ಯುವಕನ ಹತ್ಯೆ: ಒಂಭತ್ತು ಮಂದಿ ಬಂಧನ
Team Udayavani, Oct 14, 2021, 2:15 PM IST
ಮೈಸೂರು: ಎರಡು ದಿನಗಳ ಹಿಂದೆ ಯುವಕನೋರ್ವನನ್ನು ಹತ್ಯೆ ಮಾಡಿ, ಮತ್ತೂಬ್ಬನ ಮೇಲೆ ತೀವ್ರ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ ಮೂವರು ಬಾಲಕರು ಸೇರಿದಂತೆ ಒಟ್ಟು 9 ಮಂದಿಯನ್ನು ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಗುಂಡೂರಾವ್‌ನಗರದಲ್ಲಿರುವ ಖಾಲಿ ಜಾಗದಲ್ಲಿ ಯುವಕರ ಗುಂಪೊಂದು ನಂದಕಿಶೋರ್(24) ಎಂಬಾತನನ್ನು ಚಾಕುವಿ ನಿಂದ ಇರಿದು ಕೊಲೆ ಮಾಡಿ, ಆತನ ಸ್ನೇಹಿತ ಸಂಜಯ್(25) ಎಂಬಾತನ ಮೇಲೆ ತೀವ್ರ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಪ್ರಕರಣ ದಾಖಲಾಗಿತ್ತು.
ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಬಾಲಕರು, ಜೆ. ಅಭಿಷೇಕ್ ಅ. ಆರ್‌ಎಕ್ಸ್ ಅಭಿ (20), ಎನ್. ಮಹದೇವ ಅ. ಚಿನ್ನ(20), ಪ್ರವೀಣ ಅ. ಕಪ್ಪೆ (21), ಎಂ. ಬೀರೇಶ (20), ಡಿ. ಸಿದ್ದರಾಜು ಅ. ಕಟ್ಟೇರ (22) ಮತ್ತು ಎಂ. ಋತ್ವಿಕ್ (20) ಎಂಬುವರನ್ನು ಬಂಧಿಸಿದ್ದಾರೆ. ಭಾನುವಾರ ಸಂಜೆ ಸಂಜಯ್ ಮತ್ತು ಇತರರು ಶ್ವಾನದೊಂದಿಗೆ ವಾಕ್ ಮಾಡುತ್ತಿದ್ದರು.
ಈ ವೇಳೆ ಖಾಲಿ ಜಾಗದಲ್ಲಿ ಕುಳಿತ್ತಿದ್ದ ಬಂಧಿತ ಆರೋಪಿಗಳ ಪೈಕಿ ಒಬ್ಟಾತ ಏನೋ ಗುರಾಯಿಸ್ತೀಯಾ ಎಂದು ಜಗಳ ತೆಗೆದು ಹೊಡೆದಿದ್ದಾನೆ. ಇದರಿಂದ ಕುಪಿತಗೊಂಡ ಸಂಜಯ್ ತನ್ನ ಸ್ನೇಹಿತ ನಂದಕಿಶೋರ್‌ಗೆ ಫೋನ್ ಮಾಡಿ ಕರೆಸಿಕೊಂಡಿದ್ದು, ಸ್ಥಳಕ್ಕೆ ಬಂದ ನಂದಕಿಶೋರ್ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದೆ. ಒಬ್ಟಾತ ಚಾಕುವಿನಿಂದ ಸಂಜಯ್‌ಗೆ ಚುಚ್ಚಲು ಮುಂದಾದಾಗ ತಪ್ಪಿಸಿಕೊಂಡಿದ್ದು ಸಣ್ಣಪುಟ್ಟ ಗಾಯವಾಗಿದೆ. ಬಳಿಕ ನಂದಕಿಶೋರ್‌ಗೆ ಚಾಕುವಿನಿಂದ 4-5 ಬಾರಿ ತಿವಿದು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.]
ಇದನ್ನೂ ಓದಿ;- ಅಂಬೇಡ್ಕರ್ ಬದುಕು, ಹೋರಾಟ ಮಾದರಿ: ವೆಂಕಟಗಿರಿ ದೇಶಪಾಂಡೆ
ವ್ಯಕ್ತಿಯ ಕತ್ತು ಸೀಳಿ ಬರ್ಬರ ಹತ್ಯೆ
ಮೈಸೂರು: ವ್ಯಕ್ತಿಯೊಬ್ಬನನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ರಾಜೀವ್ ನಗರ ಅಲ್ ಬದರ್ ವೃತ್ತದ ಬಳಿಯ ಪಾಲಿಕೆಯ ಖಾಲಿ ಜಾಗದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ. ಉದಯಗಿರಿ ಶಾಂತಿನಗರ 2ನೇ ಕ್ರಾಸ್ ನಿವಾಸಿ ಸೈತ್ ಉಲ್ಲಾ ಖಾನ್ ಪುತ್ರ ಹಮೀದ್ ಖಾನ್ (32) ಕೊಲೆಯಾದವರು. ಮೃತ ವ್ಯಕ್ತಿ ಗುಜರಿ ಕೆಲಸ ಮಾಡಿಕೊಂಡಿದ್ದು, ಮಂಗಳವಾರ ರಾತ್ರಿ 11ಕ್ಕೆ ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿರಲಿಲ್ಲ.
ರಾಜೀವ್‌ನಗರದಲ್ಲಿರುವ ಪಾಲಿಕೆಯ ಖಾಲಿ ಜಾಗದಲ್ಲಿ ಬುಧವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಕತ್ತು ಸೀಳಿ ಕೊಲೆ ಮಾಡಿರುವುದು ಗೊತ್ತಾಗಿದೆ. ಯಾವ ಕಾರಣಕ್ಕಾಗಿ ಯಾರು ಈ ಕೊಲೆ ಮಾಡಿದ್ದಾರೆಂಬುದು ತಿಳಿದು ಬಂದಿಲ್ಲ. ಯಾವುದೋ ಕಾರಣಕ್ಕೆ ಅಪರಿಚಿತರು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಉದಯಗಿರಿ ಠಾಣೆಯ ಇನ್ಸ್‌ಪೆಕ್ಟರ್ ರಾಜು ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.