ಹುಣಸೂರು ದೇವರಾಜ ಅರಸು ಕಾಲೇಜಿಗೆ 50 ರ ಸಂಭ್ರಮ


Team Udayavani, Jan 7, 2022, 8:36 PM IST

1-daddad

ಹುಣಸೂರು : ಹುಣಸೂರಿನ ಡಿ.ದೇವರಾಜ ಅರಸು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 50೦ರ ಸಂಭ್ರಮ., ಇದರ ಸುವರ್ಣ ಮಹೋತ್ಸವದ ಅಂಗವಾಗಿ ಸುಮಾರು ೧೦ ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ದಿಕಾರ್ಯ ಕೈಗೊಂಡಿದ್ದು, ಇದೀಗ ಶಾಸಕ ಹೆಚ್.ಪಿ.ಮಂಜುನಾಥ್‌ರ ವಿಶೇಷ ಆಸಕ್ತಿಯಿಂದ ಖಾಸಗಿ ಕಾಲೇಜುಗಳಿಗಿಂತಲೂ ಇಡೀ ಕ್ಯಾಂಪಸ್ ವಿ.ವಿ ಮಾದರಿಯಲ್ಲಿ ಕಂಗೊಳಿಸುತ್ತಿದೆ.

ನಗರದ ಹೆಚ್.ಡಿ.ಕೋಟೆ ಸರ್ಕಲ್ ಬಳಿಯ ಕಟ್ಟಡದಲ್ಲಿ 1971 ರಲ್ಲಿ ಪುರಸಭಾ ಪ್ರಥಮದರ್ಜೆ ಕಾಲೇಜು ಆರಂಭಗೊಂಡಿತು. 1992ರಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜು ಆಗಿ ಪರಿವರ್ತಿತಗೊಂಡಿತು. ನಂತರ 1995 ರಲ್ಲಿ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಾಗಿ ಪರಿವರ್ತನೆಗೊಂಡಿತು. ಕಾಲೇಜಿನಲ್ಲಿ ಪದವಿ ಜೊತೆಗೆ ಸ್ನಾತ್ತಕೋತರ ವಿಭಾಗಗಳು ಆರಂಭಗೊಂಡಿದ್ದು, ಉತ್ತಮ ಶೈಕ್ಷಣಿಕ ವ್ಯವಸ್ಥೆ ಜೊತೆಗೆ ಅತ್ಯುತ್ತಮ ಕ್ರೀಡಾ-ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮೈಸೂರು ವಿವಿಯಲ್ಲೇ ಉತ್ತಮ ಸ್ಥಾನ ಪಡೆದುಕೊಂಡಿದ್ದು ಇಲ್ಲಿ ವ್ಯಾಸಂಗ ಮಾಡಿದ ಅನೇಕರು ದೊಡ್ಡ ಹುದ್ದೆ ಗಿಟ್ಟಿಸಿದ್ದು, ಶಾಸಕ ಮಂಜುನಾಥ್ ಸಹ ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಕಾಲೇಜಿನ ಸರ್ವಾಂಗೀಣ ಪ್ರಗತಿಗೆ ದೊಡ್ಡಕೊಡುಗೆಯನ್ನೇ ನೀಡಿದ್ದಾರೆ.

ಇವರಿಗೆ ಸಿಡಿಸಿ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್ ಸೇರಿದಂತೆ, ಸಿಡಿಸಿ ಸದಸ್ಯರು, ಹಳೇ ವಿದ್ಯಾರ್ಥಿಗಳು, ಹುಣಸೂರಿನ ವ್ಯಾಪಾರಸ್ಥರು, ವಿವಿಧ ಕಾರ್ಖಾನೆಗಳವರು ಸೇರಿದಂತೆ ಅನೇಕ ದಾನಿಗಳು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವ ಈ ಹೊತ್ತಿನಲ್ಲಿ ಎಲ್ಲರೂ ಅಭಿವೃದ್ದಿಗೆ ಕೈಜೋಡಿಸಿರುವ ಪರಿಣಾಮ ಜೊತೆಗೆ ಪ್ರಾಚಾರ್ಯ ವೆಂಕಟೇಶಯ್ಯ ಹಾಗೂ ಅದ್ಯಾಪಕರ ಆಸಕ್ತಿಯಿಂದಾಗಿ ಕಾಲೇಜು ಸಾರ್ಥಕತೆ ಕಂಡುಕೊಳ್ಳುತ್ತಿದೆ.

