ಹೆಚ್ಚು ಇಂಜಕ್ಷನ್ ವೆಲ್ ನಿರ್ಮಿಸುವ ಗ್ರಾ.ಪಂ.ಗೆ 20 ಲಕ್ಷ ಪ್ರಥಮ ಬಹುಮಾನ
Team Udayavani, Jun 16, 2021, 1:26 PM IST
ಹುಣಸೂರು : ತಾಲೂಕಿನಲ್ಲಿ ಜಲ ಮರುಹೂರಣ(ಇಂಜಕ್ಷನ್‌ವೆಲ್)ಕ್ಕೆ ಹೆಚ್ಚು ಆದ್ಯತೆ ನೀಡಿ ಸುಮಾರು 2ಸಾವಿರ ವೆಲ್‌ಗಳನ್ನು ನಿರ್ಮಿಸುವ ಮೂಲಕ ಅಂತರ್ಜಲವೃದ್ದಿಸಲು ಆದ್ಯತೆ ನೀಡಬೇಕು.೨೦೨೨ ಮಾರ್ಚ್‌ನೊಳಗೆ ಹೆಚ್ಚು ಇಂಜಕ್ಷನ್‌ವೆಲ್ ನಿರ್ಮಿಸುವ ಗ್ರಾ.ಪಂ.ಗೆ ಶಾಸಕರ ನಿಧಿಯಿಂದ 20 ಲಕ್ಷ ಬಹುಮಾನ ನೀಡುವುದಾಗಿ ಶಾಸಕ ಎಚ್.ಪಿ.ಮಂಜುನಾಥ್ ಪ್ರಕಟಿಸಿದರು.
ನಗರದ ತಾ.ಪಂ.ಸಭಾಂಗಣದಲ್ಲಿ ಶಾಲೆ,ಅಂಗನವಾಡಿ ಹಾಗೂ ಜಲಶಕ್ತಿ ಅಭಿಯಾನ್ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಶಾಸಕರುನರೇಗಾದಲ್ಲಿ ಜಿಲ್ಲೆಯಲ್ಲೇ ಹೆಚ್ಚು ಕಾಮಗಾರಿ ನಡೆಸಿ ಕಳೆದವರ್ಷ 29.25 ಕೋಟಿ ರೂ ಬಳಕೆ ಮಾಡಿ ಶೇ.೧೮೦ರಷ್ಟು ಸಾಧನೆ ಮಾಡಲಾಗಿದೆ ಎಂಬ ಇಓ ಗಿರೀಶ್‌ರ ಮಾಹಿತಿಗೆ ಅಭಿನಂದಿಸಿದ ಶಾಸಕರು ಮುಂದೆ ಜಲ ಮರು ಹೂರಣಕ್ಕೆ ನರೇಗಾ ಯೋಜನೆಯನ್ನು ಬಳಸಿಕೊಂಡು ಹೆಚ್ಚು ಕಾಮಗಾರಿ ನಡೆಸಿ, ನರೇಗಾ ಇಂಜಿನಿಯರ್‌ಗಳ ಬಗ್ಗೆ ಸಾಕಷ್ಟು ದೂರುಗಳಿದ್ದು, ಮುಂದೆ ದೂರು ಬಾರದಂತೆ ಕಾರ್ಯ ನಿರ್ವಹಿಸಿರೆಂದು ಎಚ್ಚರಿಸಿದರು.
ಜಲಶಕ್ತಿ ಯೋಜನೆಯಡಿ ಸಕಾಲದಲ್ಲಿ ನೀರು ಪೂರೈಸುವ ಸಂಬಂಧ ಮೊದಲ ಹಂತದ 28 ಗ್ರಾಮಗಳಲ್ಲಿ ಕಾಮಗಾರಿ ಮುಗಿಸಬೇಕೆಂದು ಇಂಜಿನಿಯರ್‌ಗೆ ಸೂಚಿಸಿದರು.
ಜಲಶಕ್ತಿ ಮರುಹೂರಣಕ್ಕೆ ಬಹಯುಮಾ:
ಜಲ ಮರುಹೂರಣ(ಇಂಜಕ್ಷನ್‌ವೆಲ್)ಯೋಜನೆಯಿಂದ ಕೃಷಿ ಭೂ ಪ್ರದೇಶ ಹೆಚ್ಚಲಿದ್ದು, ರೈತರ ಬದುಕು ಹಸನಾಗಲಿದೆ. ಹೀಗಾಗಿ ಈ ಯೋಜನೆಗೆ ಹೆಚ್ಚು ಆದ್ಯತೆ ನೀಡಿ ತಾಲೂಕಿನಾದ್ಯಂತ 2 ಸಾವಿರ ವೆಲ್‌ಗಳನ್ನು ನಿರ್ಮಿಸುವ ಮೂಲಕ ಅಂತರ್ಜಲವೃದ್ದಿಸಲು ಆದ್ಯತೆ ನೀಡಬೇಕು. 2022 ಮಾರ್ಚ್‌ನೊಳಗೆ ಹೆಚ್ಚು ಇಂಜಕ್ಷನ್‌ವೆಲ್ ನಿರ್ಮಿಸುವ ಗ್ರಾ.ಪಂ.ಗೆ ಶಾಸಕರ ನಿಧಿಯಿಂದ 21 ಲಕ್ಷ ಮುಂಬರುವ ಮಾರ್ಚ್‌ನೊಳಗೆ ಹೆಚ್ಚು ಇಂಜಕ್ಷನ್ ವೆಲ್ ನಿರ್ಮಿಸುವ ಗ್ರಾ.ಪಂ.ಗೆ ಶಾಸಕರ ನಿಧಿಯಿಂದ 20ಲಕ್ಷ(ಪ್ರಥಮ), 15ಲಕ್ಷ(ದ್ವಿತೀಯ), 10ಲಕ್ಷ (ತೃತೀಯ) ಬಹುಮಾನ ನೀಡಲಾಗುವುದೆಂದರು.
