ಹುಣಸೂರು ಉಪ ವಿಭಾಗದಲ್ಲಿ 3 ಟ್ರೀಪಾರ್ಕ್‌


Team Udayavani, May 25, 2018, 2:45 PM IST

m4-hunasu.jpg

ಹುಣಸೂರು: ಸರ್ಕಾರದ ನಿರ್ದೇಶನದಂತೆ ಹುಣಸೂರು ಉಪ ವಿಭಾಗದ ಮೂರು ಕಡೆಗಳಲ್ಲಿ ಟ್ರೀಪಾರ್ಕ್‌ ನಿರ್ಮಿಸಲಾಗಿದ್ದು, ಹುಣಸೂರಿನ ಕಲ್‌ಬೆಟ್ಟ, ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ರಾಗಿಗುಡ್ಡಗಳಲ್ಲಿ ಪ್ರೀ ಪಾರ್ಕ್‌ ಹಾಗೂ ಬೆಟ್ಟದಪುರದಲ್ಲಿ ದೈವಿವನ ನಿರ್ಮಿಸಲಾಗಿದೆ.

ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಹುಣಸೂರು ನಗರಕ್ಕೆ ಸಮೀಪದ ಕಲ್‌ಬೆಟ್ಟ ಸರಕಾರಿ ನಾಟಾ ಸಂಗ್ರಹಾಲಯದ  30 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ಪ್ರಥಮ ಹಂತದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷೊàದ್ಯಾನವನ (ಟ್ರೀಪಾರ್ಕ್‌) ನಿರ್ಮಿಸಲಾಗಿದೆ.

ಹುಣಸೂರು ನಗರಕ್ಕೆ ಸಮೀಪದ ಕಲ್‌ಬೆಟ್ಟ ನಾಟಾ ಸಂಗ್ರಹಾಲಯದ ಅರಣ್ಯ ಪ್ರದೇಶದಲ್ಲಿ ಇಲ್ಲೀಗ ವಾಯುವಿಹಾರ ಹಾಗೂ ವಿಶ್ರಾಂತಿ ತಾಣ, ಪರಿಸರ ಪೂರಕ ವಾತಾವರಣ ಸೃಷ್ಟಿಸಲಾಗಿದೆ. ನಿಸರ್ಗ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣವಾಗಲಿದೆ.

ಏನಿದು ಟ್ರೀ ಪಾರ್ಕ್‌: ಮೊದಲ ಹಂತದಲ್ಲಿ ಕಲ್‌ಬೆಟ್ಟದ ನಾಲ್ಕು ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿದ್ದ ಲಾಂಟಾನಾ ಮತ್ತಿತರ ಗಿಡಗಳನ್ನು ತೆರವುಗೊಳಿಸಲಾಗಿದೆ. ಹೆದ್ದಾರಿ ಬದಿಯಲ್ಲಿ ಸಾಲುಮರದ ತಿಮ್ಮಕ್ಕ ಹೆಸರಿನ ವೃಕ್ಷೊದ್ಯಾನದ ಮುಖ್ಯದ್ವಾರವನ್ನು ಅರಣ್ಯ-ವನ್ಯಜೀವಿಯನ್ನು ಪ್ರತಿಬಿಂಬಿಸುವ ಮಾದರಿಯಲ್ಲಿ ಆಕರ್ಷಣೀಯವಾಗಿ ನಿರ್ಮಿಸಲಾಗಿದೆ.

ಅಲ್ಲಿರುವ ಶ್ರೀಗಂಧ, ಹೊನ್ನೆ, ತಬಸಿ, ಹುಣಸೆ, ಶಿವನೆ, ಕಕ್ಕೆ, ಗುಲ್‌ಮೊಹರ್‌, ಸೀಮೆತಂಗಡಿ ಮತ್ತಿತರ ಗಿಡಮರಗಳಿರುವ ಆವರಣದ ಸುತ್ತ ಸುಮಾರು 3 ಕಿ.ಮೀ ವಾಕಿಂಗ್‌ ಪಾತ್‌ ನಿರ್ಮಿಸಲಾಗಿದೆ. ಪ್ರವಾಸಿಗರು ಹಾಗೂ ವಾಯುವಿಹಾರಿಗಳು ವಿರಮಿಸಲು ಅಲ್ಲಲ್ಲಿ ಕಲ್ಲು ಬೆಂಚುಗಳನ್ನು ಹಾಕಲಾಗಿದೆ.

