20 ಮಕ್ಕಳು ಶಿಕ್ಷಣದಿಂದ ವಂಚಿತ
Team Udayavani, Dec 12, 2022, 3:40 PM IST
ಎಚ್.ಡಿ.ಕೋಟೆ: ಶಿಕ್ಷಣ ಮಕ್ಕಳ ಆ ಜನ್ಮಸಿದ್ದ ಹಕ್ಕು ಎನ್ನುವ ಕಾನೂನು ಜಾರಿಯಲ್ಲಿದೆ, ಮಕ್ಕಳಶಿಕ್ಷಣಕ್ಕಾಗಿ ಏನೆಲ್ಲಾ ಯೋಜನೆಗಳನ್ನು ಜಾರಿಗೆತಂದಿರುವುದಾಗಿ ಸರ್ಕಾರ ಪ್ರಚಾರ ನೀಡುತ್ತಿದೆ. ಆದರೆ ಕಳೆದ 3-4 ವರ್ಷಗಳ ಹಿಂದಿನಿಂದ ವಲಸೆ ಬಂದು ಬಯಲಿನಲ್ಲಿ ಆಶ್ರಯ ಪಡೆದಿರುವ ಈ 20ಕ್ಕೂ ಅಧಿಕ ಮಕ್ಕಳು ಕಲಿಕೆಯಿಂದ ಹೊರಗುಳಿದಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಗಮನಹರಿಸದೇ ಇರುವುದು ವಿಪರ್ಯಾಸ.
ಪಟ್ಟಣದ ಹುಣಸೂರು ಬೇಗೂರು ಮುಖ್ಯರಸ್ತೆ ಮಾರ್ಗದ ಬದಿಯ ಬಯಲಿನಲ್ಲಿಸುಮಾರು 10 ಕುಟುಂಬಗಳು ನೆರೆಯ ಆಂಧ್ರ ಪ್ರದೇಶದಿಂದ ತಲೆ ಕೂದಲು ವ್ಯಾಪಾರಮಾಡಿಕೊಂಡು ಜೀವನ ನಡೆಸಲು ವಲಸೆ ಬಂದು ಆಶ್ರಯ ಪಡೆದುಕೊಂಡಿದ್ದಾರೆ.
ಇಲ್ಲಿ 20ಕ್ಕೂ ಅಧಿಕ ಮಕ್ಕಳು ಕಲಿಕೆಯಿಂದ ಹೊರಗುಳಿದಿದ್ದರೂ ತಾಲೂಕು ಆಡಳಿತ ಅಥವಾ ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸದೇ ಇರುವುದನ್ನು ಗಮನಿಸಿದಾಗ ತಾಲೂಕು ಕೇಂದ್ರ ಸ್ಥಾನದಲ್ಲೇ ಈ ಸ್ಥಿತಿಯಾದರೆ ಇನ್ನು ಗ್ರಾಮೀಣ ಪ್ರದೇಶಗಳಲ್ಲಿನ ಪಾಡೇನ್ನು ಅನ್ನುವ ಅನುಮಾನ ಕಾಡುತ್ತಿದೆ.
ಅಧಿಕಾರಿಗಳು ಮತ್ತು ಸರ್ಕಾರದ ಈ ನಿರ್ಲಕ್ಷ್ಯತನದ ಧೋರಣೆಯಿಂದ 3-4 ವರ್ಷಗಳ ಹಿಂದಿನಿಂದ ಪುಟಾಣಿ ಮಕ್ಕಳು ಶಾಲೆಗೂ ಹೋಗದೆ ಕಲಿಕೆಯೂ ಇಲ್ಲದೆ ಬಯಲಿನಲ್ಲಿರುವ ಪೊದೆಗಳಲ್ಲಿ ಆಟವಾಡಿ ಕೊಂಡು ಅಲ್ಲಲ್ಲಿ ಭಿಕ್ಷಾಟನೆ ಮಾಡಿಕೊಂಡು ದಿನ ಕಳೆಯುತ್ತಿವೆ.
ರಕ್ಷಣೆ ಇಲ್ಲದ ಸ್ಥಳದಲ್ಲಿ ಮೂಲಸೌಕರ್ಯ ವಂಚಿತ ಜಾಗದಲ್ಲಿ ಪೊದೆಗಳ ನಡುವೆ ವಿಷಜಂತುಗಳ ಕಾಟವಿದ್ದರೂ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿಕೊಂಡು ದಿನ ಕಳೆಯುತ್ತಿರುವ ಈ ಅಲೆ ಮಾರಿ ಕುಟುಂಬದ ಮಕ್ಕಳ ಕಲಿಕೆಗೆ ತಾಲೂಕು ಆಡಳಿತ ಅಥವಾ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳವರೋ ಕಾದು ನೋಡಬೇಕಿದೆ.