ಇಂಜಿನಿಯರ್‌ಗಳ ನಿರ್ಲಕ್ಷ್ಯ ಬೇಸರ:
ವಿವಿಧ ಯೋಜನೆಯಡಿ ಹಾಗೂ ಮಳೆ ಹಾನಿ ಅನುದಾನದಡಿ ತಾಲೂಕಿನ ಸುಮಾರು ೫೦ ಅಂಗನವಾಡಿ, ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಬಂದಿದ್ದರೂ ಕಟ್ಟಡಗಳು ಮೇಲೇಳದಿರುವುದು ಹಾಗೂ ದುರಸ್ತಿಯಾಗದಿರುವ ಬಗ್ಗೆ ಇಂಜಿನಿಯರ್‌ಗಳು ನೀಡಿದ ಸಬೂಬಿಗೆ ತೀವ್ರ ಬೇಸರ ವ್ಯಕ್ತಿಪಡಿಸಿ, ಕಂಟ್ರಾಕ್ಟರ್ ಪರ ಕೆಲಸ ಮಾಡುತ್ತಿದ್ದೀರಾ, ಕೆಲಸ ಮಾಡದೆ ಸುಮ್ಮನೆ ಸಂಬಳ ತಗೊತೀರಾ, ತಾಲೂಕನ್ನು ಹಾಳು ಮಾಡಲು ಬಂದಿದ್ದೀರಾ, ನಿಮಗೆ ಆತ್ಮತೃಪ್ತಿ ಎಂಬುದಿದೆಯಾ, ನಿಮ್ಮಿಂದಾಗಿ ತಾಲೂಕಿನ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಅವರ ಭವಿಷ್ಯಕ್ಕೆ ಕಲ್ಲು ಹಾಕುತ್ತಿದ್ದೀರಾ ಎಂದು ಎ.ಇ.ಇ.ಪ್ರಭಾಕರ್, ಇಂಜಿನಿಯರ್ ಕೊಂಡಯ್ಯ ಮತ್ತಿತರರನ್ನು ತರಾಟೆಗೊಳಪಡಿಸಿ, ಬರುವ ಜುಲೈ ಅಂತ್ಯದೊಳಗೆ ಕಾಮಗಾರಿ ಮುಗಿಸಿರಬೇಕೆಂದು ತಾಕೀತು ಮಾಡಿದರು. ಅಲ್ಲದೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ಲಕ್ಷ್ಯತೆ ಕುರಿತು ನೋಟೀಸ್ ನೀಡುವಂತೆ ತಾ.ಪಂ. ಇಓ. ಗಿರೀಶ್‌ರಿಗೆ ಹಾಗೂ ಇಂಜಿನಿಯರ್‌ಗಳ ಕ್ಷೇತ್ರ ಬದಲಾವಣೆ ಮಾಡಿ ಕೆಲಸ ಮಾಡುವ ಇಂಜಿನಿಯರ್‌ಗಳಿಗೆ ವಹಿಸುವಂತೆ ಎ.ಇ.ಇಗೆ ಸೂಚಿಸಿದರು.
ಇದೇವೇಳೆ ತಹಸೀಲ್ದಾರ್ ಬಸವರಾಜು ಮಳೆ ಹಾನಿಯ ಅನುದಾನವನ್ನು ಇನ್ನೂ ಬಳಕೆ ಮಾಡದಿರುವುದು ಸರಿಯಲ್ಲ, ಹೀಗೆ ಆದಲ್ಲಿ ಈಬಾರಿಯ ಮಳೆಯಲ್ಲಿ ಮತ್ತೆ ಹಾನಿಗೊಂಡಲ್ಲಿ ಅನುದಾನ ಸಿಗುವುದಿಲ್ಲವೆಂದು ಎಚ್ಚರಿಸಿದರು. ಸಭೆಯಲ್ಲಿ ಡಾ.ಕೀರ್ತಿಕುಮಾರ್, ಸಿ.ಡಿ.ಪಿ.ಓ.ರಶ್ಮಿ, ಸಹಾಯಕ ನಿರ್ದೇಶಕ ಲೋಕೇಶ್, ಬಿಇಓ ನಾಗರಾಜ್, ಎ.ಇ.ಇ.ಮಹೇಶ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.