ಸೌರಶಕ್ತಿಯ ದೀಪಗಳನ್ನು ಅಳವಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಡಸ್ಟ್‌ಬಿನ್‌, ಟಿಕೆಟ್‌ ಕೌಂಟರ್‌, ವಾಚ್‌ಮನ್‌ ವಸತಿಗೃಹ ನಿರ್ಮಿಸಲಾಗಿದೆ. ಅರಣ್ಯ-ಪ್ರಾಣಿಗಳ ಸಂರಕ್ಷಣೆ ಕುರಿತ ಮಹತ್ವ ಸಾರುವ ಘೊಷಣಾ ಫ‌ಲಕಗಳನ್ನು ಅಳವಡಿಸಲಾಗಿದೆ. ಆವರಣದಲ್ಲಿ ಸಿಕ್ಕ ಕಲ್ಲುಬಂಡೆಗಳನ್ನು ಶೃಂಗರಿಸಲಾಗುತ್ತಿದೆ.

ವೀಕ್ಷಣಾ ಗೋಪುರ ನಿರ್ಮಾಣ: ವೃಕ್ಷೊದ್ಯಾನದ ಮಧ್ಯಭಾಗದ ಎತ್ತರ ಪ್ರದೇಶದಲ್ಲಿ ಪರಗೋಲ (ವಿಶ್ರಾಂತಿಗೋಪುರ ) ನಿರ್ಮಿಸಲಾಗಿದೆ. ಇಲ್ಲಿ ವಿಶ್ರಾಂತಿ ಜೊತೆಗೆ ಸುತ್ತಲಿನ ಬೆಟ್ಟಗುಡ್ಡಗಳ ಸೌಂದರ್ಯ ಸವಿಯಲು ಪ್ರಶಸ್ತವಾಗಿದೆ. ಇದರೊಂದಿಗೆ ನಾಟಾ ಸಂಗ್ರಹಾಲಯವನ್ನು ಪ್ರತ್ಯೇಕಿಸಲು ಸರಪಳಿ ಮಾದರಿ ಬೇಲಿ ನಿರ್ಮಿಸಲಾಗಿದೆ.

ಚಾರಣಕ್ಕೂ ಯೋಜನೆ: ಟ್ರೀ ಪಾರ್ಕ್‌ಗೆ ಹೊಂದಿಕೊಂಡಿರುವ ಕಲ್‌ಬೆಟ್ಟದಲ್ಲಿ ಸುಮಾರು ಮೂರು ಕಿ.ಮೀ. ಟ್ರಕ್ಕಿಂಗ್‌ ಪಾತ್‌ ನಿರ್ಮಾಣ ಹಾಗೂ ಉದ್ದಕ್ಕೂ ವನ್ಯಜೀವಿಗಳ ರಕ್ಷಣೆಗಾಗಿ ಬೇಲಿ ನಿರ್ಮಾಣ ಮಾಡಲಾಗುವುದು. ಅಲ್ಲದೆ ಬೆಟ್ಟದ ಮೇಲೊಂದು ವಿಶ್ರಾಂತಿ ಗೋಪುರ ನಿರ್ಮಿಸಲಾಗುವುದು. ಇಲ್ಲಿ ಐದು ವರ್ಷಗಳಲ್ಲಿ ಹಂತಹಂತವಾಗಿ ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಅವರಲ್ಲಿ ಪರಿಸರ ಪ್ರೀತಿ, ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಯೋಜನೆ ರೂಪಿಸಲಾಗಿದೆ.

