ವೈರಸ್‌ ಯುದ್ಧದಲ್ಲಿ 24 ಯೋಧರು ಹುತಾತ್ಮರು


Team Udayavani, Oct 22, 2020, 1:41 PM IST

MYSURU-TDY-2

ಸಾಂದರ್ಭಿಕ ಚಿತ್ರ

ಮೈಸೂರು :  ಹಿಂದೆಂದೂ ಕಂಡರಿಯದಂತೆ ಇಡೀ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಜೈವಿಕ(ಕೋವಿಡ್)ಯುದ್ಧದಲ್ಲಿ ಜೀವದ ಹಂಗು ತೊರೆದು ಹೋರಾಡಿ 24ಯೋಧರು ಹುತಾತ್ಮರಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ತೊಲಗಿಸಲು ವೈದ್ಯಕೀಯ ಸೇವೆ, ಭದ್ರತೆ-ಕಾನೂನು ಸುವ್ಯವಸ್ಥೆ, ಸ್ವಚ್ಛತೆ, ಜಾಗೃತಿ, ಪೌರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ 24 ಕೋವಿಡ್ ವಾರಿಯರ್ಸ್‌ಗಳು ಸೋಂಕಿಗೆ ಬಲಿಯಾಗಿದ್ದಾರೆ. ಇಂತಹ ಅಸಮಾನ್ಯ ದಿನಗಳಲ್ಲಿ ಅಸಮಾನ್ಯಕೆಲಸದಲ್ಲಿ ಸಕ್ರಿಯರಾಗಿ ಹುತಾತ್ಮರಾಗಿರುವ 24 ಯೋಧರ ಪೈಕಿ 11 ಮಂದಿಗೆ ಮಾತ್ರ ಪರಿಹಾರ ದೊರೆತಿದೆ. ಉಳಿದ 13 ಮಂದಿಗೆ ಪರಿಹಾರ ವಿಳಂಬವಾಗಿದೆ. ಈ ಕುರಿತು ಉದಯವಾಣಿ ಸಮಗ್ರ ಮಾಹಿತಿ ಕಲೆ ಹಾಕಿದೆ.

ವೈದ್ಯರು :  ಜಿಲ್ಲೆಯಲ್ಲಿ ಕೋವಿಡ್ ತಡೆಗೆ ಅಖಾಡಕ್ಕಿಳಿದ ವೈದ್ಯರ ತಂಡ ಕೋವಿಡ್‌ ಟೆಸ್ಟ್‌, ಸೋಂಕಿತರಿಗೆ ಚಿಕಿತ್ಸೆ ನೀಡುವುದು, ಜಿಲ್ಲಾ ಗಡಿ ಭಾಗಗಳಲ್ಲಿ ಕುಳಿತು ಹೊರಗಿ ನಿಂದ ಬರುವವರ ಆರೋಗ್ಯ ಪರೀಕ್ಷಿಸುವಕಾರ್ಯದಲ್ಲಿ ಸಕ್ರಿಯವಾಗಿತ್ತು. ಈ ವೇಳೆ ಕೆಲಸದ ಒತ್ತಡದಿಂದ ಮಾನಸಿಕ ಖನ್ನತೆಗೆ ಒಳಗಾಗಿ ಡಾ| ನಾಗೇಶ್‌ ಮತ್ತು ಡಾ| ನಾಗೇಂದ್ರ ಮೃತಪಟ್ಟಿದ್ದರು. ಬಳಿಕ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಚಂದ್ರಮೋಹನ್‌ ಹಾಗೂ ಡಾ.ವೆಂಕಟೇಶ್‌ ಅವರಿಗೂ ಸೋಂಕು ಹರಡಿ ಚಿಕಿತ್ಸೆ ಫ‌ಲಿಸದೆ ಮೃತಪಟ್ಟರು. ಹುತಾತ್ಮ ರಾದ ನಾಲ್ವರು ವೈದ್ಯರಿಗೂ ಸರ್ಕಾರದಿಂದ ಪರಿಹಾರ ಲಭ್ಯವಾಗಿದೆ.

ಪೌರ ಕಾರ್ಮಿಕರು :  ಮೈಸೂರು ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು,ಡಿ.ಗ್ರೂಪ್‌ ನೌಕರರು ಹಾಗೂ ಪೌರಕಾರ್ಮಿಕರು ಸೇರಿ ಜಿಲ್ಲೆಯಲ್ಲಿ ಇದವರೆಗೂ 173 ಮಂದಿಗೆ ಕೋವಿಡ್ ಸೋಂಕು ತಗುಲಿತ್ತು. ಇವರಲ್ಲಿ ನಾಲ್ವರು ಪೌರಕಾರ್ಮಿಕರಾದ ಮಹದೇವ,ಕೃಷ್ಣಮ್ಮ, ಬನ್ನಾರಿ, ಓಬಮ್ಮ ಚಿಕಿತ್ಸೆ ಫ‌ಲಿಸದೆ ಹುತಾತ್ಮರಾಗಿದ್ದಾರೆ.

