ಐತಿಹಾಸಿಕ ಸ್ಮಾರಕಗಳ ತ್ರೀಡಿ ಮ್ಯಾಪಿಂಗ್‌, ಲೇಸರ್‌ ಸ್ಕ್ಯಾನಿಂಗ್‌

ಪುರಾತತ್ವ ಇಲಾಖೆಯಿಂದ ರಾಜ್ಯದಲ್ಲಿ ಶಿಥಿಲಗೊಂಡಿರುವ ಅರಮನೆ, ದೇವಾಲಯ, ಕೋಟೆಗಳನ್ನು ಮುಂದಿನ ಪೀಳಿಗೆಗೆ ಕಾಪಿಡುವ ಕಾರ್ಯ

Team Udayavani, Jun 2, 2024, 7:45 AM IST

ಐತಿಹಾಸಿಕ ಸ್ಮಾರಕಗಳ ತ್ರೀಡಿ ಮ್ಯಾಪಿಂಗ್‌, ಲೇಸರ್‌ ಸ್ಕ್ಯಾನಿಂಗ್‌

ಮೈಸೂರು: ರಾಜ್ಯದ ಐತಿಹಾಸಿಕ ಸ್ಮಾರಕಗಳ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯ ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆಯು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದಲ್ಲಿ ತನ್ನ ವ್ಯಾಪ್ತಿಯಲ್ಲಿ ಬರುವ ಸ್ಮಾರಕಗಳು, ದೇವಾಲಯಗಳನ್ನು ತ್ರೀಡಿ ಮ್ಯಾಪಿಂಗ್‌ ಹಾಗೂ ಲೇಸರ್‌ ಸ್ಕ್ಯಾನಿಂಗ್‌ ಮಾಡಿಸುತ್ತಿದೆ.

ರಾಜ್ಯದಲ್ಲಿ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಸುಮಾರು 834 ಸ್ಮಾರಕಗಳು ಬರುತ್ತವೆ. ಅವುಗಳಲ್ಲಿ ಮೈಸೂರು ವಿಭಾಗ-125, ಬೆಂಗಳೂರು ವಿಭಾಗ-105, ಬೆಳಗಾವಿ ವಿಭಾಗ-365 ಹಾಗೂ ಕಲುಬುರಗಿ ವಿಭಾಗ- 249 ಸ್ಮಾರಕಗಳಿದ್ದು ಇವುಗಳಲ್ಲಿ ಬಹುತೇಕ ಸ್ಮಾರಕಗಳ ತ್ರೀಡಿ ಮ್ಯಾಪಿಂಗ್‌ ಹಾಗೂ ಲೇಸರ್‌ ಸ್ಕ್ಯಾನಿಂಗ್‌ ಕಾರ್ಯ ಮುಗಿದಿದೆ. ಮೈಸೂರು ಹಾಗೂ ಬೆಂಗಳೂರು ವಿಭಾಗದಲ್ಲಿ ಕೆಲವು ಸ್ಮಾರಕಗಳು ಮಾತ್ರ ಬಾಕಿ ಇದ್ದು, ಅದು ಸ್ವಲ್ಪ ದಿನದಲ್ಲಿ ಪೂರ್ಣಗೊಳ್ಳಲಿದೆ.

