ಏಟಿಎಸ್ ಕಂಪನಿಯ 8 ಭದ್ರತಾ ಸಿಬ್ಬಂದಿ ಅಮಾನತು
Team Udayavani, May 2, 2018, 3:20 PM IST
ನಂಜನಗೂಡು: ಏಟಿಎಸ್ ಕಂಪನಿ 8 ಮಂದಿ ಭದ್ರತಾ ಸಿಬ್ಬಂದಿಯನ್ನು ಏಕಾಏಕಿ ಉದ್ಯೋಗದಿಂದ ಅಮಾನತುಗೊಳಿಸಿದ್ದು, ಮತ್ತೆ ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಕಂಪನಿ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಮರಿಸ್ವಾಮಿ, ರಂಗನಾಯಕ, ಗೋಕುಲ, ಮಹದೇವಸ್ವಾಮಿ, ಆರಾಧ್ಯ ಲಕ್ಷ್ಮೀಕಾಂತ್, ಎನ್.ಬಿ.ಶಿವರಾಜ್, ಎಂ.ಮಾದಯ್ಯ ಅಮಾನತುಗೊಂಡಿರುವ ಸಿಬ್ಬಂದಿ.
ಇವರೆಲ್ಲರೂ ಕಳೆದ 25-30 ವರ್ಷಗಳಿಂದ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಏಕಾಏಕಿ ಕೆಲಸದಿಂದ ತೆಗೆದಿದ್ದರಿಂದ ತಮ್ಮ ಕುಟುಂಬಗಳು ಬೀದಿ ಪಾಲಾಗಲಿದೆ. ಇಷ್ಟು ದಿನ ನಮ್ಮನ್ನು ದುಡಿಸಿಕೊಂಡ ಕಂಪನಿ ಈಗ ಏಕಾಏಕಿ ಕೆಲಸದಿಂದ ತೆಗೆದಿದೆ. ಇದೀಗ ಮತ್ತೆ ನಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳದಿದ್ದರೆ ಕಂಪನಿ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ಸಿಬ್ಬಂದಿ ಮರಿಸ್ವಾಮಿ ಎಚ್ಚರಿಸಿದರು.
ಸಿಬ್ಬಂದಿ ಕುಟುಂಬ ಸಮೇತ ಕಂಪನಿಯ ಒಳಬಾಗಿಲಿನಲ್ಲಿಯೇ ಅಹೋರಾತ್ರಿ ಧರಣಿ ಕೈಗೊಳ್ಳುವುದಾಗಿ ಘೋಷಿಸಿ, ಏಕಾಏಕಿ ಕೆಲಸದಿಂದ ತೆಗೆದರೆ, ನಮ್ಮ ಕುಟುಂಬಗಳ ಜೀವನ ನಿರ್ವಹಣೆ ಹೇಗೆ, ಮಕ್ಕಳು ವಿದ್ಯಾಭ್ಯಾಸಕ್ಕೇನು ಮಾಡಬೇಕೆಂದು ತಮ್ಮ ಅಳಲು ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: ಮಗಳ-ಅಳಿಯಗೆ ಮುಡಾ ಸೈಟ್: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು
Actor Darshan: ಇಂದು ನಟ ದರ್ಶನ್ ಮೈಸೂರಿಗೆ ಆಗಮನ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.