ರಾಜ್ಯದಲ್ಲಿ 30 ಸಾವಿರ ಆಮ್ಲಜನಕ ಬೆಡ್
Team Udayavani, Apr 23, 2021, 4:27 PM IST
ಮೈಸೂರು: ಮೇಟಗಳ್ಳಿಯಲ್ಲಿರುವ ಜಿಲ್ಲಾಆಸ್ಪತ್ರೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್,ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗುರುವಾರ ಭೇಟಿ ನೀಡಿಪರಿಶೀಲನೆ ನಡೆಸಿದರು.ಆಸ್ಪತ್ರೆಗೆ ತೆರಳಿದ ಸಚಿವದ್ವಯರುಕೋವಿಡ್ ಸೋಂಕಿತರಿಗೆ ಕಲ್ಪಿಸಿರುವಅನುಕೂಲ, ಕೊರತೆ, ಸಿಬ್ಬಂದಿ ಸಮಸ್ಯೆ ಗಳುಇನ್ನಿತರ ವಿಚಾರಗಳನ್ನು ಪರಿಶೀಲಿಸಿ ಮಾಹಿತಿಪಡೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಮೈಸೂರು ಜಿಲ್ಲೆ ಸೇರಿ ರಾಜ್ಯದಲ್ಲಿ30 ಸಾವಿರ ಆಮ್ಲಜನಕ ಬೆಡ್‌ಗಳನ್ನಾಗಿಪರಿವರ್ತಿಸಿ ಸಜ್ಜುಗೊಳಿಸಲಾಗಿದೆ. ತಾ.ಆಸ್ಪತ್ರೆಗಳಲ್ಲೂ ಆಮ್ಲಜನಕ ಬೆಡ್‌ಗಳ ವ್ಯವಸ್ಥೆಮಾಡಿದ್ದೇವೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಸೋಂಕಿತರ ಪ್ರಮಾಣಏರಿಕೆಯಾದಲ್ಲಿ ಏನು ಮಾಡ ಬೇಕೆಂದುಚಿಂತನೆ ನಡೆಸಿ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತೇವೆ.
ತಾಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿವೆಂಟಿಲೇಟರ್, ಆಮ್ಲಜನಕ ಬೆಡ್‌ಗಳನ್ನಾಗಿಪರಿವರ್ತಿಸ ಲಾಗುತ್ತಿದೆ. ಇದುವರೆಗೆ ಒಟ್ಟು 30ಸಾವಿರ ಆಮ್ಲಜನಕ ಬೆಡ್‌ಗಳಿವೆ. ಮುಂದಿನದಿನಗಳಲ್ಲಿ ಇದು ಸಾಲದಿದ್ದರೆ ಎಂಬ ಆತಂಕಇರುವುದರಿಂದ ಪರ್ಯಾಯ ವ್ಯವಸ್ಥೆಮಾಡಿಕೊಳ್ಳಲಾಗುತ್ತಿದೆ ಎಂದರು.
ಮೈಸೂರಿನಲ್ಲಿ ಆಮ್ಲಜನಕ ಬೆಡ್ಗಳ ಕೊರತೆಯಿಲ್ಲ: ಜಿಲ್ಲಾ ಅಸ್ಪತ್ರೆಗೆ ಅರಿವಳಿಕೆ (ಅನೆಸ್ತೇಸಿಯಾ) ವೈದ್ಯರನ್ನು ನೇಮಕ ಮಾಡಬೇಕೆಂಬಬೇಡಿಕೆ ಬಂದಿದ್ದರಿಂದ ತಕ್ಷಣವೇ ಮೈಸೂರುಮೆಡಿಕಲ್ ಕಾಲೇಜಿ ನಿಂದ ಇಬ್ಬರು-ಮೂವರು ವೈದ್ಯರನ್ನು ನಿಯೋಜನೆಮಾಡುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾಆಸ್ಪತ್ರೆಯಲ್ಲಿ 250 ಹಾಸಿಗೆಗಳಿದ್ದು, ಕೆ.ಆರ್.ಆಸ್ಪತ್ರೆಯಲ್ಲೂ ಶೇ.50ರಷ್ಟು ಹಾಸಿಗೆಗಳುಇವೆ. 39 ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್,ಆಮ್ಲಜನಕ ಬೆಡ್‌ಗಳನ್ನು ಮೀಸಲಿಡುವಂತೆಹೇಳಿದ್ದೇವೆ. ಮೈಸೂರಿನಲ್ಲಿ ಆಮ್ಲಜನಕ ಬೆಡ್‌ಗಳ ಕೊರತೆ ಇಲ್ಲ.
