ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಶೇ.80.88 ಮತದಾನ
Team Udayavani, Jun 9, 2018, 2:47 PM IST
ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇ.80.88 ಶಾಂತಿ ಯುತ ಮತ ದಾನವಾಗಿದೆ. ಕ್ಷೇತ್ರ ವ್ಯಾಪ್ತಿಯ ಮೈಸೂರು ಜಿಲ್ಲೆಯಲ್ಲಿ ಶೇ.77.12,ಚಾಮರಾಜನಗರ ಜಿಲ್ಲೆಯಲ್ಲಿ ಶೇ.86.41, ಮಂಡ್ಯ ಜಿಲ್ಲೆಯಲ್ಲಿ ಶೇ. 83.92, ಹಾಸನ ಜಿಲ್ಲೆಯಲ್ಲಿ ಶೇ. 83.88 ಸೇರಿದಂತೆ ಒಟ್ಟಾರೆ ಅಂದಾಜು ಶೇ.80.88 ಮತದಾನವಾಗಿದ್ದು, ಮೈಸೂರು ಜಿಲ್ಲೆಯ 9643 ಮತದಾರರ ಪೈಕಿ 7437 ಮಂದಿ ಶಿಕ್ಷಕರು ಮತ ಚಲಾಯಿಸಿದ್ದಾರೆ.
ಮಳೆಯ ಅಡ್ಡಿ: ಕ್ಷೇತ್ರ ವ್ಯಾಪ್ತಿಯ ನಾಲ್ಕು ಜಿಲ್ಲೆ ಗಳ ಪೈಕಿ ಮೈಸೂರು ಜಿಲ್ಲೆ ಯಲ್ಲೇ ಅತಿ ಹೆಚ್ಚಿನ 9643 ಮತ ದಾ ರ ರಿದ್ದು, ಅದ ರಲ್ಲೂ ಮೈಸೂರು ನಗರ ಮತ್ತು ತಾಲೂ ಕಿ ನಲ್ಲೇ ಹೆಚ್ಚಿನ ಮತ ದಾ ರ ರಿ ದ್ದಾರೆ. ಮತ ದಾ ನದ ಸಲು ವಾಗಿ ಮೈಸೂರು ಜಿಲ್ಲೆ ಯಲ್ಲಿ 42 ಮತ ಗ ಟ್ಟೆ ಗ ಳನ್ನು ಸ್ಥಾಪಿ ಸ ಲಾ ಗಿತ್ತು. ಆದರೆ, ಮುಂಗಾರು ಮಳೆ ಯಿಂದಾಗಿ ಜಿಲ್ಲಾ ದ್ಯಂತ ಮೋಡ ಕವಿದ ವಾತಾ ವ ರಣ ಹಾಗೂ ಆಗಾಗ್ಗೆ ಸಾಧಾ ರಣ ಮಳೆ ಸುರಿ ಯು ತ್ತಿ ದ್ದ ರಿಂದ ಹೆಚ್ಚಿನ ಶಿಕ್ಷ ಕರು ಮಧ್ಯಾ ಹ್ನದ ವರೆಗೆ ಮತ ಗ ಟ್ಟೆ ಗ ಳತ್ತ ಬರುವ ಪ್ರಯತ್ನ ಮಾಡ ಲಿಲ್ಲ. ಹೀಗಾಗಿ ಮಧ್ಯಾ ಹ್ನ ದ ವ ರೆಗೆ ಮತ ದಾನ ಮಂದ ಗ ತಿ ಯಲ್ಲೇ ಸಾಗಿತ್ತು.
