ಸಿಎಫ್ಟಿಆರ್‌ಐನಿಂದ 2 ಹೊಸ ಉತ್ಪನ್ನ ಬಿಡುಗಡೆ
Team Udayavani, Feb 12, 2019, 7:26 AM IST
ಮೈಸೂರು: ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್ಟಿಆರ್‌ಐ) ದೀರ್ಘ ಕಾಲ ಬಾಳಿಕೆ ಬರುವ 2 ವಿನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಉತ್ತರ ಕರ್ನಾಟಕದಲ್ಲಿ ಸುಪ್ರಸಿದ್ಧವಾದ ಗೋಧಿ ಹುಗ್ಗಿ ಇದೀಗ ಒಂದು ವರ್ಷಗಳ ಕಾಲ ಬಾಳಿಕೆ ಬರುವಂತೆ ಕ್ಯಾನುಗಳಲ್ಲಿ ಪ್ಯಾಕ್ ಆಗಿ ದೊರೆಯಲಿದೆ. ಗೋಧಿಯಿಂದ ತಯಾರಿಸಲ್ಪಡುವ ಪಾಯಸದಂತಹ ಈ ತಿನಿಸನ್ನು ಧಾರವಾಡದ ಲತ್ತಿ/ ಲಟ್ಟಿ ಫುಡ್ಸ್ ಕಂಪನಿಯು ತಯಾರಿಸಿ ಮಾರಾಟ ಮಾಡುತ್ತಿದೆ.
ಮೈಸೂರಿನ ಅವಧೂತ ದತ್ತಪೀಠವು ಭಕ್ತರಿಗೆ ವಿತರಿಸುವ ಪ್ರಸಾದಂ, ಸಂಸ್ಥೆಯು ಅಭಿವೃದ್ಧಿಪಡಿಸಿರುವ ಮತ್ತೂಂದು ಉತ್ಪನ್ನ. ಗೋಧಿ ಹಿಟ್ಟು, ಬೆಲ್ಲ, ತುಪ್ಪ, ಗೋಡಂಬಿ-ಬಾದಾಮಿಯಂತಹ ಬೀಜಗಳನ್ನು ಸೇರಿಸಿ ತಯಾರಿಸುವ ಪ್ರಸಾದವು ಈಗ ಟಿನ್ ರಹಿತ ಸ್ಟೀಲ್ ಡಬ್ಬಿಯಲ್ಲಿ ಪ್ಯಾಕ್ ಆಗಿ ದೊರೆಯಲಿದೆ. ಕನಿಷ್ಠ ಮೂರು ತಿಂಗಳು ಈ ಪ್ರಸಾದ ಕೆಡದೆ ಉಳಿಯಲಿದೆ.
ಗಣಪತಿ ಸಚ್ಚಿದಾನಂದ ಆಶ್ರಮ ಎಂದು ಹೆಸರಿರುವ ಶ್ರೀ ದತ್ತಪೀಠ ದೀರ್ಘ ಬಾಳಿಕೆಯ ಪ್ರಸಾದವನ್ನು ಅಭಿವೃದ್ಧಿಪಡಿಸಿಕೊಡುವಂತೆ ವಿನಂತಿಸಿತ್ತು. ಅದಕ್ಕಾಗಿ ಪ್ರಸಾದವನ್ನು ಹರ್ಡಲ್ ತಂತ್ರಜ್ಞಾನವನ್ನು ಬಳಸಿ ಸಂಸ್ಕರಿಸಿ ಪ್ಯಾಕ್ ಮಾಡಿದೆವು.
ಸಾಮಾನ್ಯ ಉಷ್ಣತೆಯಲ್ಲಿ ಈ ಪ್ರಸಾದ ಮೂರು ತಿಂಗಳು ಬಾಳಿಕೆ ಬರುತ್ತದೆ ಎನ್ನುತ್ತಾರೆ ಪ್ರಸಾದವನ್ನು ಅಭಿವೃದ್ಧಿಪಡಿಸಿದ ತಂಡದ ಸದಸ್ಯರಾದ ಸಿಎಫ್ಟಿಆರ್‌ಐ ಆಹಾರ ಪ್ಯಾಕೇಜಿಂಗ್ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರೂ ಆಗಿರುವ ವಿಜ್ಞಾನಿ ಎಚ್.ಎಸ್.ಸತೀಶ್.
ದೀರ್ಘ ಬಾಳಿಕೆ: ಪಾರಂಪರಿಕ ಸ್ವಾದದ ಜೊತೆಗೆ ದೀರ್ಘ ಬಾಳಿಕೆಯ ತಂತ್ರಜ್ಞಾನವೂ ಮಿಳಿತವಾಗಿರುವ ಈ ಉತ್ಪನ್ನಗಳನ್ನು ದಾಸ್ತಾನಿಡಲು ರೆಫ್ರಿಜಿರೇಟರುಗಳ ಅಗತ್ಯವಿಲ್ಲ. ಆಹಾರ ಸುರಕ್ಷತೆಯ ಜೊತೆಗೇ ವಿಸ್ತೃತ ಮಾರುಕಟ್ಟೆಯ ಲಾಭವನ್ನು ಇವು ಒದಗಿಸಲಿವೆ ಎನ್ನುತ್ತಾರೆ ಸತೀಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.