ಶೇ.95ರಷ್ಟು ಸೋಂಕಿತರು ಮನೆಯಲ್ಲೇ ಗುಣ
ಜಿಲ್ಲೆಯಲ್ಲಿ ಐಸಿಯು ಮತ್ತು ವೆಂಟಿಲೇಟರ್ ಕೊರತೆ , ಆಕ್ಸಿಜನ್ ಬೆಡ್‌ಗಳ ಕೊರತೆ ಇಲ್ಲ: ಜಿಲ್ಲಾಧಿಕಾರಿ ಸಿಂಧೂರಿ
Team Udayavani, Apr 27, 2021, 11:58 AM IST
ಮೈಸೂರು: ಜಿಲ್ಲೆಯಲ್ಲಿ ಐಸಿಯು ಮತ್ತು ವೆಂಟಿಲೇಟರ್ ಕೊರತೆ ಇದೆ. ಆದರೆ, ಆಕ್ಸಿಜನ್ ಬೆಡ್ ಗಳ ಕೊರತೆಯಿಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಸೋಂಕು ತಗುಲಿದರೆ ಸೂಕ್ತ ಚಿಕಿತ್ಸೆಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಜಿಲ್ಲೆಯಲ್ಲಿ ದಿನೇ ದಿನೆ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಅವರು, ಯಾರೂ ಕೂಡ ಅನಗತ್ಯವಾಗಿ ಆತಂಕಕ್ಕೆ ಒಳಗಾಗಿ ಐಸಿಯುಕಾಯ್ದಿರಿಸಿಕೊಳ್ಳುವುದು, ಆಕ್ಸಿಜನಿಟೇಡ್ ಬೆಡ್‌ಮೀಸಲಿಟ್ಟುಕೊಳ್ಳುವುದನ್ನು ಮಾಡಬಾರದು. ದಿನಕ್ಕೆ 1,000 ಪ್ರಕರಣ ಇದ್ದರೆ ಶೇ.10 ರಿಂದ 20 ಮಂದಿಗೆಮಾತ್ರ ಬೆಡ್ ಬೇಕಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ 3ಸಾವಿರ, ಸರ್ಕಾರಿ ಆಸ್ಪತ್ರೆಯಲ್ಲಿ 2 ಸಾವಿರ ಇದೆ.ಜಯದೇವ ಆಸ್ಪತ್ರೆಯೂ ಸೇರಿದರೆ ಒಟ್ಟು 7 ಸಾವಿರ ಬೆಡ್ ಇದೆ. ಆಕ್ಸಿಜನ್ ಹಾಸಿಗೆ ಮತ್ತು ಅನಗತ್ಯವಾಗಿ ಬೆಡ್‌ಗಳನ್ನು ಮೀಸಲಿಟ್ಟುಕೊಳ್ಳಲಾಗುತ್ತಿದೆ. ಆದರೆಆಕ್ಸಿಜಿನೇಟೆಡ್ ಹಾಸಿಗೆ ಕೊರತೆ ಇಲ್ಲ. ಆಕ್ಸಿಜಿನೇಟ್ ಬೆಡ್ 155 ಖಾಸಗಿ, ಕೆ.ಆರ್.ಆಸ್ಪತ್ರೆಯಲ್ಲಿ 150 ಆಕ್ಸಿಜನೇಟೆಡ್ ಬೆಡ್ ಇದೆ.
ಪ್ರಸ್ತುತ ಜಿಲ್ಲೆಯಲ್ಲಿ 10 ವೆಂಟಿಲೇಟರ್ ಮಾತ್ರ ಲಭ್ಯವಿದೆ. ಖಾಸಗಿಯಲ್ಲಿ ಒಂದು ಮಾತ್ರವಿದೆ. ವೆಂಟಿಲೇಟರ್ ಅವಲಂಬಿಸಿ ದಾಖಲಾದ ರೋಗಿಗಳ ಪೈಕಿ ಶೇ.0.5 ಮಾತ್ರ ಉಳಿಯುವ ಸಾಧ್ಯತೆ ಇರುತ್ತದೆ. ಮಂಡಕಳ್ಳಿಯಲ್ಲಿನ ಕೋವಿಡ್ ಕೇಂದ್ರದಲ್ಲಿ 650 ಸಾಮಾನ್ಯ ಬೆಡ್‌ಗಳಿವೆ.