ಬೆಳಗ್ಗೆ 7 ಗಂಟೆಗೇ ಮತ ದಾನ ಆರಂಭ ವಾ ದರೂ 9ಗಂಟೆ ವೇಳೆಗೆ 281 ಮತ ದಾ ರ ರಿ ರುವ ಪಿರಿ ಯಾ ಪ ಟ್ಟ ಣ ದಲ್ಲಿ 12 ಮಂದಿ, 746 ಮತ ದಾ ರ ರಿ ರುವ ಕೆ.ಆ ರ್. ನ ಗ ರ ದಲ್ಲಿ 53, 361 ಮತದಾ ರ ರಿ ರುವ ಹುಣ ಸೂ ರಿ ನಲ್ಲಿ 20 ಮಂದಿ, 1716 ಮತ ದಾ ರ ರಿ ರುವ ಮೈಸೂರು ತಾಲೂ ಕಿ ನಲ್ಲಿ 79 ಮಂದಿ, 292 ಮತ ದಾ ರ ರಿ ರುವ ಎಚ್. ಡಿ. ಕೋ ಟೆ ಯಲ್ಲಿ 7 ಮಂದಿ, 535 ಮತ ದಾ ರ ರಿ ರುವ ನಂಜ ನ ಗೂ ಡಿ ನಲ್ಲಿ 31 ಮಂದಿ ಹಾಗೂ 376 ಮತ ದಾ ರ ರಿ ರುವ ತಿ.ನ ರ ಸೀ ಪು ರ ದಲ್ಲಿ ಕೇವಲ 14 ಮಂದಿ ಮತ ದಾನ ಮಾಡಿ ದ್ದರು. ಹೀಗಾಗಿ ಮತ ಗಟ್ಟೆ ಸಿಬ್ಬಂದಿ ಮತ ದಾ ರರ ಬರು ವಿ ಕೆ ಯನ್ನು ಎದುರು ನೋಡುತ್ತಾ ಕುಳಿ ತು ಕೊಳ್ಳುವಂತಹ ಪರಿ ಸ್ಥಿತಿ ಇತ್ತು.
ಮಧ್ಯಾ ಹ್ನದ ನಂತರ ಮತ ದಾನ ಚುರು ಕು ಗೊಂಡು ಅಂತಿ ಮ ವಾಗಿ ಪಿರಿ ಯಾ ಪ ಟ್ಟ ಣ ದಲ್ಲಿ 281ಕ್ಕೆ 245 ಮಂದಿ, ಕೆ.ಆ ರ್. ನ ಗ ರ ದಲ್ಲಿ 746ಕ್ಕೆ 648, ಹುಣ ಸೂರು 361ಕ್ಕೆ 308,ಮೈ ಸೂರು ತಾಲೂಕು 1716ಕ್ಕೆ 1277,ಎ ಚ್. ಡಿ. ಕೋಟೆ 292ಕ್ಕೆ 225, ನಂಜ ನ ಗೂಡು 535ಕ್ಕೆ 427, ಹಾಗೂ ತಿ.ನ ರ ಸೀ ಪು ರ ದಲ್ಲಿ 376ಕ್ಕೆ 323 ಮಂದಿ ಮತ ಚಲಾ ಯಿ ಸಿ ದ್ದಾ ರೆ.
ಹೊರಗೆ ಜೋರು: ಶಿಕ್ಷ ಕ ಮತ ದಾ ರರು ಮತ ಗ ಟ್ಟೆ ಯತ್ತ ಬಾರ ದಿ ದ್ದರೂ ಮತ ಗ ಟ್ಟೆ ಗಳ ಹೊರಗೆ ಕೊನೆ ಕ್ಷಣ ದಲ್ಲಿ ಮತ ದಾ ರರ ಮೇಲೆ ಪ್ರಭಾವ ಬೀರಲು, ಕಾಂಗ್ರೆಸ್, ಬಿಜೆಪಿ, ಜೆಡಿ ಎಸ್ ಮೂರು ಪಕ್ಷ ಗಳ ಮುಖಂಡರು, ಕಾರ್ಯ ಕ ರ್ತರು ಸಾರ್ವ ತ್ರಿಕ ಚುನಾ ವಣೆ ರೀತಿ ಯಲ್ಲೇ ಕುರ್ಚಿ, ಟೇಬಲ್ ಹಾಕಿ ಕೊಂಡು ಮತ ಗಟ್ಟೆ ಬಳಿ ಬರುವ ಶಿಕ್ಷ ಕ ರ ಬಳಿ ಹೋಗಿ ತಮ್ಮ ಪಕ್ಷದ ಅಭ್ಯ ರ್ಥಿ ಗಳ ಕರ ಪತ್ರ ನೀಡಿ ಮತ ನೀಡು ವಂತೆ ಕೊನೆ ಕ್ಷಣದ ಕಸ ರತ್ತು ನಡೆ ಸಿ ದ್ದು ಕಂಡು ಬಂತು.