ಅರಮನೆ, ದೇವಾಲಯ, ಕೋಟೆಗಳು ಮತ್ತಿತರ ಕಟ್ಟಡಗಳು ಹಲವು ಶತ ಮಾನಗಳಷ್ಟು ಹಿಂದಿನವಾಗಿವೆ. ಪ್ರಕೃತಿಯ ಹೊಡೆತಕ್ಕೆ ಹಾಗೂ ಸಮಯವಾದ್ದರಿಂದ ಈ ಸ್ಮಾರಕಗಳು ಶಿಥಲಾವಸ್ಥೆ ತಲುಪಿವೆ. ಆದ್ದರಿಂದ ಈ ಸ್ಮಾರಕ ಗಳನ್ನು ಮುಂದಿನ ಪೀಳಿಗೆಯು ನೋಡ ಬೇಕು. ನಮ್ಮ ರಾಜ್ಯದ ಗತ ವೈಭವನನ್ನು ಕಣ್ಣಾರೆ ಕಂಡು ಹೆಮ್ಮೆ ಪಡಬೇಕು. ನಮ್ಮ ನಾಡು ಹೀಗಿತ್ತು. ವಾಸ್ತಶಿಲ್ಪ, ಕುಸುರಿ ಕೆತ್ತೆನೆಗಳು ಮತ್ತು ಕಟ್ಟಡಗಳ ನಿರ್ಮಾಣ ಶೈಲಿ ಬಗ್ಗೆ ಅವರಿಗೆ ಅರಿವು ಉಂಟಾಗಬೇಕು ಎಂದು ರಾಜ್ಯ ಸರಕಾರವು ಕರ್ನಾಟಕ ಡಿಜಿಟಲ್‌ ಹೆರಿಟೇಜ್‌ ಯೋಜನೆಯನ್ನು ಜಾರಿಗೊಳಿಸಿದ್ದು ಇದರಡಿಯಲ್ಲಿ ಈ ಕಾರ್ಯ ಸಾಗುತ್ತಿದೆ.

ಸ್ಕ್ಯಾನಿಂಗ್‌ ಹೇಗೆ?
ಪ್ರಸ್ತುತ ಲಭ್ಯವಿರುವ ಆಧುನಿಕ ತಂತ್ರಜ್ಞಾನ ವನ್ನು ಬಳಕೆ ಮಾಡಿ ಕೊಂಡು ಸ್ಮಾರಕಗಳನ್ನು ತ್ರೀಡಿ ಮ್ಯಾಪಿಂಗ್‌ ಹಾಗೂ ಲೇಸರ್‌ ಸ್ಕ್ಯಾನಿಂಗ್‌ ಮಾಡಲಾಗುತ್ತಿದೆ. ಸ್ಮಾರಕಗಳ ಶೈಲಿ, ಅವುಗಳ ಅಳತೆ, ಆಯಾ, ತಳಪಾಯದ ನಿರ್ಮಾಣ ವಿನ್ಯಾಸ, ಕಟ್ಟಡಕ್ಕೆ ಬಳಕೆಯಾಗಿರುವ ಸಾಮಗ್ರಿಗಳು ಅಂದರೆ ಮಣ್ಣು, ಕಲ್ಲು, ಇಟ್ಟಿಗೆ, ಗಾರೆ, ಸ್ಮಾರ ಕವು ಯಾವ ರಾಜ-ಪಾಳೇಗಾರರರ ಕಾಲದಲ್ಲಿ ನಿಮಾರ್ಣವಾಯಿತು, ಅವರ ಅವಧಿ, ಆ ವಂಶದ ಪರಂಪರೆ, ಪರಿಸರದ ಐತಿಹಾಸಿಕ ವಿಷಯಗಳನ್ನು ಸಂಗ್ರಹಿಸಲಾಗುತ್ತಿದೆ. ಒಟ್ಟು 33 ಪ್ರಾಥಮಿಕ ದತ್ತಾಂಶಗಳನ್ನು ಕಲೆ ಹಾಕಿ, ಬೆಂಗಳೂರಿನಲ್ಲಿ ಇರುವ ಪ್ರಯೋಗಾಲಯಕ್ಕೆ ತಗೆದುಕೊಂಡು ಹೋಗಿ ವಿಶ್ಲೇಷಿಸಿ, ಅದಕ್ಕೊಂದು ಡಿಜಿಟಿಲ್‌ ನಮೂನೆ ಯನ್ನು ಸಿದ್ಧಗೊಳಿಸಲಾಗುತ್ತದೆ.