ಪೊಲೀಸರು :  ಜಿಲ್ಲೆಯಲ್ಲಿ ಆರಂಭದಿಂದಲೂ ಕೋವಿಡ್ ಲಾಕ್‌ಡೌನ್‌ ಜಾರಿಗೆ ಹಗಲಿರುಳು ಶ್ರಮಿಸಿದವರಲ್ಲಿ ಪೊಲೀಸರ ಪಾತ್ರ ಬಹುಮುಖ್ಯವಾಗಿತ್ತು. ಈ ವೇಳೆ ಕರ್ತವ್ಯ ನಿರತರಾಗಿದ್ದ06 ಮಂದಿ ಪೊಲೀಸರು ಸೋಂಕಿಗೆ ಬಲಿಯಾಗಿದ್ದಾರೆ. ಮೈಸೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಹಾಗೂ ನಂಜನಗೂಡು ಪಟ್ಟಣ ಹಾಗೂ ಹುಣಸೂರು ಪಟ್ಟಣಠಾಣೆಯ ಪೊಲೀಸ್‌ ಪೇದೆಯರಿಬ್ಬರು ಮೃತಪಟ್ಟಿದ್ದಾರೆ. ಈ  ನಾಲ್ಕು ಮಂದಿಗೂ 32 ಲಕ್ಷ ರೂ. ಪರಿಹಾರ ಲಭಿಸಿದೆ. ಮೃತರ ಪತ್ನಿಅಥವಾ ಮಕ್ಕಳಿಗೆ ಅನುಕಂಪದಆಧಾರದ ಮೇರೆಗೆಕೆಲಸ ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಜೊತೆಗೆ ಮೈಸೂರು ನಗರ ಪೊಲೀಸ್‌ ಘಟಕದಲ್ಲಿ ನಗರದ ಲಕ್ಷ್ಮೀಪುರ ಪೊಲೀಸ್‌ ಠಾಣೆಯ ಪೇದೆ ಹಾಗೂ ನಗರ ಸಶಸ್ತ್ರ ಮೀಸಲು -ಪಡೆಯ ಮತ್ತೂಬ್ಬ ಪೇದೆಸೋಂಕಿಗೆ ಬಲಿಯಾಗಿದ್ದು, ಈವರೆಗೂ ಸರ್ಕಾರದಿಂದ ಯಾವ ಪರಿಹಾರವೂ ಇಲ್ಲದೇ ಮೃತರ ಮನೆಯವರು ಕಂಗಾಲಾಗಿದ್ದಾರೆ.

ಡಿ.ಗ್ರೂಪ್‌ ನೌಕರರು :  ಕೋವಿಡ್ ಸೊಂಕಿತರಾಗಿ ಆಸ ³ತ್ರೆಗೆದಾಖಲಾಗಿದ್ದ ರೋಗಿ ಗಳ ಆರೈಕಯಲ್ಲಿ ಆರೋಗ್ಯ ಇಲಾಖೆಯ ಡಿ.ಗ್ರೂಪ್‌ ನೌಕರರ ಸೇವೆ ಗಣ ನೀಯವಾಗಿತ್ತು. ರೋಗಿಗಳ ಸೇವೆ ಸೇರಿದಂತೆ ಆಸ ³ತ್ರೆಯಲ್ಲಿ ವಿವಿಧಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದ05 ಮಂದಿ ಡಿ. ಗ್ರೂಪ್‌ ನೌಕರರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಯಾವ ಇಲಾಖೆಯವರು ಕೋವಿಡ್ ಯೋಧರು? :  ಕೋವಿಡ್‌ ನಂಥ ತೀವ್ರ ತರಹದ ಸಾಂಕ್ರಾಮಿಕಕಾಯಿಲೆ ಹರಡುತ್ತಿರುವ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಕೋವಿಡ್ ವಾರಿಯರ್ಸ್‌ ಎಂದು ಪರಿಗಣಿಸಲಾಗಿದೆ. ಆರೋಗ್ಯ, ಪೊಲೀಸ್‌, ಹೋಂ ಗಾರ್ಡ್‌,ಕಂದಾಯ, ಪೌರ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿ ಸಿಬ್ಬಂದಿ ಈ ಕೋವಿಡ್ ವಾರಿಯರ್ಸ್‌ ವ್ಯಾಪ್ತಿಗೆ ಬರುತ್ತಾರೆ. ಕೋವಿಡ್ ಯೋಧರಾಗಿ ಸೇವೆ ಸಲ್ಲಿಸುತ್ತಿರುವವರುಕೋವಿಡ್‌ ಸೋಂಕಿಗೊಳಗಾಗಿ ಮೃತಪಟ್ಟಲ್ಲಿ, ಅವರಕುಟುಂಬಕ್ಕೆ 30 ಲಕ್ಷ ರೂ. ಪರಿಹಾರವನ್ನು ವಿಮೆಯ ಮೂಲಕ ರಾಜ್ಯ ಸರ್ಕಾರ ನೀಡುತ್ತಿದೆ.