ಹುಣ ಸೂರು ತಾಲೂಕು ಕಚೇ ರಿ ಯಲ್ಲಿ ಸ್ಥಾಪಿ ಸ ಲಾ ಗಿದ್ದ ಮತ ಗಟ್ಟೆ ಬಳಿ ಮಾಜಿ ಶಾಸಕ ಎಚ್. ಪಿ. ಮಂಜು ನಾಥ್, ಕಾಂಗ್ರೆಸ್ ಅಭ್ಯರ್ಥಿ ಎಂ.ಲ ಕ್ಷ್ಮಣ ಪರ ಮತ ಯಾಚಿಸಿ ದರು. ಜೆಡಿ ಎಸ್, ಬಿಜೆಪಿ ಮುಖಂಡರೂ ಸಹ ಕೊನೆ ಕ್ಷಣದ ಪ್ರಯತ್ನ ನಡೆ ಸು ತ್ತಿ ದ್ದರು. ನಂಜ ನ ಗೂ ಡಿ ನಲ್ಲಿ ಬಿಜೆಪಿ ಅಭ್ಯರ್ಥಿ ನಿ ರಂಜ ನ ಮೂರ್ತಿ ಪರ ಶಾಸಕ ಹರ್ಷ ವ ರ್ಧನ್ ಮತ ಯಾ ಚಿ ಸಿ ದರೆ,
ಕಾಂಗ್ರೆಸ್ ನ ಮಾಜಿ ಶಾಸಕ ಕಳಲೆ ಕೇಶ ವ ಮೂರ್ತಿ ಜೊತೆಗೇ ನಿಂತು ಜೆಡಿ ಎಸ್ ಜಿಲ್ಲಾ ಧ್ಯಕ್ಷ ಹಾಗೂ ತಾಲೂಕು ಅಧ್ಯಕ್ಷ ಒಟ್ಟಾಗಿ ಮತ ಯಾ ಚಿ ಸು ತ್ತಿ ದ್ದುದು ವಿಶೇ ಷ ವಾ ಗಿತ್ತು. ಪಿರಿ ಯಾ ಪ ಟ್ಟ ಣ ದಲ್ಲಿ ಮಾಜಿ ಶಾಸಕ ಎಚ್. ಸಿ. ಬ ಸ ವ ರಾಜು ಬಿಜೆಪಿ ಅಭ್ಯ ರ್ಥಿ ಪರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ. ಜೆ. ವಿ ಜ ಯ ಕು ಮಾರ್ ಕಾಂಗ್ರೆಸ್ ಅಭ್ಯ ರ್ಥಿ ಪರ, ಶಾಸಕ ಕೆ.ಮ ಹ ದೇವ ಅವರ ಪುತ್ರ ಮೈಮುಲ್ ನಿರ್ದೇಶಕ ಪ್ರಸನ್ನ ಜೆಡಿ ಎಸ್‌ಅಭ್ಯರ್ಥಿ ಪರ ಮತಯಾಚಿ ಸು ತ್ತಿ ದ್ದುದು ಕಂಡು ಬಂತು.
ಹಣ-ಹೆಂಡ-ಬಾಟೂಟದ ಆಮಿಷ: ಶಿಕ್ಷ ಕರೇ ಮತದಾರರಾಗಿ ರುವ ಈ ಚುನಾ ವ ಣೆ ಯಲ್ಲೂ ಹಣ-ಹೆಂಡ-ಬಾಟೂ ಟದ ಆಮಿಷ ಜೋರಾಗಿ ನಡೆ ದಿದೆ ಎಂದು ಮತ ಗ ಟ್ಟೆ ಗಳ ಬಳಿ ಪಕ್ಷ ಗಳ ಕಾರ್ತ ಕ ರ್ತ ರೇ ಹೆಚ್ಚು ಗಾ ರಿಕೆ ಎಂಬಂತೆ ಹೇಳಿ ಕೊಂಡರು. ಸ್ಥಳೀಯ ಮುಖಂಡ ರೊ ಬ್ಬರ ತೋಟದ ಮನೆ ಯೊಂದ ರಲ್ಲಿ ತಾಲೂ ಕಿನ ಶಿಕ್ಷಕ ಮತ ದಾ ರ ರನ್ನು ಸೇರಿಸಿ ನಮ್ಮ ಪಕ್ಷದ ಅಭ್ಯ ರ್ಥಿಗೆ ಮತ ನೀಡು ವಂತೆ ಬಾಡೂಟ ಹಾಕಿಸಿ, ಬ್ರಾಂಡೆಡ್ ಮದ್ಯ ವನ್ನೂ ನೀಡ ಲಾ ಯಿತು. ಜೊತೆಗೆ ಪ್ರತಿ ಯೊ ಬ್ಬ ರಿಗೂ ಕವರ್‌ನಲ್ಲಿ 500 ರೂ. ಜೊತೆಗೆ ಒಂದು ಪೆನ್ನು ಹಾಕಿ ಕೊಡ ಲಾ ಗಿದೆ ಎಂದು ರಾಜ ಕೀಯ ಪಕ್ಷದ ಕಾರ್ಯ ಕ ರ್ತ ರೊ ಬ್ಬರು ತಿಳಿ ಸಿ ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.