ಶೇ.70ರಷ್ಟು ಸಾರಿಗೆ ಬಸ್‌ಗಳು ರಸ್ತೆಗೆ
Team Udayavani, Apr 17, 2021, 1:12 PM IST
ಮೈಸೂರು: ಕೆಎಸ್‌ಆರ್‌ಟಿಸಿ ನೌಕರರುನಡೆಸುತ್ತಿರುವ ಮುಷ್ಕರ ದಿನೇ ದಿನೆ ತನ್ನ ಬಿಸಿ ಕಳೆದುಕೊಳ್ಳುತ್ತಿದ್ದು, ಶುಕ್ರವಾರಶೇ. 70ರಷ್ಟು ಬಸ್‌ಗಳು ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದವು. ಚಾಲಕ ಮತ್ತು ನಿರ್ವಾಹಕರು ನಿಧಾನವಾಗಿ ಕರ್ತವ್ಯಕ್ಕೆ ಮರಳುತ್ತಿರುವುದರಿಂದ ರಸ್ತೆಗಿಳಿಯುವ ಬಸ್‌ಗಳ ಸಂಖ್ಯೆ ಏರಿಕೆಯಾಗುತ್ತಿದೆ.
ಮೈಸೂರುನಗರ ಬಸ್ ನಿಲ್ದಾಣದಿಂದ 370 ಬಸ್‌ಗಳು ಸಂಚಾರ ಮಾಡುತ್ತಿದ್ದು,ಶುಕ್ರವಾರ 257 ಬಸ್‌ಗಳು ರಸ್ತೆಗೆ ಇಳಿದಿವೆ. ನಗರದಲ್ಲಿ ಸಾರ್ವಜನಿಕರಓಡಾಟ ಕಡಿಮೆ ಇರುವುದರಿಂದಹಾಲಿ ಸಂಚರಿಸುತ್ತಿರುವ ಬಸ್‌ಗಳಿಂದಲೇ ಎಲ್ಲ ಮಾರ್ಗಗಳಿಗೂ ಬಸ್‌ಗಳನ್ನು ಕಳುಹಿಸಲಾಗುತ್ತಿದೆ. ಇಲವಾಲ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ಗಳಿಗೆ ಸಂಚಾರದ ಒತ್ತಡ ಇಲ್ಲದ ಕಾರಣ ಬಹುಬೇಗನೆ ನಿಲ್ದಾಣ ತಲುಪಿ, ಹತ್ತಿರದ ಮಾರ್ಗಗಳಿಗೆ ಕಾರ್ಯಾಚರಿಸುತ್ತಿವೆ.
ಹೀಗಾಗಿ, ಕೆಲವು ಮಾರ್ಗಗಳಿಗೆ ಬಸ್‌ಇಲ್ಲ ಎನ್ನುವ ಪರಿಸ್ಥಿತಿ ದೂರವಾಗಿದೆ.ಏ.14ರಂದು 8 ಲಕ್ಷ ರೂ.ಆದಾಯ ಬಂದಿದ್ದರೆ, ಗುರುವಾರ 11 ಲಕ್ಷ ರೂ.ಆದಾಯ ಬಂದಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿತಿಳಿಸಿದ್ದಾರೆ. ದಿನ ಕಳೆದಂತೆ ಚಾಲಕರು ಬರುತ್ತಿರುವುದರಿಂದ ಎಲ್ಲ ಮಾರ್ಗಗಳಿಗೂಬಸ್ ಕಳುಹಿಸುತ್ತಿದ್ದೇವೆ.
ನಂಜನಗೂಡುಮಾರ್ಗಗಳಿಗೆ ತೆರಳುತ್ತಿದ್ದ ಬಸ್‌ಗಳಿಗೆಪ್ರಯಾಣಿಕರ ಕೊರತೆ ಇರುವುದರಿಂದ ಕಡಕೊಳ, ಬಂಡೀಪಾಳ್ಯ, ಉತ್ತನಹಳ್ಳಿ ಮಾರ್ಗದಲ್ಲಿ ನಂಜನಗೂಡು ರೂಟ್‌ಬಸ್‌ಗಳೇ ಸಂಚರಿಸುತ್ತಿವೆ. ಬಸ್‌ಗಳು ಓಡಾಡುತ್ತಿದ್ದರೂ ಪ್ರಯಾಣಿಕರ ಕೊರತೆಇದೆ. ಜಯಪುರ, ಇಲವಾಲ, ಕೆಆರ್‌ಎಸ್, ಶ್ರೀರಂಗಪಟ್ಟಣ ಮಾರ್ಗಗಳ ಬಸ್‌ಗಳಲ್ಲಿ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿಲ್ಲ. ಬೆಳಗ್ಗೆ ಮತ್ತು ಸಂಜೆ ಈ ಮಾರ್ಗಗಳಲ್ಲಿ ಪ್ರಯಾಣಿಕರು ತುಂಬಿರುತ್ತಿದ್ದರು. ಆದರೆ, ಈಗ ಶೇ.40ರಷ್ಟು ಪ್ರಯಾಣಿಕರೂ ಬರುತ್ತಿಲ್ಲ. ಮುಷ್ಕರದಿಂದ ಸಾರಿಗೆ ಬಸ್‌ಗಳನ್ನೇ ಓಡಿಸುತ್ತಿಲ್ಲ ಎಂದು ಪ್ರಯಾಣಿಕರು ತಿಳಿದುಕೊಂಡಿರುವುದ ರಿಂದ ಕಡಿಮೆಪ್ರಯಾಣಿಕರನ್ನೇ ಕರೆದೊಯ್ಯಲಾಗುತ್ತಿದೆ ಎಂದು ನಗರ ಸಾರಿಗೆ ವಿಭಾಗೀಯನಿಯಂತ್ರಣಾಧಿ ಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.