಿರ್ಧರಿಸಿದ್ದು, ಪ್ರತಿ ಜಿಲ್ಲೆಯಲ್ಲಿಯೂ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗುವುದು. ಇದರ ಜೊತೆಗೆ ಪ್ರತಿ ಠಾಣೆಗಳಲ್ಲೂ ಪ್ರಾಥಮಿಕ ವಿಧಿವಿಜ್ಞಾನ ಪ್ರಯೋಗಾಲಯ ಮಾಡುವ ಚಿಂತನೆಯೂ ಇದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಸೈಬರ್‌ ಕ್ರೈಂ ಡಿಟೆಕ್ಷನ್‌ ಮಾಡುವ ಹಾಗೂ ಎಫ್ಎಸ್‌ಎಲ್‌ ಲ್ಯಾಬ್‌ ನಡೆಸುವುದರ ಬಗ್ಗೆ ಎರಡೂ ಮೂಲಭೂತ ತರಬೇತಿಗಳನ್ನು ಹೊಸದಾಗಿ ಮುಂದಿನ ವರ್ಷ ಅಕಾಡೆಮಿಗಳಲ್ಲಿ ಅಳವಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪೊಲೀಸರಿಗೆ ಸ್ವಂತ ಮಾಹಿತಿ ಜಾಲ ಇರಲಿ: ಪೊಲೀಸರಿಗೆ ಸ್ವಂತ ಮಾಹಿತಿ ಜಾಲ ಇರಬೇಕು. ಇಂದು ಸಾಕಷ್ಟು ತಂತ್ರಜ್ಞಾನ ಇದೆ. ಅದನ್ನು ಬಳಕೆ ಮಾಡಿಕೊಂಡು ತಮ್ಮದೇ ಸ್ವಂತ ಮಾಹಿತಿ ಜಾಲವನ್ನು ಹೊಂದಬೇಕು. ಇದರಿಂದ ನಿಮ್ಮನ್ನು ಯಾರೂ ದಾರಿತಪ್ಪಿಸಲು ಸಾಧ್ಯವಾಗುವುದಿಲ್ಲ. ಕಳ್ಳರಿಗೆ, ಉಗ್ರರಿಗೆ ಕಠಿಣರಾಗಿ, ಜನಸಾಮಾನ್ಯರೊಂದಿಗೆ ಜನಸ್ನೇಹಿಯಾಗಿ ಇರಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪೊಲೀಸರಿಗೆ ಕರ್ತವ್ಯದ ಜೊತೆಗೆ ಸಮಯ ಪ್ರಜ್ಞೆ ಮತ್ತು ಸ್ಥಿತ ಪ್ರಜ್ಞೆ ಮುಖ್ಯವಾಗಿದೆ. ಮಾನಸಿಕವಾಗಿ ನೀವು ಶಕ್ತಿಶಾಲಿಯಾದರೆ ದೈಹಿಕವಾಗಿಯೂ ಶಕ್ತಿಶಾಲಿಯಾಗುತ್ತೀರಿ. ದೇಹ, ಮನಸ್ಸು ಎರಡೂ ಒಂದಾಗಿ ಕೆಲಸ ಮಾಡಿದರೆ ಯಶಸ್ಸು ಖಂಡಿತವಾಗಿ ಸಿಗಲಿದೆ. ಇಂದಿನ ಯುವ ಪೀಳಿಗೆ ದೇಶಾಭಿಮಾನ ಮತ್ತು ದೇಶಪ್ರೇಮವನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಟಾಪ್ ನ್ಯೂಸ್

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-snehamayi

Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

3-hunsur

Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.