ಉಪಯೋಗವೇನು?
ಆಧುನಿಕ ಕಟ್ಟಡ ಗಳನ್ನು ನಿರ್ಮಿಸುವಾಗ ವಾಸ್ತು ಶಿಲ್ಪಿಗಳು ತ್ರೀಡಿ ಮಾಡೆ ಲಿಂಗ್‌ ಮೂಲಕ ಪ್ರಾತ್ಯಕ್ಷಿಕೆಯನ್ನು ತೋರಿಸಲಾಗುತ್ತದೆ. ಅದೇ ರೀತಿ ಈ ಸ್ಮಾರಕಗಳಿಗೆ ಭವಿಷ್ಯದಲ್ಲಿ ಧಕ್ಕೆ ಉಂಟಾದ ಸಂದರ್ಭದಲ್ಲಿ ಅವುಗಳನ್ನು ಪುನರುಜ್ಜೀವಗೊಳಿಸಲು ಆ ಸ್ಮಾರಕದ ಶೈಲಿ ಮೊದಲು ಹೇಗಿತ್ತು ಎನ್ನುವ ವಿಚಾರ ಗಳನ್ನು ಕಲೆ ಹಾಕಬೇಕಾದರೆ ಹಲವು ತಿಂಗಳುಗಳೇ ಬೇಕಾಗುತ್ತದೆ. ಆದರೆ ಇಲಾ ಖೆ ಮಾಡಿ ರುವ ಈ ಕಾರ್ಯದಿಂದ ಕುಳಿತಲ್ಲೇ ಎಲ್ಲ ಮಾಹಿತಿ ದೊರೆ ಯುತ್ತದೆ. ಸ್ಮಾರಕಗಳ ನವೀಕರಣ, ಪುನರು ಜ್ಜೀವ ಕಾರ್ಯವೂ ಸುಗಮ ವಾಗುತ್ತದೆ.

ದೇಶದಲ್ಲೇ ಮೊದಲು
ದೇಶದಲ್ಲಿ ಸ್ಮಾರಕಗಳನ್ನು ತ್ರೀಡಿ ಮ್ಯಾಪಿಂಗ್‌ ಹಾಗೂ ಲೇಸರ್‌ ಸ್ಕ್ಯಾನಿಂಗ್‌ ಮಾಡುತ್ತಿರುವುದು ಕರ್ನಾಟಕದಲ್ಲೇ ಮೊದಲು. ಇದೊಂದು ಪೈಲೆಟ್‌ ಯೋಜನೆಯಾಗಿದ್ದು, ಮೊದಲಿಗೆ ಡಿಜಿ ಟಲ್‌ ರೂಪದಲ್ಲಿ ಸಂಪೂರ್ಣ ವಿವರ ಗಳನ್ನು ಒಳಗೊಂಡ 10 ಸ್ಮಾರಕಗಳ ಎಐ ತ್ರೀಡಿ ಮಾಡೆಲ್‌ ಅನ್ನು ವೆಬ್‌ಸೈಟ್‌ನಲ್ಲಿ ವಾಕ್‌ ತ್ರೋಗೆ ಬಿಡುಗಡೆ ಮಾಡಲಾಗುತ್ತದೆ. ಇದರ ಪ್ರತಿಕ್ರಿಯೆಯನ್ನು ನೋಡಿಕೊಂಡು ಉಳಿದ ಸ್ಮಾರಕಗಳ ವಿವರಗಳನ್ನು ವೆಬ್‌ಸೈಟ್‌ಗೆ ಭರ್ತಿ ಮಾಡ ಲಾಗುತ್ತದೆ ಎಂದು ರಾಜ್ಯ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ಇಲಾಖೆಯ ಆಯುಕ್ತ ಎ.ದೇವರಾಜು ಅವರು “ಉದಯವಾಣಿ’ಗೆ ತಿಳಿಸಿದರು.

-ಆರ್‌.ವೀರೇಂದ್ರ ಪ್ರಸಾದ್‌

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ

Mysuru-Simhasana

Mysuru Dasara: ಖಾಸಗಿ ದರ್ಬಾರ್‌ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ

Mysore-Sidda

MUDA Case: ನ್ಯಾಯ ನನ್ನ ಪರವಿದೆ, ರಾಜಕೀಯ ಪ್ರೇರಿತ ಕೇಸ್‌ ಎದುರಿಸಿ ಗೆಲ್ಲುವೆ: ಸಿಎಂ

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

Mysuru-Dasara

Mysuru Dasara: ಎದೆ ಝಲ್‌ ಎನ್ನಿಸಿದ ಶಬ್ದಕ್ಕೂ ಜಗ್ಗದ ಗಜಪಡೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.