ಇದೇ ಮಾದರಿಯಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ$ ಮತ್ತು ಕೊಪ್ಪ ವಲಯದ ರಾಗಿಪಾರಂನಲ್ಲೂ ಟ್ರೀ ಪಾರ್ಕ್‌ ನಿರ್ಮಿಸಲಾಗಿದೆಯಲ್ಲದೆ ಬೆಟ್ಟದ ಪುರದ ಸಿಡ್ಲುಮಲ್ಲಿಕಾರ್ಜುನಸ್ವಾಮಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ದೈವಿವನ ನಿರ್ಮಿಸಲಾಗಿದೆ.

ಮುಂದಿನ ವರ್ಷದಲ್ಲಿ ಯೋಗಾ ಪ್ಲಾಟ್‌, ಶ್ರೀಗಂಧದ ಮತ್ತು ರಕ್ತಚಂದನ ಪಾರ್ಕ್‌, ಮಾಹಿತಿ ಕೇಂದ್ರ, ಅಲ್ಲಲ್ಲಿ ಲಾನ್‌ಗಳ ನಿರ್ಮಾಣ, ಮುಖ್ಯ ದ್ವಾರದ ಬಳಿ ವಾಹನ ನಿಲ್ದಾಣ ನಿರ್ಮಾಣ ಸೇರಿದಂತೆ ಪ್ರವಾಸಿಗರಿಗೆ ಪೂರಕ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ. ಈಗಿನ ಗಿಡಮರಗಳ ಜೊತೆಗೆ ಬಸವನ ಪಾದ, ಬೇವು, ನೇರಳೆ, ಹಲಸು ಹಾಗೂ ವರ್ಷವಿಡೀ ಬಿಡುವ ಬಗೆಬಗೆಯ ಹೂವಿನ ಗಿಡ ನೆಡುವುದು, ಪ್ರತಿವರ್ಷ 4 ಹೆಕ್ಟೇರ್‌ ಪ್ರದೇಶವನ್ನು ಅಭಿವೃದ್ಧಿಗೊಳಿಸಲಾಗುವುದು. 
-ಶಾಂತಕುಮಾರಸ್ವಾಮಿ. ಆರ್‌ಎಫ್ಒ, ಹುಣಸೂರು

ಹುಣಸೂರಿನ ಕಲ್‌ಬೆಟ್ಟ ನಾಟಾ ಸಂಗ್ರಹಾಲಯ 178 ಹೆಕ್ಟೇರ್‌ ವಿಸ್ತೀರ್ಣವಿದೆ. ಇದೂ ಸೇರಿದಂತೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ರಾಗಿಗುಡ್ಡದಲ್ಲಿ ಟ್ರೀ ಪಾರ್ಕ್‌ ಹಾಗೂ ಬಿದಿರು ವನ, ಬೆಟ್ಟದಪುರದ ಸಿಡ್ಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ದೈವಿವನ ನಿರ್ಮಿಸಲಾಗುತ್ತಿದೆ. ಐದು ವರ್ಷದ ಯೋಜನೆ ಇದಾಗಿದ್ದು, ಮುಂದೆ ಕಲ್‌ಬೆಟ್ಟದಲ್ಲಿ ಚಾರಣ, ಕೆರೆ ಅಭಿವೃದ್ಧಿಪಡಿಸಿ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲಾಗುವುದು. ಜಿಮ್‌ ಪಾರ್ಕ್‌, ಗಿಡಮೂಲಿಕೆ ಪಾರ್ಕ್‌, ಮಕ್ಕಳ ಆಟಕ್ಕೂ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಥಳೀಯ ಪ್ರದೇಶಕ್ಕನುಗುಣವಾಗಿ ಮುಂದಿನ ದಿನಗಳಲ್ಲಿ ಪ್ರವೇಶ ಶುಲ್ಕ ನಿಗದಿ ಪಡಿಸಲಾಗುವುದು.
-ವಿಜಯಕುಮಾರ್‌, ಡಿಸಿಎಫ್, ಹುಣಸೂರು ವಿಭಾಗ

* ಸಂಪತ್‌ಕುಮಾರ್‌ ಹುಣಸೂರು

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರMUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

FIR: ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನಲ್ಲಿ ಎಫ್ಐಆರ್‌

FIR: ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನಲ್ಲಿ ಎಫ್ಐಆರ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.