ಅಲ್ಲಿ ಆಕ್ಸಿಜನೇಟೆಡ್ ಬೆಡ್‌ಗಳಿಲ್ಲ. ಸಣ್ಣ ವಯಸ್ಸಿನವರು ಆಕ್ಸಿಜನ್ ಬೇಕು, ಐಸಿಯು ಬೇಕು ಎಂದು ಕೇಳುತ್ತಿದ್ದಾರೆ. ಕೇವಲ ಮೈಸೂರು ಜಿಲ್ಲೆಯ ರೋಗಿಗಳುಮಾತ್ರ ಇದ್ದರೆ 7 ಸಾವಿರ ಬೆಡ್ ಸಾಕಾಗುತ್ತಿತ್ತು. ಆದರೆಬೇರೆ ಕಡೆಯಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಶೇ.95 ಮಂದಿ ಮನೆಯಲ್ಲೇ ಗುಣ ಕೋವಿಡ್ ಸೋಂಕಿನ ಲಕ್ಷಣ ಇದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತಔಷಧ ಪಡೆಯಬಹುದು. ಶೇ.90 ರಿಂದ 95ರಷ್ಟುಮಂದಿ ಮನೆಯಲ್ಲಿಯೇ ಗುಣವಾಗುತ್ತಿದ್ದಾರೆ.ರೋಗಿಗಳು ಸಾಧ್ಯವಾದರೆ ಪಲ್ಸ್ ಆಕ್ಸಿಮೀಟರ್ ಇಟ್ಟುಕೊಳ್ಳಬೇಕು. ಪ್ರತಿ 2 ಗಂಟೆಗೊಮ್ಮೆ ಪರೀಕ್ಷಿಸಿಕೊಳ್ಳ ಬೇಕು. ಆಸ್ಪತ್ರೆಯಲ್ಲಿ ಬೆಡ್ ಬೇಕು ಎಂಬ ಆತಂಕಬೇಡ. ದೇಹಕ್ಕೆ 94ಕ್ಕಿಂತ ಆಕ್ಸಿಜನ್ ಪ್ರಮಾಣ ಕಡಿಮೆ ಇದ್ದರೆ ಮಾತ್ರ ಆಸ್ಪತ್ರೆ ಸೇರಬೇಕು. ಒಂದು ವಾರದಲ್ಲಿ700 ಆಕ್ಸಿಜಿನೇಟೆಡ್ ಹಾಸಿಗೆ ಸಿದ್ಧವಾಗುತ್ತಿದೆ. ಟ್ರಾಮ ಸೆಂಟರ್‌ನ 200 ಆಕ್ಸಿಜನೇಟೆಡ್ ಬೆಡ್‌ಗಳ ಪೈಕಿ60ರಲ್ಲಿ ಮಾತ್ರ ಜನರಿದ್ದಾರೆ. ಕೆ.ಆರ್.ಆಸ್ಪತ್ರೆಯಲ್ಲಿಸರ್ಜಿಕಲ್ ಬ್ಲಾಕ್, ಸ್ಟೋನ್ ಬಿಲ್ಡಿಂಗ್, ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಸೇರಿ 250 ಆಕ್ಸಿಜಿನೇಟೆಡ್ ಹಾಸಿಗೆ, ಟ್ರಾಮಾದಲ್ಲಿ 200, ಪಿಕೆಟಿಬಿಯಲ್ಲಿ 100 ಆಕ್ಸಿಜನೇಟೆಡ್ ಹಾಸಿಗೆ ಸಿದ್ಧತೆ ಆಗುತ್ತಿದೆ ಎಂದರು.
ನಿರ್ಲಕ್ಷ್ಯ ಬೇಡ: ಏಪ್ರಿಲ್ ಮೊದಲ ವಾರದಿಂದ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ಆರಂಭವಾಗಿದೆಎಂದು ಅಂದಾಜಿಸಲಾಗಿದೆ. ಮಾರ್ಚ್‌ನಲ್ಲಿ 100ಕ್ಕಿಂತ ಕಡಿಮೆ ಪ್ರಕಣ ದಾಖಲಾಗುತ್ತಿತ್ತು. ಈಗ 700 ರಿಂದಒಂದು ಸಾವಿರದವರೆಗೆ ಸೋಂಕಿತರು ಕಂಡುಬರುತ್ತಿದ್ದಾರೆ. ಮೊದಲ ಅಲೆಯಲ್ಲಿನ ಲಕ್ಷಣದ ಜತೆಗೆ ಬೇರೆ ಬೇರೆ ಲಕ್ಷಣಗಳೂ ಕಂಡುಬರುತ್ತಿವೆ. ಶೇ.15ರಿಂದ 20ರಷ್ಟು ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶಬರುತ್ತಿದೆ. ಆದರೆ, ಕೋವಿಡ್ ಲಕ್ಷಣ ಇದ್ದರೆ ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ ಎಂದರು.
