ಕುಂಭಮೇಳಕ್ಕೆ 4 ತಾತ್ಕಾಲಿಕ ಬಸ್‌ ನಿಲ್ದಾಣ


Team Udayavani, Feb 15, 2019, 7:33 AM IST

m1-kumbhame.jpg

ಮೈಸೂರು: ತಿರುಮಕೂಡಲು ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಫೆ.17ರಿಂದ ಮೂರು ದಿನ ನಡೆಯುವ ಕುಂಭಮೇಳದಲ್ಲಿ ಲಕ್ಷಾಂತರ ಜನರು ಪುಣ್ಯಸ್ನಾನ ಮಾಡಲು ಆಗಮಿಸುತ್ತಿದ್ದು, ಸುಗಮ ಸಂಚಾರಕ್ಕಾಗಿ ನಾಲ್ಕು ತಾತ್ಕಾಲಿಕ ನಿಲುಗಡೆ ತಾಣಗಳನ್ನು ಸ್ಥಾಪಿಸಲಾಗಿದೆ. ನಿಲ್ದಾಣಗಳಿಂದ ಭಕ್ತರು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಂಚರಿಸಲು ಉಚಿತ ಮಿನಿಬಸ್‌ ವ್ಯವಸ್ಥೆ ಮಾಡಲಾಗಿದೆ.

ಮೈಸೂರು ಕಡೆಯಿಂದ ಬರುವ ಭಕ್ತರು ಗಗೇಶ್ವರಿಯಿಂದ ಮುಂದೆ ಹೊಸದಾಗಿ ನಿರ್ಮಿಸಿರುವ ಸೇತುವೆ ಪಕ್ಕದ ತಾತ್ಕಾಲಿಕ ನಿಲ್ದಾಣದಲ್ಲಿ ನಿಲುಗಡೆ ಮಾಡಿ ನಂತರ ವಾಪಸ್‌ ಅಲ್ಲಿಂದ ಮೈಸೂರು ಕಡೆಗೆ ಸಂಚರಿಸುವುದು. ಕೊಳ್ಳೇಗಾಲ, ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಯಿಂದ ಬರುವ ಭಕ್ತರು ತಮ್ಮ ವಾಹನಗಳನ್ನು ಅಗ್ನಿಶಾಮಕ ಠಾಣೆ ಎದುರು ನಿರ್ಮಿಸಿರುವ ತಾತ್ಕಾಲಿಕ ನಿಲ್ದಾಣದಲ್ಲಿ ನಿಲುಗಡೆ ಮಾಡಿ, ನಂತರ ಅದೇ ಮಾರ್ಗದಲ್ಲಿ ವಾಪಸ್ಸಾಗುವುದು.

ಹಳೇ ಸೇತುವೆ ಬಳಿ ನಿಲ್ದಾಣ: ಬೆಂಗಳೂರು, ಮಂಡ್ಯ, ಮಳವಳ್ಳಿ, ಬನ್ನೂರುನಿಂದ ಬರುವ ಭಕ್ತರು ತಮ್ಮ ವಾಹನಗಳನ್ನು ಕಾವೇರಿ ನದಿ ಹಳೇ ಸೇತುವೆ ಬಳಿ ತಾತ್ಕಾಲಿಕ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿ ನಂತರ ಬನ್ನೂರು ಕಡೆಗೆ ವಾಪಸ್ಸಾಗುವುದು.

ತಾತ್ಕಾಲಿಕ ಸೇತುವೆ: ನಂಜನಗೂಡು, ತಿ.ನರಸೀಪುರ ಪಟ್ಟಣದ ಕಡೆಯಿಂದ ಬರುವ ಭಕ್ತರು ಉತ್ತಮ ವಾಹನಗಳನ್ನು ತಿರುಮಕೂಡಲು ಸೇತುವೆ ಬಳಿ ನಿಲುಗಡೆ ಮಾಡಿ, ನಂತರ ಅದೇ ಮಾರ್ಗವಾಗಿ ಸಂಚರಿಸುವುದು. ಭಕ್ತರ ಅನುಕೂಲಕ್ಕಾಗಿ ಗುಂಜಾನರಸಿಂಹಸ್ವಾಮಿ ದೇಗುಲದಿಂದ ಸಂಗಮ ಸ್ಥಳಕ್ಕೆ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದ್ದು, ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಈ ಮಾರ್ಗದಲ್ಲಿ ಸಂಚರಿಸುವಂತೆ ಕೋರಲಾಗಿದೆ. 