ಚಾಲಕ, ನಿರ್ವಾಹಕರು :  ಮೈಸುರು ಜಿಲ್ಲೆಯಲ್ಲಿ ಲಾಕ್‌ಡೌನ್‌ ನಂತರ ಸಾರಿಗೆ ಬಸ್‌ ಗಳ ಸೇವೆ ಪುನಾರಂಭವಾದಾಗ ಕೋವಿಡ್ ಸೊಂಕಿಗೆ 05 ಮಂದಿ ಮೃತಪಟ್ಟಿದ್ದಾರೆ. ಮೈಸೂರು ಗ್ರಾಮಾಂತರ ವಿಭಾಗದಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಾಸುದೇವನ್‌, ನಿರ್ವಾಹಕರಾಗಿದ್ದ ವಿಜಯ್‌ ಕುಮಾರ್‌ ಸೋಂಕಿಗೆ ಬಲಿಯಾಗಿದ್ದಾರೆ. ಜೊತೆಗೆ ಮೈಸೂರು ನಗರ ವಿಭಾಗದಲ್ಲಿ ನಿರ್ವಾಹಕರಾದರಾಮಕೃಷ್ಣ, ಮಹದೇವು ಹಾಗೂ ಒಬ್ಬ ಚಾಲಕ ಮೃತಪಟ್ಟಿದ್ದಾರೆ. ಆದರೆ, ಇವರಿಗೆ ಇಲಾಖೆಯಿಂದ ಪರಿಹಾರ ಸಿಕ್ಕಿದೆ. ಸರ್ಕಾರದಿಂದ ವಿಶೇಷ ಪರಿಹಾರ ಲಭ್ಯವಾಗಿಲ್ಲ.

24 ಹುತಾತ್ಮರ ಪೈಕಿ  11 ಮಂದಿಗೆ ಪರಿಹಾರ :  ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಒಟ್ಟು 24 ಕೋವಿಡ್ ವಾರಿಯರ್ಸ್‌ಗಳು ಮೃತಪಟ್ಟಿದ್ದಾರೆ. ಈ ಪೈಕಿ 11 ಮಂದಿಗೆ ಪರಿಹಾರ ಸಿಕ್ಕದ್ದರೆ, ಉಳಿದ 13 ಮಂದಿಗೆ ವಂಶವೃಕ್ಷ ಸೇರಿದಂತೆ ಇತರೆ ದಾಖಲೆಗಳನ್ನು ಒದಗಿಸುವಲ್ಲಿ ವಿಳಂಬ ಆಗಿರುವುದ ರಿಂದ ಪರಿಹಾರ ವಿತರಣೆ ತಡವಾಗಿದೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

 

-ಸತೀಶ್‌ ದೇಪುರ

ಟಾಪ್ ನ್ಯೂಸ್

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

1-mannn

Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

KR Nagar: ಸೂಕ್ತ ನಿರ್ವಹಣೆ ಇಲ್ಲದ ಚುಂಚನಕಟ್ಟೆ ನಿಲ್ದಾಣ!

Hanuma-mala

SriRangapattana: ಹನುಮ ಮಾಲಾಧಾರಿಗಳಿಂದ ಮಸೀದಿ ಪ್ರವೇಶ ಯತ್ನ

HD-Kote

H.D.Kote: ಹೆಬ್ಬುಲಿ ದಾಳಿಗೆ ಒಂದೂವರೆ ವರ್ಷದ ಮರಿ ಹುಲಿ ಸಾವು!

court

Mysuru: ಕ್ಷುಲ್ಲಕ ಕಾರಣಕ್ಕೆ ಜೋಡಿ ಕೊ*ಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

Hun-Deid

Hunasur: ನಗರಸಭಾ ಸದಸ್ಯ ಪುತ್ರಿ, ಪದವಿ ವಿದ್ಯಾರ್ಥಿನಿ ಅನಾರೋಗ್ಯದಿಂದ ಮೃತ್ಯು

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

18-aranthodu

Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.