ಶಿಕ್ಷಣ ಪ್ರೇಮಿ ಮಂಜುನಾಥ್‌ರ ಕೊಡುಗೆ ಅಪಾರ : ಕ್ಷೇತ್ರದ ಶಾಸಕರಾಗಿರುವ ಮಂಜುನಾಥ್ ಅರಸುಕಾಲೇಜು ೫೦ವರ್ಷಗಳ ಸಾರ್ಥಕ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಕಾಲೇಜಿನ ಸಮಗ್ರ ಅಭಿವೃದ್ಧಿಗಾಗಿ ಪಣ ತೊಟ್ಟಿದ್ದಾರೆ. ಇವರ ಶಿಕ್ಷಣ ಪ್ರೇಮದಲ್ಲಿ ಓದು, ಕ್ರೀಡೆ ಮತ್ತಿತರ ಚಟುವಟಿಕೆಗಳ ಸಾಧಕರಿಗೆ ತಮ್ಮ ತಾಯಿ ಹೆಸರಿನಲ್ಲಿ ಚಿನ್ನದ ಪದಕ ನೀಡುತ್ತಿರುವುದು ಹಾಗೂ ಬಡವಿದ್ಯಾರ್ಥಿಗಳಿಗೆ ನೆರವಾಗುವುದು. ಅಲ್ಲದೇ ಎಲ್ಲಾ ಸರಕಾರಿ ಶಾಲಾ ಕಾಲೇಜುಗಳ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

ಕಾಲೇಜಿನಲ್ಲಿ ಅಭಿವೃದ್ದಿ ಶೃಂಗ : ರೂಸಾ ಯೋಜನೆಯಡಿ 2ಕೋಟಿ ರೂ.ಗಳ ವೆಚ್ಚದಲ್ಲಿ ಕಾಲೇಜಿನಲ್ಲಿ ೮ ಕೊಠಡಿಗಳ ನಿರ್ಮಾಣ, ನಗರಸಭೆಯವತಿಯಿಂದ ೪೩ಲಕ್ಷ ರೂ.ವೆಚ್ಚದಡಿ ಕಾಲೇಜಿನ ಮುಖ್ಯದ್ವಾರದಿಂದ ಕಾಲೇಜು ಪರಿಮಿತಿಯೊಳಗೆ ಸುಸಜ್ಜಿತ ಡಾಂಬರು ರಸ್ತೆ, ವಾಕಿಂಗ್ ಪಾತ್, ಮಳೆಕುಯ್ಲು ಘಟಕ ಸ್ಥಾಪನೆ, ಆಟದಮೈದಾನದ ಮಣ್ಣು ಸಂರಕ್ಷಣೆಯ ತಡೆಗೋಡೆ ನಿರ್ಮಿಸಲಾಗಿದೆ. ಸರಕಾರದ ೫.೨೫ ಕೋಟಿ ರೂ.ಗಳ ಅನುದಾನದಡಿ ೧೧ ತರಗತಿ ಕೊಠಡಿಗಳು, ೩ ಪ್ರಯೋಗಾಲಯ, ಒಂದು ಸಭಾಂಗಣ, ಮತ್ತು ೨ ಗ್ರಂಥಾಲಯಗಳನ್ನೊಳಗೊAಡ ಸ್ನಾತಕೋತ್ತರ ವಿಭಾಗವನ್ನು ತೆರೆಯಲಾಗಿದೆ. 70 ಲಕ್ಷ ರೂ.ವೆಚ್ಚದ ಯುಜಿಸಿ ಅನುದಾನದಡಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. 25 ಕೊಠಡಿಗಳಲ್ಲಿ ಸ್ಮಾರ್ಟ್ಕ್ಲಾಸ್ ವ್ಯವಸ್ಥೆ, ೨೫ ಲ್ಯಾಪ್‌ಟಾಪ್‌ಗಳನ್ನು ಒದಗಿಸಲಾಗಿದೆ. ಕೆಆರ್‌ಐಡಿಸಿಎಲ್‌ವತಿಯಿಂದ ಒಂದು ಕೋಟಿ ರೂ.ವೆಚ್ಚದಲ್ಲಿ ಮೂರು ತರಗತಿ ಕೊಠಡಿಗಳು ಮತ್ತು ೨ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಸರ್ಕಾರದಿಂದ ೮೦ಲಕ್ಷ ರೂ.ವೆಚ್ಚದಡಿ ಮಹಿಳಾ ವಸತಿ ನಿಲಯ ಸ್ಥಾಪಿಸಲಾಗಿದ್ದು, ೨೦ ಕೊಠಡಿಗಳನ್ನು ಒಳಗೊಂಡಿದ್ದು ೪೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸೌಲಭ್ಯ ಪಡೆದುಕೊಳ್ಳಲಿದ್ದಾರೆ.