ರೆಮ್‌ಡಿಸಿವರ್ ಕೊರತೆ ಇಲ್ಲ: ಕೋವಿಡ್ 2ನೇ ಅಲೆ ಬಹಳ ವೇಗವಾಗಿ ಹರಡುತ್ತಿದೆ. ಪ್ರತಿದಿನ ಪ್ರಕರಣಗಳಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗೆ ಜನ ಹೆಚ್ಚು ಮಂದಿಬರುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಮತ್ತುಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಒಂದು ಔಷಧಲಭ್ಯವಾಗುತ್ತಿಲ್ಲ, ಬೆಡ್ ಕೊರತೆ, ಆಕ್ಸಿಜನ್ ಕೊರತೆಎಂಬ ಭಯವಿದೆ. ಆದರೆ, ರೆಮ್‌ಡಿಸಿವರ್‌ಗೆ ಸರ್ಕಾರಿಮತ್ತು ತಾಲೂಕು ಆಸ್ಪತ್ರೆಯಲ್ಲಿ ಕೊರತೆ ಇಲ್ಲ. ಜಿಲ್ಲೆಯಲ್ಲಿ 140 ಖಾಸಗಿ ಆಸ್ಪತ್ರೆಗಳಿದ್ದು, ಈ ಪೈಕಿ 35ಆಸ್ಪತ್ರೆ ಮಾತ್ರ ಎಸ್‌ಎಎಸ್‌ಟಿ ಪೋರ್ಟಲ್‌ನಲ್ಲಿನೋಂದಾಯಿಸಿಕೊಂಡಿವೆ. ಮೇ 1 ರಿಂದ ಈ ಕೊರತೆಸುಧಾರಣೆ ಆಗಲಿದೆ. ಮುಂಚೆಯೇ ಹೆಸರುನೋಂದಾಯಿಸಿಕೊಂಡು ಬಂದರೆ ರೆಮ್‌ಡಿಸಿವರ್ ಕೊರತೆ ಇರುವುದಿಲ್ಲ ಎಂದು ಅವರು ವಿವರಿಸಿದರು.
ಜಿಲ್ಲೆಗೆ 12 ಮೆಟ್ರಿಕ್ ಟನ್ ಆಕ್ಸಿಜನ್ ಬೇಕು :
ಹಾಸಿಗೆ ಖಾಲಿ ಇದೆ ಎಂದು ಅವುಗಳನ್ನು ಮೀಸಲಿಟ್ಟುಕೊಳ್ಳುವುದು ಸರಿಯಲ್ಲ. ಅಗತ್ಯ ಇರುವವರಿಗೆ ಆಕ್ಸಿಜಿನೇಟೆಡ್, ವೆಂಟಿಲೇಟರ್ ಹಾಸಿಗೆ ಸಿಗಬೇಕು. ನಮ್ಮ ಜಿಲ್ಲೆಗೆ 12 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗುತ್ತದೆ. ಮುಂದೆ 20 ರಿಂದ 25 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗುತ್ತದೆ. ಅದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆತಂಕ ಪಡುವ ಅಗತ್ಯವಿಲ್ಲ. ಮನೆಯಲ್ಲಿ ಈ ಹಿಂದೆ ಸಣ್ಣವರು, ವೃದ್ಧರಿಗೆ ಬೇಗ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಎಲ್ಲರೂ ಮನೆಯಲ್ಲಿಯೇಪ್ರಾಣಾಯಾಮ ಮಾಡಬೇಕು. ಒಳ್ಳೆಯ ಆಹಾರ ಸೇವಿಸಬೇಕು. ಪ್ರತಿದಿನ ಸುಮಾರು 7 ಸಾವಿರ ಮಂದಿ ಪರೀಕ್ಷೆ ಮಾಡುತ್ತಿದ್ದೆವು. ಎಂಎಂಸಿಆರ್‌ಐ ಮತ್ತು ಸಿಎಫ್ಟಿಆರ್‌ಐಗೆ ಪರೀಕ್ಷೆಗೆ ಕಳುಹಿಸಲಾಗುತ್ತಿತ್ತು. ಅಲ್ಲಿಯೂ ಇಬ್ಬರಿಗೆ ಪಾಸಿಟಿವ್ ಬಂದ ಪರಿಣಾಮ ಫಲಿತಾಂಶ ತಡವಾಗಿದೆ. ಪಾಸಿಟಿವ್ ವರದಿಗಳನ್ನು ಮಾತ್ರ ಬೇಗ ನೀಡಲಾಗಿದೆ. ಆದರೆ, ನೆಗೆಟಿವ್ ವರದಿ ಬಂದಿಲ್ಲ ಎಂದು ರೋಹಿಣಿ ಸಿಂಧೂರಿ ತಿಳಿಸಿದರು.
ಸೋಂಕು ತಗುಲಿದರೆ ಹೆಲ್ಪ್ಲೈನ್ ಸಂಪರ್ಕಿಸಿ :
ಈಗ ವಾರ್ ರೂಂ. ತೆಗೆದಿದ್ದು, ಅಲ್ಲಿನ ದೂ. 0821- 2957711, 2957811 ಸಂಪರ್ಕಿಸಬಹುದು. ಯಾರಿಗೆ ಸೋಂಕು ತಗುಲಿರುವುದು ದೃಢಪಟ್ಟಿರುತ್ತದೋ ಅವರಿಗೆ ಇಲ್ಲಿಂದ ಕರೆ ಮಾಡಲಾಗುವುದು. ಇದರ ಜತೆಗೆಇಂದಿನಿಂದ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಕೇಂದ್ರ ತೆರೆಯಲಾಗುತ್ತಿದ್ದು,ಆಸಕ್ತರು ಇದರ ದೂ. 0821- 2424111ಸಂಪರ್ಕಿಸಬಹುದು. ತಾಲೂಕು ಮಟ್ಟದಲ್ಲಿ ಹೆಲ್ಪ್ಲೈನ್ ಮತ್ತು ಮತ್ತು ವಿಧಾನಸಭಾಕ್ಷೇತ್ರವಾರು ಹೆಲ್ಪ್ಲೈನ್ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.