ಜಿಲ್ಲಾ ಆಸ್ಪತ್ರೆಗೆ ಗ್ರೂಪ್-ಡಿ,ಗ್ರೂಪ್-ಸಿ ನೌಕರರನ್ನು ನಿಯೋಜಿಸುವಂತೆಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.ತಾಲೂಕು ಆಸ್ಪತ್ರೆಗಳಲ್ಲೂ 50 ಹಾಸಿಗೆಗಳುಇರುವುದರಿಂದ ಕೊರತೆಯಾಗದಂತೆ ನೋಡಿಕೊಳ್ಳಲು ಸಮರೋಪಾದಿಯಲ್ಲಿ ಕೆಲಸಮಾಡಲಾಗುವುದು ಎಂದರು.
ಕೊರೊನಾ ಕರ್ತವ್ಯಕ್ಕೆ ವಿದ್ಯಾರ್ಥಿಗಳ ಬಳಕೆ:ಸ್ನಾತಕ-ಸ್ನಾತಕೋತ್ತರ ಪದವಿಯ ಅಂತಿಮವರ್ಷದ ಪರೀಕ್ಷೆಗಳನ್ನು ಎರಡು ತಿಂಗಳ ಕಾಲಮುಂದೂಡಿದ್ದೇವೆ. ಅಂತಿಮ ವರ್ಷದವಿದ್ಯಾರ್ಥಿಗಳನ್ನು ಕೊರೊನಾ ಕರ್ತವ್ಯಕ್ಕೆಬಳಸಿಕೊಳ್ಳಲಾಗು ವುದು.
ಆಯಾಯವೈದ್ಯಕೀಯ ಕಾಲೇ ಜಿನ ವ್ಯಾಪ್ತಿಗೆ ಬರುವಜಿಲ್ಲೆಗಳಿಗೆ ನಿಯೋ ಜಿಸಲು ವೈದ್ಯಕೀಯಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಆದೇಶ ಹೊರಡಿ ಸಿದ್ದಾರೆ ಎಂದು ಹೇಳಿದರು.
ತಪ್ಪು ಮಾಡಿದ್ದರೆ ಕ್ರಿಮಿನಲ್ ಮೊಕದ್ದಮೆ:ಯಾವುದೋ ಒಂದು ಲ್ಯಾಬ್‌ನಲ್ಲಿ ಪಾಸಿಟಿವ್‌ಬದಲಿಗೆ ನೆಗೆಟಿವ್ ವರದಿ ನೀಡಲಾಗುತ್ತಿದೆಎನ್ನುವ ಕಾರಣಕ್ಕಾಗಿ ಇಡೀ ವ್ಯವಸ್ಥೆಯನ್ನೇದೂಷಿಸಬಾರದು. ಆತ್ಮಸ್ಥೆçರ್ಯ ಕುಗ್ಗಿಸುವಕೆಲಸ ಮಾಡಬಾರದು. ಒಂದು ಪ್ರಕರಣವನ್ನುವೈಭವೀಕರಿಸಿ ಇಡೀ ವ್ಯವಸ್ಥೆ ದೂಷಣೆಮಾಡುವ ಕೆಲಸ ಸರಿಯಲ್ಲ. ಬೆಂಗಳೂರಿನಲ್ಯಾಬ್‌ನಲ್ಲಿ ಇಂತಹ ತಪ್ಪು ನಡೆದಿರುವ ಬಗ್ಗೆನನ್ನ ಗಮನಕ್ಕೆ ಬಂದ ತಕ್ಷಣ ಅಗತ್ಯ ಕ್ರಮಕೈಗೊಳ್ಳುವಂತೆ ಬಿಬಿಎಂಪಿಗೆ ಸೂಚಿಸಿದ್ದೇನೆ.ತಪ್ಪು ಮಾಡಿದ್ದರೆ ಅಂತಹವರ ವಿರುದ್ಧಮೊಕದ್ದಮೆ ದಾಖಲಿಸಲಾಗುವುದೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.