ಮೈಸೂರಿನಿಂದ ತಿ.ನರಸೀಪುರ, ಕೊಳ್ಳೇಗಾಲ, ಚಾಮರಾಜ ನಗರಕ್ಕೆ ಬರುವ ವಾಹನಗಳು ಮೈಸೂರು-ಮೇಗಳಾಪುರ-ಮೇಗಳಾಪುರದಿಂದ ಬಲಕ್ಕೆ ತಿರುಗಿ ಹೊಸಹಳ್ಳಿ, ಕುಪ್ಪೇಗಾಲ ಸೇತುವೆ ಮಾರ್ಗವಾಗಿ ತಿರುಮಕೂಡಲು ವೃತ್ತದಲ್ಲಿ ಬಲಕ್ಕೆ ತಿರುಗಿ ಖಾಸಗಿ ಬಸ್‌ ನಿಲ್ದಾಣ ನಂತರ ಲಿಂಕ್‌ ರಸ್ತೆ ಮಾರ್ಗ ಕೊಳ್ಳೇಗಾಲ ಮುಖ್ಯರಸ್ತೆ ಮಾರ್ಗವಾಗಿ ತೆರಳುವುದು.

ಕೊಳ್ಳೇಗಾಲ, ಚಾಮರಾಜ ನಗರ, ತಲಕಾಡು ಹಾಗೂ ತಮಿಳುನಾಡು ಕಡೆಯಿಂದ ಮೈಸೂರಿಗೆ ಹೋಗುವ ವಾಹನಗಳು ಚಿಕ್ಕಮ್ಮ ತಾಯಿ ಛತ್ರದ ಬಳಿ ಎಡಕ್ಕೆ ತಿರುಗಿ ತಾಲೂಕು ಕಚೇರಿ ರಸ್ತೆ ವಿದ್ಯೋದಯ ವೃತ್ತದ ಮುಖಾಂತರ ಸುತ್ತೂರು, ವರುಣಾ ಮಾರ್ಗವಾಗಿ ಮೈಸೂರಿಗೆ ತೆರಳುವುದು.

ಬೆಂಗಳೂರು, ಮಂಡ್ಯ, ಮಳವಳ್ಳಿ, ಬನ್ನೂರಿನಿಂದ ಚಾಮರಾಜ ನಗರ, ಕೊಳ್ಳೇಗಾಲಕ್ಕೆ ಹೋಗುವ ವಾಹನಗಳು ಸೋಸಲೆ ಬಳಿ ಎಡಕ್ಕೆ ತಿರುಗಿ ದೊಡ್ಡೇಬಾಗಿಲು, ಪೂರಿಗಾಲಿ, ತಲಕಾಡು, ಮಾದಾಪುರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಸಂಚರಿಸುವುದು.

ಮಕ್ಕಳ ಜೇಬಲ್ಲಿ ಮಾಹಿತಿ ಚೀಟಿ ಇಡಿ: ಕುಂಭಮೇಳಕ್ಕೆ ಆಗಮಿಸುವ ಭಕ್ತರು ಜೊತೆಯಲ್ಲಿ ಚಿಕ್ಕಮಕ್ಕಳನ್ನು ಕರೆತಂದಲ್ಲಿ ಅವರ ಜೇಬಿನಲ್ಲಿ ಹೆಸರು, ವಿಳಾಸ ಮತ್ತು ಪೋಷಕರ ದೂರವಾಣಿ ಸಂಖ್ಯೆಗಳ ಮಾಹಿತಿಯನ್ನು ಇರಿಸುವುದು. ಪುಣ್ಯಸ್ನಾನ ಮಾಡುವ ಸಂದರ್ಭದಲ್ಲಿ ಪೋಷಕರು ಚಿಕ್ಕ ಮಕ್ಕಳು, ವೃದ್ಧರ ಬಗ್ಗೆ ಜಾಗೃತಿವಹಿಸಬೇಕು.

ಸ್ನಾನಘಟ್ಟಗಳ ಬಳಿ ನಿರ್ಮಿಸಿರುವ ಬ್ಯಾರಿಕೇಡ್‌ಗಳನ್ನು ದಾಟದಂತೆ ಸೂಚಿಸಿದೆ. ಮಹಿಳೆಯರು ತಮ್ಮ ಚಿನ್ನಾಭರಣಗಳು ಹಾಗೂ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಗಾವಹಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ಸಿಂಗ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಮೃತ್ಯು

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Kharajola

Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

12-hunsur

Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

4

Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು

3

Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್‌

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

2(1

Sullia: ಜಾಕ್‌ವೆಲ್‌ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್‌

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.