ಹುಣಸೂರು ತಾಲೂಕು ಆದಿವಾಸಿಗಳಿಗಾಗಿ 541 ಮನೆ ಮಂಜೂರು
ಕಪ್ಪನಕಟ್ಟೆ ಹಾಡಿಯಲ್ಲಿ85 ಲಕ್ಷರೂ ವೆಚ್ಚದ ಕಾಮಗಾರಿಗೆ ಚಾಲನೆನೀಡಿದ ಶಾಸಕ ಮಂಜುನಾಥ್
Team Udayavani, Aug 21, 2022, 10:28 PM IST
ಹುಣಸೂರು: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಾಗರಹೊಳೆ ಉದ್ಯಾನದಂಚಿನ ತಾಲೂಕಿನ ಹನಗೋಡು ಹೋಬಳಿಯ ಕಪ್ಪನಕಟ್ಟೆ ಹಾಡಿಯಲ್ಲಿ 85 ಲಕ್ಷರೂ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು.
ಗ್ರಾಮದಲ್ಲಿ 70 ಲಕ್ಷ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಈ ರಸ್ತೆ ಮೂಲಕ ಮಳೆಗಾಲದಲ್ಲಿ ದೊಡ್ಡ ಹೆಜ್ಜೂರಿನ ರಸ್ತೆಯಿಂದ ಕಪ್ಪನಕಟ್ಟೆ ಹಾಡಿಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಸಾಕಷ್ಟು ಮನವಿ ಸಲ್ಲಿಸಿದ್ದರು. ಮೂರು ವರ್ಷಗಳ ಹಿಂದೆಯೇ ಯೋಜನೆ ಮಂಜೂರಾಗಿದ್ದರೂ ಕೊವಿಡ್-೧೯ನಿಂದಾಗಿ ಅನುದಾನ ಕೊರತೆಯಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಒತ್ತಡ ಹಾಕಿದ ಪರಿಣಾಮ ಈ ರಸ್ತೆ ಡಾಂಬರೀಕರಣಗೊಳ್ಳುತ್ತಿದೆ. ಹಾಡಿಯ ಪಕ್ಕದಲ್ಲಿರುವ ರಕ್ತನ ಕೆರೆ ರಸ್ತೆ ಮೆಟ್ಲಿಂಗ್ ಮಾಡಲಾಗುವುದು. ಈ ಹಾಡಿಯ ಹಾಗೂ ರೈತರ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ಇದೆ. ಈ ರಸ್ತೆ ಕಾಮಗಾರಿ ನಡೆಯುವ ವೇಳೆ ರಸ್ತೆ ಒತ್ತುವರಿ ಮಾಡಿಕೊಂಡಿರುವವರು ತೆರವುಗೊಳಿಸಿ ಸಮರ್ಪಕ ರಸ್ತೆ ನಿರ್ಮಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿ, ನಾಲ್ಕು ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರನಿಗೆ ತಾಕೀತು ಮಾಡಿದರು.
ಅಂಗವಾಡಿ-ಭವನಕ್ಕೂ ಭೂಮಿ ಪೂಜೆ
ಇದೇ ವೇಳೆ ಕಪ್ಪನಕಟ್ಟೆ ಹಾಡಿಯಯಲ್ಲಿ ನಿರ್ಮಿಸಲುದ್ದೇಶಿಸಿರುವ ೧೫ ಲಕ್ಷರೂ ವೆಚ್ಚದ ಹೈಟೆಕ್ ಅಂಗವನಾಡಿ, ೧೦ ಲಕ್ಷರೂ ವೆಚ್ಚದ ಸಮುದಾಯ ಭವನ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಿದ ಅವರು ಹಾಡಿಯ ಮಹಿಳೆಯರೊಂದಿಗೆ ಚರ್ಚಿಸಿದ ವೇಳೆ ಮನೆಗಳು ದುರಸ್ಥಿಗೊಂಡಿದೆ, ಹಲವರಿಗೆ ಮನೆಯೇ ಇಲ್ಲ. ಮಂಜೂರು ಮಾಡಿಸುವಂತೆ ಕೋರಿದರು.
541 ಮನೆ ಮಂಜೂರು
ಐಟಿಡಿಪಿ ಯೋಜನೆಯಡಿ ತಾಲೂಕಿನ ಆದಿವಾಸಿಗಳಿಗಾಗಿ ೫೪೧ ಮನೆ ಮಂಜೂರಾಗಿದ್ದು, ಈ ಪೈಕಿ ೬೦ ಮನೆಗಳು ತಿರಸ್ಕೃತಗೊಂಡಿವೆ. ವಸತಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು. ರಾಜೀವಗಾಂಧಿ ವಸತಿ ನಿಗಮದವತಿಯಿಂದ ೪ ಲಕ್ಷರೂ ಅನುದಾನ ನೀಡುತ್ತಿದ್ದು, ಪ್ರಾಯೋಗಿಕವಾಗಿ ಮನೆ ನಿರ್ಮಿಸಿಕೊಡಲಾಗುವುದೆಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ಸುಭಾಷ್, ಉಪಾಧ್ಯಕ್ಷೆ ಅಂಬಿಕಾ, ಮಾಜಿ ಅಧ್ಯಕ್ಷ ಶಿವಶಂಕರ್ ಹಾಗೂ ಸದಸ್ಯರಾದ ಬಸವರಾಜು, ನಟರಾಜ್, ಬಸವಣ್ಣ,ಗಣೇಶ್, ಶ್ರೀನಿವಾಸ್, ಶ್ಯಾಮಣ್ಣ, ವಿಜಯ್, ಐಟಿಡಿಪಿ ಅಧಿಕಾರಿ ಬಸವರಾಜು, ಉಪ ತಹಸೀಲ್ದಾರ್ ಚೆಲುವರಾಜು, ಆರ್.ಐ.ಪ್ರಶಾಂತರಾಜೇಅರಸ್, ವಿ.ಎ.ಶಿವಕುಮಾರ್, ಪಿಡಿಓ ಮಂಜುನಾಥ್, ಮುಖಂಡರಾದ ಗಣೇಶ್, ಕಸ್ತೂರಿಗೌಡ, ನಾಗೇಶ, ಹೊಂಬೇಗೌಡ, ನಾಗೇಗೌಡ, ಶಾವರ್, ಶ್ರೀನಿವಾಸ್, ಇಂಜಿನಿಯರ್ ಸಿದ್ದರಾಜು ಮತ್ತಿತರ ಮುಖಂಡರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.