ದೇವರಾಜ ಅರಸು ವಿವಿ ಸ್ಥಾಪನೆಗೆ ಆದ್ಯತೆ : ಮೈಸೂರು ಜಿಲ್ಲೆಯಲ್ಲೇ ಅತಿಹೆಚ್ಚು ಸ್ನಾತಕೋತ್ತರ ವಿಭಾಗವನ್ನು ಹೊಂದಿರುವ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಲ್ಲೆಯಾಗುವ ಎಲ್ಲಾ ಅರ್ಹತೆಯನ್ನು ಹೊಂದಿರುವ ಹುಣಸೂರು ಕೇಂದ್ರವಾಗಿಸಿಕೊಂಡು, ಈ ಕಾಲೇಜನ್ನು ದೇವರಾಜ ಅರಸು ಹೆಸರಿನಲ್ಲಿ ಮಿನಿ ವಿವಿ ಸ್ಥಾಪನೆಗೆ ಶಾಸಕರು ಆದ್ಯತೆ ನೀಡಿದ್ದು, ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾಯೋನ್ಮುಖರಾಗಿದ್ದಾರೆ. ಇನ್ನು ಸಿಡಿಸಿ ಸಮಿತಿಯ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಬದ್ದತೆಯ ಕಾರ್ಯನಿರ್ವಹಣೆಯಿಂದಾಗಿ ಕಾಲೇಜು ಪ್ರಗತಿಯ ದಾಪುಗಾಲು ಹಾಕುತ್ತಿದೆ.

ಶೈಕ್ಷಣಿಕ ಕಾಳಜಿಯ ಶಾಸಕ ಮಂಜುನಾಥ್‌ರ ಸಂಪೂರ್ಣ ಸಹಕಾರದಿಂದ ಕಾಲೇಜನ್ನು ಶೈಕ್ಷಣಿಕವಾಗಿ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ಸುವರ್ಣ ಸಂಭ್ರಮಕ್ಕೆ ಸಜ್ಜಾಗುತ್ತಿದ್ದೇವೆ ಎನ್ನುತ್ತಾರೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್,

ನಾನು ಓದಿದ ಕಾಲೇಜು, ನಾಯಕನನ್ನಾಗಿ ರೂಪಿಸಿದ ಈ ಕಾಲೇಜನ್ನು ಸಮಗ್ರವಾಗಿ ಅಭಿವೃದ್ದಿಗೊಳಿಸಿ, ಮಿನಿ ವಿವಿ ಯಾಗಿಸುವ ಜೊತೆಗೆ ರಾಜ್ಯದಲ್ಲೇ ಅತ್ಯುತ್ತಮ ಕಾಲೇಜನ್ನಾಗಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮವಹಿಸಿದ್ದೇನೆ. ಇದಕ್ಕಾಗಿ ಹಳೇ ವಿದ್ಯಾರ್ಥಿಗಳು ಸೇರಿದಂತೆ ಸಾಕಷ್ಟು ದಾನಿಗಳ ನೆರವಿನಿಂದ ಇಡೀ ಕಾಲೇಜು ಕ್ಯಾಂಪನ್ ನಳನಳಿಸುತ್ತಿದೆ. ಮುಂದೆ ಇತರ ಕಾಲೇಜುಗಳನ್ನು ಸಹ ಇದೇ ಮಾದರಿ ಅಭಿವೃದ್ದಿಗೊಳಿಸುವ ಇರಾದೆ ಹೊಂದಿದ್ದೇನೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್  ಹೇಳಿದರು.

ಟಾಪ್ ನ್ಯೂಸ್

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್‌ ಬಣದ ನಾಯಕ

Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್‌ ಬಣದ ನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಡಾ ನಿವೇಶನ 50:50 ಹಂಚಿಕೆ ರದ್ದು ತೀರ್ಮಾನ

MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್‌

Loka-SP-Udesh–CM

MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್‌

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

2-hunsur

Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.