ಶಿಕ್ಷಣದಿಂದ ವಂಚಿತವಾಗಿವೆ ಮಕ್ಕಳು: ಪೋಷಕರೇನೋ ಜೀವನ ನಿರ್ವಹಣೆಗೆಂದುಪ್ರತಿದಿನ ತಾಲೂಕಿನ ವಿವಿಧ ಕಡೆಗಳಿಗೆ ವಲಸೆ ಹೋಗಿ ಕೂದಲು ಖರೀದಿ ವ್ಯಾಪಾರಮಾಡಿಕೊಂಡು ಬಂದರೆ ಪೋಷಕರು ಬರುವ ತನಕ ತಾತ್ಕಾಲಿಕ ಟೆಂಟ್‌ಗಳ ಆವರಣದಲ್ಲಿ ಆಟವಾಡುವ ಪುಟಾಣಿಗಳು ವಿಷಜಂತುಗಳ ಅವಾಸ ಸ್ಥಾನ ಅನಿಸಿಕೊಂಡ ಪೊದೆಗಳು, ಮರದ ಕೊಂಬೆಗಳು ಅನ್ನದೇ ಆಟದಲ್ಲಿಕಾಲ ಹರಣ ಮಾಡುತ್ತಿವೆ. ಇದರಿಂದ ಜೀವಕ್ಕೆ ಸಂಚಕಾರ ಒದಗುವ ಸಾಧ್ಯತೆ ಇದ್ದು, ಕಲಿಯಿಂದಲೂ ವಂಚಿತರಾಗುತ್ತಿದ್ದಾರೆ.
ಗರ್ಭಿಣಿಯರಿಗಿಲ್ಲ ಆರೋಗ್ಯ ತಪಾಸಣೆ : ತಾತ್ಕಾಲಿಕ ಟೆಂಟ್‌ನಲ್ಲಿ ಇಬ್ಬರು ತುಂಬು ಗರ್ಭಿಣಿಯರಿದ್ದು, ಒಬ್ಬರಿಗೆ 7 ತಿಂಗಳು ಮತ್ತೂಬ್ಬರಿಗೆ 4 ತಿಂಗಳಾಗಿದ್ದರೂ ಇಲ್ಲಿಯತನಕ ಯಾವುದೇ ಚುಚ್ಚುಮದ್ದು ಪಡೆದುಕೊಂಡಿಲ್ಲ. ತಪಾಸಣೆಗೂ ಒಳಗಾಗಿಲ್ಲ, ಗರ್ಭಿಣಿಯರ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗದೇ ಇರುವುದು ವಿಪರ್ಯಾಸವೇ ಸರಿ.
ತಾತ್ಕಾಲಿಕ ಟೆಂಟ್ ಶಾಲೆ ಆರಂಭಿಸಿ:
ವಲಸಿಗರು ಆಂಧ್ರ ಮೂಲದವರಾಗಿರುವುದರಿಂದ ಅವರ ಭಾಷೆ ತೆಲುಗು. ಶಿಕ್ಷಣ ಇಲಾಖೆಮಕ್ಕಳ ಕಲಿಕೆ ದೃಷ್ಟಿಯಿಂದ ತಾತ್ಕಾಲಿಕ ಟೆಂಟ್ ಶಾಲೆ ಆರಂಭಿಸಿ ಅಲ್ಲಿ ತೆಲುಗು ಭಾಷೆ ಅರಿತಿರುವಒಬ್ಬ ಶಿಕ್ಷಕರನ್ನು ನಿಯೋಜನೆಗೊಳಿಸುವುದರಿಂದ ಮಕ್ಕಳ ಕಲಿಕೆಗೂ ಅನುಕೂಲವಾ ಗುವುದರ ಜೊತೆಯಲ್ಲಿ ಮಕ್ಕಳು ಬಯಲಿನ ಪೊದೆಗಳಲ್ಲಿ ಆಟವಾಡುವುದರಿಂದ ಸಂಭವಿಸಬಹುದಾದ ಅಪಾಯ ತಪ್ಪಿಸಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕೆಂಬ ನಿಯಮ ಕೇವಲ ಕಾನೂನಾಗಿ ಉಳಿದಿದೆ ಅನ್ನುವುದಕ್ಕೆ ಶಿಕ್ಷಣದಿಂದ ವಂಚಿತವಾಗಿರುವ ಅಲೆಮಾರಿ ಮಕ್ಕಳ ನೈಜತೆ ಪ್ರತ್ಯಕ್ಷ ಸಾಕ್ಷಿಯಾಗಿದೆ. 4 ವರ್ಷಗಳಿಂದ ತಾಲೂಕು ಕೇಂದ್ರ ಸ್ಥಾನದ ಒಂದೇ ಕಡೆ ವಲಸಿಗರು ಬೀಡು ಬಿಟ್ಟಿದ್ದರೂ ಆ ಮಕ್ಕಳಿಗೆ ಶಿಕ್ಷಣ ಆರೋಗ್ಯ ನೀಡದೇ ಇರುವುದು ದೌರ್ಭಾಗ್ಯ. ಇನ್ನಾದರೂ ಸಂಬಂಧ ಪಟ್ಟವರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಲಿ.-ಪಿ.ಸುರೇಶ್, ಹ್ಯಾಂಡ್‌ಪೋಸ್ಟ್
ವಲಸಿಗರ ತಾಣಕ್ಕೆ ಸೋಮವಾರ ಭೇಟಿ ನೀಡಿ ಅಲ್ಲಿನ ಮಕ್ಕಳ ಸಮೀಕ್ಷೆ ನಡೆಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆಪೂರಕವಾಗಿ ಸರ್ಕಾರದ ನಿಯಮಾವಳಿಯಂತೆ ಕ್ರಮವಹಿಸಲಾಗುತ್ತದೆ. -ಉದಯಕುಮಾರ್, ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ
– ಎಚ್.ಬಿ.ಬಸವರಾಜು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.